ODIನಿಂದ ಗಿಲ್, ಕೆಎಲ್ ಔಟ್ – ಸರಣಿ ಗೆಲ್ಲಿಸ್ತಾರಾ ಶ್ರೇಯಸ್?
NZ ಕಂ ಬ್ಯಾಕ್ ಸೂತ್ರ ಹೇಗಿದೆ?

ODIನಿಂದ ಗಿಲ್, ಕೆಎಲ್ ಔಟ್ – ಸರಣಿ ಗೆಲ್ಲಿಸ್ತಾರಾ ಶ್ರೇಯಸ್?NZ ಕಂ ಬ್ಯಾಕ್ ಸೂತ್ರ ಹೇಗಿದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಈಗ ರೋಚಕ ಘಟ್ಟಕ್ಕೆ ಬಂದಿದೆ. ಯಾಕಂದ್ರೆ ಮೂರು ಪಂದ್ಯಗಳ ಪೈಕಿ ಎರಡು ಮ್ಯಾಚ್​ಗಳನ್ನ ಭಾರತ ಗೆದ್ದಿದ್ರೆ ಒಂದು ಪಂದ್ಯ ಮಳೆಗೆ ರದ್ದಾಗಿದೆ. ಸೋ ನಾಲ್ಕು ಮತ್ತು ಐದನೇ ಪಂದ್ಯಗಳಲ್ಲಿ ಏನ್ ಬೇಕಾದ್ರು ಆಗಬಹುದು. ಅದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ ಕ್ಯಾಪ್ಟನ್ಸಿ ಬದಲಾವಣೆ. ಜೊತೆಗೆ ಬಿಗ್ ಪ್ಲೇಯರ್ ಗಳ ಆಬ್ಸೆನ್ಸ್.

ಇದನ್ನೂ ಓದಿ : ಮುಂಬೈಗೆ ಅರ್ಷದೀಪ್ ಎಂಟ್ರಿ! – ಹಾರ್ದಿಕ್ ಪಾಂಡ್ಯ ಪಂಜಾಬ್ ಪಾಲು!

ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ಏಕದಿನ ತಂಡವನ್ನ ಅನೌನ್ಸ್ ಮಾಡುವಾಗ್ಲೇ ಬಿಸಿಸಿಐ ಮೊದಲ ಮೂರು ಹಾಗೇ ಕೊನೆಯ ಎರಡು ಪಂದ್ಯಗಳಿಗೆ ಪ್ರತ್ಯೇಕ ತಂಡಗಳನ್ನ ಅನೌನ್ಸ್ ಮಾಡಿತ್ತು. ನವೆಂಬರ್ 19ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯ ಕಾರಣಕ್ಕೆ ಪ್ರಮುಖ ಆಟಗಾರರನ್ನ 4 & ಐದನೇ ಪಂದ್ಯಗಳಿಂದ ಹೊರಗಿಡಲಾಗಿತ್ತು. ಹೀಗಾಗಿ ಸರಣಿಗೆ ಕೊನೆಯ ಎರಡು ಪಂದ್ಯಗಳನ್ನ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಿ ಲೀಡ್ ಮಾಡಲಿದ್ದಾರೆ.

 ಯಾರು ಇನ್ & ಔಟ್?

ಶುಭಮನ್ ಗಿಲ್, ಕೆಎಲ್ ರಾಹುಲ್ ಮತ್ತು ಅನ್ಶುಲ್ ಕಾಂಬೋಜ್ ಔಟ್

ತಿಲಕ್ ವರ್ಮಾ, ಯಶ್ ಠಾಕೂರ್ ಮತ್ತು ಕುಮಾರ್ ಕುಶಾಗ್ರ ತಂಡಕ್ಕೆ ಇನ್

ಸೋ ಇಲ್ಲಿ ಒಟ್ಟಾರೆ 6 ಪ್ಲೇಯರ್ಸ್ ಇನ್ & ಔಟ್ ಆಗಲಿದ್ದಾರೆ. ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳು ನವೆಂಬರ್ 13 ಮತ್ತು ನವೆಂಬರ್ 15, 2026 ರಂದು ನಡೆಯಲಿವೆ. ಈ ಎರಡೂ ಪಂದ್ಯಗಳಿಗೆ ಮೌಂಟ್ ಮೌಂಗನುಯಿಯ ಬೇ ಓವಲ್  ಮೈದಾನ ಆತಿಥ್ಯ ವಹಿಸಲಿದೆ. ಕೊನೆಯ ಎರಡು ಪಂದ್ಯಗಳು ಸರಣಿ ನಿರ್ಣಾಯಕವಾಗಿವೆ.  ಆಲ್ರೆಡಿ ಭಾರತ ಸರಣಿಯಲ್ಲಿ 2-0 ಅಂತರದ ಲೀಡ್​ನಲ್ಲಿ ಇರೋದ್ರಿಂದ ನಾಲ್ಕನೇ ಪಂದ್ಯದಲ್ಲಿ ಗೆದ್ರೆ ಸರಣಿ ಕೈವಶ ಮಾಡಿಕೊಳ್ಳಲಿದೆ. ಅತ್ತ ಸರಣಿಯನ್ನು ಡ್ರಾನಲ್ಲಿ ಕೊನೆಗೊಳಿಸಬೇಕಿದ್ದರೆ ನ್ಯೂಜಿಲೆಂಡ್ ತಂಡ ಕೊನೆಯ ಎರಡೂ ಪಂದ್ಯಗಳನ್ನ ಗೆಲ್ಲಬೇಕಿದೆ. ಟಿ-20ಐನಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಭಾರತ ಗೆದ್ರೂ ಕೊನೆಯ ಎರಡು ಪಂದ್ಯಗಳಲ್ಲಿ ಗೆದ್ದು ಕಿವೀಸ್ ಗ್ರೇಟ್ ಕಂ ಬ್ಯಾಕ್ ಮಾಡಿತ್ತು. ಸೋ ಅವ್ರನ್ನ ಈಸಿಯಾಗಿ ತಗೊಳ್ಳೋಕೂ ಆಗಲ್ಲ. ಅದೂ ಅಲ್ದೇ ಕಳೆದ ಮೂರು ಪಂದ್ಯಗಳಲ್ಲೂ ಕಿವೀಸ್ ಟಾಸ್ ಸೋತು ಫಸ್ಟ್ ಬ್ಯಾಟಿಂಗ್​ಗೆ ಚಾನ್ಸ್ ಸಿಕ್ಕಿದ್ರಿಂದ ಫಸ್ಟ್ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಚೆನ್ನಾಗಿ ಆಗಿರಲಿಲ್ಲ. ಮಳೆ ಕಣ್ಣಾಮುಚ್ಚಾಲೆ ನಡುವೆ ಎರಡೂ ಪಂದ್ಯಗಳಲ್ಲೂ ಡಿಎಲ್​ಎಸ್ ಮೆತೆಡ್ ಪ್ರಕಾರ ಭಾರತವೇ ವಿನ್ ಆಗಿದೆ. ಌಂಡ್ ಪ್ಲೇಯಿಂಗ್ 11ನಲ್ಲೂ ಬದಲಾವಣೆ ಮಾಡಬೇಕಿರೋದ್ರಿಂದ ಶ್ರೇಯಸ್ ಅಯ್ಯರ್ ಹೇಗೆ ತಂಡವನ್ನ ಲೀಡ್ ಮಾಡ್ತಾರೆ ಅನ್ನೋದೇ ಇಲ್ಲಿರೋ ಪ್ರಶ್ನೆ. ಹಾಗೇ ನಾಲ್ಕು ಮತ್ತು ಐದನೇ ಪಂದ್ಯಗಳಿಗೆ ಮಳೆ ಕಾಟ ಇಲ್ಲದೇ ಇದ್ರೆ ಮೊದಲ ಇನ್ನಿಂಗ್ಸ್​ನಲ್ಲಿ ಬಿಗ್ ಸ್ಕೋರ್ ನಿರೀಕ್ಷೆ ಮಾಡ್ಬೋದು. ಌಂಡ್ ಕಿವೀಸ್ ಪಡೆಯಲ್ಲೂ ಮೇಜರ್ ಸರ್ಜರಿ ಮಾಡಲಾಗಿದೆ.

ಟೆಸ್ಟ್ ಪಂದ್ಯಗಳಿಗಾಗಿ ಕಿವೀಸ್ ತಂಡದಲ್ಲೂ ಬದಲಾವಣೆ!

ಭಾರತದ ವಿರುದ್ಧದ ಪ್ರಮುಖ ಟೆಸ್ಟ್ ಸರಣಿಯ ಸಿದ್ಧತೆಗಾಗಿ, ನ್ಯೂಜಿಲೆಂಡ್‌ನ ಹಿರಿಯ ಆಟಗಾರರಾದ ಟಾಮ್ ಲ್ಯಾಥಮ್, ಡೆರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್ ಮತ್ತು ನಾಥನ್ ಸ್ಮಿತ್ ಅವರು ಈಗಾಗಲೇ ವೆಲ್ಲಿಂಗ್ಟನ್‌ಗೆ ತೆರಳಿದ್ದಾರೆ. ಹೀಗಾಗಿ ಅವರು ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ಆಡುತ್ತಿಲ್ಲ. ಅವರ ಜಾಗಕ್ಕೆ ಫಿನ್ ಅಲೆನ್, ಮಿಚ್ ಹಾಯ್, ನಿಕ್ ಕೆಲ್ಲಿ ಸೇರಿದಂತೆ ಯುವ ಹಾಗೂ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬಟ್ ಇಲ್ಲಿ ಏಕದಿನ ತಂಡದಲ್ಲಿ ಕ್ಯಾಪ್ಟನ್ಸಿ ಬದಲಾವಣೆ ಮಾಡಿಲ್ಲ. ಸರಣಿಯುದ್ದಕ್ಕೂ ಸೀಮಿತ ಓವರ್‌ಗಳ ನಾಯಕನಾಗಿರುವ ಮಿಚೆಲ್ ಸ್ಯಾಂಟ್ನರ್ ಅವರೇ ಈ ಯುವ ಪಡೆಯನ್ನು ಮುನ್ನಡೆಸಲಿದ್ದಾರೆ. ಅದೂ ಅಲ್ದೇ ನ್ಯೂಜಿಲೆಂಡ್‌ನ ಮುಖ್ಯ ಕೋಚ್ ರಾಬ್ ವಾಲ್ಟರ್ ಈ ಸರಣಿಯನ್ನು ಮುಂದಿನ ವರ್ಷ ನಡೆಯಲಿರುವ 2027ರ ಐಸಿಸಿ ವಿಶ್ವಕಪ್ ಸರಣಿಯ ಸಿದ್ಧತೆಯಾಗಿ ನೋಡುತ್ತಿದ್ದಾರೆ. ವಿಶ್ವದ ಬಲಿಷ್ಠ ತಂಡವಾದ ಭಾರತದ ವಿರುದ್ಧ ತಮ್ಮ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲು ಈ ಕೊನೆಯ ಎರಡು ಪಂದ್ಯಗಳ ಮೇಲೆ ಕಣ್ಣಿಟ್ಟಿದ್ದಾರೆ. ಶತಾಯ ಗತಾಯ ಗೆಲ್ಲಲೇಬೇಕೆನ್ನೋ ಟಾರ್ಗೆಟ್​ನಲ್ಲಿದ್ದಾರೆ. ಹೀಗಾಗಿ ನಾಲ್ಕು, ಐದನೇ ಪಂದ್ಯಗಳು ಹೈವೋಲ್ಟೇಜ್ ಆಗೋದ್ರಲ್ಲಿ ಡೌಟೇ ಇಲ್ಲ.

Shantha Kumari

Leave a Reply

Your email address will not be published. Required fields are marked *