ಮಗಳ ವಿರುದ್ಧವೇ ಶಾರ್ವರಿ ಸಂಚು! – ಅಪಘಾತ ಮಾಡಿದ್ದು ನಿಧಿ ಅಲ್ವಾ?
ತುಳಸಿ ಮುಂದೆ ಆಕ್ಸಿಡೆಂಟ್‌ ರಹಸ್ಯ ರಿವೀಲ್

ಮಗಳ ವಿರುದ್ಧವೇ ಶಾರ್ವರಿ ಸಂಚು! – ಅಪಘಾತ ಮಾಡಿದ್ದು ನಿಧಿ ಅಲ್ವಾ?ತುಳಸಿ ಮುಂದೆ ಆಕ್ಸಿಡೆಂಟ್‌ ರಹಸ್ಯ ರಿವೀಲ್

ಶ್ರೀರಸ್ತು ಶುಭಮಸ್ತು ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಇದೀಗ ನಿಧಿ ಆಕ್ಸಿಡೆಂಟ್‌ ಮಾಡಿದ್ದಾಳೆ ಎಂದು ಸಮರ್ಥ್‌ ಆ ತಪ್ಪನ್ನ ತಾನು ಮಾಡಿರೋದು ಅಂತಾ ಹೇಳಿ ಜೈಲು ಸೇರಿದ್ದಾನೆ. ಇದೀಗ ಆಕ್ಸಿಡೆಂಟ್‌ ರಹಸ್ಯ ರಿವೀಲ್‌ ಆಗಿದೆ. ಆ ಆಕ್ಸಿಡೆಂಟ್‌ ಮಾಡಿರೋದು ನಿಧಿ ಅಲ್ಲ ಅಂತಾ ಗೊತ್ತಾಗಿದೆ. ಹಾಗಾದ್ರೆ ಸಮರ್ಥ್‌ ಜೈಲಿನಿಂದ ಆಚೆ ಬರ್ತಾನಾ? ಆಕ್ಸಿಡೆಂಟ್‌ ಮಾಡಿರೋದು ಯಾರು ಅಂತಾ ಗೊತ್ತಾಯ್ತಾ? ಮಗ ಹಾಗೂ ಮನೆನ ಉಳಿಸಲು ತುಳಸಿ ಮುಂದೇನು ಮಾಡ್ತಾಳೆ? ಶಾರ್ವರಿ ಆಟಕ್ಕೆ ಬ್ರೇಕ್‌ ಹಾಕ್ತಾಳಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗಾನ ನಿಲ್ಲಿಸಿದ ಹಾಡುಹಕ್ಕಿ – ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಇನ್ನಿಲ್ಲ

ದತ್ತ ಹಾಗೂ ಸಿರಿ ತಂದೆಗೆ ಆಕ್ಸಿಡೆಂಟ್‌ ಮಾಡಲಾಗಿದೆ ಅಂತಾ ನಿಧಿ ಮೇಲೆ ಆರೋಪ ಕೇಳಿಬಂದಿತ್ತು.. ಆಕೆಯ ಮದುವೆ ಹತ್ತಿರ ಇದ್ದಿದ್ರಿಂದ ಸಮರ್ಥ್‌ ಆ ಆಕ್ಸಿಡೆಂಟ್‌ ಮಾಡಿದ್ದು ನಾನೇ ಅಂತಾ ಹೇಳಿ ಜೈಲು ಸೇರಿದ್ದ. ಆದ್ರೆ ಕಾರು ಯಾರಿಗೆ ಗುದ್ದಿದೆ? ಏನ್‌ ಆಗಿದೆ ಅಂತಾ ಗೊತ್ತಿರ್ಲಿಲ್ಲ. ಇದೀಗ ಆಕ್ಸಿಡೆಂಟ್‌ ಆಗಿರೋದು ತಾತ ಹಾಗೂ ಮಾವನಿಗೆ ಅಂತಾ ಗೊತ್ತಾಗಿದೆ.. ಇದ್ರಿಂದಾಗಿ ಸಮರ್ಥ್‌ ಮತ್ತಷ್ಟು ಕುಗ್ಗಿ ಹೋಗಿದ್ದಾನೆ.. ಆದ್ರೆ ತಂದೆಯನ್ನ ಕಳೆದುಕೊಂಡಿರೋ ಸಿರಿ ಸಮರ್ಥ್‌ ನ ಜೈಲಿನಿಂದ ಆಚೆ ತರಲು ಸಾಕಷ್ಟು ಪ್ರಯತ್ನಪಡ್ತಿದ್ದಾಳೆ.. ಇತ್ತ ತುಳಸಿ ಆಕ್ಸಿಡೆಂಟ್‌ ಮಾಡಿರೋದು ಮಗ ಅಲ್ಲ ಅಂತ ಗೊತ್ತಿದ್ರೂ ಏನೂ ಮಾಡಲು ಆಗದೇ ಒದ್ದಾಡುತ್ತಿದ್ದಾಳೆ. ಆದ್ರೆ ನಿಧಿ ಆಕ್ಸಿಡೆಂಟ್‌ ಮಾಡಿರೋದಾಗಿ ಮಾಧವನಿಗೆ ಗೊತ್ತಾಗಿದೆ. ಮಾಧವ ನಿಧಿ ಮೇಲೆ ಕೂಗಾಡಿದ್ದಾನೆ. ನಿಧಿ ಮಾಡಿದ ತಪ್ಪಿಗೆ ಅಭಿ ಹಾಗೆಯೇ ಸಮರ್ಥ್ ಶಿಕ್ಷೆ ಅನುಭವಿಸುವುದು ಸರಿಯಲ್ಲ, ಕಾರು ಅಭಿಯ ಹೆಸರಿನಲ್ಲಿದೆ. ಆದರೆ ಅದನ್ನು ಚಲಾಯಿಸಿದ್ದು ಮಾತ್ರ ನಿಧಿ. ತಯಾರು ತಪ್ಪು ಮಾಡಿದ್ದಾರೋ ಅವರೇ ಶಿಕ್ಷೆಯನ್ನ ಅನುಭವಿಸಬೇಕು ಎಂದು ಖಡಕ್ಕಾಗಿ ಮಾಧವ ಹೇಳುತ್ತಾರೆ. ಮಾಧವನ ಮಾತು ಕೇಳಿದ ನಿಧಿಗೆ ಬಹಳ ನೋವಾಗುತ್ತದೆ. ಅಷ್ಟೇ ಅಲ್ಲ ಆಕೆಯನ್ನ ಸ್ಟೇಷನ್‌ ಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ಅಷ್ಟೊಟ್ಟಿಗೆ ಅವಿ ಬಂದು ಆಕ್ಸಿಡೆಂಟ್‌ ಮಾಡಿರೋದು ನಿಧಿ ಅಲ್ಲ ಅಂತಾ ಹೇಳಿದ್ದಾನೆ.

ಹೌದು, ಅವಿನಾಶ್ ಮಾಧವನ ಬಳಿ ಬಂದು ನಿಧಿ ಅರೆಸ್ಟ್ ಆಗುವುದು ಸರಿಯಲ್ಲ .. ಯಾಕೆಂದರೆ ನಿಧಿಗಿಂತ ಮುಂಚಿತವಾಗಿ ಒಂದು ಕಾರು ಪಾಸಾಗಿದೆ. ಆ ಕಾರಿನ ಡೀಟೇಲ್ಸ್ ಕೂಡ ಸಿಗಬಹುದು ಆದುದರಿಂದ ನಿಧಿ ಕಾರಿನ ಮುಂದೆ ಇದ್ದ ಕಾರು ರವೀಂದ್ರ ಹಾಗೂ ದತ್ತ ಅವರಿಗೆ ಡಿಕ್ಕಿ ಹೊಡೆದಿದೆ . ಹಿಂದೆಯಿಂದ ಬಂದ ನಿಧಿ ಕಾರು ಅವರಿಗೆ ಡಿಕ್ಕಿಯ ಹೊಡೆದಿಲ್ಲ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಶಾರ್ವರಿಗೆ ಬಹಳ ನಡುಕ ಶುರುವಾಗುತ್ತದೆ. ನಾನು ಮಾಡಿದ ಆಕ್ಸಿಡೆಂಟ್ ನನಗೆ ತಿರುಗು ಬಾಣವಾಗಿ ಬರುತ್ತಿದೆ ಎಂದು ಮನದಲ್ಲಿ ಆಂದುಕೊಳ್ಳುತ್ತಾಳೆ. ಶಾರ್ವರಿ ಮನದಲ್ಲಿಯೇ ಬಹಳ ಭಯಪಟ್ಟುಕೊಂಡಿದ್ದಾಳೆ.. ಇದೀಗ ಅವಿ ಹಾಗೂ ತುಳಸಿ ಆಕ್ಸಿಡೆಂಟ್‌ ಮಾಡಿದ್ದು ಯಾರು ಅಂತಾ ಕಂಡುಹಿಡಿಯುತ್ತಾರಾ? ಸಮರ್ಥ್‌ ನ ಜೈಲಿನಿಂದ ಆಚೆ ಕರ್ಕೊಂಡು ಬರುವಲ್ಲಿ ಯಶಸ್ವಿಯಾಗ್ತಾರಾ? ಶಾರ್ವರಿ ಆಕ್ಸಿಡೆಂಟ್‌ ಮಾಡಿರೋದು ಅಂತಾ ಗೊತ್ತಾದ್ರೆ ಏನ್‌ ಮಾಡ್ತಾರೆ ಅನ್ನೋದು ವೀಕ್ಷಕರ ಮುಂದಿರುವ ಕುತೂಹಲ.

Shwetha M

Leave a Reply

Your email address will not be published. Required fields are marked *