ಗಿಲ್ 1 ಡೀಲ್‌ಗೆ ₹10 ಕೋಟಿ.. ಬ್ರಾಂಡ್‌ಗಳ ನಯಾ ಕಿಂಗ್ ಗಿಲ್! – ಪ್ರಿನ್ಸ್ ಮುಂದೆ ಕೊಹ್ಲಿ ಸೈಡ್‌ಲೈನ್?

ಟೀಂ ಇಂಡಿಯಾ ಪ್ರಿನ್ಸ್ ಶುಭ್ಮನ್ ಗಿಲ್.. ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಆನ್‌ಫೀಲ್ಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಪಂಜಾಬ್ ಪುತ್ತರ್ ರನ್ ಮಳೆ ಹರಿಸ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ದಿಗ್ಗಜರ ದಾಖಲೆಗಳನ್ನು ಉಡೀಸ್ ಮಾಡ್ತಿದ್ದಾರೆ. ಶುಭ್ಮನ್ ಆಟವನ್ನ ಇಡೀ ಕ್ರಿಕೆಟ್ ಲೋಕವೇ ಕೊಂಡಾಡುತ್ತಿದೆ. ಆನ್ ದಿ ಫೀಲ್ಡ್‌ನಲ್ಲಿ ಅಬ್ಬರಿಸುತ್ತಿರುವ ಟೀಂ ಇಂಡಿಯಾ ಪ್ರಿನ್ಸ್ ಆಫ್ ದಿ ಫೀಲ್ಡ್‌ನಲ್ಲೂ ಅಷ್ಟೇ ಸದ್ದು ಮಾಡ್ತಿದ್ದಾರೆ. ಮೈದಾನದಲ್ಲಿ ಬ್ಯಾಟ್ ಬೀಸಿದಷ್ಟೇ ವೇಗವಾಗಿ ಗಿಲ್ ಇನ್‌ಕಮ್ ಕೂಡ ಡಬಲ್ ಆಗ್ತಾನೆ ಇದೆ. ಇದೀಗ ಅಚ್ಚರಿಯ ವಿಷಯವೊಂದು ರಿವೀಲ್ ಆಗಿದೆ. ಗಿಲ್ ಒಂದು ಒಪ್ಪಂದಕ್ಕೆ ಕೋಟಿ ಕೋಟಿ ಚಾರ್ಜ್ ಮಾಡ್ತಾರಂತೆ.
ಇದನ್ನೂ ಓದಿ: ಹೃದಯ ಸಂಬಂಧಿತ ಕಾಯಿಲೆ ಇದ್ದವರು ತುಪ್ಪ ಸೇವಿಸಬಹುದಾ? – ವೈದ್ಯರು ಹೇಳೋದೇನು?
ಸದ್ಯ ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಅವರ ಸುದ್ದಿಯೇ ಭಾರಿ ಸದ್ದು ಮಾಡ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸೋ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಆನ್ ದಿ ಫೀಲ್ಡ್ ದಿಗ್ಗಜರ ರೆಕಾರ್ಡ್ ಬ್ರೇಕ್ ಮಾಡಿ ಮೆಚ್ಚುಗೆ ಗಳಿಸ್ತಿರುವ ಗಿಲ್ ಆದಾಯ ಕೂಡ ಹೆಚ್ಚಾಗುತ್ತಿದೆ. ಕ್ರಿಕೆಟ್‌ನಿಂದ ಬರೋ ಸ್ಯಾಲರಿ, ಬ್ರ್ಯಾಂಡ್‌ಗಳ ಒಪ್ಪಂದದಿಂದ ಕೋಟಿ ಕೋಟಿ ಗಳಿಸ್ತಾ ಇದ್ದಾರೆ. ಇದೀಗ 27 ವರ್ಷದ ಪಂಜಾಬ್ ಪುತ್ತರ್ ವರ್ಷಕ್ಕೆ 40 ರಿಂದ 50 ಕೋಟಿ ಗಳಿಸ್ತಾ ಇದ್ದಾರೆ. ಅವರ ನಿವ್ವಳ ಮೌಲ್ಯ 120 ರಿಂದ 140 ಕೋಟಿಗೂ ಅಧಿಕ ಎಂದು ಹೇಳಲಾಗ್ತಿದೆ.
ಅಂದ್ಹಾಗೆ ಶುಭ್ಮನ್ ಗಿಲ್ BCCI ಕೇಂದ್ರ ಒಪ್ಪಂದದ ಗ್ರೇಡ್-ಎ ಅಡಿಯಲ್ಲಿ ವರ್ಷಕ್ಕೆ ₹5 ಕೋಟಿ ಪಡಿತಾ ಇದ್ದಾರೆ. ಇದ್ರ ಜೊತೆ ಅವರು ಪ್ರತಿ ಅಂತಾರಾಷ್ಟ್ರೀಯ ಪಂದ್ಯಕ್ಕೂ ಬಿಸಿಸಿಐನಿಂದ ಪ್ರತ್ಯೇಕ ಸಂಬಳ ಪಡೆಯುತ್ತಾರೆ. ಟೆಸ್ಟ್ ಪಂದ್ಯಕ್ಕೆ ₹15 ಲಕ್ಷ, ಏಕದಿನ ಪಂದ್ಯಕ್ಕೆ ₹6 ಲಕ್ಷ, ಟಿ20 ಪಂದ್ಯ ಕ್ಕೆ ₹3 ಲಕ್ಷ ಸಂಭಾವನೆ ಪಡಿತಾ ಇದ್ದಾರೆ. ಇನ್ನು IPLನಲ್ಲಿ ಗಿಲ್ ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿದ್ದಾರೆ. ಅವರಿಗೆ ಫ್ರಾಂಚೈಸಿ ಕಳೆದ ಸೀಸನ್‌ನಲ್ಲಿ ₹16.5 ಕೋಟಿ ನೀಡಿದೆ. 2027ರ ಸೀಸನ್‌ನಲ್ಲಿ ಗಿಲ್ ಸಂಬಳ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಗಿಲ್ ಮೈದಾನದಲ್ಲಿ ರನ್ ಮಳೆ ಸುರಿಸುತ್ತಿದ್ದಂತೆ ಅವರ ಬ್ರ್ಯಾಂಡ್ ಮೌಲ್ಯ ಮೂರು ಪಟ್ಟು ಹೆಚ್ಚಾಗಿದೆ. ಇತ್ತೀಚಿಗೆ ಕಾರ್ಪೊರೇಟ್ ಜಗತ್ತಿನಲ್ಲಿಗಿಲ್‌ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. 2026ರ ಪ್ರಸ್ತುತ ವರದಿಗಳ ಪ್ರಕಾರ, ಅವರು 20ಕ್ಕೂ ಹೆಚ್ಚು ಪ್ರಮುಖ ಬ್ರ್ಯಾಂಡ್‌ಗಳನ್ನು ಎಂಡೋರ್ಸ್ ಮಾಡುತ್ತಿದ್ದಾರೆ. ಗಿಲ್ ಬ್ರ್ಯಾಂಡ್ ಜಾಹೀರಾತು ಸುಮಾರು ₹6 ರಿಂದ ₹10 ಕೋಟಿ ವರೆಗೆ ಶುಲ್ಕ ವಿಧಿಸುತ್ತಿದ್ದಾರೆ ಎನ್ನಲಾಗ್ತಿದೆ.
ಸದ್ಯ MRF ಬ್ಯಾಟ್ ಒಪ್ಪಂದ ಗಿಲ್ ಅವರ ಅತ್ಯಂತ ದೊಡ್ಡಒಪ್ಪಂದವಾಗಿದೆ. ತಮ್ಮ ಬ್ಯಾಟ್ ಮೇಲೆ MRF ಲೋಗೋ ಬಳಸಲು ಅವರು ವಾರ್ಷಿಕವಾಗಿ ಸುಮಾರು ₹8 ರಿಂದ ₹10 ಕೋಟಿ ಪಡೆಯುತ್ತಾರೆ. ಈ ಒಪ್ಪಂದದ ಮೂಲಕ ಅವರು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ಸಾಲಿಗೆ ಸೇರಿದ್ದಾರೆ. ಇನ್ನು ಗಿಲ್ ಒಂದೊಂದು ಜಾಹೀರಾತಿ ಒಂದೊಂದು ಶುಲ್ಕ ವಿಧಿಸುತ್ತಾರೆ ಎನ್ನಲಾಗ್ತಿದೆ. ಮೂಲಗಳ ಪ್ರಕಾರ ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಜಾಹೀರಾತು ಒಪ್ಪಂದಕ್ಕೆ ಗಿಲ್ ಅವರು ವಾರ್ಷಿಕವಾಗಿ ₹2 ರಿಂದ ₹4 ಕೋಟಿ, ಕೆಲವು ದೊಡ್ಡ ಒಪ್ಪಂದಗಳಿಗೆ ₹8 ರಿಂದ ₹10 ಕೋಟಿ ವರೆಗೆ ಶುಲ್ಕ ವಿಧಿಸುತ್ತಾರೆ ಎನ್ನಲಾಗ್ತಿದೆ. ಗಿಲ್ ನೈಕ್, ಕೋಕಾ-ಕೋಲಾ, ಆಪಲ್‌ನ ಬೀಟ್ಸ್ ಎಲೆಕ್ಟ್ರಾನಿಕ್ಸ್, ಟಾಟಾ ಕ್ಯಾಪಿಟಲ್, ಸಿಯೆಟ್ ಮತ್ತು ಜಿ-ಶಾಕ್ ಮುಂತಾದ ಜಾಗತಿಕ ಹಾಗೂ ರಾಷ್ಟ್ರೀಯ ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಭಾರತದ ಅತಿ ಹೆಚ್ಚು ಬ್ರ್ಯಾಂಡ್ ಮೌಲ್ಯ ಹೊಂದಿರುವ ಕ್ರಿಕೆಟಿಗ. ಪೂಮಾ, ಎಂಆರ್‌ಎಫ್, ಅಡಿಡಾಸ್, ಮತ್ತು ರಾಯಲ್ ಚಾಲೆಂಜರ್ಸ್ ಸಂಬಂಧಿತ ಹಲವು ದೊಡ್ಡ ಬ್ರ್ಯಾಂಡ್‌ಗಳೊಂದಿಗೆ ದೀರ್ಘಕಾಲಿಕ ಒಪ್ಪಂದ ಹೊಂದಿದ್ದಾರೆ. ಇದ್ರ ಜೊತೆಗೆ ಕೊಹ್ಲಿ ತಮ್ಮ ಸ್ವಂತ ಬ್ರ್ಯಾಂಡ್ ಒನ್8 ಹೊಂದಿದ್ದಾರೆ. ಇದ್ರ ಜೊತೆಗೆ ವಿರಾಟ್ ಪ್ರಮುಖ ಬ್ರ್ಯಾಂಡ್ ಒಪ್ಪಂದಳಿಗೆ 10 ಕೋಟಿ ರೂಪಾಯಿ ಚಾರ್ಜ್ ಮಾಡ್ತಾರೆ ಎನ್ನಲಾಗ್ತಿದೆ. ಒಟ್ಟಾರೆ. ಟೀಂ ಇಂಡಿಯಾ ಪ್ರಿನ್ಸ್ ಮೈದಾನದಲ್ಲಿ ಹೀಗೆ ಅಬ್ಬರಿಸ್ತಿದ್ರೆ, ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕೋದು ಪಕ್ಕಾ ಆಗಿದೆ.

ನೋಡಿರಿ

