ಹಾರಿ ಹೋಯ್ತು ತುಳಸಿ ಪ್ರಾಣ! – ಸುಧಾರಾಣಿ ಪಾತ್ರ ಮುಕ್ತಾಯ? 

ಹಾರಿ ಹೋಯ್ತು ತುಳಸಿ ಪ್ರಾಣ! – ಸುಧಾರಾಣಿ ಪಾತ್ರ ಮುಕ್ತಾಯ? 

ಮೊಮ್ಮಕ್ಕಳನ್ನ ನೋಡೋ ವಯಸ್ಸಲ್ಲಿ ತುಳಿಸಿ ಗರ್ಭಿಣಿಯಾಗಿದ್ಲು.. ಆರಂಭದಲ್ಲಿ ಇದು ವೀಕ್ಷಕರ ಅಸಮಧಾನಕ್ಕೆ ಕಾರಣವಾದ್ರೂ, ಬರುಬರುತ್ತಾ ಸ್ಟೋರಿ ಆಂಗಲ್‌ ನೋಡಿ ವೀಕ್ಷಕರು ಸೀರಿಯಲ್ ನ ಮೆಚ್ಚಿಕೊಂಡಿದ್ರು.. ತುಳಸಿ ಮಗುವಿಗೆ ಜನ್ಮ ನೀಡ್ತಾಳಾ? ಆಕೆಯ ಪ್ರಾಣಕ್ಕೆ ಅಪಾಯ ಆಗುತ್ತಾ ಅನ್ನೋ ಕ್ಯೂರಿಯಾಸಿಟಿ ಇತ್ತು.. ಇದೀಗ ತುಳಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.. ತಾಯಿ ಮಗು ಆರೋಗ್ಯವಾಗಿದ್ದಾರೆ ಅಂತಾ ಡಾಕ್ಟರ್‌ ಹೇಳ್ತಿದ್ದಂತೆ, ಶಾರ್ವರಿ ತನ್ನ ಕೈಚಳಕ ತೋರಿಸಿದ್ದಾಳೆ.. ತುಳಸಿ ಪ್ರಾಣಕ್ಕೆ ಸಂಚಕಾರ ತಂದಿದ್ದಾಳೆ.. ಹಾಗಾದ್ರೆ ತುಳಸಿ ಸತ್ತು ಹೋದ್ಲಾ? ಸೀರಿಯಲ್‌ ಮುಗಿಯುತ್ತಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.

ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಜಿಗಿದ SpaceX ನೌಕೆ – ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಬರೋದು ಯಾವಾಗ?

ಶ್ರೀರಸ್ತು ಶುಭಮಸ್ತು ಸೀರಿಯಲ್‌ ಸದ್ಯ ಮಹಾ ತಿರುವು ಪಡೆದುಕೊಂಡಿದೆ. ವಯಸ್ಸಲ್ಲದ ವಯಸ್ಸಲ್ಲಿ ತುಳಸಿ ಗರ್ಭಿಣಿಯಾಗಿದ್ಲು.. ಆಕೆ ಪ್ರೆಗ್ನೆಂಟ್‌ ಅಂತಾ ಗೊತ್ತಾಗ್ತಿದ್ದಂತೆ ಆಕೆಯ ಜೀವಕ್ಕೆ ತೊಂದರೆಯಾಗೋ ಸಾಧ್ಯತೆ ಇದೆ ಎಂದು ಡಾಕ್ಟರ್‌ ಹೇಳಿದ್ರು.. ಆದ್ರೆ ತುಳಸಿ ಈಗ ಮುದ್ದಾದ ಮಗುವಿಗೆ ಜನ್ಮ ನೀಡಿದ್ಲು.. ತಾಯಿ ಮಗು ಆರೋಗ್ಯವಾಗಿದ್ದಾರೆ ಅಂತಾ ಡಾಕ್ಟರ್‌ ಕೂಡ ಹೇಳಿದ್ರು.. ಆದ್ರೆ ಖುಷಿ ವಿಚಾರನಾ ಕುತಂತ್ರಿ ಶಾರ್ವರಿಗೆ ಸಹಿಸಿಕೊಳ್ಳೋದಿಕ್ಕೆ ಆಗಿಲ್ಲ.. ಹೀಗಾಗಿ ಆಕೆಯ ಪ್ರಾಣಕ್ಕೆ ಸಂಚಕಾರ ತಂದಿದ್ದಾಳೆ.. ಸುಪಾರಿ ಕೊಟ್ಟು ತುಳಸಿ ಚಾಪ್ಟರ್‌ ಕ್ಲೋಸ್‌ ಮಾಡಿದ್ದಾಳೆ.

ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಡಾಕ್ಟರ್‌ ಹೇಳ್ತಿದ್ದಂತೆ ಶಾರ್ವರಿ ನರ್ಸ್‌ಗೆ ಸುಪಾರಿ ಕೊಟ್ಟಿದ್ದಾಳೆ.. ಶಾರ್ವರಿ ಹೇಳಿದಂತೆ ಆ ನರ್ಸ್‌ ತುಳಸಿಗೆ ಇಂಜೆಕ್ಷನ್‌ ಕೊಟ್ಟಿದ್ದಾಳೆ. ಇದ್ರಿಂದಾಗಿ ತುಳಸಿ ಹಾರ್ಟ್‌ಬೀಟ್‌ ನಿಂತಿದೆ. ವೆಂಟಿಲೇಟರ್‌ ಗೆ ಶಿಫ್ಟ್‌ ಮಾಡಿ ಅಂದ್ರೂ ನರ್ಸ್‌ ಪಲ್ಸ್‌ ರೇಟ್‌ ಕೂಡ ನಿಂತಿದೆ ಅಂತಾ ಡಾಕ್ಟರ್‌ ಹತ್ರ ಹೇಳಿದ್ದಾಳೆ. ಕೂಡ್ಲೇ.. ಡಾಕ್ಟರ್‌ ತುಳಸಿ ಸತ್ತಿದ್ದಾಳೆ ಅಂತಾ ಮನೆಯವರ ಮುಂದೆ ಹೇಳಿದ್ದಾರೆ. ಇದ್ರಿಂದಾಗಿ ಮನೆಯವರೆಲ್ಲಾ ಶಾಕ್‌ ಆಗಿದ್ದಾರೆ. ದತ್ತ ಹಣೆ ಹಣೆ ಚಚ್ಚಿಕೊಳ್ತಿದ್ದಾನೆ. ಮಾಧವ ಕುಸಿದು ಬಿದ್ದಿದ್ದಾನೆ.. ಮಾಧವ ಮೊದಲ ಹೆಂಡ್ತಿಯನ್ನ ಕಳ್ಕೊಂಡಿದ್ದ.. ಈಗ ತುಳಸಿಯನ್ನೂ ಕಳ್ಕೊಂಡಿದ್ದೀನಿ ಅನ್ನೋ ನೋವಲ್ಲಿದ್ದಾನೆ.

ಇದೀಗ ಸೀರಿಯಲ್‌ ನೋಡಿದ ವೀಕ್ಷಕರಿಗೆ ನಾನಾ ಪ್ರಶ್ನೆ ಕಾಡ್ತಿದೆ. ಹಾಗಾದ್ರೆ ತುಳಸಿ ಸಾಯುತ್ತಾಳಾ? ತುಳಸಿ ಸಾಯೋದು ಡೌಟ್.‌ ಯಾಕಂದ್ರೆ ತುಳಸಿ ಪ್ರಮುಖ ಪಾತ್ರ.. ಆಕೆ ಸತ್ರೆ ಆ ಪಾತ್ರ ಮುಗಿಯುತ್ತದೆ ಎಂದರ್ಥ. ಆ ಪಾತ್ರ ಮುಗಿದ್ರೆ ಸೀರಿಯಲ್‌ ಕೂಡ ಮುಗಿದಂಗೆ ಲೆಕ್ಕ.. ಸೋ ಸೀರಿಯಲ್‌ ಇಷ್ಟು ಬೇಗ ಮುಗಿಸ್ಲಿಕ್ಕಿಲ್ಲ.. ಇನ್ನೇನಾದರೂ ಮ್ಯಾಜಿಕ್‌ ಆಗಿ ಅವಳು ಬದುಕಬಹುದು. ಅಥವಾ ಆಕೆಯನ್ನ ಸೀತಾರಾಮ ಸೀರಿಯಲ್‌ ಸಿಹಿ ತರ ತೋರಿಸ್ಬೋದು.. ಒಟ್ಟಿನಲ್ಲಿ ನಿರ್ದೇಶಕರು ಇನ್ನೇನಾದರೂ ಟ್ವಿಸ್ಟ್‌ ಕೊಟ್ಟು ತುಳಸಿಯನ್ನ ಸೀರಿಯಲ್‌ನಲ್ಲಿ ತೋರಿಸ್ಬೋದು ಅಂತಾ ಕಾಮೆಂಟ್‌ ಮಾಡ್ತಿದ್ದಾರೆ.

Shwetha M

Leave a Reply

Your email address will not be published. Required fields are marked *