ಶ್ರೇಯಸ್ ಗೆ ಮೊದಲ ಸರಣಿಯೇ ರದ್ದು? – ಐರ್ಲೆಂಡ್ ವಿರುದ್ಧ ಆಡಲ್ವಾ ಭಾರತ?
ಸೂರ್ಯವಂಶಿ ಡೆಬ್ಯೂಗೂ ಬಂತು ಕುತ್ತು!

ಟೀಂ ಇಂಡಿಯಾ ಟಿ-20ಐ ಸ್ಕ್ವಾಡ್ನಲ್ಲಿ ಮೇಜರ್ ಸರ್ಜರಿ ಮಾಡಿರೋ ಭಾರತ ಶ್ರೇಯಸ್ ಅಯ್ಯರ್ಗೆ ಕ್ಯಾಪ್ಟನ್ಸಿ ನೀಡಿದೆ. ಹಾಗೇ ವೈಭವ್ ಸೂರ್ಯವಂಶಿಯನ್ನ ತಂಡಕ್ಕೆ ಸೆಲೆಕ್ಟ್ ಮಾಡಿದೆ. ಹೀಗಾಗಿ ಇನ್ಮುಂದಿನ ಟಿ-20ಐ ಮ್ಯಾಚಸ್ ಕೂಡ ತುಂಬಾನೇ ಇಂಟ್ರೆಸ್ಟಿಂಗ್ ಆಗಿರುತ್ತೆ. ಐರ್ಲೆಂಡ್ ವಿರುದ್ಧ ಈ ಮಂತ್ ಎಂಡಲ್ಲಿ ಹೊಸ ಎರಾ ಸ್ಟಾರ್ಟ್ ಆಗುತ್ತೆ ಅನ್ನುವಾಗ್ಲೇ ಇಡೀ ಸರಣಿಯೇ ರದ್ದಾಗೋ ಆತಂಕ ಶುರುವಾಗಿದೆ.
ಇದನ್ನೂ ಓದಿ : ಗೌತಮ್ ಗಂಭೀರಕ್ಕೆ RO-KO ಸೆಡ್ಡು – BCCI ಆಫೀಸರ್ಸ್ ಜತೆ ಡೈರೆಕ್ಟ್ ಡೀಲ್
ಶ್ರೇಯಸ್ ಅಯ್ಯರ್ ಲೀಡರ್ಶಿಪ್ನಲ್ಲಿ ಭಾರತದ ಟಿ-20ಐ ಜರ್ನಿ ರೀ ಸ್ಟಾರ್ಟ್ ಹೊತ್ತಲ್ಲೇ ಬಿಗ್ ಟ್ವಿಸ್ಟ್ ಸಿಕ್ಕಿದೆ. ಜೂನ್ 26 ಮತ್ತು 28ರಂದು ಬೆಲ್ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ನಡೆಯಬೇಕಿದ್ದ ಎರಡು ಟಿ20 ಪಂದ್ಯಗಳು ರದ್ದಾಗಬಹುದು ಅಥವಾ ಶಿಫ್ಟ್ ಆಗ್ಬೋದು ಅನ್ನೋ ಬಗ್ಗೆ ಚರ್ಚೆ ನಡೀತಿದೆ. ಅದಕ್ಕೆ ಕಾರಣ ಐರ್ಲೆಂಡ್ನಲ್ಲಿ ನಡೆಯುತ್ತಿರೋ ಕ್ರೌರ್ಯ.
ಜನಾಂಗೀಯ ಘರ್ಷಣೆ.. ಮನೆಗಳಿಗೆ ಬೆಂಕಿ.. ಐರ್ಲೆಂಡ್ ಕೊತಕೊತ!
ಎರಡು ಪಂದ್ಯಗಳ ಟಿ-20ಐ ಪ್ರವಾಸದಕ್ಕೆ ಐರ್ಲೆಂಡ್ಗೆ ಹೋಗಬೇಕಿದ್ದ ಭಾರತ ತಂಡ ಟ್ರಾವೆಲ್ ಮಾಡ್ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದೆ. ಅದಕ್ಕೆ ಕಾರಣ ಬೆಲ್ಫಾಸ್ಟ್ ನಗರದಲ್ಲಿ ದೊಡ್ಡ ಮಟ್ಟದಲ್ಲಿ ಜನಾಂಗೀಯ ಸಂಘರ್ಷ ಹಾಗೂ ಪ್ರತಿಭಟನೆಗಳು ನಡೀತಿವೆ. ಮುಖವಾಡ ಧರಿಸಿದ ಪ್ರತಿಭಟನಾಕಾರರು ರಸ್ತೆಗಳಲ್ಲಿ ವಾಹನಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿ ಭೀತಿ ವಿಕೃತಿ ಮೆರೀತಿದ್ದಾರೆ. ಇದೇ ಕಾರಣಕ್ಕೆ ಲಿಸ್ಬನ್‌ನಲ್ಲಿ ಆಯೋಜಿಸಲಾಗಿದ್ದ ಇಂಟರ್-ಪ್ರೊವಿನ್ಶಿಯಲ್ ಟಿ20 ಟೂರ್ನಮೆಂಟ್ ಅನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕ್ರಿಕೆಟ್ ಐರ್ಲೆಂಡ್ ಮಂಡಳಿಯು, ಮುಂದಿನ 48 ಗಂಟೆಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೂಡ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಆಲೋಚನೆಯಲ್ಲಿದೆ.
ಆಟಗಾರರು ಮತ್ತು ಸಿಬ್ಬಂದಿಯೇ ಸುರಕ್ಷತೆಯೇ ಮುಖ್ಯ!
ಸರಣಿ ನಡೆಯಬೇಕಿರೋ ಬೆಲ್ ಫಾಸ್ಟ್ನಲ್ಲೇ ಪರಿಸ್ಥಿತಿ ನಿಯಂತ್ರಣ ಕಳ್ಕೊಂಡಿದೆ. ಹೀಗಾಗಿ ಆಟಗಾರರು, ತರಬೇತುದಾರರು, ಅಂಪೈರ್‌ಗಳು ಮತ್ತು ಅಭಿಮಾನಿಗಳ ಸುರಕ್ಷತೆಯೇ ತಮಗೆ ಅತ್ಯಂತ ಪ್ರಮುಖ ಆದ್ಯತೆ ಎಂದು ಕ್ರಿಕೆಟ್ ಐರ್ಲೆಂಡ್ ಮಂಡಳಿ ಹೇಳಿದೆ. ಒಂದು ವೇಳೆ ಇದೇ ರೀತಿಯಾದ ಉದ್ವಿಗ್ನ ಪರಿಸ್ಥಿತಿ ಕಂಟಿನ್ಯೂ ಆಗಿದ್ದೇ ಆದಲ್ಲಿ ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಸರಣಿಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡೋದಾ ಅಥವಾ ಪಂದ್ಯಗಳನ್ನ ಪೋಸ್ಟ್ ಪೋನ್ ಮಾಡೋದಾ ಅಥವಾ ಶಿಫ್ಟ್ ಮಾಡೋದಾ ಅನ್ನೋ ಬಗ್ಗೆ ಚರ್ಚೆ ಮಾಡ್ತಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಮೊದಲ ಟಿ20 ಪಂದ್ಯ ಜೂನ್ 26 ರಂದು ಹಾಗೂ ಎರಡನೇ ಪಂದ್ಯ ಜೂನ್ 28 ರಂದು ಬೆಲ್‌ಫಾಸ್ಟ್‌ನಲ್ಲಿ ನಡೆಯಬೇಕಿದೆ. ಒಂದು ವೇಳೆ ಅಲ್ಲಿನ ಗಲಾಟೆ ಹೀಗೇ ಮುಂದುವರಿದ್ರೆ ಸರಣಿ ನಡೆಯೋದೇ ಡೌಟಿದೆ. ಌಂಡ್ ಭಾರತ ನೆಕ್ಸ್ಟ್ ಇಂಗ್ಲೆಂಡ್ ವಿರುದ್ಧದ ಸರಣಿಯವರೆಗೆ ಕಾಯಬೇಕಾಗುತ್ತದೆ. ಅಷ್ಟಕ್ಕೂ ಐರ್ಲೆಂಡ್ ಸರಣಿ ಅಷ್ಟೊಂದು ಇಂಪಾರ್ಟೆನ್ಸ್ ಪಡೆಯೋಕೆ ಕಾರಣವೇ ಶ್ರೇಯಸ್ ಕ್ಯಾಪ್ಟನ್ಸಿ ಮತ್ತು ವೈಭವ್ ಸೂರ್ಯವಂಶಿ ಡೆಬ್ಯೂ.
ಬಾಸ್ ಬೇಬಿ ಟೀಂ ಇಂಡಿಯಾ ಡೆಬ್ಯೂಗೆ ಮತ್ತಷ್ಟು ಕಾಯಬೇಕಾ?
ಭಾರತ ಎ ತಂಡದ ಪರ ಆಡ್ತಿರೋ ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧ ಭಾರತದ ಪರ ಹಿರಿಯರ ಟೀಮ್ನಲ್ಲಿ ಡೆಬ್ಯೂ ಮಾಡೋಕೆ ಕಾಯ್ತಿದ್ದಾರೆ. ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಐರ್ಲೆಂಡ್ ವಿರುದ್ಧ ಕಣಕ್ಕಿಳೀತಾರೆ ಅಂತಾ ಎಲ್ರೂ ಕಾಯ್ತಿದ್ದಾರೆ. ಆದ್ರೆ ಐರ್ಲೆಂಡ್‌ನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಸರಣಿ ಮುಂದೂಡಿಕೆಯಾಗುವ ಸಾಧ್ಯತೆಗಳೇ ಜಾಸ್ತಿ ಇರೋದ್ರಿಂದ ವೈಭವ್ ಆಟಕ್ಕೆ ಮತ್ತಷ್ಟು ದಿನ ಕಾಯ್ಬೇಕಾಗುತ್ತೆ. ಕೇವಲ 15 ವರ್ಷ ವಯಸ್ಸಲ್ಲೇ ರಾಷ್ಟ್ರೀಯ ತಂಡಕ್ಕ ಆಯ್ಕೆಯಾಗುವ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ರು. ಅಂದ್ರೆ ಸಚಿನ್ 16ನೇ ವಯಸ್ಸಲ್ಲಿ ಭಾರತ ತಂಡಕ್ಕೆ ಸೆಲೆಕ್ಟ್ ಆಗಿದ್ರು. ಈಗ ಭಾರತ ತಂಡಕ್ಕೆ ಆಯ್ಕೆಯಾದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಪ್ರಸ್ತುತ ಭಾರತ ಎ ತಂಡದ ಪರ ಪಂದ್ಯಗಳನ್ನ ಆಡ್ತಿರೋ ವೈಭವ್ ಸೂರ್ಯವಂಶಿ ಐಪಿಎಲ್ 2026ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಬ್ಬರಿಸಿ, 776 ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಹೀಗಾಗಿ ಲೆಜೆಂಡರಿ ಕ್ರಿಕೆಟರ್ಸ್ ಕೂಡ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪರ ಆಡಲಿ ಅಂತಾ ಸಜೇಷನ್ ಕೊಟ್ಟಿದ್ರು.

ನೋಡಿರಿ

