ಗಿಲ್‌ ಔಟ್‌ ಆಗಿದ್ದಕ್ಕೆ ವಿರಾಟ್‌ ವಿಚಿತ್ರ ಸೆಲೆಬ್ರೇಷನ್!‌ – ಕಿಂಗ್‌ ಕೊಹ್ಲಿಗೆ ಪ್ರಿನ್ಸ್‌ ಕೌಂಟರ್‌!

ಗಿಲ್‌ ಔಟ್‌ ಆಗಿದ್ದಕ್ಕೆ ವಿರಾಟ್‌ ವಿಚಿತ್ರ ಸೆಲೆಬ್ರೇಷನ್!‌ – ಕಿಂಗ್‌ ಕೊಹ್ಲಿಗೆ ಪ್ರಿನ್ಸ್‌ ಕೌಂಟರ್‌!

RCB ಮತ್ತು GT ನಡುವಿನ ಪಂದ್ಯದಲ್ಲಿ ಗುಜರಾತ್‌ ಗೆದ್ದು ಬೀಗಿದೆ. ಆದ್ರೆ ಈ ಪಂದ್ಯ ಈಗ ನಾನಾ ಕಾರಣಕ್ಕೆ ಸುದ್ದಿಯಲ್ಲಿದೆ. ನಿನ್ನೆಯ ಮ್ಯಾಚ್‌ನಲ್ಲಿ ರಜತ್‌ ಪಾಟಿದಾರ್‌ ಔಟ್‌ Or ನಾಟ್‌ ಔಟ್‌ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೊಂದ್ಕಡೆ ಗಿಲ್‌ ಔಟ್‌ ಆದಾಗ ಕೊಹ್ಲಿ ವಿಚಿತ್ರ ಸೆಲೆಬ್ರೇಷನ್‌ ಮಾಡಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಇದೀಗ ಗಿಲ್‌, ವಿರಾಟ್‌ ಕೊಹ್ಲಿ ಕೌಂಟರ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಮದವೇರಿದ ಆನೆ ಅಟ್ಟಹಾಸಕ್ಕೆ ಓರ್ವ ಬಲಿ, ಮಾವುತನಿಗೆ ಗಂಭೀರ ಗಾಯ! – ರಣರಂಗವಾಯ್ತು ದೇವಸ್ಥಾನದ ಆವರಣ!

ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿರುವ ಗಿಲ್, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 156 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವ ಮೂಲಕ ತಮ್ಮ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಕೇವಲ 17 ಎಸೆತಗಳಲ್ಲಿ 43 ರನ್ ಗಳಿಸಿದ್ದರು. ಈ ವೇಳೆ ಭುವನೇಶ್ವರ್‌ ಕುಮಾರ್‌ ಅವರ ಎಸೆತವನ್ನು ಕವರ್‌ ಡ್ರೈವ್‌ ಮಾಡುವ ಪ್ರಯತ್ನದಲ್ಲಿ ವಿರಾಟ್‌ ಕೊಹ್ಲಿಗೆ ಕ್ಯಾಚ್‌ ನೀಡಿದರು. ಗಿಲ್‌ ಕ್ಯಾಚ್‌ ಪಡೆದ ಕೊಹ್ಲಿ ಆಕ್ರೋಶಭರಿತವಾಗಿ ಚೆಂಡನ್ನು ನೆಲಕ್ಕೆ ಎಸೆದು ಸಂಭ್ರಮಾಚರಣೆ ಮಾಡಿದರು.

ಇದೀಗ ಶುಭಮನ್‌ ಗಿಲ್‌ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಂಡದ ಕೆಲವು ಫೋಟೊಗಳ ಜತೆ ವಿರಾಟ್‌ ಕೊಹ್ಲಿ ದಿಟ್ಟಿಸಿ ನೋಡುತ್ತಿರುವ ಫೋಟೊವನ್ನು ಹಂಚಿಕೊಂಡು “ಪ್ಲೇ ಹೋಲ್ಡ್‌ ಜೇಸನ್‌ ಹೋಲ್ಡರ್‌, ತಂಡದಿಂದ ದಿಟ್ಟ ಪ್ರದರ್ಶನ,” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆರ್‌ಸಿಬಿ ಘೋಷ ವಾಕ್ಯವಾದ ಪ್ಲೇ ಬೋಲ್ಡ್‌ ಎನ್ನುವ ಪದಕ್ಕೆ ಗಿಲ್‌ ಪ್ಲೇ ಹೋಲ್ಡ್‌ ಎಂದು ಕೊಹ್ಲಿ ಹಾಗೂ ಆರ್‌ಸಿಬಿಗೆ ತಕ್ಕ ತಿರುಗೇಟು ನೀಡಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಭಾರತದ ತಂಡದ ಸಹ ಆಟಗಾರ ಶುಭಮನ್ ಗಿಲ್ ಜೊತೆ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ ಅನುಭವಿ ಬ್ಯಾಟ್ಸ್‌ಮನ್ ಗುರುವಾರ ನಡೆದಿದ್ದ ಐಪಿಎಲ್‌ ಪಂದ್ಯದಲ್ಲಿ ಸುಮಾರು 90,000 ಪ್ರೇಕ್ಷಕರ ಸಮ್ಮುಖದಲ್ಲಿ ಗಿಲ್‌ ವಿಕೆಟ್‌ ಪತನಗೊಂಡ ಆಕ್ರೋಶಭರಿತ ಬೀಳ್ಕೊಡುಗೆ ನೀಡಿದರು. ಪಂದ್ಯದ ಬಳಿಕ ಶುಭಮನ್‌ ಗಿಲ್‌ ಕೂಡ ತಕ್ಕ ತಿರುಗೇಟು ನೀಡಿದ್ದಾರೆ.

Shwetha M