IPLನ ಬೆಸ್ಟ್ ಕ್ಯಾಪ್ಟನ್ ಶ್ರೇಯಸ್ – ಜಿಂಬಾಬ್ವೆ ಸರಣಿಗೂ ಭಾರತದ ನಾಯಕ?
ಅಯ್ಯರ್ ಗೆ ಖುಲಾಯಿಸಿತಾ ಅದೃಷ್ಟ?

IPLನ ಬೆಸ್ಟ್ ಕ್ಯಾಪ್ಟನ್ ಶ್ರೇಯಸ್ – ಜಿಂಬಾಬ್ವೆ ಸರಣಿಗೂ ಭಾರತದ ನಾಯಕ?ಅಯ್ಯರ್ ಗೆ ಖುಲಾಯಿಸಿತಾ ಅದೃಷ್ಟ?

ಒಂದು ತಂಡದ ಸೋಲು ಗೆಲುವಿಗೆ ಆಟಗಾರರ ಪ್ರದರ್ಶನ ಎಷ್ಟು ಮುಖ್ಯವೋ ನಾಯಕನ ನಿರ್ಧಾರಗಳೂ ಅಷ್ಟೇ ಮುಖ್ಯ. ರೈಟ್ ಟೈಮಲ್ಲಿ ರೈಟ್ ಡಿಸಿಷನ್ಸ್ ತಗೊಂಡ್ರೆ ಮಾತ್ರವೇ ಮ್ಯಾಚ್​ ಕಂಟ್ರೋಲ್ ಸಿಗೋದು. ಇಲ್ದಿದ್ರೆ ಒನ್ ಸೈಡೆಡ್ ಆಗಿ ಗೆಲ್ಲೋ ಪಂದ್ಯಗಳೂ ಕೈಚೆಲ್ಲಿ ಹೋಗ್ತಾವೆ. ಆಲ್ರೆಡಿ ಈ ಸಲದ ಐಪಿಎಲ್​ನಲ್ಲೇ ನಾವೆಲ್ಲಾ ಅದನ್ನ ಎಕ್ಸ್​ಪೀರಿಯನ್ಸ್​ನ ಮಾಡ್ತಿದ್ದೇವೆ. ಸೋ ಐಪಿಎಲ್​ನಲ್ಲಿ ಒಬ್ಬ ಕ್ಯಾಪ್ಟನ್ ಆಗಿ ಜಾಸ್ತಿ ಸೌಂಡ್ ಮಾಡ್ತಾ ಇರೋದು ಶ್ರೇಯಸ್ ಅಯ್ಯರ್. ಆಟಗಾರನಾಗಿ ಅಷ್ಟೇ ಅಲ್ಲದೆ ನಾಯಕನಾಗಿಯೂ ಸಕ್ಸಸ್​ ಆಗ್ತಿದ್ದಾರೆ.

ಇದನ್ನೂ ಓದಿ : RCB ಟಿಕೆಟ್ಸ್ ಸೋಲ್ಡ್ ಔಟ್ – ಐದೇ ನಿಮಿಷದ ಕರಾಮತ್ತೇನು?

2025ರ ಐಪಿಎಲ್​ನ ಫೈನಲಿಸ್ಟ್ ಟೀಂ ಪಂಜಾಬ್ ಕಿಂಗ್ಸ್ ಈಗಾಗ್ಲೇ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಪಂಜಾಬ್ ಇಮೇಜ್ ಕಂಪ್ಲೀಟ್ ಚೇಂಜ್ ಆಗಿದ್ದು ಸ್ಟ್ರಾಂಗೆಸ್ಟ್ ಟೀಂ ಆಗಿ ಕಾಣ್ತಿದೆ. ನಾಳೆ ಚೆನ್ನೈ ವಿರುದ್ಧ ಚೆಪಾಕ್​ನಲ್ಲಿ 2ನೇ ಪಂದ್ಯ ಆಡಲಿದ್ದು ಸಕ್ಸಸ್​​ಜರ್ನಿಯನ್ನ ಕಂಟಿನ್ಯೂ ಮಾಡೋ ಪ್ಲ್ಯಾನ್​ನಲ್ಲಿದ್ದಾರೆ. ಅತ್ತ ಕಳೆದ ಪಂದ್ಯದಲ್ಲಿ ಹೀನಾಯವಾಗಿ ಸೋತಿರೋ ಚೆನ್ನೈ ತವರಿನಲ್ಲಿ ಸ್ಟ್ರಾಂಗ್ ಕಂ ಬ್ಯಾಕ್​ಗೆ ಕಾಯ್ತಿದೆ. ಌಂಡ್ ಈ ಮ್ಯಾಚಲ್ಲೂ ಒನ್ಸ್ ಅಗೇನ್ ಶ್ರೇಯಸ್ ಅಯ್ಯರ್ ಹೈಲೆಟ್ ಆಗ್ತಿದ್ದಾರೆ. ಅದಕ್ಕೆ ಕಾರಣ ಅವ್ರ ಕ್ವಾಲಿಟಿ ಕ್ಯಾಪ್ಟನ್ಸಿ.

ಐಪಿಎಲ್ ನಲ್ಲಿ 3 ತಂಡಗಳಲ್ಲಿ ಫೈನಲ್ ಗೇರಿಸಿದ ಏಕೈಕ ನಾಯಕ!

ಐಪಿಎಲ್ ಅಂತಾ ಬಂದಾಗ ಶ್ರೇಯಸ್ ಅಯ್ಯರ್ ಮೋಸ್ಟ್ ಸಕ್ಸಸ್​ಫುಲ್ ಕ್ಯಾಪ್ಟನ್ ಆಗಿ ಕಾಣಿಸ್ತಾರೆ. ಮೂರು ವಿಭಿನ್ನ ಐಪಿಎಲ್ ತಂಡಗಳನ್ನು ಫೈನಲ್‌ಗೆ ಕೊಂಡೊಯ್ದ ಏಕೈಕ ನಾಯಕ. 2020 ರಲ್ಲಿ ದೆಹಲಿ ಕ್ಯಾಪಿಟಲ್ಸ್, 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು 2025 ರಲ್ಲಿ ಪಂಜಾಬ್ ಕಿಂಗ್ಸ್. ಕೆಕೆಆರ್ ಕ್ಯಾಪ್ಟನ್ ಆದ್ರೆ ಉಳಿದ 2 ಬಾರಿ ರನ್ನರ್ ಅಪ್ ಆಗಿದ್ದಾರೆ. ಇನ್ನು ನಾಯಕತ್ವದ ಗೆಲುವಿನ ಶೇಕಡಾವಾರು 58.53% ಆಗಿದ್ದು ಐಪಿಎಲ್​ನಲ್ಲಿ ಬೆಸ್ಟ್ ನಂಬರ್ಸ್ ಆಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ಸಿ ( 2018-2020)

2015 ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ಈಗಿನ ಡೆಲ್ಲಿ ಕ್ಯಾಪಿಟಲ್ಸ್​ ಎಂಟ್ರಿ

2015 ರಲ್ಲಿ 439 ರನ್ ಗಳಿಸಿ, ‘ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್’

2018 ರಿಂದ 2020 ರವರೆಗೆ ಅಯ್ಯರ್ ಅವರ ನಾಯಕತ್ವದಲ್ಲಿ  DC ಸ್ಟ್ರಾಂಗ್

2020 ರಲ್ಲಿ ಮೊದಲ ಬಾರಿಗೆ ಫ್ರಾಂಚೈಸಿ ಫೈನಲ್​, ಮುಂಬೈ ವಿರುದ್ಧ ಸೋಲು

2021 ರಲ್ಲಿ ಭುಜದ ಗಾಯದಿಂದಾಗಿ ಅಯ್ಯರ್ ಟೂರ್ನಿಯಿಂದಲೇ ಹೊರಗುಳಿದ್ರು

ಡಿಸಿ ಪರ ಕ್ಯಾಪ್ಟನ್ ಆಗಿ 41 ಪಂದ್ಯ, 23ರಲ್ಲಿ ಗೆಲುವು, 18 ಸೋಲು, 1242 ರನ್ಸ್

 

ಕೊಲ್ಕತ್ತಾ ನೈಟ್ ರೈಡರ್ಸ್ ಕ್ಯಾಪ್ಟನ್ಸಿ ( 2022-2024)

2022ರಲ್ಲಿ ಕೆಕೆಆರ್ ಟೀಂ ಸೇರಿದ ಶ್ರೇಯಸ್ ಕ್ಯಾಪ್ಟನ್ ಆಗಿ ಏಳನೇ ಸ್ಥಾನ

2023ರಲ್ಲಿ ಮತ್ತೆ ಟೂರ್ನಿ ಮಿಸ್, 2024ರಲ್ಲಿ ಕ್ಯಾಪ್ಟನ್ ಆಗಿ ಕಂ ಬ್ಯಾಕ್

ಕೆಕೆಆರ್ ನಾಯಕನಾಗಿ 29 ಪಂದ್ಯ, 17ರಲ್ಲಿ ಗೆದ್ರೆ 11ರಲ್ಲಿ ಸೋಲು,  752 ರನ್ಸ್

 

ಪಂಜಾಬ್ ಕಿಂಗ್ ಕ್ಯಾಪ್ಟನ್ಸಿ ( 2025 ರಿಂದ ಆರಂಭ)

2025ರ ಐಪಿಎಲ್ ​ಗೂ ಮುನ್ನ 26.75 ಕೋಟಿಗೆ ಪಂಜಾಬ್ ಖರೀದಿ ಮಾಡಿತ್ತು.

ನಾಯಕತ್ವದ ಚೊಚ್ಚಲ ಸೀಸನ್​ನಲ್ಲೇ ಪಂಜಾಬ್ ತಂಡವನ್ನ ಫೈನಲ್ ​ಗೇರಿಸಿದ್ರು

ಪಿಬಿಕೆಎಸ್ ನಾಯಕನಾಗಿ ಶ್ರೇಯಸ್ ಅಯ್ಯರ್ 604 ರನ್​ಗಳನ್ನ ಕಲೆ ಹಾಕಿದ್ರು

Shantha Kumari