ವೈಭವ್ ಆಡಿದ್ರೆ ಸಾಕಾ? -ಅಭಿ ಸಿಡಿಯೋದು ಯಾವಾಗ?-ಸರಣಿ ಗೆದ್ರೂ ಭಾರತಕ್ಕೆ ನೆಮ್ಮದಿಯಿಲ್ಲ

ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆದ್ರೂ ಮೇಲೆ ಟಿ20ಐನಲ್ಲಿ ಬ್ಯಾಕ್ ಟೂ ಬ್ಯಾಕ್ ಸೋಲನ್ನ ಟೀಂ ಇಂಡಿಯಾ ಅನುಭವಿಸಿತ್ತು. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ಸೋತಿದ್ದ ಟೀಂ ಇಂಡಿಯಾಗೆ ದಿಕ್ಕು ತೋಚದಂತೆ ಆಗಿತ್ತು. ಆದ್ರೆ ಈಗ ಮತ್ತೆ ಟೀಮ್ ಇಂಡಿಯಾ ಗೆಲುವಿನ ಲಯಕ್ಕೆ ಮರಳಿದೆ. ಝಿಂಬಾಬ್ವೆ ತಂಡವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಟೀಂ ಇಂಡಿಯಾದಲ್ಲಿ ಹೊಸ ಜೋಷ್ ಬಂದಿದೆ. ಜೊತೆಗೆ ಐಸಿಸಿ ಟಿ20ಐ ರ್ಯಾಕಿಂಗ್ನಲ್ಲಿ ಮತ್ತೆ ನಂ1 ಸ್ಥಾನಕ್ಕೆ ಟೀಂ ಏರಿದೆ ಏರಿದೆ. ವೈಭವ್ ಕೂಡ ಮತ್ತೆ ಟ್ಯಾಕ್ಗೆ ಮರುಳಿದ್ದಾರೆ.
ಇದನ್ನೂ ಓದಿ:2 ತಿಂಗಳು RO-KO ದರ್ಶನವಿಲ್ಲ – ಡಿಸೆಂಬರ್ ಡೆಡ್ ಲೈನ್ ನೀಡಿದ್ಯಾ BCCI?
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆಯನ್ನ ಕ್ಲೀನ್ ಸ್ವೀಪ್ ಮಾಡಿದೆ. ಈ ಕ್ಲೀನ್ ಸ್ವೀಪ್ನೊಂದಿಗೆ ಭಾರತ ತಂಡವು ಕನಿಷ್ಠ 3 ಪಂದ್ಯಗಳ ಟಿ20 ಸರಣಿಯಲ್ಲಿ ಅತಿ ಹೆಚ್ಚು ಬಾರಿ ಎದುರಾಳಿಗಳನ್ನು ವೈಟ್ವಾಶ್ ಮಾಡಿದ ವಿಶ್ವದ ಏಕೈಕ ತಂಡ ಎಂಬ ಐತಿಹಾಸಿಕ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಅಂದಹಾಗೇ ಶನಿವಾರ ಎರಡು ಪಂದ್ಯವನ್ನ ಗೆದ್ದು ಸರಣಿ ಕೈ ವಶ ಮಾಡಿಕೊಂಡಿದ್ದ ಟೀಂ ಇಂಡಿಯಾ ಭಾನುವಾರ 3ನೇ ಪಂದ್ಯ ಗೆದ್ದು ಸರಣಿಯ್ನ ಕ್ಲೀನ್ಸ್ವೀಪ್ ಮಾಡಿದೆ. ಹರಾರೆಯಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ, ಜಿಂಬಾಬ್ವೆಯನ್ನು 35 ರನ್ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ ಐದು ವಿಕೆಟ್ಗಳಿಗೆ 192 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಜಿಂಬಾಬ್ವೆ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 157 ರನ್ ಗಳಿಸಿ ಆಲ್ಔಟ್. ಈ ಗೆಲುವಿನೊಂದಿಗೆ ಟೀಂ ಇಂಡಿಯಾ, ಜಿಂಬಾಬ್ವೆಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.
ವೈಭವ್ ಸೂರ್ಯವಂಶಿ 3ನೇ ಪಂದ್ಯದಲ್ಲಿ ತಮ್ಮ ಹಳೇ ಖದರ್ ತೋರಿಸಿದ್ರು. ಈ ಪಂದ್ಯದಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ವೈಭವ್ ಸೂರ್ಯವಂಶಿ 49 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ 81 ರನ್ ಗಳಿಸಿ ಔಟಾದರು. ಇನ್ನೊಂದು 19 ರನ್ಗಳಿಸಿದ್ರೆ ವೈಭವ್ ತಮ್ಮ ಅಂತಾರಾಷ್ಟ್ರಿಯ ಪಂದ್ಯದಲ್ಲಿ ಮೊದಲ ಶತಕ ದಾಖಲಿಸಿಸುತ್ತಿದ್ದರು. ಇನ್ನೂ ಈ ಪಂದ್ಯದಲ್ಲಿ ವೈಭವ್ ಬಿಟ್ಟು ಬೇರೆ ಯಾರು ಹೆಚ್ಚು ರನ್ಗಳಿಸಲಿಲ್ಲ. ಇನ್ನೂ ಶ್ರೇಯಸ್ ಅಯ್ಯರ್ ಅವರ ಇನ್ನಿಂಗ್ಸ್ ಕೂಡ 27 ರನ್ಗಳಿಗೆ ಕೊನೆಗೊಂಡಿತು. ರಿಂಕು ಸಿಂಗ್ 14 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು. ತಿಲಕ್ ವರ್ಮಾ 9 ಎಸೆತಗಳಲ್ಲಿ 11 ರನ್ ಗಳಿಸಿ ಅಜೇಯರಾಗಿ ಉಳಿದರು. ಅಭಿಷೇಕ್ ಶರ್ಮಾ ತಮ್ಮ ಕಳೆಪ ಪ್ರದರ್ಶನವನ್ನ 3ನೇ ಪಂದ್ಯದಲ್ಲೂ ಮುಂದುವರಿಸಿದ್ದಾರೆ. ಕೇವಲ 2ರನ್ಗಳಿಸಿ ಔಟ್ ಆಗಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಗಳಿಸಿದ್ದು ಕೇವಲ ಒಂದಂಕ್ಕಿ ರನ್ಗಳಿಸಿದ್ದಾರೆ.
ಇನ್ನೂ ಟಿ20ಯಲ್ಲಿ ನಂ.1 ಸ್ಥಾನದಲ್ಲಿದ್ದ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಕುಸಿತ ಕಂಡಿತ್ತು. 11ನೇ ರ್ಯಾಂಕ್ನಲ್ಲಿದ್ದ ಐರ್ಲೆಂಡ್ ವಿರುದ್ದ ಭಾರತಕ್ಕೆ ಸರಣಿ ಸೋಲು. ಬಳಿಕ ಇಂಗ್ಲೆಂಡ್ ವಿರುದ್ದ 0-4 ಅಂತರದಲ್ಲಿ ಸರಣಿ ಸೋಲಿನಿಂದ ಭಾರತ ರ್ಯಾಕಿಂಗ್ ಕುಸಿತ ಅನುಭವಿಸಿತ್ತು. ಮೊದಲೇ ಸೋಲಿನ ಟೀಕೆ ನಡುವೆ ರ್ಯಾಂಕಿಂಗ್ ಟೀಕೆಯೂ ಶ್ರೇಯಸ್ ಅಯ್ಯರ್ ಹೆಗಲೇರಿತ್ತು. ಇದೀಗ ಜಿಂಬಾಬ್ವೆ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್ಯಾಂಕ್ ಪ್ರಕಟವಾಗಿದ್ದು, ಭಾರತ ಮೊದಲ ಸ್ಥಾನಕ್ಕೇರಿದೆ. ಇದೀಗ ಮತ್ತೆ ನಂ.1 ಸ್ಥಾನಕ್ಕೇರುವ ಮೂಲಕ ಶ್ರೇಯಸ್ ಅಯ್ಯರ್ ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ನಲ್ಲಿ ಜಿಂಬಾಬ್ವೆ ವಿರುದ್ಧ ಗೆಲ್ಲೋ ಮೂಲಕ ಟೀಂ ಇಂಡಿಯಾ ಮತ್ತೆ ಗೆಲುವಿನ ಟ್ಯಾಕ್ಗೆ ಮರುಳಿದ್ದಾರೆ. ಶ್ರೇಯಸ್ ಅಯ್ಯರ್ಗೂ ಕೊಡ ಹೊಸ ಆರಂಭ ಸಿಕ್ಕಿದ್ದು, ವೈಭವ್ ಮತ್ತೆ ಟ್ರ್ಯಾಕ್ಗೆ ಮುರುಳಿದ್ದಾರೆ.

ನೋಡಿರಿ

