ಶ್ರೇಯಸ್ ಕೈ ತಪ್ಪುತ್ತಾ ಕ್ಯಾಪ್ಟನ್ಸಿ? – 2026ರ ಸರಣಿಗಳನ್ನ ಗೆದ್ರಷ್ಟೇ ಸೇಫ್?
ವಿಶ್ವಕಪ್ & ಒಲಿಂಪಿಕ್ಸ್ ಟಾರ್ಗೆಟ್ ಏನು?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡು ಟಿ-20ಐ ಪಂದ್ಯಗಳು ಮುಗಿದಿದ್ದು ಇನ್ನೂ ಮೂರು ಪಂದ್ಯಗಳು ಬಾಕಿ ಇವೆ. ಈ ಸರಣಿ ಗೆಲ್ಲೋದು ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಆಲ್ರೆಡಿ ಐರ್ಲೆಂಡ್ ವಿರುದ್ಧ ಸೋತಿರೋದ್ರಿಂದ ಆಂಗ್ಲರ ನಾಡಲ್ಲಿ ಗೆಲ್ಲಲೇಬೇಕಾದ ಒತ್ತಡ ಕೂಡ ಇದೆ. ಹಾಗೇನಾದ್ರೂ ಸರಣಿ ಕೈಜಾರಿದ್ರೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯೂ ಚರ್ಚೆಗೆ ಬರಲಿದೆ. ಎರಡೇ ಎರಡು ಸರಣಿ ಅಷ್ಟು ದೊಡ್ಡಮಟ್ಟದ ಡ್ಯಾಮೇಜ್ ಮಾಡುತ್ತಾ ಅಂತಾ ನಿಮ್ಗೆ ಅನ್ನಿಸ್ಬೋದು. ಯಾಕಂದ್ರೆ ರಿಯಾಲಿಟಿ ಬೇರೆನೇ ಇದೆ.
ಇದನ್ನೂ ಓದಿ : ವೈಭವ್ ಸೂರ್ಯವಂಶಿ ಬೆಂಚ್ ಕಾದಿದ್ದಕ್ಕೆ ಟೀಕೆ – ಮ್ಯಾನೇಜ್ಮೆಂಟ್ ನಿರ್ಧಾರಕ್ಕೆ ಬಿಸಿಸಿಐ ಸಮರ್ಥನೆ
2024ರಲ್ಲಿ ಭಾರತ ಟಿ-20 ವಿಶ್ವಕಪ್ ಚಾಂಪಿಯನ್ಸ್.. 2026ರಲ್ಲೂ ಟಿ20 ವಿಶ್ವಕಪ್ ವಿನ್ನರ್ಸ್.. 1,050 ದಿನಗಳ ಕಾಲ ಟಿ-20 ಸರಣಿಗಳಲ್ಲಿ ಸೋಲು ಅನ್ನೋ ಮಾತೇ ಇಲ್ಲ. ಬಟ್ ಶ್ರೇಯಸ್ ಅಯ್ಯರ್ ತಮ್ಮ ನಾಯಕತ್ವದ ಮೊದಲ ಸಿರೀಸ್ನಲ್ಲೇ ಕ್ಲೀನ್ ಸ್ವೀಪ್ ಆಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ಸರಣಿ ಒಂದು ರೀತಿ ಅವ್ರ ಕ್ಯಾಪ್ಟನ್ಸಿ ಜೊತೆಗೆ ಬ್ಯಾಟಿಂಗ್ಗೂ ಅಗ್ನಿಪರೀಕ್ಷೆಯಾಗಲಿದೆ. ಇಲ್ಲೂ ಕೂಡ ಎಡವಿದ್ರೆ ಮುಂದಿನ ಪ್ರತೀ ಸರಣಿ ಅವ್ರ ಭವಿಷ್ಯ ಬರೆಯೋ ಸರಣಿಗಳಾಗಲಿವೆ.
ಏಷ್ಯನ್ ಗೇಮ್ಸ್ ವರೆಗೂ ಶ್ರೇಯಸ್ ಅಯ್ಯರ್ ಭಾರತ ಟಿ-20ಐ ಕ್ಯಾಪ್ಟನ್!
ಐಪಿಎಲ್ ಬಳಿಕ ಭಾರತ ಟಿ-20ಐ ಹೊಸ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಗೆ ಜವಾಬ್ದಾರಿ ವಹಿಸಿದೆ. ಐರ್ಲೆಂಡ್, ಇಂಗ್ಲೆಂಡ್ ಹಾಗೇ ಏಷ್ಯನ್ ಗೇಮ್ಸ್ ಈ ಮೂರೂ ಶೆಡ್ಯೂಲ್ಗಳಿಗೆ ಶ್ರೇಯಸ್ ನಾಯಕತ್ವದಲ್ಲೇ ಟೀಂ ಅನೌನ್ಸ್ ಆಗಿದೆ. ಐರ್ಲೆಂಡ್ ವಿರುದ್ಧ ಸಪ್ಪೆಯಾಗಿದ್ದ ಅಯ್ಯರ್ ಇಂಗ್ಲೆಂಡ್ ವಿರುದ್ಧ ಬೆಟರ್ ಪರ್ಫಾಮೆನ್ಸ್ ನೀಡಿದ್ರೂ ಗೆಲುವು ಕೂಡ ಮುಖ್ಯವಾಗುತ್ತೆ. ಮೇನ್ಲಿ ಇಲ್ಲಿ ಶ್ರೇಯಸ್ ಗೆ ಇರೋ ಅತಿದೊಡ್ಡ ಟಾರ್ಗೆಟ್ 2028ರ ಟಿ-20 ವಿಶ್ವಕಪ್ ಹಾಗೇ 2028ರ ಲಾಸ್ ಏಂಜಲೀಸ್ನಲ್ಲಿ ನಡೆಯಲಿರೋ ಒಲಿಂಪಿಕ್ಸ್ ಕ್ರೀಡಾಕೂಟ. ಈ ಎರಡೂ ಬಿಗ್ ಈವೆಂಟ್ಗಳನ್ನ ಗಮನದಲ್ಲಿ ಇಟ್ಟುಕೊಂಡು ಪಾಸಿಟಿವ್ ರಿಸಲ್ಟ್ ಬರದೇ ಇದ್ರೆ ಬಿಸಿಸಿಐ ಹೊಸ ಹೆಜ್ಜೆ ಇಡುವ ಸಾಧ್ಯತೆಗಳು ಜಾಸ್ತಿ ಇರುತ್ವೆ. ಇಂಗ್ಲೆಂಡ್ ಸರಣಿ ಬಳಿಕ ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ತವರು ಟಿ20ಐ ಸರಣಿಯನ್ನು ಆಡುತ್ತಾರೆ. ನಂತರ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಬೇಕಾದ ಸವಾಲಿದೆ. ಸೋ ಅಲ್ಲಿಗೆ ಈ ವರ್ಷ ಶ್ರೇಯಸ್ ಅಯ್ಯರ್ ಬ್ಯಾಟಿಂದ ಬರೋ ರನ್ಸ್ ಹಾಗೇ ತಂಡದ ಗೆಲುವುಗಳು ಅವ್ರ ಕ್ಯಾಪ್ಟನ್ಸಿ ಮೇಲೆಯೂ ಪರಿಣಾಮ ಬೀರಲಿದೆ. ಟೀಂ ಇಂಡಿಯಾದಲ್ಲಿ ಅಯ್ಯರ್ ಗೆ ಕ್ಯಾಪ್ಟನ್ಸಿ ಹೊಸದಾಗಿದ್ರೂ ಐಪಿಎಲ್ ನಲ್ಲಿ ಸಾಕಷ್ಟು ಅನುಭವ ಇದೆ.
ಮೂರು ಬೇರೆ ಬೇರೆ ತಂಡಗಳನ್ನ ಫೈನಲ್ ಗೆ ಮುನ್ನಡೆಸಿದ ಶ್ರೇಯಸ್!
ಇನ್ನು ಐಪಿಎಲ್‌ನಲ್ಲಿ ನಾಯಕನಾಗಿ ಶ್ರೇಯಸ್ ಅಯ್ಯರ್ ಸದ್ದು ಮಾಡಿದ್ದಾರೆ. ಮೂರು ಬೇರೆ ಬೇರೆ ತಂಡಗಳನ್ನು ಫೈನಲ್‌ಗೆ ತೆಗೆದುಕೊಂಡು ಹೋದ ಸಾಧನೆ ಅಯ್ಯರ್ ಮಾಡಿದ್ದಾರೆ. 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ಗೆ ತೆಗೆದುಕೊಂಡು ಹೋಗಿದ್ದರು. 10 ವರ್ಷಗಳ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ 2024 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಫೈನಲ್‌ಗೆ ತೆಗೆದುಕೊಂಡು ಹೋಗಿದ್ದರು. ಇದರ ಜೊತೆಗೆ 2019 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಪ್ಲೇ ಆಫ್‌ಗೆ ತಲುಪಿಸಿದ್ದರು. ಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವಿನ ಫಲಿತಾಂಶ ಹೊಂದಿರುವ ನಾಯಕ ಎಂಬ ದಾಖಲೆ ಕೂಡ ಶ್ರೇಯಸ್ ಅಯ್ಯರ್ ಅವರ ಹೆಸರಿನಲ್ಲಿದೆ. ಇದೇ ಕಾರಣಕ್ಕೆ ಮೂರು ವರ್ಷಗಳಿಂದ ಟಿ-20ಐ ತಂಡದಲ್ಲೇ ಇಲ್ಲದಿದ್ರೂ ನಾಯಕನಾಗಿಯೇ ಬಿಸಿಸಿಐ ಚಾನ್ಸ್ ಕೊಟ್ಟಿದೆ. ಆದ್ರೆ ಅದನ್ನ ಉಳಿಸಿಕೊಳ್ಳೋದು ಬಿಡೋದು ಅವ್ರ ಕೈಯಲ್ಲೇ ಇದೆ.

ನೋಡಿರಿ

