ಕೊಹ್ಲಿ ಅಲ್ಲ.. ಬ್ರ್ಯಾಂಡ್ ಫೇವರೆಟ್ ಗಿಲ್! – ಸೆಂಚುರಿ ಮಳೆ.. ಶುಭ್ಮನ್‌ಗೆ ದುಡ್ಡಿನ ಹೊಳೆ!
ಕಿಂಗ್ ಕೊಹ್ಲಿನ ಗಿಲ್ ಹಿಂದಿಕ್ಕಿದ್ದು ಹೇಗೆ?

ಶುಭ್ಮನ್ ಗಿಲ್ .. ಟೀಮ್ ಇಂಡಿಯಾದ ಸಾರಥಿ.. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶುಭ್ಮನ್ ಗಿಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೆಂಚುರಿ ಹೊಡೆದು ಗಿಲ್ ಕ್ರಿಕೆಟ್ ದಿಗ್ಗಜರ ರೆಕಾರ್ಡ್ಸ್‌ನ ಬ್ರೇಕ್ ಮಾಡಿದ್ದಾರೆ. ಇದೀಗ ಟೀಮ್ ಇಂಡಿಯಾ ಪ್ರಿನ್ಸ್ ಆನ್ ದಿ ಫೀಲ್ಡ್ ಮಾತ್ರವಲ್ಲ.. ಆಫ್ ದಿ ಫೀಲ್ಡ್ ಕೂಡ ಸುದ್ದಿಯಲ್ಲಿದ್ದಾರೆ. ಶುಭ್ಮನ್ ಗಿಲ್ ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕಿಕ್ಕಲು ಸಜ್ಜಾಗಿದ್ದಾರೆ.. ಗಿಲ್ ಬ್ರ್ಯಾಂಡ್ ವ್ಯಾಲ್ಯು ದುಪ್ಪಟ್ಟಾಗಿದೆ.
ಇದನ್ನೂ ಓದಿ: ಕರ್ನಾಟಕ ವಾಣಿಜ್ಯ ತೆರಿಗೆ ನೋಟಿಸ್‌ಗೆ ಹೆದರಿದ ವ್ಯಾಪಾರಸ್ಥರು- ಆನ್‌ಲೈನ್ ಪೇಮೆಂಟ್ ಮಾಡಿಸಿಕೊಳ್ಳೋದೆ ತಪ್ಪಾ?
ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ರು . ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಶತಕ ಬಾರಿಸಿದ ನಂತ್ರ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಗಿಲ್ ದಾಖಲೆಯ ಡಬಲ್ ಸೆಂಚುರಿ ಬಾರಿಸಿದ್ರು.. ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಮೂಲಕ ಗಿಲ್ ಇತಿಹಾಸ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ನಾಯಕನಾಗಿ ಆನ್‌ಫೀಲ್ಡ್ ಸದ್ದು ಮಾಡಿರೋ ಪಂಜಾಬ್ ಪುತ್ತರ್ ಈಗ ನ್ಯೂ ಬ್ರ್ಯಾಂಡ್ ಮಷಿನ್ ಆಗಿದ್ದಾರೆ.
ಹೌದು.. ಗಿಲ್ ಯುಗಾರಂಭ ಶುರುವಾಗಿದೆ.. ಭಾರತ ತಂಡದಲ್ಲಿ ಸಾಮಾನ್ಯ ಆಟಗಾರನಂತೆ ಸ್ಥಾನ ಪಡೆದ ಗಿಲ್ ಈಗ ಟೀಮ್ ಇಂಡಿಯಾದ ಸಾರಥಿಯಾಗಿದ್ದಾರೆ. ಆನ್ ದಿ ಫೀಲ್ಡ್ನಲ್ಲಿ ರನ್ ಮಳೆ ಸುರಿಸೋ ಈ ಹ್ಯಾಂಡ್ಸಮ್ ಪ್ಲೇಯರ್, ಆಫ್ ದಿ ಫೀಲ್ಡ್ನಲ್ಲೂ ನ್ಯೂ ಬ್ರ್ಯಾಂಡ್ ಮಷಿನ್ ಆಗಿದ್ದಾರೆ. ಆಟದ ಮೂಲಕ ಫ್ಯಾನ್ಸ್ ಮನ ಗೆಲ್ತಿರೋ ಗಿಲ್, ಬ್ರ್ಯಾಂಡೆಡ್ ಕಂಪನಿಗಳ ಹೃದಯ ಗೆಲ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳ ಹಾಟ್ ಫೇವರೇಟ್ ಆಗಿದ್ದಾರೆ ಗಿಲ್. ಹೌದು, ಶುಭ್ಮನ್ ಗಿಲ್ ಇಷ್ಟು ದಿನ ಬ್ರ್ಯಾಂಡ್‌ಗಳ ಒಪ್ಪಂದಕ್ಕೆ 2 ರಿಂದ 3 ಕೋಟಿ ಪಡಿತಾ ಇದ್ರು.. ಇದೀಗ ಗಿಲ್ ಬ್ರ್ಯಾಂಡ್ ವ್ಯಾಲ್ಯೂ ಡಬಲ್ ಆಗಿದೆ.. ಇನ್ಮುಂದೆ ಬ್ರ್ಯಾಂಡ್ ಒಪ್ಪಂದಗಳಿಗೆ ಬರೋಬ್ಬರಿ 7 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗ್ತಿದೆ.. MRF, ಟಾಟಾ ಕ್ಯಾಪಿಟಲ್ಸ್ ಸೇರಿದಂತೆ 14 ಕಂಪನಿಗಳ ಜೊತೆ ಗಿಲ್ ಟೈಪ್ ಅಪ್ ಆಗಿದ್ರು.. ಇದೀಗ ಗಿಲ್ ನ ಬ್ರ್ಯಾಂಡ್ ಅಂಬಾಸಿಡಲ್ ಮಾಡೋದಿಕ್ಕೆ ಸಾಕಷ್ಟು ಕಂಪನಿಗಳು ಕ್ಯೂ ನಿಂತಿವೆ.. ಇದೀಗ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ವಿಚಾರದಲ್ಲಿ ಗಿಲ್, ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕೋದು ಪಕ್ಕಾ ಆಗಿದೆ.
ರನ್ ಮಿಷಿನ್ ವಿರಾಟ್ ಕೊಹ್ಲಿ ಟಿ20, ಟೆಸ್ಟ್ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿ ಪಡೆದಿದ್ದಾರೆ. ಆದ್ರೂ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಕಿಂಗ್ ಆಗೇ ಮೆರಿತಾ ಇದ್ದಾರೆ. ಹೀಗಾಗೇ ಸಾಕಷ್ಟು ಕಾರ್ಪೊರೇಟ್ ಕಂಪನಿಗಳ ಫೇವರೆಟ್ ಆಗಿದ್ದಾರೆ ಕೊಹ್ಲಿ.. ಕಿಂಗ್ ಕೊಹ್ಲಿ ಪ್ರತಿ ಬ್ರ್ಯಾಂಡ್ನ ಒಪ್ಪಂದಕ್ಕೆ 7.5 ಕೋಟಿಯಿಂದ 10 ಕೋಟಿ ಚಾರ್ಚ್ ಮಾಡ್ತಾರೆ. 42ಕ್ಕೂ ಅಧಿಕ ಬ್ರ್ಯಾಂಡ್‌ಗಳ ಪ್ರಮೋಟರ್ ಆಗಿರುವ ವಿರಾಟ್, ವಾರ್ಷಿಕ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಫೀಸ್ನಿಂದಲೇ 200 ಕೋಟಿಗೂ ಅಧಿಕ ಹಣ ಗಳಿಸ್ತಾರೆ. ಇದೀಗ ಗಿಲ್ ಕೂಡ ಬ್ರ್ಯಾಂಡ್ ವಾಲ್ಯೂ ವಿಚಾರದಲ್ಲಿ ಕಿಂಗ್ ಕೊಹ್ಲಿ ಸಾಲಿಗೆ ಸೇರಿಕೊಳ್ತಿದ್ದಾರೆ. ಇದ್ರಿಂದಾನೇ ಗೊತ್ತಾಗುತ್ತೆ.. ಕ್ರಿಕೆಟರ್ಸ್‌ಗೆ ಕಿಕೆಟ್‌ನಿಂದ ಕೇವಲ ನೇಮ್ ಫೇಮ್ ಮಾತ್ರವಲ್ಲ.. ದುಡ್ಡಿನ ಹೊಳೆ ಕೂಡ ಹರಿದು ಬರುತ್ತೆ.. ಮೈದಾನದಲ್ಲಿ ಎಷ್ಟು ಚೆನ್ನಾಗಿ ಬ್ಯಾಟ್ ಬೀಸ್ತಾರೋ.. ಅಷ್ಟೇ ಅವ್ರ ಬ್ರ್ಯಾಂಡ್ ವಾಲ್ಯೂ ಏರ್ತಾನೇ ಹೋಗುತ್ತೆ.. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಟೀಮ್ ಇಂಡಿಯಾ ಪ್ರಿನ್ಸ್ ಶುಭ್‌ಮನ್ ಗಿಲ್..

ನೋಡಿರಿ

