ಶಾರ್ವರಿ ಆಟಕ್ಕೆ ರಾಧಾ ಬ್ರೇಕ್! ಶ್ರೀರಸ್ತು ಶುಭಮಸ್ತು ಎಂಡ್!
ಸೀರಿಯಲ್ ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್!

ಇಷ್ಟು ದಿನ ಶಾರ್ವರಿ ಅಕ್ಕ ಸತ್ತಿದ್ದಾಳೆ. ಆಕೆಯ ಸಾವಿಗೆ ಮಾಧವನೇ ಕಾರಣ ಅಂತಾ ಆತನ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಬಂದಿದ್ಲು.. ಈಗ ತುಳಸಿ ಮಗುವನ್ನ ಕೂಡ ಕಿಡ್ನ್ಯಾಪ್ ಮಾಡಿದ್ಲು.. ಆದ್ರೀಗ ಶಾರ್ವರಿಗೆ ಅಕ್ಕ ಸತ್ತಿಲ್ಲ ಅನ್ನೋದು ಗೊತ್ತಾಗಿದೆ. ಅಷ್ಟೇ ಅಲ್ಲ ರಾಧಾ ಆಕೆಗೆ ಸಿಗ್ತಿದ್ದಂತೆ ಖುಷಿಯಲ್ಲಿ ತೇಲಾಡಿದ್ದಾಳೆ. ಆದ್ರೀಗ ರಾಧಾ ಶಾರ್ವರಿಗೆ ಶಾಕ್ ಕೊಟ್ಟಿದ್ದಾಳೆ. ನೀನು ರಾಕ್ಷಸಿ ಅಂತಾ ಹೇಳಿದ್ದಾಳೆ. ಇದೀಗ ಈ ಸೀರಿಯಲ್ ಅಂತ್ಯ ಆಗೋ ಟೈಮ್ ಬಂತಾ ಅನ್ನೋ ಅನುಮಾನ ವೀಕ್ಷಕರನ್ನ ಕಾಡ್ತಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್ ಈಗ ಮಹತ್ವದ ಘಟ್ಟ ತಲುಪಿದೆ. ಅಕ್ಕ ಸತ್ತಿದ್ದಾಳೆ. ಆಕೆ ಸಾಯಲು ಮಾಧವನ ಕುಟುಂಬವೇ ಕಾರಣ ಅಂತ ಶಾರ್ವರಿ ನಂಬಿದ್ದಳು. ಹೀಗಾಗಿ ಶಾರ್ವರಿ ಇಷ್ಟು ದಿನ ಮಾಧವನ ಕುಟುಂಬಕ್ಕೆ ಒಂದಲ್ಲ ಒಂದು ತೊಂದರೆ ಕೊಡ್ತಾ ಬಂದಿದ್ಲು.. ಮಾಧವನ ಮೊದಲ ಹೆಂಡ್ತಿಯನ್ನ ಸಾಯಿಸಿದ್ಲು.. ಅದಾದ ಬಳಿಕ ಮಾಧವನಿಂದ ಮಕ್ಕಳನ್ನ ದೂರ ಮಾಡಿದ್ಲು. ಮಾಧವನ ಮನೆಯಲ್ಲಿದ್ದುಕೊಂಡೇ ಎಲ್ಲರ ವಿರುದ್ಧ ಸಂಚು ರೂಪಿಸ್ತಾ ಬಂದಿದ್ಲು.. ತುಳಸಿ ಜೀವ ತೆಗೆಯೋದಿಕ್ಕೂ ಮುಂದಾಗಿದ್ಲು.. ಈಗ ತುಳಸಿ ಮಗಳು ಮೀರಾಗಳನ್ನ ಕೂಡ ಕಿಡ್ನ್ಯಾಪ್ ಮಾಡಿದ್ದಾಳೆ. ಆದ್ರೀಗ ಶಾರ್ವರಿಗೆ ರಾಧಾ ಬದುಕಿರುವ ವಿಚಾರ ಗೊತ್ತಾಗಿದೆ. ಆಕೆ ಶಾರ್ವರಿ ಜೊತೆ ಹೋಗಲು ನಿರಾಕರಿಸಿದ್ರೂ ಒತ್ತಾಯದಿಂದ ಕರ್ಕೊಂಡು ಹೋಗಿದ್ದಾಳೆ.
ಹೌದು, ಮೀರಾಳನ್ನು ಶಾರ್ವರಿ ಕಿಡ್ನ್ಯಾಪ್ ಮಾಡಿದ್ದ ಶಾರ್ವರಿಗೆ ಈಗ ಅಕ್ಕ ಸಿಕ್ಕಿದ್ದಾಳೆ. ರಾಧಾ ಸಿಕ್ಕರೂ ಕೂಡ, ನಾನು ಮೀರಾಳನ್ನು ನಿಮಗೆ ಕೊಡೋದಿಲ್ಲ ಅಂತ ಶಾರ್ವರಿ, ಮಾಧವನ ಮನೆಯವರಿಗೆ ಹೇಳಿದ್ದಾಳೆ. ಮಗಳಿಲ್ಲದೆ ನಾವಿಲ್ಲ, ನಮಗೆ ನಮ್ಮ ಮಗಳು ಬೇಕು ಅಂತ ಅವಿನಾಶ್ ಬೇಡಿಕೊಂಡರೂ ಕೂಡ ಶಾರ್ವರಿ ಮಾತು ಕೇಳ್ತಿಲ್ಲ. ಬಳಿಕ ರಾಧಾಳನ್ನ ಕೂಡ ಶಾರ್ವರಿ ಕಿಡ್ನ್ಯಾಪ್ ಮಾಡಿದ್ದಾಳೆ.. ಅಷ್ಟೇ ಅಲ್ಲ ಮಾಧವನ ಜೊತೆ ತನ್ನ ಅಕ್ಕನ ಮದುವೆ ಮಾಡಬೇಕು ಅಂತ ಶಾರ್ವರಿ ನೋಡುತ್ತಿದ್ದಾಳೆ. ಆದ್ರೆ ರಾಧಾ ನೀನು ರಾಕ್ಷಸಿ, ನನ್ನ ಹತ್ರ ಬರ್ಬೇಡ.. ಮಾಧವ್ ಅವರನ್ನ ಬಿಟ್ಟು ಬಿಡು.. ಆ ಕುಟುಂಬಕ್ಕೆ ಏನಾದರೂ ಆದರೆ ನಾನು ಸುಮ್ಮನಿರೋದಿಲ್ಲ ಎಂದಿದ್ದಾಳೆ ರಾಧಾ. ಆಗ ಶಾರ್ವರಿ ಮಾಧವನ ಜೊತೆ ನಿನ್ನ ಮದುವೆ ಆಗೇ ಆಗುತ್ತೆ. ಯಾರಿಂದಲೂ ಮದುವೆ ನಿಲ್ಲಿಸೋದಿಕ್ಕೆ ಆಗೋದಿಲ್ಲ ಎಂದಿದ್ದಾಳೆ. ಮಾಧವನ ಜೊತೆ ಮದುವೆ ಆಗೋ ಸಂದರ್ಭ ಬಂದ್ರೆ ನಾನು ಸಾಯೋದಿಕ್ಕೂ ಸಿದ್ಧ ಅಂತಾ ರಾಧಾ ವಾರ್ನ್ ಮಾಡಿದ್ದಾಳೆ. ಇದೀಗ ಶಾರ್ವರಿ ಬಣ್ಣ ಬಯಲಾಗಿದೆ. ರಾಧಾ ಕೂಡ ಸಿಕ್ಕಿದ್ದಾಳೆ. ತುಳಸಿ-ಮಾಧವ್ ಕುಟುಂಬ ಒಂದಾಗಿ ತುಂಬ ಚೆನ್ನಾಗಿ ಬದುಕುತ್ತಿದೆ. ಈ ಧಾರಾವಾಹಿ ಕಥೆ ನೋಡಿದರೆ ಆದಷ್ಟು ಬೇಗ ಕೊನೆಯ ಎಪಿಸೋಡ್ ಪ್ರಸಾರ ಆಗಲಿದೆ ಎಂದು ವೀಕ್ಷಕರು ಹೇಳ್ತಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಈ ಸೀರಿಯಲ್ ಅಂತ್ಯ ಆಗಲಿದೆ ಎನ್ನಲಾಗಿತ್ತು. ಆದ್ರೆ ಸೀರಿಯಲ್ ಸ್ಟೋರಿಯಲ್ಲಿ ಟ್ವಿಸ್ಟ್ ನೀಡಲಾಗಿತ್ತು. ಆದ್ರೀಗ ಸೀರಿಯಲ್ ಆದಷ್ಟು ಬೇಗ ಎಂಡ್ ಆಗಲಿದೆ ಎಂದು ಹೇಳಲಾಗ್ತಿದೆ. ಆದ್ರೆ ಧಾರಾವಾಹಿ ಅಂತ್ಯ ಆಗುವ ಬಗ್ಗೆ ಈ ಸೀರಿಯಲ್ ಕಲಾವಿದರಾಗಲೀ, ವಾಹಿನಿಯಾಗಲಿ ಯಾವುದೇ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ.

ನೋಡಿರಿ

