ಶ್ರೇಯಸ್ ಗೆ AFG ಅಗ್ನಿಪರೀಕ್ಷೆ – ಸರಣಿ ಗೆದ್ರಷ್ಟೇ ಕ್ಯಾಪ್ಟನ್ಸಿ ರಿಲೀಫ್
ಸೂರ್ಯನ ಟ್ರ್ಯಾಕ್ ಸಿಗುತ್ತಾ?

ಶ್ರೇಯಸ್ ಗೆ AFG ಅಗ್ನಿಪರೀಕ್ಷೆ – ಸರಣಿ ಗೆದ್ರಷ್ಟೇ ಕ್ಯಾಪ್ಟನ್ಸಿ ರಿಲೀಫ್ಸೂರ್ಯನ ಟ್ರ್ಯಾಕ್ ಸಿಗುತ್ತಾ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ-20ಐ ಸರಣಿ ಇವತ್ತಿಂದ ಶುರು ಆಗ್ತಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೂರೂ ಪಂದ್ಯಗಳು ನಡೆಯಲಿವೆ. ಈ ಸರಣಿಯ ಗೆಲುವು ಭಾರತದ ಪಾಲಿಗೆ ಎಷ್ಟು ಮುಖ್ಯವೋ ನಾಯಕ ಶ್ರೇಯಸ್ ಅಯ್ಯರ್ ಗೆ ಅದಕ್ಕಿಂತಲೂ ಇಂಪಾರ್ಟೆಂಟ್.

ಇದನ್ನೂ ಓದಿ : 270 ರನ್ಸ್.. ಕೆರಳಿದ ಕಿಶನ್ – T-20I, ODI.. ಈಗ ಟೆಸ್ಟ್ ಗೂ ಟವೆಲ್

2 ವರ್ಷಗಳಲ್ಲಿ ಭಾರತಕ್ಕೆ ಒಂದೇ ಒಂದು ಸರಣಿಯ ಸೋಲಿನ ರುಚಿ ತೋರಿಸದೇ ಸೂರ್ಯಕುಮಾರ್ ಯಾದವ್ 2026ರ ಟಿ-20 ವಿಶ್ವಕಪ್​ನಲ್ಲೂ ಗೆಲ್ಲಿಸಿಕೊಟ್ಟಿದ್ರು. ಬಟ್ ಅವ್ರ ಕಡೆಯಿಂದ ಪರ್ಫಾಮೆನ್ಸ್ ಇಲ್ಲ ಅಂತಾ ತಂಡದಿಂದಲೇ ಹೊರಗಿಟ್ಟು ಶ್ರೇಯಸ್ ಅಯ್ಯರ್​ಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿತ್ತು. ಟಿ-20ಐನಲ್ಲಿ ಉತ್ತುಂಗದಲ್ಲಿದ್ದ ಭಾರತ ಶ್ರೇಯಸ್ ನಾಯಕತ್ವದಡಿ ಪಾತಾಳಕ್ಕೆ ಬಿದ್ದಿತ್ತು. ಬ್ಯಾಕ್ ಟು ಬ್ಯಾಕ್ ಎರಡು ಸರಣಿಗಳಲ್ಲಿ ಹೀನಾಯ ಸೋಲು. ಭಾರತಕ್ಕೂ ದೊಡ್ಡ ಮುಖಭಂಗವಾಗಿತ್ತು. ಈಗ ಜಿಂಬಾಬ್ವೆ ವಿರುದ್ಧ ಗೆದ್ದು ಕಂ ಬ್ಯಾಕ್ ಮಾಡಿರೋ ಭಾರತವನ್ನ ಮತ್ತೆ ಕೆಳಗೆ ಜಾರದಂತೆ ಮುನ್ನಡೆಸೋ ಜವಾಬ್ದಾರಿ ಶ್ರೇಯಸ್ ಮೇಲಿದೆ. ಇದಿಷ್ಟೇ ಅಲ್ಲದೇ ಸಾಕಷ್ಟು ವಿಚಾರಗಳಿಂದಲೂ ಭಾರತ ಆಫ್ಘನ್ ವಿರುದ್ಧ ಗೆಲ್ಲಲೇಬೇಕಿದೆ.

ಶ್ರೇಯಸ್ ಗೆ ಅಗ್ನಿಪರೀಕ್ಷೆ!

ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ತವರಿನಲ್ಲಿ ಮೊದಲ ಸರಣಿ

2 ಸರಣಿ ಸೋತು ಜಿಂಬಾಬ್ವೆ ವಿರುದ್ಧ ಗೆದ್ರೂ ಇಲ್ಲಿ ಗೆಲ್ಲಬೇಕಾದ ಪ್ರತಿಷ್ಠೆ

ಶ್ರೇಯಸ್ ಅಯ್ಯರ್ ಗೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಒತ್ತಡ

ಶ್ರೇಯಸ್ ಕ್ಯಾಪ್ಟನ್ಸಿ ನಿಭಾಯುಸುವಿಕೆ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ

ಸ್ಟಾರ್ ಪ್ಲೇಯರ್ಸ್ ತಂಡವಾಗಿ ಉತ್ತಮ ಪ್ರದರ್ಶನ ನೀಡಲೇಬೇಕು

ವೈಯಕ್ತಿಕ ಪ್ರದರ್ಶನ ನೀಡಿದ್ರೆ ಮಾತ್ರವೇ ಕಂಟಿನ್ಯೂಗೆ ಅವಕಾಶ

ಜಪಾನ್ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗೂ ದಿಕ್ಸೂಚಿ

Shantha Kumari

Leave a Reply

Your email address will not be published. Required fields are marked *