ವಿಶ್ವಕಪ್‌ನಲ್ಲಿ ಬ್ಯಾಟ್ ಬೀಸುತ್ತಿಲ್ಲ ಶ್ರೇಯಸ್ ಅಯ್ಯರ್ – ಮುಂದಿನ ಪಂದ್ಯಗಳಲ್ಲಿ ಟೀಮ್‌ನಲ್ಲಿ ಅವಕಾಶ ಉಳಿಸಿಕೊಳ್ತಾರಾ?
ಕ್ಯಾಪ್ಟನ್ ರೋಹಿತ್ ಶರ್ಮಾ ಟೀಂ ಇಂಡಿಯಾದ ಬ್ಯಾಟಿಂಗ್ ಪರ್ಫೆಮೆನ್ಸ್ ಅಷ್ಟೊಂದು ಸಮಾಧಾನ ಹೊಂದಿಲ್ಲ. ಶ್ರೇಯಸ್ ಅಯ್ಯರ್ ಈ ವರ್ಲ್ಡ್ಕಪ್ನಲ್ಲಿ ಒಂದೇ ಒಂದು ಮ್ಯಾಚ್ನಲ್ಲಿ ಸ್ಕೋರ್ ಮಾಡಿಲ್ಲ. ಇದು ಕೂಡಾ ನಾಯಕ ರೋಹಿತ್ ಶರ್ಮಾ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೇವಲ ಧೋನಿಯಿಂದಾಗಿ ಮಾತ್ರ ವರ್ಲ್ಡ್‌ಕಪ್ ಗೆದ್ದಿಲ್ಲ..! – ಧೋನಿಗೆ ಮತ್ತೆ ಟಾಂಗ್ ಕೊಟ್ಟ ಗಂಭೀರ್!
ಶ್ರೇಯಸ್ ಅಯ್ಯರ್ ಬ್ಯಾಟಿಂಗ್ಗೆ ಇಳಿದಾಗ ಈತ ಆಡ್ತಾನೆ ಅನ್ನೋ ಕಾನ್ಫಿಡೆನ್ಸ್ ಯಾಕೋ ಟೀಮ್ ಇಂಡಿಯಾಕ್ಕೆ ಬರುತ್ತಿಲ್ಲ. ಇನ್ನು ಸನ್ನಿವೇಶಕ್ಕೆ ಸರಿಯಾಗಿ ಜವಾಬ್ದಾರಿಯುತವಾಗಿ ಶ್ರೇಯಸ್ ಅಯ್ಯರ್ ಆಡುತ್ತಿಲ್ಲ. ಇಂಗ್ಲೆಂಡ್ ವಿರುದ್ಧ ಪಂದ್ಯ ಆಡುವಾಗಲೂ ಅಷ್ಟೇ. ಮೊದಲ ಎರಡು ವಿಕೆಟ್ ಬಿದ್ದಿದ್ರೂ ಶ್ರೇಯಸ್ ಅಯ್ಯರ್ ಅನಗತ್ಯ ಶಾಟ್ ಹೊಡೆಯೋಕೆ ಹೋಗಿ ಔಟ್ ಆದ್ರು. ಎಲ್ಲಾ ಸನ್ನಿವೇಶಗಳನ್ನ ಅಗ್ರೆಸ್ಸಿವ್ ಆಗಿಯೇ ಆಡೋಕೆ ಆಗುವುದಿಲ್ಲ. ರೋಹಿತ್ ಶರ್ಮಾ ಕೂಡ ಅಗ್ರೆಸ್ಸಿವ್ ಆಗಿಯೇ ಬ್ಯಾಟಿಂಗ್ ಮಾಡ್ತಿದ್ದಾರೆ. ಹಾಗಂತಾ ಎಲ್ಲಾ ಬಾಲ್ಗಳಿಗೂ ಬೇಕಾಬಿಟ್ಟಿ ಬ್ಯಾಟ್ ಬೀಸಲ್ಲ. ಟೈಮಿಂಗ್ ನೋಡ್ಕೊಂಡು ಆಡ್ತಾರೆ. ಶ್ರೇಯಸ್ ಅಯ್ಯರ್ ನಿರಂತರವಾಗಿ ಫೇಲ್ ಆಗ್ತಿರೋದ್ರಿಂದ ಸಹಜವಾಗಿಯೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮೇಲೆ ಪ್ರೆಷರ್ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಶ್ರೇಯಸ್ ಟೀಂನಿಂದ ಡ್ರಾಪ್ ಆದರೂ ಆಶ್ಚರ್ಯ ಇಲ್ಲ. ಶ್ರೇಯಸ್ ಬದಲಿಗೆ ಇಶಾನ್ ಕಿಶನ್ಗೆ ಚಾನ್ಸ್ ಸಿಕ್ಕರೂ ಸಿಗಬಹುದು. ಇನ್ನೊಂದು ಆಪ್ಷನ್ ಏನಂದರೆ ಸೂರ್ಯಕುಮಾರ್ ಯಾದವ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸಬೇಕು. ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ವರ್ಲ್ಡ್‌ಕಪ್ ಆರಂಭವಾಗುವ ಮುನ್ನವೇ ಈ ಸಲಹೆ ನೀಡುತ್ತಲೇ ಇದ್ದಾರೆ. ಸೂರ್ಯಕುಮಾರ್ 4ನೇ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇದೆ. ಜವಾಬ್ದಾರಿ ತಗೊಂಡು ಆಡುತ್ತಾರೆ. ಹೀಗಾಗಿ ಸೂರ್ಯಕುಮಾರ್ರನ್ನ ಪುಶ್ ಮಾಡಬಹುದು. ಇಲ್ಲವಾದಲ್ಲಿ ಕೆಎಲ್ ರಾಹುಲ್ರನ್ನ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿ, ಸೂರ್ಯ ಕುಮಾರ್ ಅವರನ್ನು 5ನೇ ಆರ್ಡರ್ನಲ್ಲಿ ಬ್ಯಾಟಿಂಗ್ಗೆ ಇಳಿಸಬೇಕು. ಈ ಆಪ್ಷನ್ ಕೂಡ ಇದೆ. ಹಾಗೆಯೇ ಮುಂದಿನ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಕೂಡ ಕಮ್ಬ್ಯಾಕ್ ಮಾಡುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ಟೀಂನಲ್ಲಿ ಬೇಕೇಬೇಕು. ಪಾಂಡ್ಯ ಇದ್ದರೆ ಒಬ್ಬ ಎಕ್ಸ್ಟ್ರಾ ಬ್ಯಾಟ್ಸ್ಮನ್ ಜೊತೆಗೆ ಪೇಸ್ ಬೌಲರ್ ಕೂಡ ಸಿಕ್ಕಂತಾಗುತ್ತೆ. ಇಂಗ್ಲೆಂಡ್ ವಿರುದ್ಧದ ಮ್ಯಾಚ್ನಲ್ಲಿ ಬ್ಯಾಟಿಂಗ್ ವೇಳೆ ಹಾರ್ದಿಕ್ ಪಾಂಡ್ಯ ಇರ್ಬೇಕಿತ್ತು ಅಂತಾ ಅನ್ನಿಸಿರೋದಂತೂ ಸುಳ್ಳಲ್ಲ.