ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಆಗಿ ಶುಬ್ಮನ್ ಗಿಲ್ – ನಾಯಕತ್ವದ ಹೊಣೆ ನೀಡಿದ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ ಗಿಲ್
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರ್ಪಡೆಗೊಂಡ ಬಳಿಕ ಗುಜರಾತ್ ಟೈಟಾನ್ಸ್ ತನ್ನ ನಾಯಕನನ್ನು ಆಯ್ಕೆ ಮಾಡಿದೆ. ಆರಂಭಿಕ ಆಟಗಾರ ಶುಬ್ಮನ್ ಗಿಲ್ ಹೆಗಲಿಗೆ ನಾಯಕತ್ವದ ಹೊಣೆ ನೀಡಲಾಗಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ ಅಸಮಾಧಾನದ ಬಳಿಕವೂ ಪಾಂಡ್ಯಾ ರಿಟರ್ನ್ – ಮುಂಬೈ ಇಂಡಿಯನ್ಸ್ ಈಗ ಒಡೆದ ಮನೆ?
ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಆಗಿ ಶುಬ್ಮನ್ ಗಿಲ್ ಆಯ್ಕೆಯಾಗಿದ್ದಾರೆ. ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್ ಮತ್ತು ರಶೀದ್ ಖಾನ್ರಂಥಾ ಸೀನಿಯರ್ ಕ್ರಿಕೆಟರ್ಸ್ ಇದ್ದರೂ ಕೂಡ ಜಿಟಿ ಮ್ಯಾನೇಜ್ಮೆಂಟ್ 24 ವರ್ಷದ ಶುಬ್ಮನ್ ಗಿಲ್ರನ್ನ ಕ್ಯಾಪ್ಟನ್ ಮಾಡಿರೋದು ನಿಜಕ್ಕೂ ಬೋಲ್ಡ್ ಡಿಸೀಷನ್. ಒಬ್ಬ ಕ್ರಿಕೆಟರ್ ಆಗಿ ಶುಬ್ಮನ್ ಗಿಲ್ ಮೆಚ್ಯೂರಿಟಿ ಮತ್ತು ಆನ್ಫೀಲ್ಡ್ ಪರ್ಫಾಮೆನ್ಸ್ನ್ನ ಆಧರಿಸಿ ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಮಾಡಲಾಗಿದೆ ಅಂತಾ ಮ್ಯಾನೇಜ್ಮೆಂಟ್ ಹೇಳಿದೆ. ಇನ್ನು ಶುಬ್ಮನ್ ಗಿಲ್ ಐಪಿಎಲ್ ಇತಿಹಾಸದಲ್ಲಿ ವನ್ ಆಫ್ ದಿ ಯಂಗೆಸ್ಟ್ ಕ್ಯಾಪ್ಟನ್ ಆಗಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ 22ನೇ ವರ್ಷಕ್ಕೆ ಆರ್ಸಿಬಿ ಕ್ಯಾಪ್ಟನ್ ಆಗಿದ್ದರು. ಸ್ಟೀವ್ ಸ್ಮಿತ್ 23ನೇ ವರ್ಷಕ್ಕೆ ಪುಣೆ ವಾರಿಯರ್ಸ್ ಕ್ಯಾಪ್ಟನ್ ಆಗ್ತಾರೆ. ನಂತ್ರ ಶ್ರೇಯಸ್ ಅಯ್ಯರ್ 23ನೇ ವರ್ಷಕ್ಕೆ ದೆಹಲಿ ಕ್ಯಾಪಿಟಲ್ಸ್ ನಾಯಕರಾಗಿದ್ದರು. ರಿಷಬ್ ಪಂತ್ ಕೂಡ 23ನೇ ವರ್ಷಕ್ಕೆ ದೆಹಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಆಗಿದ್ದರು. ಇದೀಗ 24 ವರ್ಷದ ಶುಬ್ಮನ್ ಗಿಲ್ ಗುಜರಾತ್ ಟೈಟಾನ್ಸ್ನ್ನ ಲೀಡ್ ಮಾಡಲಿದ್ದಾರೆ.
ಈ ಬಗ್ಗೆ ಗುಜರಾತ್ ಟೈಟಾನ್ಸ್ ತನ್ನ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಶುಬ್ಮನ್ ಗಿಲ್ ಸಹ ನಾಯಕತ್ವದ ಹೊಣೆ ನೀಡಿದ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ್ದಾರೆ. ಗುಜರಾತ್ ಟೈಟಾನ್ಸ್‌ನ ನಾಯಕತ್ವ ವಹಿಸಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ. ಇಂತಹ ಉತ್ತಮ ತಂಡವನ್ನು ಮುನ್ನಡೆಸಲು ಫ್ರಾಂಚೈಸಿ ನನ್ನ ಮೇಲೆ ನಂಬಿಕೆಯಿಟ್ಟು ನಾಯಕತ್ವದ ಹೊಣೆ ನೀಡಿದೆ. ಇದನ್ನು ಕೇವಲ ಧನ್ಯವಾದ ಹೇಳಿ ಮುಗಿಸಲಾರೆ. ಈ ಟೂರ್ನಿಯನ್ನು ಸ್ಮರಣೀಯವಾಗಿಸೋಣ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.