ಶ್ರೇಯಸ್ ಗೆ ಶುರು ಅಸಲಿ TASK – ಗಿಲ್, ಕೆಎಲ್ ಇಲ್ಲದೆ ಗೆಲ್ಲಿಸಿಕೊಡ್ತಾರಾ?
T20Iನಲ್ಲೇ ಒದ್ದಾಟ.. ODI ಹೇಗಿರುತ್ತೆ?

ಭಾರತದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಮತ್ತೊಂದ್ಕಡೆ ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರೋ ಏಕದಿನ ಸರಣಿ ಇನ್ನೂ ರಣರೋಚಕವಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಈಗಾಗ್ಲೇ ಮೂರು ಪಂದ್ಯಗಳು ಮುಗಿದಿದ್ದು ನಾಲ್ಕನೇ ಪಂದ್ಯ ನವೆಂಬರ್ 13ಕ್ಕೆ ಬೇ ಓವಲ್ ಮೈದಾನದಲ್ಲಿ ನಡೆಯಲಿದೆ. ಟೀಂ ಇಂಡಿಯಾ ಪಾಲಿಗೆ ನಾಲ್ಕು ಮತ್ತು ಐದನೇ ಪಂದ್ಯಗಳೂ ನಿಜಕ್ಕೂ ಚಾಲೆಂಜಿಂಗ್ ಆಗಲಿವೆ. ಯಾಕಂದ್ರೆ ಕೊನೇ 2 ಪಂದ್ಯಗಳಿಗೆ ಸಪರೇಟ್ ಟೀಂ ಅನೌನ್ಸ್ ಆಗಿದೆ.
ಇದನ್ನೂ ಓದಿ : ವಿಶ್ವಶ್ರೇಷ್ಠ ವಿರಾಟ್ @ 38 – KING ಆಗಿದ್ದೇಗೆ ಕೊಹ್ಲಿ?
ನವೆಂಬರ್ 13 ಮತ್ತು ನವೆಂಬರ್ 15 ರಂದು ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯಲಿರುವ ಸರಣಿಯ ಕೊನೆಯ ಎರಡು ಪಂದ್ಯಗಳು ಭಾರತಕ್ಕೆ ಟಫ್ ಆಗಲಿವೆ. ಯಾಕಂದ್ರೆ ಮೊದಲ 3 ಪಂದ್ಯಗಳಿಗೆ ಶುಭಮನ್ ಗಿಲ್ ನಾಯಕರಾಗಿದ್ದರೆ, ಕೊನೆಯ 2 ಪಂದ್ಯಗಳಲ್ಲಿ ಗಿಲ್ಗೆ ರೆಸ್ಟ್ ನೀಡಿ ಶ್ರೇಯಸ್ ಅಯ್ಯರ್ ಅವರಿಗೆ ನಾಯಕತ್ವ ವಹಿಸಲಾಗಿದೆ. ಹಾಗೇ ಮೊದಲ 3 ಪಂದ್ಯಗಳಲ್ಲಿ ಕೆ.ಎಲ್. ರಾಹುಲ್ ವೈಸ್ ಕ್ಯಾಪ್ಟನ್ ಆಗಿದ್ರೆ ಕೊನೆಯ 2 ಪಂದ್ಯಗಳಿಗೆ ಇಶಾನ್ ಕಿಶನ್ ಉಪನಾಯಕರಾಗಿ ಜವಾಬ್ದಾರಿ ತಗೊಳ್ತಾರೆ. ಹಾಗೇ ಸಾಕಷ್ಟು ಪ್ಲೇಯರ್ಸ್ ಕೂಡ ಇನ್ ಌಂಡ್ ಔಟ್ ಆಗಲಿದ್ದಾರೆ. ಟೆಸ್ಟ್ ಸರಣಿಗೆ ಸಿದ್ಧತೆ ನಡೆಸೋ ಸಲುವಾಗಿ ಇಲ್ಲಿ ಅದಲುಬದಲು ಆಟ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2 ಪಂದ್ಯಗಳ ಅಧಿಕೃತ ಟೆಸ್ಟ್ ಸರಣಿಯು 2026ರ ನವೆಂಬರ್ 19 ರಿಂದ ಡಿಸೆಂಬರ್ 1 ರವರೆಗೆ ನಡೆಯಲಿದೆ. ಈ ಸರಣಿಯು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೈಕಲ್ನಲ್ಲಿ ಬರೋದ್ರಿಂದ ಭಾರತಕ್ಕೆ ಎರಡೂ ಪಂದ್ಯಗಳನ್ನ ಗೆಲ್ಲಲೇಬೇಕಾದ ಒತ್ತಡ ಇದೆ. ಇದೇ ಕಾರಣಕ್ಕೆ ಕೊನೆಯ ಎರಡು ಏಕದಿನ ಪಂದ್ಯಗಳಿಂದ ಕೆಲ ಆಟಗಾರರಿಗೆ ಇಂಜುರಿ ಆಗದಂತೆ ತಡೆಯಲು ರೆಸ್ಟ್ ನೀಡಲಾಗಿದೆ
4 & 5 ಪಂದ್ಯಕ್ಕೆ ಯಾರೆಲ್ಲಾ ಔಟ್?
ಶುಭಮನ್ ಗಿಲ್, ಕೆ.ಎಲ್. ರಾಹುಲ್, ಮತ್ತು ಅನ್ಶುಲ್ ಕಾಂಬೋಜ್
4 & 5ನೇ ಪಂದ್ಯಕ್ಕೆ ಯಾರೆಲ್ಲಾ ಇನ್?
ತಿಲಕ್ ವರ್ಮಾ, ಕುಮಾರ್ ಕುಶಾಗ್ರ, ಯಶ್ ಠಾಕೂರ್
ಹಾಗಂತ ಇಲ್ಲಿ ಭಾರತ ಅಷ್ಟೇ ಅಲ್ಲ ನ್ಯೂಜಿಲೆಂಡ್ ತಂಡ ಕೂಡ ಏಕದಿನ ಸರಣಿಗೆ ಎರಡು ಪ್ರತ್ಯೇಕ ತಂಡಗಳನ್ನು ಅನೌನ್ಸ್ ಮಾಡಿದೆ. ಕೊನೆಯ 2 ಪಂದ್ಯಗಳಿಗೆ ಫಿನ್ ಅಲೆನ್, ಲಾಕಿ ಫರ್ಗುಸನ್ ಮತ್ತು ಟಿಮ್ ಸೈಫರ್ಟ್ ಕಿವೀಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸೋ ಅಲ್ಲಿಗೆ ಎರಡೂ ತಂಡಗಳಲ್ಲೂ ಪ್ಲೇಯಿಂಗ್ 11ನಲ್ಲಿ ಮೇಜರ್ ಬದಲಾವಣೆಗಳೇ ಆಗಲಿವೆ. ಈ ಬದಲಾವಣೆ ಎರಡೂ ತಂಡಗಳಿಗೆ ಚಾಲೆಂಜಿಂಗ್ ಆಗೇ ಇರಲಿದೆ. ಅದ್ರಲ್ಲೂ ಶುಭಮನ್ ಗಿಲ್ ಮತ್ತು ಕೆ.ಎಲ್. ರಾಹುಲ್ ಅವರಂತಹ ಪ್ರಮುಖ ಆಟಗಾರರು ಟೆಸ್ಟ್ ಸರಣಿಗಾಗಿ ತಂಡದಿಂದ ಹೊರಗುಳಿಯುತ್ತಿರುವುದರಿಂದ, ಹೊಸ ಕಾಂಬಿನೇಷನ್ ಲೀಡ್ ಮಾಡೋದು ಅಯ್ಯರ್ ಪಾಲಿಗೆ ಸುಲಭದ ಮಾತಲ್ಲ.
ಶ್ರೇಯಸ್ ಮುಂದಿರೋ ಸವಾಲುಗಳು!
ರೋಹಿತ್ & ಕೊಹ್ಲಿಯಂತಹ ಅನುಭವಿಗಳನ್ನ ಬಳಸಿಕೊಳ್ಳುವ ಪರೀಕ್ಷೆ
ಗಿಲ್, ರಾಹುಲ್ ಇಲ್ಲದ ಟೈಮಲ್ಲಿ ಕಿಶನ್ & ತಿಲಕ್ ಸ್ಲಾಟ್ ನಿರ್ವಹಣೆ
ಕುಮಾರ್ ಕುಶಾಗ್ರ, ಯಶ್ ಠಾಕೂರ್ ಸೇರಿದಂತೆ ಹೊಸಬರ ಅನನುಭವ
ಫಿನ್ ಅಲೆನ್ ಮತ್ತು ಟಿಮ್ ಸೈಫರ್ಟ್ ಕೊನೆಯ 2 ಪಂದ್ಯಗಳಿಗೆ ಎಂಟ್ರಿ
2027ರ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಪಂದ್ಯಗಳನ್ನು ಗೆಲ್ಲುವ ಸವಾಲು
ಕ್ಯಾಪ್ಟನ್ಸಿ ಜೊತೆಗೆ ಬ್ಯಾಟಿಂಗ್ ನಲ್ಲೂ ಅದ್ಭುತ ಪ್ರದರ್ಶನ ನೀಡುವ ಒತ್ತಡ
ಹೀಗೆ ಕೊನೆಯ ಎರಡು ಪಂದ್ಯಗಳಿಗೆ ಟೀಂ ಇಂಡಿಯಾ ಸಾಕಷ್ಟು ವರ್ಕ್ಔಟ್ ಮಾಡ್ಬೇಕಾಗುತ್ತೆ. ಅದೂ ಅಲ್ದೇ 2027ರ ಏಕದಿನ ವಿಶ್ವಕಪ್ಗೆ ಇನ್ನೊಂದು ವರ್ಷ ಕೂಡ ಬಾಕಿ ಇಲ್ಲ. ಇಂಥಾ ಟೈಮಲ್ಲಿ ತಂಡದ ಪ್ರಮುಖ ಆಟಗಾರರ ಕಾಂಬಿನೇಷನ್ ಮತ್ತು ಬ್ಯಾಕಪ್ ಆಪ್ಶನ್ಸ್ ಬಗ್ಗೆ ಒಂದು ಕ್ಲಾರಿಟಿ ಕೂಡ ಸಿಗಲಿದೆ. ಹಾಗೇ ಭಾರತದ ಏಕದಿನ ತಂಡದ ಸ್ಟಾಂಡರ್ಡ್ ಮೇಂಟೇನ್ ಮಾಡಲು ಕೊನೆಯ ಎರಡು ಪಂದ್ಯಗಳ ಗೆಲುವು ಶ್ರೇಯಸ್ ಅಯ್ಯರ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯೂ ಆಗಲಿದೆ. ಟಿ-20ಐ ಫಾರ್ಮೆಟ್ನಲ್ಲಿ ಮೊದಲ ಮೂರು ಪಮದ್ಯಗಳನ್ನ ಗೆಲ್ಲಿಸಿ ತಂಡಕ್ಕೆ ಸರಣಿ ಗೆಲುವು ತಂದುಕೊಟ್ಟಿದ್ದ ಶ್ರೇಯಸ್ ಕೊನೆಯ ಎರಡು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಸೋತು ಕೈಸುಟ್ಟುಕೊಂಡಿದ್ರು. ಹೀಗಾಗಿ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಹೇಗೆ ನಿರ್ವಹಿಸ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ
