ಶ್ರದ್ಧಾ ಬ್ಯೂಟಿಗೆ ಶ್ರೇಯಸ್ ಕ್ಲೀನ್ ಬೌಲ್ಡ್?  -ನಟಿಯನ್ನ ಮದುವೆಯಾಗ್ತಾರಾ ಕ್ರಿಕೆಟರ್?

ಶ್ರದ್ಧಾ ಬ್ಯೂಟಿಗೆ ಶ್ರೇಯಸ್ ಕ್ಲೀನ್ ಬೌಲ್ಡ್?  -ನಟಿಯನ್ನ ಮದುವೆಯಾಗ್ತಾರಾ ಕ್ರಿಕೆಟರ್?

ಐಪಿಎಲ್​ ಸೀಸನ್ 17ಗೆ ಕೌಂಟ್​ಡೌನ್ ಶುರುವಾಗಿದ್ದು, ಕ್ರಿಕೆಟ್ ಫ್ಯಾನ್ಸ್​ ತುದಿಗಾಲಲ್ಲಿ ಕಾಯ್ತಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನ ಹೊಂದಿರೋ ಕ್ರಿಕೆಟ್ ಅನ್ನೋದು ಈಗ ಬರೀ ಆಟವಾಗಿ ಉಳಿದಿಲ್ಲ. ನೇಮ್, ಫೇಮ್ ಜೊತೆ ಹಣದ ಹೊಳೆಯನ್ನೇ ಹರಿಸೋ ಬ್ಯುಸಿನೆಸ್ ಆಗಿದೆ. ಬಾಲಿವುಡ್ ಸೆಲೆಬ್ರಿಟಿಗಳಿಗೂ ಸಿಗದಷ್ಟು ಅಭಿಮಾನ, ಗೌರವ ಕ್ರಿಕೆಟರ್ಸ್​ಗೆ ಸಿಗ್ತಿದೆ. ಇದೇ ಕಾರಣಕ್ಕೆ ಕ್ರಿಕೆಟ್ ಪ್ಲೇಯರ್ಸ್ ಮತ್ತು ಬಾಲಿವುಡ್ ಸ್ಟಾರ್​ ನಡುವೆ ಸ್ನೇಹ, ಒಡನಾಟ, ಪ್ರೀತಿ ಎಲ್ಲವೂ ಮೂಡುತ್ತಿದೆ. ಇತ್ತೀಚೆಗೆ ಟೀಂ ಇಂಡಿಯಾ ಆಟಗಾರರು ಮತ್ತು ಬಾಲಿವುಡ್ ಬ್ಯೂಟಿಗಳ ನಡುವಿನ ಪ್ರೇಮಾಂಕುರ ಜಾಸ್ತಿಯಾಗ್ತಿದೆ. ಮದುವೆಗಳೂ ನಡೀತಿವೆ. ಇದೀಗ ಮತ್ತೊಂದು ಜೋಡಿ ನಡುವೆ ಲವ್ವಿ ಡವ್ವಿ ಶುರುವಾಗಿದೆ ಅನ್ನೋದು ಹಾಟ್ ಟಾಪಿಕ್ ಆಗಿದೆ.

ಬಾಲಿವುಡ್ ನಟಿಯರು ಮತ್ತು ಕ್ರಿಕೆಟರ್ಸ್ ನಡುವೆ ಲವ್ ಆಗೋದು ಹೊಸದೇನು ಅಲ್ಲ. ದಶಕಗಳ ಹಿಂದೆಯೇ ಸಾಕಷ್ಟು ಮದುವೆಗಳೂ ನಡೆದಿವೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ, ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ, ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ, ಯುವರಾಜ್ ಸಿಂಗ್ ಮತ್ತು ಹೇಝಲ್ ಕೀಚ್, ಮೊಹಮ್ಮದ್ ಅಜರುದ್ದೀನ್ ಹಾಗೂ ಸಂಗೀತಾ ಬಿಜ್ಲಾನಿ ಮದುವೆಯಾಗಿದ್ದಾರೆ. ಇನ್ನೂ ಒಂದಷ್ಟು ಹೆಸರುಗಳು ಡೇಟಿಂಗ್​ ಮೂಲಕ ಸದ್ದು ಮಾಡ್ತಿವೆ. ಇದೀಗ ಬಾಲಿವುಡ್​ನ ಹಾಟ್ ಬ್ಯೂಟಿ ಶ್ರದ್ಧಾಕಪೂರ್ ಮತ್ತು ಟೀಮ್‌ ಇಂಡಿಯಾ ಸ್ಟಾರ್ ಪ್ಲೇಯರ್ ಶ್ರೇಯಸ್‌ ಅಯ್ಯರ್‌ ನಡುವೆ ಲವ್ ಆಗಿದೆ ಎಂಬ ಗುಲ್ಲೆದ್ದಿದೆ.  ಶ್ರೇಯಸ್ ಅಯ್ಯರ್ ತನಗಿಂತಲೂ 8 ವರ್ಷ ದೊಡ್ಡವರಾದ ನಟಿ ಶ್ರದ್ಧಾ ಜೊತೆ ಡೇಟಿಂಗ್ ನಡೆಸ್ತಿದ್ದಾರೆ ಎಂಬುದೇ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ಹನುಮಾನ್‌ ಚಾಲೀಸಾ ಕೇಸ್‌ – ಉದ್ವಿಗ್ನಗೊಂಡ ನಗರತ್ ಪೇಟೆ, ಹಲ್ಲೆಗೆ ಒಳಗಾದ ಅಂಗಡಿ ಮಾಲೀಕನನ್ನೇ ವಶಕ್ಕೆ ಪಡೆದ ಪೊಲೀಸರು!

2013ರಲ್ಲಿ ತೆರೆ ಕಂಡ ‘ಆಶಿಕಿ 2’ ಚಿತ್ರದ ಮೂಲಕ ನಟಿ ಶ್ರದ್ಧಾ ಕಪೂರ್ ಗ್ರ್ಯಾಂಡ್ ಸಕ್ಸಸ್ ಕಂಡಿದ್ದರು. ಇದಾದ ಬಳಿಕ ಬಾಲಿವುಡ್​ನಲ್ಲಿ ಸಾಕಷ್ಟು ಆಫರ್​ಗಳು ಸಿಕ್ಕವು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ಶ್ರದ್ಧಾ ರಿಯಲ್ ಲೈಫಲ್ಲೂ ಸಿಕ್ಕಾಪಟ್ಟೆ ಸುದ್ದಿಯಾದರು. ವರುಣ್‌ ಧವನ್‌, ಆದಿತ್ಯಾ ರಾಯ್‌ ಕಪೂರ್‌, ಇತ್ತೀಚೆಗೆ ರಾಹುಲ್‌ ಮೋದಿ ಎಂಬುವರ ಜೊತೆ ಶ್ರದ್ಧಾ ಡೇಟಿಂಗ್‌ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಟೀಮ್‌ ಇಂಡಿಯಾದ ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ ಜೊತೆ ಹೆಸರು ಥಳಕು ಹಾಕಿಕೊಂಡಿದೆ. ಅಷ್ಟಕ್ಕೂ ಈ ಜೋಡಿ ಮೀಟ್ ಆಗಿದ್ದೇ ಒಂದು ಌಡ್ ಶೂಟಿಂಗ್​ನಲ್ಲಿ. ಕೆಲ ತಿಂಗಳುಗಳ ಹಿಂದಷ್ಟೇ ಮೊಬೈಲ್ ಫೋನ್‌ವೊಂದರ ಜಾಹೀರಾತು ಶೂಟಿಂಗ್‌ನಲ್ಲಿ ಮೊದಲ ಬಾರಿಗೆ ಶ್ರದ್ಧಾ ಹಾಗೂ ಶ್ರೇಯಸ್ ಜೊತೆಯಾಗಿ ನಟಿಸಿದ್ದರು. ಇದೇ ಶೂಟಿಂಗ್‌ನಲ್ಲಿ ಇಬ್ಬರ ನಡುವೆ ಪರಿಚಯ ಆಗಿ ಅದು ಸ್ನೇಹಕ್ಕೆ ದಾರಿ ಮಾಡಿಕೊಟ್ಟಿತ್ತು. ಅದೇ ಸ್ನೆಹವೇ ಪ್ರೇಮಕ್ಕೆ ತಿರುಗಿದೆ ಎನ್ನಲಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಪರಸ್ಪರ ಫಾಲೋ ಮಾಡ್ತಿದ್ದಾರೆ. ಸದ್ಯ ಬಾಲಿವುಡ್ ಅಂಗಳದಲ್ಲಿ ನಟಿ ಶ್ರದ್ದಾ ಕಪೂರ್ ಹಾಗೂ ಶ್ರೇಯಸ್ ಸಿಕ್ರೇಟ್ ಆಗಿ ಡೇಟಿಂಗ್ ನಡೆಸ್ತಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ರಹಸ್ಯವಾಗಿ ಕೈ ಕೈ ಹಿಡಿದು ಸುತ್ತಾಡ್ತಿದ್ದಾರೆ ಎಂಬ ಸುದ್ದಿಯಿದೆ.

ಆದ್ರೆ ಈ ಜೋಡಿಯ ಡೇಟಿಂಗ್ ಜೊತೆ ಜೊತೆಗೆ ಮತ್ತೊಂದು ವಿಚಾರ ಬಾರೀ ಸುದ್ದಿಯಾಗ್ತಿದೆ. ಅದೇನಂದ್ರೆ ಶ್ರೇಯಸ್ ಅಯ್ಯರ್‌ಗೆ ಈಗ 29 ವರ್ಷ. ನಟಿ  ಶ್ರದ್ಧಾಗೆ 37 ವರ್ಷ ವಯಸ್ಸು. ಇಬ್ಬರ ನಡುವೆ 8 ವರ್ಷಗಳ ಗ್ಯಾಪ್ ಇದೆ. ಹೀಗಾಗಿ ತನಗಿಂತ 8 ವರ್ಷ ದೊಡ್ಡವಳ ಜೊತೆ ಶ್ರೇಯಸ್ ಲವ್ ನಲ್ಲಿ ಬಿದ್ದಿದ್ದಾರಾ ಎಂದು ಚರ್ಚೆಯಾಗ್ತಿದೆ. ಇದರ ಹೊರತಾಗಿ ಶ್ರೇಯಸ್ ಅಯ್ಯರ್ ಕೆಲ ದಿನಗಳಿಂದ ತಮ್ಮ ಆಟದ ವಿಚಾರವಾಗಿಯೂ ಸದ್ದು ಮಾಡ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಶ್ರೇಯಸ್​ರನ್ನು ಮುಂದಿನ ಪಂದ್ಯಗಳಿಂದ ಕೈ ಬಿಡಲಾಗಿತ್ತು. ಇಷ್ಟೇ ಅಲ್ಲ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಖಡಕ್‌ ವಾರ್ನಿಂಗ್‌ ಮಧ್ಯೆಯೂ ರಣಜಿ ಟ್ರೋಫಿಯಲ್ಲಿ ಆಡಲು ನಿರಾಕರಿಸಿದ್ದರು.. ಇದರ ಪರಿಣಾಮವಾಗಿ ಬಿಸಿಸಿಐ ತನ್ನ ಕೇಂದ್ರ ಗುತ್ತಿಗೆಯಿಂದ ಶ್ರೇಯಸ್ ಅಯ್ಯರ್‌ ಅವರನ್ನು ಕೈ ಬಿಟ್ಟಿತ್ತು. ಸದ್ಯ ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದು, ಮತ್ತೆ ಕಮ್ ಬ್ಯಾಕ್ ಮಾಡೋ ತವಕದಲ್ಲಿದ್ದಾರೆ. ಹೀಗೆ ಕೆರಿಯರ್ ವಿಚಾರದಲ್ಲಿ ಸದ್ದು ಮಾಡ್ತಿರುವ ಅಯ್ಯರ್ ಈಗ ವೈಯಕ್ತಿಕ ವಿಚಾರದಲ್ಲೂ ಮುಂಚೂಣಿಗೆ ಬಂದಿದ್ದಾರೆ. ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದು ಶ್ರೇಯಸ್ ಕಥೆಯಾದ್ರೆ ಶ್ರದ್ಧಾ ಕಪೂರ್ ಡೇಟಿಂಗ್ ವಿಚಾರ ಸದ್ದು ಮಾಡ್ತಿರೋದು ಇದೇ ಮೊದಲೇನಲ್ಲ. ಇತ್ತೀಚೆಗೆ ಗುಜರಾತ್​ನಲ್ಲಿ ನಡೆದಿದ್ದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಶ್ರದ್ಧಾ ಭಾಗಿಯಾಗಿದ್ರು. ಅದೂ ಕೂಡ ತಮ್ಮ ಬಾಯ್​ಫ್ರೆಂಡ್ ಎನ್ನಲಾದ ರಾಹುಲ್ ಮೋದಿ ಜೊತೆ ಕಾಣಿಸಿಕೊಂಡಿದ್ದು ಸುದ್ದಿಯಾಗಿತ್ತು. ರಾಹುಲ್ ಹಾಗೂ ಶ್ರದ್ಧಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಲೇ ಇತ್ತು. ಇದ್ರ ನಡುವೆ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿ ಆಗುವ ಮೂಲಕ ಡೇಟಿಂಗ್ ವಿಚಾರ ಕನ್ಫರ್ಮ್ ಎನ್ನುವಂತೆ ಮಾಡಿದ್ರು. ಹಾಗಂತ ರಾಹುಲ್ ಹಾಗೂ ಶ್ರದ್ಧಾ ಈ ಹಿಂದೆಯೂ ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ರಾತ್ರಿ ವೇಳೆ ಊಟಕ್ಕೆ ತೆರಳಿದ್ದ ಫೋಟೋಗಳನ್ನು ವೈರಲ್ ಮಾಡಲಾಗಿತ್ತು. ಇದರಿಂದ ಶ್ರದ್ಧಾ ಸಾಕಷ್ಟು ಶಾಕ್​ಗೆ ಒಳಗಾಗಿದ್ದರು. ಖಾಸಗಿತನಕ್ಕೆ ಧಕ್ಕೆ ತಂದಿದ್ದಕ್ಕೆ ಅವರು ಅಸಮಾಧಾನಗೊಂಡಿದ್ದರು. ಆದರೆ, ಈಗ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ.

ಅಷ್ಟಕ್ಕೂ ಈ ರಾಹುಲ್ ಮೋದಿ ಯಾರು ಅಂದ್ರೆ ಅವರು ಸಿನಿಮಾ ಕಥೆ ಬರಹಗಾರರು. ಲವ್ ರಂಜನ್ ಅವರ ‘ಪ್ಯಾರ್​ ಕಾ ಪಂಚನಾಮ್ 2’, ‘ಸೋನು ಕೆ ಟಿಟ್ಟು ಕಿ ಸ್ವೀಟಿ’ ಮೊದಲಾದ ಸಿನಿಮಾಗಳಲ್ಲಿ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ರಣಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ನಟನೆಯ ‘ತು ಜೂಟಿ ಮೇ ಮಕ್ಕರ್’ ಸಿನಿಮಾಗೂ ಅವರು ಕೆಲಸ ಮಾಡಿದ್ದರು. ಈ ಚಿತ್ರದ ಸೆಟ್​ನಲ್ಲಿ ಶ್ರದ್ಧಾ ಹಾಗೂ ರಾಹುಲ್ ಮೊದಲ ಬಾರಿಗೆ ಭೇಟಿ ಆಗಿದ್ದು, ನಂತರ ಈ ಗೆಳೆತನ ಪ್ರೀತಿಯಾಗಿ ಬದಲಾಯಿತು ಎನ್ನಲಾಗಿತ್ತು. ಇದಕ್ಕೂ ಮೊದಲು ಶ್ರದ್ಧಾ ಕಪೂರ್ ಅವರು ಛಾಯಾಗ್ರಾಹಕ ರೋಹನ್ ಶ್ರೇಷ್ಠ ಜೊತೆ ರಿಲೇಶನ್​ಶಿಪ್​ನಲ್ಲಿ ಇದ್ದರು. 2022ರಲ್ಲಿ ಬೇರೆ ಬೇರೆ ಆಗಿದ್ರು. ಆದ್ರೀಗ ಶ್ರೇಯಸ್ ಜೊತೆ ಶ್ರದ್ಧಾ ಲವ್ ಶುರುವಾಗಿದೆ ಅನ್ನೋದೇ ಬಾಲಿವುಡ್ ಹಾಗೂ ಕ್ರಿಕೆಟ್ ಟೀಮ್​ನಲ್ಲಿ ಹಾಟ್ ಟಾಪಿಕ್ ಆಗಿದೆ.

ಸದ್ಯ 38 ವರ್ಷದ ಶ್ರದ್ಧಾ ಕಪೂರ್ ಗೆ ಈಗ್ಲೂ ಬಾಲಿವುಡ್ ನಲ್ಲಿ ಒಳ್ಳೆಯ ಡಿಮ್ಯಾಂಡ್‌ ಇದೆ. ಒಂದು ಚಿತ್ರಕ್ಕೆ ಮೂರರಿಂದ ಐದು ಕೋಟಿ ರೂಪಾಯಿ ಸಂಭಾವನೆ ಪಡೀತಾರೆ. ಜೊತೆಗೆ ಲಕ್ಸುರಿ ಜೀವನ, ಬ್ರಾಂಡೆಡ್ ವಸ್ತುಗಳೆಂದರೆ ತುಂಬಾ ಇಷ್ಟ. ಅದಕ್ಕಿಂತ ಹೆಚ್ಚಾಗಿ ಕಾರ್ ಕ್ರೇಜ್ ಇನ್ನೂ ಜಾಸ್ತಿಯಿದೆ.. ಬ್ಯಾಗ್, ಬಟ್ಟೆಗಳ ಕಲೆಕ್ಷನ್‌ ಜೊತೆಗೆ ಶೂ ಕ್ರೇಜ್ ಕೂಡ ಇದೆ. ಶ್ರದ್ಧಾ ಬಳಿ 10 ಕೋಟಿಗೂ ಹೆಚ್ಚು ಮೌಲ್ಯದ ಶೂ ಕಲೆಕ್ಷನ್ಸ್ ಇದೆ. ಕಾಸ್ಲಿ ಕಾರುಗಳನ್ನು ಇಷ್ಟಪಡುವ ನಟಿಯರಲ್ಲಿ ಶ್ರದ್ಧಾ ಕೂಡ ಒಬ್ಬರು. ಹಲವು ದುಬಾರಿ ಕಾರುಗಳನ್ನೂ ಹೊಂದಿದ್ದಾರೆ. ಅಲ್ಲದೇ ನಟಿ ವೀಟ್, ಲಿಪ್ಟನ್, ದಿ ಬಾಡಿ ಶಾಪ್ ಸೇರಿದಂತೆ ಹಲವು ಬ್ರಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ.  123 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿರುವ ಶ್ರದ್ಧಾ ಫೋರ್ಬ್ಸ್ ಟಾಪ್ 100 ಸೆಲೆಬ್ರಿಟಿ ಲಿಸ್ಟ್ ನಲ್ಲಿದ್ದಾರೆ. ಹೀಗೆ ಶ್ರೇಯಸ್ ಹಾಗೂ ಶ್ರದ್ಧಾ ಕರಿಯರ್ ವಿಚಾರದಲ್ಲಿ ಸೌಂಡ್ ಮಾಡುವಾಗ್ಲೇ ಲವ್ ಮ್ಯಾಟರ್ ಹಲ್​ಚಲ್ ಎಬ್ಬಿಸಿದೆ. ಆದ್ರೆ ಪ್ರೀತಿ ಬಗ್ಗೆಯಾಗ್ಲಿ ಅಥವಾ ಡೇಟಿಂಗ್ ವಿಚಾರವಾಗಿಯಾಗ್ಲಿ ಇಬ್ರೂ ಕೂಡ ಸ್ಪಷ್ಟನೆ ನೀಡಿಲ್ಲ. ಇದು ಅಭಿಮಾನಿಗಳಿಗೂ ಕನ್ಪ್ಯೂಷನ್ ಕ್ರಿಯೇಟ್ ಮಾಡಿದೆ.

Shwetha M