ವೆಸ್ಟ್ಇಂಡೀಸ್‌ನಲ್ಲಿ ಶುಭ್‌ಮನ್ ಫ್ಲಾಪ್ ಶೋ – ‘ಗಿಲ್’ ಆಟ ಕಂಡು ನೋವಲ್ಲಿದೆ ಅಭಿಮಾನಿಗಳ ‘ದಿಲ್’

ವೆಸ್ಟ್ಇಂಡೀಸ್‌ನಲ್ಲಿ ಶುಭ್‌ಮನ್ ಫ್ಲಾಪ್ ಶೋ – ‘ಗಿಲ್’ ಆಟ ಕಂಡು ನೋವಲ್ಲಿದೆ ಅಭಿಮಾನಿಗಳ ‘ದಿಲ್’

ಶತಕಗಳ ಮೇಲೆ ಶತಕ ಸಿಡಿಸುತ್ತಾ ಟೀಮ್ ಇಂಡಿಯಾದ ಭರವಸೆಯ ಕ್ರಿಕಿಟ್ ಸ್ಟಾರ್ ಆಗಿ ಮಿಂಚಿದ ಶುಭ್‌ಮನ್ ಗಿಲ್ ಐಪಿಎಲ್‌ನಲ್ಲೂ ರನ್‌ಗಳ ಗುಡ್ಡೆ ಹಾಕಿದ್ದರು. ಟೀಮ್ ಇಂಡಿಯಾಕ್ಕೆ ಬೆಸ್ಟ್ ಓಪನರ್ ಸಿಕ್ಕ ಅನ್ನೋ ಖುಷಿ ಕೂಡಾ ಅಭಿಮಾನಿಗಳಲ್ಲಿತ್ತು. ಆದರೆ, ಶುಭ್‌ಮನ್ ಗಿಲ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಯಾಕೋ ಮಂಕಾಗಿದ್ದಾರೆ. ಯುವ ಬ್ಯಾಟರ್ ಗಿಲ್ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ಅಭಿಮಾನಿಗಳ ದಿಲ್‌ಗೆ ಯಾಕೋ ನಿರಾಸೆ ತರುತ್ತಿದ್ದಾರೆ.

ಇದನ್ನೂ ಓದಿ: ಹೊಸ ಜೆರ್ಸಿಯಲ್ಲಿ ಯುವ ಪಡೆ ಮಿರಮಿರ ಮಿಂಚಿಂಗ್ – ಟೀಮ್ ಇಂಡಿಯಾ ಕ್ರಿಕೆಟಿಗರಿಂದ ಫೋಟೋಗೆ ಪೋಸ್

ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಆಸೀಸ್ ವೇಗಿಗಳ ಮುಂದೆ ಮುಗ್ಗರಿಸಿದ ಗಿಲ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿಯೂ ಮಂಕಾಗಿದ್ದಾರೆ. ಏಷ್ಯಾಕಪ್ ಹಾಗೂ ವಿಶ್ವಕಪ್ ಸಮೀಪಿಸುತ್ತಿರುವ ಸಮಯದಲ್ಲಿ ಶುಭ್‌ಮನ್ ಗಿಲ್ ತಮ್ಮ ಫಾರ್ಮ್ ಕಳೆದುಕೊಂಡಿರುವುದು ಟೀಂ ಇಂಡಿಯಾಕ್ಕೆ ತಲೆನೋವಾಗಿದೆ. ಅನುಭವಿ ಆರಂಭಿಕ ಶಿಖರ್ ಧವನ್ ಬದಲಿಗೆ, ಗಿಲ್‌ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾರ ಜೊತೆಗಾರನೆಂದೇ ಎಲ್ಲರೂ ಭಾವಿಸಿದ್ದರು. ಆದರೀಗ ಗಿಲ್ ಫಾರ್ಮ್ ದಿನೇ ದಿನೇ ಕಳಪೆಯಾಗುತ್ತಿರುವುದು ಆಯ್ಕೆ ಮಂಡಳಿಯ ಚಿಂತೆಗೂ ಕಾರಣವಾಗಿದೆ. ಏಕದಿನ ಸರಣಿಗೂ ಮುನ್ನ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಇನ್ನಿಂಗ್ಸ್‌ಗಳನ್ನು ಆಡಿದ್ದ ಗಿಲ್, ಮೊದಲ ಪಂದ್ಯದಲ್ಲಿ 6 ಮತ್ತು ಎರಡನೇ ಪಂದ್ಯದಲ್ಲಿ 10, ಔಟಾಗದೆ 29 ರನ್ ಕಲೆಹಾಕಿದ್ದರು. ಅಂದರೆ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 45 ರನ್ ಮಾತ್ರ ಗಳಿಸಿದ್ದರು. ಒನ್ ಡೇ ಮ್ಯಾಚ್ ನಲ್ಲಿ ಗಿಲ್ ಅಬ್ಬರಿಸಬಹುದು ಎಂಬ ನಿರೀಕ್ಷೆಯಿತ್ತು. ಇಲ್ಲೂ ಸಹ ಫ್ಲಾಪ್ ಶೋ ಆಗ್ತಿದೆ. ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಸರಣಿಯ ಉಳಿದ ಎರಡು ಪಂದ್ಯಗಳ ಜೊತೆಗೆ, ನಂತರ ನಡೆಯಲ್ಲಿರುವ 5 ಟಿ20 ಪಂದ್ಯಗಳಲ್ಲಿ ಗಿಲ್ ಮತ್ತೆ ತಮ್ಮ ಹಳೆಯ ಫಾರ್ಮ್ ಗೆ ಮರಳಲೇಬೇಕು. ಇಲ್ಲದಿದ್ದರೆ ಮುಂಬರುವ ಸರಣಿಗಳಲ್ಲಿ ಗಿಲ್‌ಗೆ ತಂಡದಲ್ಲಿ ಅವಕಾಶ ತಪ್ಪಿದರು ಅಚ್ಚರಿಯಿಲ್ಲ.

suddiyaana