ಮಗುವಿನಂತೆ ನಡೆಯಲು ಕಲಿಯುತ್ತಿರುವ ಶುಭಾಂಶು ಶುಕ್ಲಾ! – ಬಾಹ್ಯಾಕಾಶದಲ್ಲಿ 18 ದಿನ.. ಗಗನಯಾತ್ರಿ ಆರೋಗ್ಯ ಹೇಗಿದೆ?

ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೆಲ ಪ್ರಯೋಗಗಳನ್ನ ಮಾಡಿ ಯಶಸ್ವಿಯಾಗಿದ್ರು. ಸುಮಾರು 18 ದಿನಗಳ ಕಾಲ ಶುಕ್ಲಾ ಬಾಹ್ಯಕಾಶದಲ್ಲಿದ್ದುಕೊಂಡು ಅಧ್ಯಯನ ನಡೆಸಿ, ಭೂಮಿಗೆ ವಾಪಾಸ್ ಬಂದಿದ್ರು. ಇದೀಗ ಶುಭಾಂಶು ಶುಕ್ಲಾ ಭೂಮಿಗೆ ಹೊಂದಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸೋಲಿನೊಂದಿಗೆ ಆ್ಯಂಡ್ರೆ ರಸೆಲ್ ವಿದಾಯ- ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಗ್ಗಜ ಕ್ರಿಕೆಟರ್ ಗುಡ್ ಬೈ
ಶುಭಾಂಶು ಶುಕ್ಲಾ ಐಎಸ್ಎಸ್ನಲ್ಲಿ ಸುಮಾರು 18 ದಿನಗಳ ಕಾಲ ಅಧ್ಯಯನದಲ್ಲಿ ತೊಡಗಿದ್ರು. ಜುಲೈ 15 ರಂದು ಸುರಕ್ಷಿತವಾಗಿ ಭೂಮಿಗೆ ಮರಳಿದರು. ಇದೀಗ ಬಾಹ್ಯಾಕಾಶ ಯಾನದಿಂದ ಹಿಂದಿರುಗಿದ ಭಾರತೀಯ ಗಗನಯಾತ್ರಿ ಶುಕ್ಲಾ, ಭೂಮಿಯ ಮೇಲೆ ನಡೆಯಲು ಕಲಿಯುತ್ತಿದ್ದಾರೆ. ಶುಕ್ಲಾ ಅವರು ಮತ್ತೆ ನಡೆಯಲು ಪ್ರಯತ್ನಿಸುತ್ತಿರುವ ಮತ್ತು ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುತ್ತಿರುವ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಶುಕ್ಲಾ ನಡೆಯಲು ಪ್ರಯತ್ನಿಸುತ್ತಿದ್ರೆ, ಇಬ್ಬರು ಸಹಾಯ ಮಾಡುತ್ತಿದ್ದಾರೆ.
ಶುಭಾಂಶು ಶುಕ್ಲಾ ಪೋಸ್ಟ್ಗೆ ಅನೇಕರು ಕಮೆಂಟ್ ಮಾಡ್ತಿದ್ದಾರೆ. ಬೇಗ ಚೇತರಿಸಿಕೊಳ್ಳಿ ಎಂದಿದ್ದಾರೆ. ನನಗೆ ಅನೇಕರು ಸಂದೇಶ ಕಳುಹಿಸುತ್ತಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ನಿಮಗೆಲ್ಲರಿಗೂ ಧನ್ಯವಾದ. ಗುರುತ್ವಾಕರ್ಷಣೆ ಇಲ್ಲದ ವಾತಾವರಣಕ್ಕೆ ನನ್ನ ದೇಹ ಒಗ್ಗಿಕೊಂಡಿತ್ತು. ಈಗ ಗುರುತ್ವಾಕರ್ಷಣೆಗೆ ಮರಳಿದಾಗ, ಇಲ್ಲಿಗೆ ಮತ್ತೆ ಹೊಂದಿಕೊಳ್ಳಬೇಕು. ನನ್ನ ದೇಹ ಬಹುಬೇಗ ಭೂಮಿ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವುದನ್ನು ಕಂಡು ನನಗೆ ಅಚ್ಚರಿಯಾಯಿತು ಎಂದು ಶುಕ್ಲಾ ತಿಳಿಸಿದ್ದಾರೆ.

ನೋಡಿರಿ

