90 ಕೋಟಿ ಒಡೆಯ ಶ್ರೇಯಸ್! – ಕ್ಯಾಪ್ಟನ್ಸಿ ಕ್ಲಿಕ್.. ಆದಾಯ ಡಬಲ್!
ಅಯ್ಯರ್ ಐಶಾರಾಮಿ ಲೈಫ್ ಹೇಗಿದೆ?

ಶ್ರೇಯಸ್ ಅಯ್ಯರ್.. ಭರವಸೆಯ ಆಟಗಾರ. ಐಪಿಎಲ್ ಸೀಸನ್ 18ರಲ್ಲಿ ಪಂಜಾಬ್ ತಂಡದ ನಾಯಕನಾದ ಅಯ್ಯರ್ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ರು.. ಮತ್ತೊಮ್ಮೆ ತನ್ನ ಕ್ಯಾಪ್ಟನ್ಸಿ ಎಂತಹದ್ದು ಎಂಬುದನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದ್ದಾರೆ. ದಿಗ್ಗಜ ಕ್ರಿಕೆಟರ್ಗಳೇ ಬೇಷ್ ಎನ್ನುವ ರೀತಿ ತಂಡವನ್ನು ಮುನ್ನಡೆಸಿದ್ದಾರೆ. ಇದೀಗ ಶ್ರೇಯಸ್ ಅಯ್ಯರ್ ಇನ್‌ಕಮ್ ವರ್ಷದಿಂದ ವರ್ಷಕ್ಕೆ ಡಬಲ್ ಆಗ್ತಿದೆ. ಕ್ರಿಕೆಟ್‌ನಲ್ಲಿ ಕ್ಲಿಕ್ ಆಗ್ತಿದ್ದಂತೆ ಅವ್ರ ಆದಾಯ ಕೂಡ ಡಬಲ್ ಆಗ್ತಿದೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಸಾವಿನ ಸಂಭ್ರಮಾಚರಣೆ – ದುರಂತಕ್ಕೆ ಹೊಣೆ ಯಾರು?
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಈ ವರ್ಷದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2018ರಲ್ಲಿ ಕ್ಯಾಪಿಟಲ್ಸ್ ಜತೆ ಐಪಿಎಲ್ ವೃತ್ತಿಜೀವನ ಆರಂಭಿಸಿದ ಶ್ರೇಯಸ್, ಐಪಿಎಲ್ ನಲ್ಲಿ ಈಗ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 3 ತಂಡಗಳನ್ನು ಮುನ್ನಡೆಸಿ ಕ್ವಾಲಿಫೈಯರ್‌ಗೆ ಮುನ್ನಡೆಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಅಯ್ಯರ್ ಆದಾಯ ಕೂಡ ಡಬಲ್ ಆಗಿದೆ. ಸಾಮಾನ್ಯ ಕುಟುಂಬದಿಂದ ಬಂದ ಶ್ರೇಯಸ್ ಈಗ ಕೋಟಿಗಳ ಒಡೆಯನಾಗಿದ್ದಾರೆ. ಐಶರಾಮಿ ಜೀವನ ನಡೆಸ್ತಿದ್ದಾರೆ.
ಹೌದು ಶ್ರೇಯಸ್ ಅಯ್ಯರ್ 2017 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ರು. ಆ ವರ್ಷ 2.6 ಕೋಟಿಗೆ ಡೆಲ್ಲಿ ಡೇರ್‌ಡೆವಿಲ್ಸ್ ಅಂದ್ರೆ ಈಗಿನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾಲಾದ್ರು. 2021 ವರೆಗೂ ಅಯ್ಯರ್ ಆದೇ ತಂಡದಲ್ಲಿ ಮುಂದುವರಿದ್ರು. ಡೆಲ್ಲಿ ಕ್ಯಾಪಿಟಲ್ಸ್ ಅಯ್ಯರ್ ಗೆ ಆ 4 ವರ್ಷ 7 ಕೋಟಿ ಸಂಭಾವನೆ ನೀಡಿತ್ತು. ಆದಾದ ಬಳಿ ಅಂದ್ರೆ 2022 ರಿಂದ ಅಯ್ಯರ್ ಕೆಕೆಆರ್ ತಂಡ ಪಾಲಾಗ್ತಾರೆ. ಕೆಕೆಆರ್ ಫ್ರಾಂಚೈಸಿ. ಅಯ್ಯರ್ ಅವರನ್ನ 12.25 ಕೋಟಿ ರೂಪಾಯಿ ಖರೀಸುತ್ತೆ. 2024 ವರೆಗೆ ಅದೇ ಟೀಮ್ ನಲ್ಲಿ ಕೆಕೆಆರ್ ಇಟ್ಟುಕೊಳ್ಳುತ್ತೆ. 2024 ರಲ್ಲಿ ಅಯ್ಯರ್ ನಾಯಕತ್ವದ ಕೆಕೆಆರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2025ರಲ್ಲಿ ಶ್ರೇಯಸ್ ಪಂಜಾಬ್ ಕಿಂಗ್ಸ್ ತಂಡದ ಪಾಲಾದ್ರು. ಶ್ರೇಯಸ್ ಅಯ್ಯರ್‌ನ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ₹26.75 ಕೋಟಿಗೆ ಖರೀದಿಸಿತ್ತು. ಇನ್ನು ಶ್ರೇಯಸ್ ನ ಬಿಸಿಸಿಐನ ಒಪ್ಪಂದಕ್ಕೆ ಒಳಪಟ್ಟಿದ್ದಾರೆ. ಅಯ್ಯರ್ ಬಿ ವರ್ಗದ ಆಟಗಾರನಾಗಿದ್ದು, ಬಿಸಿಸಿಐ ನಿಂದ ವರ್ಷಕ್ಕೆ 5 ಕೋಟಿ ರುಪಾಯಿ ಸಂಭಾವನೆ ಪಡಿತಾರೆ. ಅಂದ್ಹಾಗೆ 2024 ರಲ್ಲಿ ಅಯ್ಯರ್ ನಿವ್ವಳ ಮೌಲ್ಯ 60 ಕೋಟಿಗಳಿಷ್ಟು. 2025 ರಲ್ಲಿ ಅಯ್ಯರ್ ಆದಾಯ 85 ರಿಂದ 90 ಕೋಟಿ ಎಂದು ಅಂದಾಜಿಸಲಾಗಿದೆ. ಕ್ರಿಕೆಟ್ ಅಲ್ಲದೆ ಜಾಹೀರಾತಿನಿಂದಲೂ ಶ್ರೇಯಶ್ ಹಣ ಗಳಿಸುತ್ತಾರೆ.
ಇನ್ನು ಅಯ್ಯರ್ ಗೆ ಕಾರುಗಳಂದ್ರೆ ತುಂಬಾ ಇಷ್ಟ.. ಶ್ರೇಯಸ್ ಬಳಿ ಮರ್ಸಿಡಿಸ್-ಬೆನ್ಜ್ G63 AMG, ಲಂಬೋರ್ಘಿನಿ ಹುರಾಕನ್ ಮತ್ತು ಆಡಿ S5 ಅನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಅಂಡರ್-19 ಕ್ರಿಕೆಟ್ ನಲ್ಲಿ ಗಳಿಸಿದ ಹಣದಿಂದ ಅಯ್ಯರ್ ಹುಂಡೈ i20 ಖರೀದಿಸಿದ್ದರು . ಇದು ಮೊದಲ ಕಾರು ಆಗಿರೋದ್ರುಂದ ಈಗಲೂ ಈ ಕಾರನ್ನು ಶ್ರೇಯಸ್ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಮುಂಬೈ ಎಲೈಟ್ ಲೋಧಾ ವಲ್ಡ್ ಟವರ್‌ನಲ್ಲಿ ಐಶರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಈ ಅಪಾರ್ಟ್‌ಮೆಂಟ್ ಬೆಲೆ 11.85 ಕೋಟಿ ರೂಪಾಯಿ ಎಂದು ಅದಾಂಜಿಸಲಾಗಿದೆ.
ಶ್ರೇಯಸ್ ಅಯ್ಯರ್ ಕ್ರಿಕೆಟ್‌ನಿಂದ ಈ ಕೋಟಿಗಳ ಒಡೆಯ ಆಗಿದ್ದಾರೆ. ಇಷ್ಟೊಂದು ಗಳಿಸಲು ಅವ್ರು ಸಾಕಷ್ಟು ಶ್ರಮಪಟ್ಟಿದ್ದಾರೆ. ಹಲವು ಏಳುಬೀಳುಗಳನ್ನ ಕಂಡು ಈಗ ಯಶಸ್ಸು ಗಳಿಸಿದ್ದಾರೆ.