ಕೇಂದ್ರದ ಬರ ಪರಿಹಾರ ಇಷ್ಟೇನಾ? | ಹೆಲಿಕಾಪ್ಟರ್‌ ನಲ್ಲಿ ಜಾರಿದ ದೀದಿ | ಕೀಳು ಮಾತಿಂದ ಗೌರವ ಕಳ್ಕೊಂಡ್ರಾ ಶ್ರುತಿ? | ಇಂದಿನ ಪ್ರಮುಖ ಸುದ್ದಿಗಳು

 ಕೇಂದ್ರದ ಬರ ಪರಿಹಾರ ಇಷ್ಟೇನಾ? | ಹೆಲಿಕಾಪ್ಟರ್‌ ನಲ್ಲಿ ಜಾರಿದ ದೀದಿ | ಕೀಳು ಮಾತಿಂದ ಗೌರವ ಕಳ್ಕೊಂಡ್ರಾ ಶ್ರುತಿ? | ಇಂದಿನ ಪ್ರಮುಖ ಸುದ್ದಿಗಳು

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವತ್ತು ದುರ್ಗಾಪುರದಲ್ಲಿ ಹೆಲಿಕಾಪ್ಟರ್ ನಲ್ಲಿ ಜಾರಿ ಬಿದ್ದಿದ್ದಾರೆ. ತಮ್ಮ ಸೀಟಿನಲ್ಲಿ ಕುಳಿತುಕೊಳ್ಳುವಾಗ ದೀದಿ ಜಾರಿ ಬಿದ್ದಿದ್ದಾರೆ. ಇದ್ರಿಂದಾಗಿ ಮಮತಾ ಬ್ಯಾನರ್ಜಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದೀದಿ ಆಯತಪ್ಪಿ ಬೀಳುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸಹಾಯ ಮಾಡಿದರು. ಚುನಾವಣಾ ರ್ಯಾಲಿಗಾಗಿ ಅಸನ್ಸೋಲ್‌ಗೆ  ಪ್ರಯಾಣ ಮಾಡುವಾಗ ಈ ಘಟನೆ ನಡೆದಿದೆ.

  • ಡಾ. ಕೆ ಸುಧಾಕರ್‌ ವಿರುದ್ಧ ಕೇಸ್‌ ದಾಖಲು

ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಮಾದವಾರದ ಬಿಜೆಪಿ ಮುಖಂಡನ ಮನೆಯಲ್ಲಿ ಕೋಟಿ, ಕೋಟಿ ಹಣ ಪತ್ತೆಯಾದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಡಾ.ಕೆ ಸುಧಾಕರ್‌ ಮೇಲೆ ಪ್ರಕರಣ ದಾಖಲಾಗಿದೆ. ಚಿಕ್ಕಬಳ್ಳಾಪುರ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಕೆ ಸುಧಾಕರ್ ಅವರು ನೋಡಲ್ ಅಧಿಕಾರಿ ಮೌನೀಶ್ ಮೌದ್ಗಿಲ್​ಗೆ ಕರೆ ಮಾಡಿ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕ್ಷಿ ಸಮೇತ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರು ದೂರು ದಾಖಲಿಸಿದ್ದಾರೆ.

  • ನಟಿ ಶ್ರುತಿ ಹೇಳಿಕೆ ವಿರುದ್ದ ಹೆಚ್ಚಾಯ್ತು ಆಕ್ರೋಶ

ಬಿಜೆಪಿ ನಾಯಕಿ ಶ್ರುತಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ. ಇದೀಗ ಶ್ರುತಿ ಹೇಳಿಕೆ ವಿರುದ್ದ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಶ್ರುತಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಅಂತಾ ರಾಜ್ಯದ ವಿವಿದೆಡೆ ಮಹಿಳೆಯರು ಆಗ್ರಹಿದ್ದಾರೆ. ಬಣ್ಣ ಹಾಕಿ ನಟಿಸುವ ನಟಿ ನಿಜ ಜೀವನದ ಮಹಿಳೆಯರ ಬಗ್ಗೆ ಅವಹೇಳನ ಭಾಷಣ ಮಾಡಿರುವುದು ಮಹಿಳಾ ವಿರೋಧಿ ನಡೆಯಾಗಿದೆ. ಮಹಿಳಾ ನಾಯಕಿ ಶ್ರುತಿ ಅವರನ್ನು ಬಿಜೆಪಿ ಕೂಡಲೇ ವಜಾಗೊಳಿಸಲಿ ಎಂದು ಆಗ್ರಹಿಸಿದ್ದಾರೆ.

  •  ಹಾಸನ ಪೆನ್‌ಡ್ರೈವ್‌ ಪ್ರಕರಣ – ರಾಜ್ಯದಾದ್ಯಂತ ಆಕ್ರೋಶ

ಲೋಕಸಭಾ ಚುನಾವಣೆ ಹೊತ್ತಲೇ ಹಾಸನ ಪೆನ್ಡ್ರೈವ್ ಪ್ರಕರಣ ಇಡೀ ರಾಜಕೀಯ ವಲಯಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ವೈರಲ್ ವಿಡಿಯೋ ಸಂಬಂಧ ರಾಜಕಾರಣಿಯ ಬೆಂಬಲಿಗರು ಈಗಾಗಲೇ ದೂರು ನೀಡಿದ್ದಾರೆ. ಈ ಪ್ರಕರಣದ ಕುರಿತು ಬೆಂಗಳೂರು ಗ್ರಾಮಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರತಿಕ್ರಿಯೆ ನೀಡಿದ್ದಾರೆ.  ಹಾಸನ ಜಿಲ್ಲೆಯಲ್ಲಿ ನಡೆದ ಘಟನೆ ನಾಚಿಕೆಗೇಡಿನ ಘಟನೆ. ಹೆಣ್ಣು ಮಕ್ಕಳು, ತಾಯಂದಿರು, ಇಡೀ ಸಮಾಜಕ್ಕೆ ಕಳಂಕ ತರುವ ಕೆಲಸ ಆಗಿದೆ. ಹಾಸನದಿಂದ ಜೆಡಿಎಸ್ ಆಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಸರಿಯೋಕೆ ಹೇಳಬೇಕು ಎಂದು ಡಿ.ಕೆ ಸುರೇಶ್ ಆಗ್ರಹಿಸಿದ್ದಾರೆ.

  • ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ  

ಕೊನೆಗೂ ಅಳೆದು ತೂಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. 3,455 ಕೋಟಿ ರೂಪಾಯಿಗಳನ್ನು ಕೇಂದ್ರ ಬಿಡುಗಡೆ ಮಾಡಿದೆ. ಹಣ ಬಿಡುಗಡೆ ಮಾಡುವ ಕುರಿತು ಭರವಸೆ ನೀಡಿದ ಕೆಲವೇ ದಿನಗಳಲ್ಲಿ ಪರಿಹಾರವನ್ನು ನೀಡಿದೆ. ರಾಜ್ಯ ಸರ್ಕಾರ ಬರ ಕುರಿತು ಪರಿಶೀಲನೆ ನಡೆಸಿ 18,174 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಕೆ ಮಾಡಿತ್ತು. ಈ ಕುರಿತಂತೆ ಪರಿಶೀಲನೆ ನಡೆಸಿದ್ದ ಬರ ಪರಿಹಾರ ತಂಡ ತನ್ನ ವರದಿನ್ನು ಸಲ್ಲಿಕೆ ಮಾಡಿತ್ತು.

ಕೇಂದ್ರ ಸರ್ಕಾರವೇನೋ ದೊಡ್ಡ ಮನಸು ಮಾಡಿ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಆದರೆ, 3,455 ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಿರುವುದಕ್ಕೆ ರಾಜ್ಯ ಕಾಂಗ್ರೆಸ್ ಕೇಂದ್ರ ವಿರುದ್ಧ ಕಿಡಿಕಾರಿದೆ. ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕರ್ನಾಟಕಕ್ಕೆ ಸ್ವಲ್ಪವಾದರೂ ಬರ ಪರಿಹಾರ ಕೊಡಿಸಿದ ಸುಪ್ರೀಂ ಕೋರ್ಟ್​ಗೆ ಧನ್ಯವಾದಗಳು. ಎನ್​ಡಿಆರ್​ಎಫ್ ನಿಯಮವಾಳಿ ಪ್ರಕಾರ ರಾಜ್ಯಕ್ಕೆ ರೂ.18,171 ಕೋಟಿ ನೀಡಬೇಕಾಗಿತ್ತು. ಬರಪರಿಹಾರಕ್ಕಾಗಿ ಈ ಹಣ ಸಾಲದು. ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

  • ರಾಹುಲ್‌ ಡಿಎನ್ಎ ಟೆಸ್ಟ್ ಮಾಡಿದ್ರೆ ಯಾರು ಏನು ಅಂತ ಗೊತ್ತಾಗುತ್ತೆ – ಯತ್ನಾಳ್‌

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಟ್ಟಿನ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಅವನ ಹೆಸರು ರಾಹುಲ್ ಅಲ್ಲ. ಬೇರೆ ಏನೋ ಇರಬೇಕು. ಡಿಎನ್ಎ ಟೆಸ್ಟ್ ಮಾಡಿದ್ರೆ ಯಾರು ಏನು ಅಂತ ಗೊತ್ತಾಗುತ್ತದೆ. ಇನ್ನು ಪ್ರಿಯಾಂಕಾ ವಾದ್ರಾ ಇವರಿಗೆ ಎಷ್ಟು ಅಡ್ಡ ಹೆಸರುಗಳು ಎಂದು ಕೈ ಬೆರಳುಗಳಿಂದ ಕ್ರಾಸ್ ಚಿಹ್ನೆ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಯತ್ನಾಳ್.

  • ಕಾಂಗ್ರೆಸ್​ಗೆ ಮುಸ್ಲಿಂ ಮತಗಳು ಬೇಕು ಆದರೆ ಅಭ್ಯರ್ಥಿ ಬೇಡ!

ಕಾಂಗ್ರೆಸ್‌ಗೆ  ಮುಸ್ಲಿಂ ಮತಗಳು ಬೇಕು. ಆದರೆ, ಮುಸ್ಲಿಂ ಅಭ್ಯರ್ಥಿಗಳು ಏಕೆ ಬೇಡ?” ಹೀಗೊಂದು ಪ್ರಶ್ನೆಯನ್ನು ಕಾಂಗ್ರೆಸ್ನ ಮುಸ್ಲಿಂ ನಾಯಕರೊಬ್ಬರು ‘ಕೈ’ ಹೈಕಮಾಂಡ್‌ಗೆ ಕೇಳಿದ್ದಾರೆ. ಇದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ನ ಆಂತರಿಕ ಕಿತ್ತಾಟವನ್ನು ಬಹಿರಂಗಗೊಳಿಸಿದೆ. ಮಹಾರಾಷ್ಟ್ರದಲ್ಲಿ ಒಬ್ಬರೇ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡದ ಬೆನ್ನಲ್ಲೇ ಅಲ್ಲಿನ ಕಾಂಗ್ರೆಸ್ ನಾಯಕ ಮೊಹಮದ್ ಆರೀಫ್ ನಸೀಮ್ ಖಾನ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ನಸೀಮ್ ಖಾನ್ ಮಹಾರಾಷ್ಟ್ರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಹೊರಬಂದಿದ್ದಾರೆ.

  • ಬೆಳಗಾವಿ  ಅಖಾಡಕ್ಕೆ ಏಕಕಾಲಕ್ಕೆ ಸಿಎಂ, ಪಿಎಂ ಎಂಟ್ರಿ!

ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ. ಹೀಗಾಗಿ ರಾಜಕೀಯ ಪವರ್ ಸೆಂಟರ್ ಎನಿಸಿಕೊಂಡಿರುವ ಬೆಳಗಾವಿ ಅಖಾಡಕ್ಕೆ ಏಕಕಾಲಕ್ಕೆ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಧುಮುಕಲಿದ್ದಾರೆ. ಏಪ್ರಿಲ್ 28ರ ಬೆಳಿಗ್ಗೆ 11ಕ್ಕೆ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ ನಡೆಸಲಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಇದೇ ದಿನದಂದು ಬೆಳಗಾವಿ ಮತ್ತು ಚಿಕ್ಕೋಡಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.

  • ನಾನು ಮಹಿಳೆಯೇ ಅಲ್ಲ ಎಂದ ಬಿಜೆಪಿ ಅಭ್ಯರ್ಥಿ!

ಹೈದರಾಬಾದ್‌ ನಲ್ಲಿ AIMIM ಸಂಸದ ಅಸಾದುದ್ದಿನ್ ಓವೈಸಿ ವಿರುದ್ಧ ಸ್ಪರ್ಧಿಸಿರುವ ಮಾಧುರಿ ಲತಾ ಇಡೀ ದೇಶದ ಸೆಂಟ್ರಾಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಎಲ್ಲರೂ ಹೈದರಾಬಾದ್‌ ಚುನಾವಣೆ ಮೇಲೆ ಕಣ್ಣು ಇಟ್ಟಿರುವಾಗ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ನಾನು ಮಹಿಳೆಯೇ ಅಲ್ಲ ಅಂತ ಹೇಳಿರೋ ವಿಡಿಯೋ ಸಖತ್ ವೈರಲ್ ಆಗಿದೆ. ವೃತ್ತಿಯಲ್ಲಿ ಕಲಾವಿದೆ ಆಗಿದ್ದ ಮಾಧವಿ ಅವರು ಈ ಬಾರಿ ರಾಜಕೀಯಕ್ಕೆ ಧುಮುಕಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸೋಲಿಲ್ಲದ ಅಸಾದುದ್ದಿನ್ ಓವೈಸಿ ವಿರುದ್ಧ ಮಾಧವಿ ಲತಾ ಹಿಂದುತ್ವದ ಫೈರ್ ಬ್ರ್ಯಾಂಡ್ ಆಗಿ ಚುನಾವಣೆ ಎದುರಿಸುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *