ಗ್ಯಾಲರಿಯಲ್ಲಿದ್ದ ಬೆಡಗಿ ಮೇಲೆ ಪ್ರೀತಿ – ಗೆಲ್ಲುತ್ತಾ ಶ್ರೇಯಸ್ ಅಯ್ಯರ್ ಲವ್?

ಗ್ಯಾಲರಿಯಲ್ಲಿದ್ದ ಬೆಡಗಿ ಮೇಲೆ ಪ್ರೀತಿ – ಗೆಲ್ಲುತ್ತಾ ಶ್ರೇಯಸ್ ಅಯ್ಯರ್ ಲವ್?

ಶ್ರೇಯಸ್ ಐಯ್ಯರ್.. ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ಕೆಕೆಆರ್ ತಂಡದ ನಾಯಕ.. ನೋಡೋಕೆ ಹ್ಯಾಂಡ್ಸಮ್. ಬಾಲಿವುಡ್ ಬೆಡಗಿಯರು ಕೂಡಾ ಶ್ರೇಯಸ್ ಲವ್ ಲ್ಲಿ ಬೀಳಲಿ ಅಂತಾ ಕಾಯ್ತಾನೇ ಇರ್ತಾರೆ. ಹೀಗಿರುವಾಗ ಶ್ರೇಯಸ್ ಅಯ್ಯರ್ ತನ್ನ ಮೊದಲ ಪ್ರೀತಿಯ ಕನವರಿಕೆಯಲ್ಲಿ ಇರುವ ವಿಚಾರ ಈಗ ರಿವೀಲ್ ಆಗಿದೆ. ಇದೊಂಥಾ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಯಾರೇ ನೀನು ಚೆಲುವೆ ಸಿನಿಮಾದ ಕಥೆ ರೀತಿಯೇ ಇದೆ. ಆ ದಿನ ಕಂಡ ಹುಡುಗಿ ಯಾರು? ಆ ಬೆಡಗಿ ಕ್ರಿಕೆಟ್ ಹೀರೋಗೆ ಸಿಗುತ್ತಾಳಾ?, ಐಯ್ಯರ್ ಮನಸು ಕದ್ದ ಚೆಲುವೆಯ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಕ್ರಿಸ್ ಗೇಲ್, ಎಬಿಡಿ ಹೊಡಿಬಡಿ ಆಟಕ್ಕೂ ಸೆಡ್ಡು ಹೊಡೆದ ಎಂ.ಎಸ್ ಧೋನಿ

ಶ್ರೇಯಸ್ ಅಯ್ಯರ್ ಸದ್ಯ ಐಪಿಎಲ್‌ನಲ್ಲಿ ಮತ್ತೆ ನಾಯಕತ್ವಕ್ಕೆ ಮರಳಿದ್ದಾರೆ.. ಹಿಂದೆ ಡಿಲ್ಲಿ ಕ್ಯಾಪಿಟಲ್ಸ್‌ ಟೀಂ ಲೀಡ್‌ ಮಾಡಿದ್ದ ಶ್ರೇಯಸ್‌ ಈಗ ಕೆಕೆಆರ್‌ ಗೆ ಕ್ಯಾಪ್ಟನ್‌ ಆಗಿದ್ದಾರೆ..  ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಬ್ಯಾಟ್ಸ್ಮನ್ ಆಗಿರುವ ಶ್ರೇಯಸ್ ಅಯ್ಯರ್  ತಮ್ಮ ಅದ್ಭುತ ಪ್ರದರ್ಶನದಿಂದಲೇ ಟೀಂ ಇಂಡಿಯಾದಲ್ಲೂ ಸ್ಥಾನ ಪಡೆದು ಮಿಂಚಿದವರು.. ಅದ್ಭುತ ಫೀಲ್ಡರ್‌ ಆಗಿಯೂ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ ಗಳಿಸಿದ್ದಾರೆ ಶ್ರೇಯಸ್‌ ಐಯ್ಯರ್‌..  ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಆಧಾರದ ಮೇಲೆ ಭಾರತ ತಂಡದಲ್ಲಿ ಸ್ಥಾನ ಗಳಿಸಿ ಯಶಸ್ವಿಯಾದವರಲ್ಲಿ ಶ್ರೇಯಸ್ ಅಯ್ಯರ್ ಕೂಡ ಒಬ್ರು.. ಐಪಿಎಲ್ ನಂತರ ಗಮನ ಸೆಳೆದ ಈ ಆಟಗಾರ, ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಾಗ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ಇದೀಗ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಶ್ರೇಯಸ್ ಅಯ್ಯರ್, ಟೀಂ ಇಂಡಿಯಾಗೆ ಬಂದ ಕೆಲವೇ ದಿನಗಳಲ್ಲಿ ಪ್ರಮುಖ ಸ್ಟಾರ್ ಆಟಗಾರನೆಂದ ಹೆಗ್ಗಳಿಕೆ ಗಳಿಸಿದ್ದರು. ಪ್ರಸ್ತುತ ಐಪಿಎಲ್ ಸೀಸನ್ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದಾರೆ. ಇದರ ನಡುವೆಯೇ ಐಯ್ಯರ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಗಾಸಿಪ್ ಗಳು ಇತ್ತೀಚೆಗೆ ಹರಿದಾಡ್ತಿವೆ, ಖ್ಯಾತ ಬಾಲಿವುಡ್ ನಟಿ ಜೊತೆ ಶುರುವಾದ ಸ್ನೇಹ ಪ್ರೀತಿಗೆ ತಿರುಗಿದೆ ಅನ್ನೋದು ಈ ಸುದ್ದಿಯ ಸಾರಾಂಶ.. ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಜೊತೆ ಶ್ರೇಯಸ್ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋದು ಈ ಗಾಸಿಪ್‌ನ ಹೈಲೈಟ್‌.. ಇಷ್ಟಕ್ಕೂ ಟೀಂ ಇಂಡಿಯಾದ ಕ್ರಿಕೆಟಿಗರಿಗೂ ಬಾಲಿವುಡ್‌ ನಟಿಯರಿಗೂ ಗಂಟು ಹಾಕಿ ಗಾಸಿಪ್‌ ಮಾಡಿದ್ದು ಇದೇ ಮೊದಲೇನೂ ಅಲ್ಲ.. ಆದ್ರೆ ಐಯ್ಯರ್ ಮಾತ್ರ ಬೇರೆ ಹುಡುಗಿಯ ಧ್ಯಾನದಲ್ಲಿದ್ದಾರೆ.. ತನ್ನ ಮನದರಸಿಯ ಜಪ ಮಾಡ್ತಾ ಇದ್ದಾರೆ.. ಐಯ್ಯರ್ ಮನದರಸಿ ಸಿನಿಮಾ ನಟಿ, ಮಾಡೆಲ್ ಆಗಿರ್ಬೋದು ಅಂತಾ ನೀವು ಅಂದುಕೊಂಡಿರ್ಬೋದು.. ಆದ್ರೆ ಐಯ್ಯರ್ ಮನಸು ಕದ್ದ ಚೆಲುವೆ ಸೆಲೆಬ್ರಿಟಿ ಅಲ್ಲ.. ಕೇವಲ ಕ್ರಿಕೆಟ್ ಅಭಿಮಾನಿ.. ಈ ವಿಚಾರವನ್ನು ಸ್ವತಃ ಶ್ರೇಯಸ್ ಐಯ್ಯರ್ ರಿವೀಲ್ ಮಾಡಿದ್ದಾರೆ.. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯ ನಡೆಯುವ ಸಮಯದಲ್ಲಿ ಪ್ರೇಕ್ಷಕರ ಕಣ್ಣು ಪಂದ್ಯದ ಮೇಲಿರುತ್ತದೆ. ಆದರೆ, ಕ್ಯಾಮೆರಾಮನ್‌ ನೋಟ ಮಾತ್ರ ಎರಡೂ ಕಡೆ ಇರುತ್ತದೆ. ಒಂದೆಡೆ ಪ್ರೇಕ್ಷಕರಿಗೆ ಪಂದ್ಯವನ್ನು ತೋರಿಸುತ್ತಾ ಮತ್ತೊಂದೆಡೆ ಕ್ರೀಡಾಂಗಣದಲ್ಲಿರುವ ಸುಂದರ ಯುವತಿಯರನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯುತ್ತಾರೆ. ಪಂದ್ಯ ವೀಕ್ಷಿಸಲು ಬಂದ ಕೆಲ ಮಹಿಳಾ ಅಭಿಮಾನಿಗಳು ನನ್ನನ್ನು ಮದುವೆಯಾಗುತ್ತೀರಾ? ಒಂದು ಅಪ್ಪುಗೆ ಸಿಗಬಹುದಾ? ಎಂದು ನೆಚ್ಚಿನ ಕ್ರಿಕೆಟಿಗರ ಹೆಸರು ಬರೆದು ಫೋಸ್ಟರ್ ಪ್ರದರ್ಶಿಸುವುದು ಕಾಮನ್..

ಆದ್ರೆ ಐಯ್ಯರ್ ವಿಚಾರದಲ್ಲಿ ಫುಲ್ ಉಲ್ಟಾ ಆಗಿದೆ.  ಪಂದ್ಯ ವೀಕ್ಷಿಸಲು ಬಂದ ಯುವತಿಯ ಮೇಲೆಯೇ ಐಯ್ಯರ್ ಗೆ ಲವ್ ಆಗಿದೆ.. ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಪಂದ್ಯ ವೀಕ್ಷಿಸಲು ಬಂದಿದ್ದ ಸುಂದರಿಗೆ ಮನಸೋತ್ತಿದ್ದಾರೆ. ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ ಅವರು ಆಯೋಜಿಸಿದ್ದ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಶ್ರೇಯಸ್ ಅಯ್ಯರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಗೆ ಗೊತ್ತಿಲ್ಲದ ಹಲವು ವಿಷಯಗಳನ್ನು ಅಯ್ಯರ್ ಹಂಚಿಕೊಂಡಿದ್ದಾರೆ. ಕಪಿಲ್ ಶರ್ಮಾ ಪ್ರಶ್ನೆಗಳನ್ನು ಕೇಳಿದಾಗ ರೋಹಿತ್ ಮತ್ತು ಅಯ್ಯರ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದರು. ಪಂದ್ಯ ನಡೆಯುವಾಗ ಕ್ರೀಡಾಂಗಣದಲ್ಲಿ ಕ್ಯಾಮೆರಾಮನ್‌ಗಳು ಹುಡುಗಿಯರ ಮೇಲೆ ಪೋಕಸ್ ಮಾಡುವ ವಿಷಯದ ಬಗ್ಗೆಯೂ ಕಪಿಲ್ ಶರ್ಮಾ ಪ್ರಶ್ನೆ ಮಾಡಿದಾಗ ಶ್ರೇಯಸ್ ನೀಡಿದ ಉತ್ತರ ವೈರಲ್ ಆಗಿದೆ.

ನಾನು ಮೊದಲ ಐಪಿಎಲ್ ಸೀಸನ್‌ ನಲ್ಲಿ ಭಾಗವಹಿಸಿದಾಗ, ಪಂದ್ಯದ ನಡುವೆ ಗುಂಪಿನಲ್ಲಿ ಒಬ್ಬ ಸುಂದರ ಹುಡುಗಿಯನ್ನು ನೋಡಿದೆ. ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಯುವತಿಯನ್ನು ನೋಡಿ ನಾನು ಕೈ ಬೀಸಿದೆ. ಇದು ಆಕೆಗೆ ಗೊತ್ತಾಯಿತು. ಆ ಸಮಯದಲ್ಲಿ ಫೇಸ್ಬುಕ್ ತುಂಬಾ ಜನಪ್ರಿಯವಾಗಿದ್ದ ಕಾರಣ, ಖಂಡಿತ ಮೆಸೇಜ್ ಬರುತ್ತದೆ ಎಂದು ನಾನು ಯೋಚಿಸಿದ್ದೆ. ತುಂಬಾ ದಿನಗಳು ಕಾದೆ. ಆದರೆ, ಮೆಸೇಜ್ ಬರಲಿಲ್ಲ ಎಂದು ಅಯ್ಯರ್ ತಮ್ಮ ಮೊದಲ ಕ್ರಶ್ ಬಗ್ಗೆ ಭಾವುಕರಾಗಿ ಮಾತನಾಡಿದರು. ಇದನ್ನು ಹೇಳುವಾಗ ಕಾರ್ಯಕ್ರಮಕ್ಕೆ ಬಂದಿದ್ದ ಪ್ರೇಕ್ಷಕರೆಲ್ಲ ಚಪ್ಪಾಳೆ ತಟ್ಟಿದರು. ಈ ಕಾರ್ಯಕ್ರಮ ಪ್ರಸ್ತುತ ನೆಟ್‌ ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ಹಾಗೆ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಕುಳಿತಿದ್ದ ಯುವತಿಗೆ ಮನಸೋತಿದ್ದ ಶ್ರೇಯಸ್‌ ಗೆ ಕಡೆಗೂ ಆಕೆಯ ಕಡೆಯಿಂದ ಯಾವುದೇ ಮೆಸೇಜ್‌ ಬರದೇ ಇರೋದ್ರಿಂದ ಐಯ್ಯರ್‌ ಇನ್ನೂ ಆಕೆಯ ಧ್ಯಾನದಲ್ಲೇ ಮುಳುಗೇಳುತ್ತಿದ್ದಾರೆ.. ಹೀಗಾಗಿ ಈ ಶೋ ಮುಗಿದ್ಮೇಲಾದ್ರೂ ಶ್ರೇಯಸ್‌ಗೆ ಮನಗೆದ್ದ ಆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಅನಾಮಿಕ ಸುಂದರಿಯ ಮೆಸೇಜ್‌ ತಲುಪುತ್ತಾ ಎಂದು ನೋಡಬೇಕಿದೆ..

Shwetha M

Leave a Reply

Your email address will not be published. Required fields are marked *