ಝಿಂಬಾಬ್ವೆ ಸರಣಿಯಿಂದ ಗಂಭೀರ್ OUT -ಬ್ರೇಕ್ಫಾಸ್ಟ್ ಬಿಟ್ಟ ಸೂರ್ಯವಂಶಿ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲು ಕಂಡಿದ್ದು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಅತಿ ದೊಡ್ಡ ಅಂತರದ ಸೋಲಾಗಿದೆ. ಭಾರತ ಟಿ20I ಕ್ರಿಕೆಟ್ನಲ್ಲಿ 20 ವರ್ಷಗಳಲ್ಲಿ ಮೊದಲ ಬಾರಿಗೆ 100 ರನ್ಗಳಿಗಿಂತ ಹೆಚ್ಚು ಅಂತರದ ಸೋಲು ಕಂಡಿದೆ. ಹಾಗೇ ಭಾರತ ತಂಡ ಈ ಪಂದ್ಯದಲ್ಲಿ ಪವರ್ ಪ್ಲೇನಲ್ಲಿಯೇ 5 ವಿಕೆಟ್ ಕಳೆದುಕೊಂಡಿತು. ಈ ಮೂಲಕ 20 ವರ್ಷಗಳ ಟಿ20 ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೊದಲ 6 ಓವರ್ಗಳಲ್ಲಿ ಹೆಚ್ಚು ವಿಕೆಟ್ ಕಳೆದುಕೊಂಡ ಕಳಪೆ ದಾಖಲೆ ನಿರ್ಮಿಸಿತು.
ಇದನ್ನೂ ಓದಿ: ಇವರೇನಾ ವಿಶ್ವ ಚಾಂಪಿಯನ್ಸ್? – ಟೀಂ ಇಂಡಿಯಾಗೆ ಕಪ್ಪು ಚುಕ್ಕೆ
ಇಂಗ್ಲೆಂಡ್ ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಮಾತನಾಡಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮ್ಮದು ಘನ ಘೋರ ಪ್ರದರ್ಶನ. ಇಷ್ಟು ದೊಡ್ಡ ಅಂತರದ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಪಿಚ್ ನೋಡಿದರೆ ಇದು 200 ರನ್ ಗಳಿಸುವಂತಹ ವಿಕೆಟ್ ಆಗಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ಪವರ್ಪ್ಲೇನಲ್ಲೇ 4-5 ವಿಕೆಟ್ಗಳನ್ನು ಕಳೆದುಕೊಂಡೆವು. ಅಲ್ಲಿಯೇ ಪಂದ್ಯದ ಹಿಡಿತ ನಮ್ಮ ಕೈತಪ್ಪಿತು. ನಾವು ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯಕ್ಕೆ ಸಜ್ಜಾಗಬೇಕಿದೆ ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ ಬೆನ್ನಲ್ಲೇ ಟೀಂ ಇಂಡಿಯಾ ಅಭಿಮಾನಿಗಳು ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಟ್ಟಿರುವುದಕ್ಕೆ ಸ್ಟೇಡಿಯಂ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪಂದ್ಯ ಮುಗಿದ ತಕ್ಷಣ ಕ್ರೀಡಾಂಗಣದ ಹೊರಗೆ ನೂರಾರು ಭಾರತೀಯ ಅಭಿಮಾನಿಗಳು ಒಟ್ಟಾಗಿ We Want Sanju ಎಂದು ಗಟ್ಟಿಯಾಗಿ ಗಂಭೀರ್ ಎದುರೇ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಜುಲೈ 23 ರಿಂದ ಟೀಂ ಇಂಡಿಯಾ ಇಂಡಿಯಾ ಝಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಯಿಂದ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ಭಾರತ ತಂಡವು ಬ್ಯಾಕ್ ಟು ಬ್ಯಾಕ್ ಸರಣಿ ಹಾಗೂ ಟೂರ್ನಿಗಳನ್ನು ಆಡಲಿದೆ. ಹೀಗಾಗಿ ಕೋಚಿಂಗ್ ಸಿಬ್ಬಂದಿ ವಿಭಾಗವನ್ನು ವಿಭಜಿಸಿ ವಿಶ್ರಾಂತಿ ನೀಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಕಾಣಿಸಿಕೊಳ್ಳಲಿದ್ದಾರೆ.
ವೈಭವ್ ಪಂದ್ಯಗಳಿಗೆ ಮೊದಲು ಅಂದ್ರೆ ಬೆಳಗ್ಗಿನ ಬ್ರೇಕ್ಫಾಸ್ಟ್ಗೆ ಬ್ರೇಕ್ ಹಾಕಿದ್ದಾರೆ ಅನ್ನೋ ಸುದ್ದಿ ಈಗ ಸಖತ್ ವೈರಲ್ ಆಗ್ತಿದೆ. ಹಿಂದಿನ ರಾತ್ರಿಯೇ ಕಾರ್ಬೋಹೈಡ್ರೇಟ್ ಲೋಡಿಂಗ್” ಅಂದರೆ ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರವನ್ನು ಸೇವಿಸುವ ಮೂಲಕ ತಮ್ಮ ದೇಹದ ಗ್ಲೈಕೋಜೆನ್ ಸಂಗ್ರಹವನ್ನು ಸಂಪೂರ್ಣವಾಗಿ ತುಂಬಿಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ, ಅವರು ಮರುದಿನ ಬೆಳಿಗ್ಗೆ ಉಪಾಹಾರವನ್ನು ಬಿಟ್ಟುಬಿಟ್ಟರೂ ಸಹ ಅವರ ಸ್ನಾಯುಗಳಲ್ಲಿ ಆಟಕ್ಕೆ ಅಗತ್ಯವಿರುವಷ್ಟು ಸಾಕಷ್ಟು ಶಕ್ತಿಯು ಮುಂಚಿತವಾಗಿಯೇ ಸಂಗ್ರಹವಾಗಿರುತ್ತದೆ.
ಅಫ್ಘಾನಿಸ್ತಾನ್ ಕ್ರಿಕೆಟ್ ತಂಡವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗದ ಬೌಲರ್ ಶಪೂರ್ ಝದ್ರಾನ್ ಅವರು ದೆಹಲಿಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಶಪೂರ್ ಅವರು HLH ಎಂಬ ಅಪರೂಪದ ಮತ್ತು ಮಾರಣಾಂತಿಕ ರೋಗನಿರೋಧಕ ಶಕ್ತಿ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ತೀವ್ರವಾದ ಉರಿಯೂತಕ್ಕೆ ಕಾರಣವಾಗುವ ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅವರು ಜನವರಿಯಲ್ಲಿ ದೆಹಲಿ-ಎನ್ಸಿಆರ್ನ ಆಸ್ಪತ್ರೆಗೆ ದಾಖಲಾಗಿದ್ದರು.
2027ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ದಿನಾಂಕ ನಿಗದಿಯಾಗಿದೆ. ಮುಂದಿನ ವರ್ಷದ ಜೂನ್ 18 ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಜುಲೈ 4 ರಂದು ಮಹಾ ಫೈನಲ್ ಪಂದ್ಯ ಜರುಗಲಿದೆ. ಇನ್ನು ಈ ಬಾರಿ ಟೂರ್ನಿಯ ಆತಿಥ್ಯವನ್ನು ಬಾಂಗ್ಲಾದೇಶ್ ವಹಿಸಿಕೊಳ್ಳಲಿರುವುದು ಅಧಿಕೃತವಾಗಿದೆ.
2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಐಸಿಸಿ ಪ್ರಕಟಿಸಿದ ‘ಟೀಮ್ ಆಫ್ ದಿ ಟೂರ್ನಮೆಂಟ್’ನಲ್ಲಿ ನಾಲ್ವರು ಆಸೀಸ್ ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಭಾರತದ ಪರ ಶ್ರೀ ಚಾರಿಣಿ ಏಕೈಕ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ. ಭಾರತ ಪರ ಅದ್ಭುತ ಪ್ರದರ್ಶನ ತೋರಿದ್ದ ಶ್ರೀ ಚಾರಿಣಿ ಕೇವಲ ಐದು ಪಂದ್ಯಗಳಲ್ಲೇ 14 ವಿಕೆಟ್ ಕಬಳಿಸಿ ಮಿಂಚಿದ್ದರು.
ಕ್ರಿಕೆಟ್ ಲೋಕದ ದಾದಾ ಸೌರವ್ ಗಂಗೂಲಿಯವರ ಬಯೋಪಿಕ್ ತೆರೆ ಕಾಣಲಿದ್ದು, ಸೌರವ್ ಗಂಗೂಲಿ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಈ ಸಿನಿಮಾ 2027ರ ಮೇ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ರಿಲೀಸ್ ಡೇಟ್ ಜೊತೆ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಸಾಕಷ್ಟು ವೈರಲ್ ಆಗ್ತಿದೆ.
ಟೀಮ್ ಇಂಡಿಯಾದಲ್ಲಿ ಚಾನ್ಸ್ ಪಡೆಯುವುದ್ದಕ್ಕೆ ಸರ್ಫರಾಜ್ ಖಾನ್ ಜಿಮ್ನಲ್ಲಿ ಬೆವರು ಹರಿಸುತ್ತಿದ್ದು, ಇವರ ಫೋಟ್ ಸಖತ್ ವೈರಲ್ ಆಗ್ತಿದೆ. ಸರ್ಫರಾಜ್ ಕಟ್ಟುನಿಟ್ಟಿನ ಆಹಾರ ಪದ್ಧತಿಯ ಮೊರೆ ಹೋಗಿದ್ದು, ಬ್ರೆಡ್, ಅಕ್ಕಿ, ಸಕ್ಕರೆ ಮತ್ತು ಬೇಕರಿ ವಸ್ತುಗಳನ್ನು ಹಾಗೂ ಬಿರಿಯಾನಿಯನ್ನ ಸೇವಿಸುವುದ್ದನ್ನ ಸಂಪೂರ್ಣವಾಗಿ ಬಿಟ್ಟಿದ್ದಾರೆ. ಮೀನು, ಕೋಳಿ, ಬೇಯಿಸಿದ ಮೊಟ್ಟೆ, ಬ್ರೊಕೊಲಿ ಮತ್ತು ಗ್ರೀನ್ ಟೀ ಕುಡಿಯಲು ಆರಂಭಿಸಿದ್ದಾರೆ.

ನೋಡಿರಿ

