4ನೇ ಮ್ಯಾಚ್ ನಲ್ಲಿ 300+ ರನ್ಸ್? – ಬ್ಯಾಟರ್ ಗಳ ಸ್ವರ್ಗ ಹೈದರಾಬಾದ್
ಅಭಿ & ಕಿಶನ್ MAGIC ಪಕ್ಕಾ!

4ನೇ ಮ್ಯಾಚ್ ನಲ್ಲಿ 300+ ರನ್ಸ್? – ಬ್ಯಾಟರ್ ಗಳ ಸ್ವರ್ಗ ಹೈದರಾಬಾದ್ಅಭಿ & ಕಿಶನ್ MAGIC ಪಕ್ಕಾ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ವೈಟ್ ಬಾಲ್ ಸಿರೀಸ್​ನಲ್ಲಿ ಬ್ಯಾಟರ್​ಗಳದ್ದೇ ದರ್ಬಾರ್.. ಏಕದಿನ ಮಾದರಿಯ ಸರಣಿಯಲ್ಲೂ ಹಾಗೇ ಆಗಿತ್ತು. ಈಗ ಟಿ-20ಐ ಮಾದರಿಯಲ್ಲೂ ಹಾಗೇ ಆಗ್ತಿದೆ. ಸಿಕ್ಸ್, ಫೋರ್​ಗಳ ಸುರಿಮಳೆಯಾಗ್ತಿದೆ. 200+ ಟಾರ್ಗೆಟ್, ಚೇಸಿಂಗ್, ಡಿಫೆನ್ಸ್ ಹೀಗೆ ಎಲ್ಲಾ ಡ್ರಾಮಾಗಳೂ ಇವೆ. ಆದ್ರೀಗ ನಾಲ್ಕನೇ ಪಂದ್ಯ ನಡೆಯಲಿರೋ ಹೈದ್ರಾಬಾದ್ ಪಿಚ್ ಬ್ಯಾಟರ್​ಗಳ ಸ್ವರ್ಗವಾಗಿದ್ದು ಫಸ್ಟ್ ಇನ್ನಿಂಗ್ಸ್​ನಲ್ಲಿ 300+ ಸ್ಕೋರ್ ಪಕ್ಕಾ ಅಂತಾನೇ ಪ್ರೆಡಿಕ್ಟ್ ಮಾಡಲಾಗ್ತಿದೆ. ಯಾಕಂದ್ರೆ ಈ ಪಿಚ್​ನಲ್ಲಿ ಟೀಂ ಇಂಡಿಯಾ ಇತಿಹಾಸವನ್ನೇ ಸೃಷ್ಟಿಸಿದೆ.

ಇದನ್ನೂ ಓದಿ : AUS ಕಳ್ಳಾಟಕ್ಕೆ SA ಕೌಂಟರ್! – ಬಾಲ್ ಟ್ಯಾಂಪರಿಂಗ್ ಕಿಡಿ ಆರಿಲ್ವಾ?

ಐದು ಪಂದ್ಯಗಳ ಟಿ-20ಐ ಸರಣಿಯಲ್ಲಿ ಸದ್ಯ ಭಾರತ 2-1ರಿಂದ ಲೀಡ್​ನಲ್ಲಿದೆ. ನಾಲ್ಕನೇ ಪಂದ್ಯ ಅಕ್ಟೋಬರ್ 14ಕ್ಕೆ ಅಂದ್ರೆ ಬುಧವಾರ ಹೈದ್ರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಇದೇ ಪಿಚ್ ಮತ್ತೊಮ್ಮೆ ಬ್ಯಾಟಿಂಗ್​​ನಲ್ಲಿ ರನ್ಸ್ ಸುನಾಮಿ ಎಬ್ಬಿಸೋ ಚಾನ್ಸಸ್ ಇದೆ. ಹಿಂದಿನ ಪಂದ್ಯಗಳಲ್ಲಿ ಭಾರತದ ಆಟಗಾರರು ಇಲ್ಲಿ ಪವರ್ ಹಿಟ್ಟಿಂಗ್ ಪ್ರದರ್ಶನ ನೀಡಿರೋದ್ರಿಂದ ಈ ಸಲ ಫಸ್ಟ್ ಇನ್ನಿಂಗ್ಸ್ ನಲ್ಲಿ 300+ ರನ್ಸ್ ಗ್ಯಾರಂಟಿ ಅಂತಾ ಚರ್ಚೆ ಶುರುವಾಗಿದೆ. ಯಾಕಂದ್ರೆ ಭಾರತ ಮತ್ತು ವಿಂಡೀಸ್ ನಡುವಿನ ವೈಟ್ ಬಾಲ್ ಸಿರೀಸ್​ ಹಾಗೇ ನಡೆದಿದೆ.

ಏಕದಿನದಲ್ಲಿ ರನ್ಸ್ ಸುನಾಮಿ.. ಟಿ-20ಐನಲ್ಲೂ ಬ್ಯಾಟರ್ಸ್ ಹವಾ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದ್ಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆದಿತ್ತು. ಮೂರು ಪಂದ್ಯಗಳಲ್ಲೂ ಬ್ಯಾಟರ್​ಗಳೇ ಮೆರೆದಾಡಿದ್ರು. ಮೊದಲ ಮ್ಯಾಚಲ್ಲಿ ವಿಂಡೀಸ್ ಫಸ್ಟ್ ಬ್ಯಾಟಿಂಗ್ ಮಾಡಿ 297 ರನ್ಸ್ ಕಲೆ ಹಾಕಿದ್ರೆ ಭಾರತ 41ನೇ ಓವರ್​ನಲ್ಲೇ ಟಾರ್ಗೆಟ್ ರೀಚ್ ಆಗಿತ್ತು. ಎರಡನೇ ಪಂದ್ಯದಲ್ಲಿ ವಿಂಡೀಸ್ ಫಸ್ಟ್ ಬ್ಯಾಟಿಂಗ್ ಮಾಡಿ 405 ರನ್​ಗಳ ಬಿಗ್ ಟಾರ್ಗೆಟ್ ಸೆಟ್ ಮಾಡಿತ್ತು. ಆದ್ರೆ 44ನೇ ಓವರ್​ನಲ್ಲೇ ಭಾರತ ಈಸಿಯಾಗಿ ಪಂದ್ಯ ಗೆದ್ದಿತ್ತು. ಸರಣಿಯಕೊನೇ ಪಂದ್ಯದಲ್ಲಿ ಭಾರತ ಫಸ್ಟ್ ಬ್ಯಾಟಿಂಗ್ ಮಾಡಿ 351 ರನ್ಸ್ ಕಲೆ ಹಾಕಿದ್ರೆ ವಿಂಡೀಸ್ ಪಡೆ 49ನೇ ಓವರ್​ನಲ್ಲೇ ಗೆದ್ದಿತ್ತು. ಮೂರೂ ಪಂದ್ಯಗಳಲ್ಲೂ ಚೇಸಿಂಗ್ ತಂಡವೇ ವಿನ್ ಆಗಿತ್ತು. ನೆಕ್ಸ್​ಟ್ ಟಿ-20ಐ ಸರಣಿಯಲ್ಲೂ ಹಾಗೇ. ಫಸ್ಟ್ ಮ್ಯಾಚಲ್ಲಿ ವಿಂಡೀಸ್ ಪಡೆ 171 ರನ್​ಗಳಿಗೆ ಆಲ್​ಔಟ್ ಆಗಿತ್ತು. ಚೇಸಿಂಗ್​ಗೆ ಇಳಿದ ಭಾರತ 15ನೇ ಓವರ್​ನಲ್ಲೇ ಮ್ಯಾಚ್ ವಿನ್ ಆಗಿತ್ತು. ಇನ್ನು ರಾಂಚಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ಫಸ್ಟ್ ಬ್ಯಾಟಿಂಗ್ ಮಾಡಿ 250 ರನ್ಸ್ ಟಾರ್ಗೆಟ್ ಸೆಟ್ ಮಾಡಿತ್ತು. ಆದ್ರೆ ವಿಂಡೀಸ್ ಪ್ಲೇಯರ್ಸ್ ಇನ್ನೂ 9 ಬಾಲ್​ಗಳು ಬಾಕಿ ಇದ್ದಂತೆಯೇ ಟಾರ್ಗೆಟ್ ರೀಚ್ ಆಗಿದ್ರು. ಇನ್ನು ಇಂದೋರ್​ನಲ್ಲಿ ನಡೆದ 3ನೇ ಮ್ಯಾಚಲ್ಲಿ ಟಾಸ್ ಸೋತ ಭಾರತ 224 ರನ್​​ಗಳ ಗುರಿ ನೀಡಿತ್ತು. ಆದ್ರೆ ವಿಂಡೀಸ್ ಬ್ಯಾಟರ್ಸ್ 207 ರನ್​ ಕಲೆ ಹಾಕಿ 14 ರನ್​ಗಳಿಂದ ಸೋತ್ರು. ಸೋ ಅಲ್ಲಿಗೆ ಸತತ 5 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ್ದ ತಂಡವೇ ವಿನ್ ಆಗಿದೆ. ಇಂದೋರ್​ನಲ್ಲಿ ಮಾತ್ರ ಭಾರತ ಡಿಫೆನ್ಸ್ ಮಾಡಿಕೊಂಡಿದೆ. ಮೋಸ್ಟ್ ಆಫ್ ದಿ ಟೈಂ ಬ್ಯಾಟರ್​ಗಳೇ ಗೇಮ್ ಚೇಂಜರ್ಸ್ ಆಗಿ ಪಂದ್ಯಗಳನ್ನ ವಿನ್ ಮಾಡಿಸಿದ್ದಾರೆ. ಸೋ ಈಗ ಇರುವಂಥ ಪ್ರಶ್ನೆ ಅಂದ್ರೆ ನಾಲ್ಕನೇ ಮ್ಯಾಚಲ್ಲೂ ಬೌಲರ್​ಗಳ ಬೆವರಿಳಿಸ್ತಾರಾ ಅನ್ನೋದು. ಯಾಕಂದ್ರೆ ಪಂದ್ಯ ನಡೆಯಲಿರೋ ರಾಜೀವ್​ಗಾಂಧಿ ಸ್ಟೇಡಿಯಂ ಪಿಚ್ಚೇ ಹಾಗಿದೆ.

2024ರಲ್ಲಿ ಇದೇ ಪಿಚ್ ನಲ್ಲಿ ಇತಿಹಾಸ ಸೃಷ್ಟಿಸಿದ್ದ ಭಾರತ!

ಹೈದರಾಬಾದ್‌ನ ಈ ಪಿಚ್ ಸಾಮಾನ್ಯವಾಗಿ ಬ್ಯಾಟರ್ಸ್ ಫ್ರೆಂಡ್ಲಿಯಾಗಿದೆ. ಇಲ್ಲಿನ ಫ್ಲಾಟ್ ಟ್ರ್ಯಾಕ್ ಮತ್ತು ಔಟ್‌ಫೀಲ್ಡ್‌ ನಲ್ಲಿ ಪೇಸ್ ಜಾಸ್ತಿ ಇರೋದ್ರಿಂದ ರನ್ಸ್ ಜಾಸ್ತಿಯಾಗುತ್ತೆ. ರಾಜೀವ್​ಗಾಂಧಿ ಮೈದಾನದಲ್ಲಿ ಭಾರತ ಅದ್ರಲ್ಲೂ ಟಿ-20ಐ ಫಾರ್ಮೆಟ್​ನಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ. ODI ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲೂ ಹಲವು ದೊಡ್ಡ ಇನ್ನಿಂಗ್ಸ್‌ಗಳನ್ನು ಆಡಿದೆ.  2024ರ ಅಕ್ಟೋಬರ್ 12ರಂದು ಅಂದ್ರೆ ಇದೇ ದಿನ ಬಾಂಗ್ಲಾದೇಶ ವಿರುದ್ಧ ಭಾರತ 297 ರನ್ ಗಳಿಸಿತು. 3ನೇ ಟಿ-20ಐ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಭಾರತದ ಪರ ಸಂಜು ಸ್ಯಾಮ್ಸನ್ 111 ರನ್ಸ್ ಗಳಿಸಿದ್ರೆ ಸೂರ್ಯಕುಮಾರ್ ಯಾದವ್ 75, ರಿಯಾನ್ ಪರಾಗ್ 34, ಹಾರ್ದಿಕ್ ಪಾಂಡ್ಯ 47 ರನ್ಸ್ ಮೂಲಕ 6 ವಿಕೆಟ್ ನಷ್ಟಕ್ಕೆ 297 ರನ್ಸ್ ಸ್ಕೋರ್ ಮಾಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ 164 ರನ್ಸ್ ಗಳಿಸಲಷ್ಟೇ ಸಾಧ್ಯವಾಗಿ 133 ರನ್​ಗಳ ಬಿಗ್ ಮಾರ್ಜಿನ್​ನಿಂದ ಭಾರತ ಈ ಪಂದ್ಯದಲ್ಲಿ ಗೆದ್ದು ಬೀಗಿತ್ತು. ಪ್ರಸ್ತುತ ಟಿ20 ಸರಣಿಯಲ್ಲಿ ಭಾರತದ ಬ್ಯಾಟಿಂಗ್ ಅತ್ಯಂತ ಭರ್ಜರಿ ಫಾರ್ಮ್‌ನಲ್ಲಿದೆ. ರಾಂಚಿಯಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ 249 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದರೆ, ಇಂದೋರ್‌ನಲ್ಲಿ ನಡೆದ 3ನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನಿಂದ 223 ರನ್ ಗಳಿಸಿ ಜಯಗಳಿಸಿದೆ. ಅದೂ ಅಲ್ದೇ ಈ ಮೈದಾನದಲ್ಲಿ ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಬೀಳೋದ್ರಿಂದ ಟಾಸ್ ಗೆದ್ದ ತಂಡಗಳು ಮೊದಲು ಬೌಲಿಂಗ್ ಮಾಡಿ ಚೇಸಿಂಗ್ ಮಾಡೋದನ್ನೇ ಜಾಸ್ತಿ ಚೂಸ್ ಮಾಡಿಕೊಳ್ತಾರೆ. ಹೀಗಾಗಿ ಈ ಸಲ ಹೈದ್ರಾಬಾದ್ ಪಿಚ್​ನಲ್ಲಿ ಯಾರೇ ಫಸ್ಟ್ ಬ್ಯಾಟಿಂಗ್ ಮಾಡಿದ್ರೂ 300+ ಸ್ಕೋರ್ಸ್ ಪಕ್ಕಾ ಅಂತಾ ಪ್ರೆಡಿಕ್ಟ್ ಮಾಡಲಾಗ್ತಿದೆ. ಒಂದ್ಕಡೆ ಭಾರತದ ಬ್ಯಾಟಿಂಗ್ ಲೈನಪ್ ಚೆನ್ನಾಗಿದೆ. ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ ಎಸ್​ಆರ್​ಹೆಚ್ ಪರ ಆಡೋದ್ರಿಂದ ಈ ಪಿಚ್​ನಲ್ಲಿ ಒಳ್ಳೆ ಪ್ರದರ್ಶನ ನಿರೀಕ್ಷೆ ಮಾಡ್ಬೋದು. ವಿಂಡೀಸ್ ಪ್ಲೇಯರ್ಸ್ ಕೂಡ ಪವರ್ ಹಿಟ್ಟರ್ಸ್ ಇರೋದ್ರಿಂದ ನಾಲ್ಕನೇ ಪಂದ್ಯದಲ್ಲೂ ಬ್ಯಾಟಿಂಗ್ ಧಮಾಕ ಪಕ್ಕಾ ಇದೆ.

Shantha Kumari

Leave a Reply

Your email address will not be published. Required fields are marked *