ವಿಶ್ವಕಪ್‌ನಲ್ಲಿ ಕನ್ನಡಿಗನ ಕಮಾಲ್ – ಕೆನಡಾ ಟೀಮ್ ಸ್ಟ್ರೆಂಥ್ ದಾವಣಗೆರೆ ಹೈದ
ಶ್ರೇಯಸ್ ಮೋವಾ ಹವಾ ಹೇಗಿದೆ?

ವಿಶ್ವಕಪ್‌ನಲ್ಲಿ ಕನ್ನಡಿಗನ ಕಮಾಲ್ – ಕೆನಡಾ ಟೀಮ್ ಸ್ಟ್ರೆಂಥ್ ದಾವಣಗೆರೆ ಹೈದಶ್ರೇಯಸ್ ಮೋವಾ ಹವಾ ಹೇಗಿದೆ?

ಟಿ20 ವಿಶ್ವಕಪ್‌ನಲ್ಲಿ ಅನೇಕ ಯುವ ಕ್ರಿಕೆಟರ್ಸ್ ಶೈನ್ ಆಗ್ತಿದ್ದಾರೆ. ಇವರಲ್ಲಿ ಒಬ್ರು ನಮ್ಮ ದಾವಣಗೆರೆ ಹೈದ ಶ್ರೇಯಸ್ ಮೋವಾ. ಆದ್ರೆ, ಈ ಕನ್ನಡಿಗ ಶೈನ್ ಆಗ್ತಿರೋದು ಟೀಮ್ ಇಂಡಿಯಾದಲ್ಲಿ ಅಲ್ಲ. ದಾವಣಗೆರೆ ಹುಡುಗ ಮಿಂಚುತ್ತಿರೋದು ಕೆನಡಾ ಟೀಮ್ ನಲ್ಲಿ. ಹಾಗಾದ್ರೆ, ಸ್ನೇಹಿತರೆ, ಈ ಶ್ರೇಯಸ್ ಮೋವಾ ಯಾರು?, ಶ್ರೇಯಸ್ ಸ್ಟ್ರೆಂಥ್ ಏನು, ಕ್ರಿಕೆಟ್ ಲೋಕದಲ್ಲಿ ಈತನ ಪ್ರತಿಭೆ ಬೆಳಕಿಗೆ ಬಂದಿದ್ದು ಹೇಗೆ ಎಂಬ ಬಗ್ಗೆ ಹೇಳ್ತೀನಿ ನಾನ್ ಶ್ವೇತಾ, ನೀವು ಸುದ್ದಿಯಾನದ ಸಬ್‌ಸ್ಕೈಬರ್ ಆಗಲು ಮರೆಯಬೇಡಿ.

ಇದನ್ನೂ ಓದಿ: ಸುಮಲತಾ ಹೆಚ್ ಡಿಕೆ ಮುನಿಸು ದೂರ | ನಾನವನಲ್ಲ ಎಂದ ಪ್ರಜ್ವಲ್ ರೇವಣ್ಣ | ಡಿಸಿಎಂ ಸ್ಥಾನಕ್ಕೆ ಪವನ್ ಕಲ್ಯಾಣ್ ಪಟ್ಟು | ಇವತ್ತಿನ ಪ್ರಮುಖ ಸುದ್ದಿಗಳು

ಟಿ20 ವಿಶ್ವಕಪ್ ಉದ್ಘಾಟನೆ ದಿನ ಕನ್ನಡಿಗ ಕ್ರಿಕೆಟರ್ ಎಲ್ಲರ ಮನಗೆದ್ದಿದ್ದ. ಆತನ ವಿಕೆಟ್ ಕೀಪಿಂಗ್ ಸ್ಟೈಲ್, ಬ್ಯಾಟಿಂಗ್ ಸೌಂಡ್ ಗೆ ಫ್ಯಾನ್ಸ್ ಥ್ರಿಲ್ ಆಗಿದ್ರು. ಆ ಆಟಗಾರನೇ ಶ್ರೇಯಸ್ ಮೋವಾ. ದಾವಣಗೆರೆ ಮೂಲದವರಾದ ಶ್ರೇಯಸ್ ಇದೀಗ ಕೆನಡಾ ರಾಷ್ಟ್ರೀಯ ತಂಡದ ಆಟಗಾರ. ಬರೀ ಆಟಗಾರ ಅಲ್ಲ. ಕೆನಡಾ ಟೀಮ್ ನ ಸ್ಟ್ರೆಂಥ್. ಬೆಣ್ಣೆ ನಗರಿ ಖ್ಯಾತಿಯ ದಾವಣಗೆರೆ ಮೂಲದವರು ಶ್ರೇಯಸ್ ಮೋವಾ. ಎಂಜಿ.‌ವಾಸುದೇವ ರೆಡ್ಡಿ ಹಾಗೂ ಎನ್.ಯಶೋಧಾ ದಂಪತಿ ಪುತ್ರ. ಈ ಹಿಂದೆ ಕರ್ನಾಟಕ ಪರ ಅಂಡರ್ 16 ಮತ್ತು ಅಂಡರ್ 19 ಪಂದ್ಯಗಳನ್ನಾಡಿದ್ದರು. ಚಿಕ್ಕವಯಸ್ಸಿನಿಂದಲೂ ಶ್ರೇಯಸ್ ಗೆ ಕ್ರಿಕೆಟ್‌ ಅಂದರೆ ಪಂಚಪ್ರಾಣ. ಈತನ ಆಟ ಹಾಗೂ ಎನರ್ಜಿ ನೋಡಿದ್ದ ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಕೋಚ್ ನಾಗರಾಜ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದರು. ಉತ್ತಮ ಬ್ಯಾಟಿಂಗ್ ಕೌಶಲ್ಯತೆ ಹೊಂದಿದ್ದ ಶ್ರೇಯಸ್ ಓದಿನ ಜೊತೆಗೆ ಅಂತರ್ ರಾಜ್ಯ, 19 ಹಾಗೂ 16 ವರ್ಷದೊಳಗಿನ ಪಂದ್ಯಗಳಲ್ಲಿ ಆಡಿ ಶತಕ ಸಿಡಿದ್ದರು.

ಇದಾದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆನಡಾಗೆ ತೆರಳಿದ ಶ್ರೇಯಸ್ ಮೋವಾ ಇದೀಗ ಅಲ್ಲೇ ಸೆಟಲ್ ಆಗಿದ್ದಾರೆ. ಅಲ್ಲದೆ ಕೆನಡಾ ಪೌರತ್ವದೊಂದಿಗೆ ರಾಷ್ಟ್ರೀಯ ತಂಡದಲ್ಲೂ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕೆನಡಾ ಪರ ಚೊಚ್ಚಲ ವಿಶ್ವಕಪ್ ಆಡಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಇದೀಗ ಶ್ರೇಯಸ್ ಮೋವಾ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೇಯಸ್ ಮೋವಾ ಕೆನಡಾ ಪರ 2021 ರಲ್ಲಿ ಪಾದಾರ್ಪಣೆ ಮಾಡಿದ್ದರು. ಟಿ20 ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಕನ್ನಡಿಗ, ಕೆನಡಾ ಪರ ಈವರೆಗೆ 6 ಏಕದಿನ ಪಂದ್ಯಗಳನ್ನಾಡಿದ್ದಾರೆ. ಪ್ರಸ್ತುತ ಕೆನಡಾ ಟಿ20 ತಂಡದ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್ ಆಗಿ ಮಿಂಚುತ್ತಿದ್ದಾರೆ. ಟಿ20 ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲಿ ಶ್ರೇಯಸ್ ಮೋವಾ ಕೆನಡಾ ಪರ ಕಣಕ್ಕಿಳಿದಿದ್ದರು. ಯುಎಸ್​ಎ ವಿರುದ್ಧದ ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಕೇವಲ 16 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 32 ರನ್ ಬಾರಿಸಿ ಮಿಂಚಿದ್ದಾರೆ. ಕೆನಾಡಾ ಟೀಮ್ ನಲ್ಲಿ ಕನ್ನಡಿಗನ ಕಮಾಲ್ ನೋಡಿ ಕನ್ನಡಿಗರು ಕೂಡಾ ಮೆಚ್ಚಿಕೊಂಡಿದ್ದಾರೆ. ಶ್ರೇಯಸ್ ಮೋವಾಗೆ ಶುಭ ಹಾರೈಸುತ್ತಿದ್ದಾರೆ.

Shwetha M