ಪೆದ್ದಿ ಚಿತ್ರದಲ್ಲಿ ರಾಮ್‌ಚರಣ್‌ಗೆ ಶ್ರುತಿ ಹಾಸನ್ ಸಾಥ್ – ಜಾನ್ಸಿ ಕಪೂರ್ ಜೊತೆ ಹೆಲ್ಲಲ್ಲಲ್ಲೋ ಡ್ಯಾನ್ಸ್‌ಗೆ ಬಿಂದಾಸ್ ಸ್ಟೆಪ್ಸ್

ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ನಟನೆಯ ಪೆದ್ದಿ ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳಷ್ಟೇ ಬಾಕಿ. ಟಾಲಿವುಡ್ ಅಂಗಳದಲ್ಲಿ ಬಹುನಿರೀಕ್ಷಿತ ಸಿನಿಮಾ ಪೆದ್ದಿಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಇದರ ಮಧ್ಯೆ ಪೆದ್ದಿ ಸಿನಿಮಾ ತಂಡ ಮತ್ತೊಂದು ಹಾಡಿನ ಪ್ರೋಮೋ ರಿಲೀಸ್ ಮಾಡಿದೆ. ಜೊತೆಗೆ ಶನಿವಾರ ಪೂರ್ತಿ ಹಾಡು ಪ್ರೇಕ್ಷಕರ ಮುಂದೆ ಬರಲಿದೆ.
ಇದನ್ನೂ ಓದಿ:ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ಮಾವನಿಗೆ ಕಂಟಕ – ಲಕ್ಷ್ಮೀಕಾಂತ್ ಪಾತ್ರ ಸಾವಲ್ಲಿ ಅಂತ್ಯವಾಗುತ್ತಾ?
ಟಾಲಿವುಡ್ ಮೆಗಾ ಪವರ್‌ಸ್ಟಾರ್ ಮತ್ತು ಬಾಲಿವುಡ್ ಬ್ಯೂಟಿ ಜಾನ್ವಿಕಪೂರ್ ಅಭಿನಯದ ಪೆದ್ದಿ ಸಿನಿಮಾ ಜೂನ್ 4 ರಂದು ರಿಲೀಸ್ ಆಗಲಿದೆ. ಇದರ ಬೆನ್ನಲ್ಲೇ ರಾಮ್ ಚರಣ್, ಶ್ರುತಿ ಹಾಸನ್ ಹಾಗೂ ಜಾನ್ವಿ ಕಪೂರ್ ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿರೋ ಹಾಡಿನ ಪ್ರೋಮೋ ರಿಲೀಸ್ ಆಗಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ಪೆದ್ದಿಯ ಹೊಸ ಸಾಂಗ್ ಹೆಲ್ಲಲ್ಲೋ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.
ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯ ಈ ಚಿತ್ರದ ಮೊದಲ ಎರಡು ಹಾಡುಗಳು ಈಗಾಗಲೇ ಟ್ರೆಂಡಿಂಗ್‌ನಲ್ಲಿವೆ. ಇದೀಗ ಚಿತ್ರತಂಡ ಸಿನಿಮಾದ ಮೂರನೇ ಹಾಡು ‘ಹೆಲ್ಲಲ್ಲಲ್ಲೋ’ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ಎ.ಆರ್. ರೆಹಮಾನ್ ಅವರ ವಿಶಿಷ್ಟ ಶೈಲಿಯ ಮ್ಯೂಸಿಕಲ್ ಮ್ಯಾಜಿಕ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ರಾ ಶೈಲಿಯ ಸಮ್ಮಿಲನ ಎದ್ದು ಕಾಣುತ್ತಿದೆ. ವೇದಿಕೆಯೊಂದರ ಮೇಲೆ, ಸುತ್ತುವರಿದ ನೂರಾರು ಜನರ ಮಧ್ಯೆ ಅದ್ದೂರಿಯಾಗಿ ಚಿತ್ರೀಕರಿಸಲಾದ ಈ ಹಾಡಿನಲ್ಲಿ ರಾಮ್ ಚರಣ್, ಶ್ರುತಿ ಹಾಸನ್ ಮತ್ತು ಜಾನ್ವಿ ಕಪೂರ್ ಜೊತೆಯಾಗಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ರಾಮ್ ಚರಣ್ ಅವರು ರಗಡ್ ಲುಕ್, ಶ್ರುತಿ ಹಾಸನ್ ಗ್ಲಾಮರಸ್ ಲುಕ್, ಜಾನ್ವಿ ಕಪೂರ್ ಬ್ಯೂಟಿ ಅಭಿಮಾನಿಗಳ ಮನಸೆಳೆದಿದೆ.
ಪೆದ್ದಿ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಾಯಕ ನಾಯಕಿಯಾಗಿ ನಟಿಸಿದರೆ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪ್ರಮುಖ ಪಾತ್ರ ಮಾಡಿದ್ದಾರೆ. ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ನೋಡಿರಿ

