ಪಂಜಾಬ್ ಪಂಚ್.. ಮುಂಬೈ ಕೋಟೆ ಛಿದ್ರ – ಸೂಪರ್ ಸ್ಟಾರ್ಸ್ ನಂಬಿ ಕೆಟ್ಟ MI
ಶ್ರೇಯಸ್ ಅಯ್ಯರ್ ನಡೆದಿದ್ದೇ ದಾರಿ

ಪಂಜಾಬ್ ಪಂಚ್.. ಮುಂಬೈ ಕೋಟೆ ಛಿದ್ರ – ಸೂಪರ್ ಸ್ಟಾರ್ಸ್ ನಂಬಿ ಕೆಟ್ಟ MIಶ್ರೇಯಸ್ ಅಯ್ಯರ್ ನಡೆದಿದ್ದೇ ದಾರಿ

ಸ್ಟಾರ್ ಆಟಗಾರರೇ ತುಂಬಿರೋ ಮುಂಬೈ.. ಹೊಸಬರ ಪಡೆ ಕಟ್ಟಿರೋ ಪಂಜಾಬ್.. ಐಪಿಎಲ್​ನಲ್ಲಿ 5 ಸಲ ಕಪ್ ಗೆದ್ದು ಬಲಿಷ್ಠ ತಂಡವಾಗಿರೋ ಮುಂಬೈ ಇಂಡಿಯನ್ಸ್ ಈ ಸೀಸನ್​ನಲ್ಲಿ ಸೋಲುಗಳ ಸುಳಿಯಲ್ಲೇ ಬಿದ್ದು ಒದ್ದಾಡ್ತಿದೆ. ಟೀಂ ಇಂಡಿಯಾದ ಅರ್ಧಕ್ಕರ್ದ ಪ್ಲೇಯರ್ಸ್ ಗೆದ್ರೂ ಗೆಲ್ಲೋಕಾಗ್ತಿಲ್ಲ. ಅದ್ರಲ್ಲೂ ಪಂಜಾಬ್ ಎದುರು ಮತ್ತೊಂದು ಹೀನಾಯ ಸೋಲು. ಶ್ರೇಯಸ್ ಅಯ್ಯರ್ ಈಗ ನಡೆದಿದ್ದೇ ದಾರಿ ಎನ್ನುವಂತಾಗಿದೆ.

ಇದನ್ನೂ ಓದಿ : KING ಬಿಚ್ಚಿಟ್ಟ ರಹಸ್ಯವೇನು? – ಚಿನ್ನಸ್ವಾಮಿಯಲ್ಲಿ ಮುಟ್ಟಿದ್ದೆಲ್ಲಾ ಚಿನ್ನನಾ?

ಮುಂಬೈನ ವಾಂಖೆಡೆ ಸ್ಟೇಡಿಯಂ ಎಂಐ ಪಾಲಿಗೆ ಭದ್ರಕೋಟೆ. ಆದ್ರೆ ಈಗ ಆ ಭದ್ರಕೋಟೆ ಛಿದ್ರ ಛಿದ್ರವಾಗಿದೆ. ಪಂಜಾಬ್ ಕಿಂಗ್ಸ್ ಕೂಡ ಸೋಲಿನ ಶಾಕ್ ಕೊಟ್ಟಿದ್ದಾರೆ. ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಮುಂಬೈ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಕರೆದ್ರು. ಆದ್ರೆ ಮತ್ತೆ ಬ್ಯಾಟಿಂಗ್ ಫೇಲ್ಯೂರ್. ಈ ವೇಳೆ ಕ್ವಿಂಟನ್ ಡಿ ಕಾಕ್ ಮತ್ತು ನಮನ್ ಧೀರ್ ಪಂಜಾಬ್‌ಗೆ ಶತಕದ ಜೊತೆಯಾಟವಾಡಿದ್ರು. ನಮನ್ ಧೀರ್ 50 ರನ್ ಗಳಿಸಿದ್ರೆ  ಡಿ ಕಾಕ್  60 ಎಸೆತಗಳಲ್ಲಿ 112 ರನ್ ಗಳಿಸಿದ್ರು. ಆ ನಂತ್ರ ಮತ್ತೆ ಬೇರೆಯವ್ರಿಂದ ಸಾಥ್ ಸಿಗ್ಲಿಲ್ಲ. 195 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ 16.3 ಓವರ್​ನಲ್ಲೇ ಗೆದ್ದು ಬೀಗಿದ್ರು.

ಗೆಲ್ಲೋದನ್ನೇ ಮರೆತ ಮುಂಬೈ!

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಗೆ ಕೈಕೊಟ್ಟ ರಿಕಲ್ಟನ್, ಸೂರ್ಯ

ಕ್ವಿಂಟನ್ ಡಿಕಾಕ್ ಏಕಾಂಗಿ ಹೋರಾಟ ಶತಕ, ನಮನ್ ಅರ್ಧಶತಕ

ಶ್ರೇಯಸ್ ಅಯ್ಯರ್ ಸೂಪರ್ ಮ್ಯಾನ್ ಕ್ಯಾಚ್.. ಫೀಲ್ಡಿಂಗ್ ಗುಡ್

ಪಂಜಾಬ್ ಪರ ಅರ್ಶದೀಪ್ ಸಿಂಗ್ ಫಾರ್ಮ್ 22 ರನ್ಸ್.. 3 ವಿಕೆಟ್

ಟಾರ್ಗೆಟ್ ನೋಡಿದಾಗ್ಲೇ ಪಂಜಾಬ್ ಎಲ್ಲಿಯೂ ಸ್ಟ್ರಗಲ್ ಪಡಲಿಲ್ಲ

ಫಸ್ಟ್ ವಿಕೆಟ್ ಬೇಗ ಬಿದ್ರೂ ಶ್ರೇಯಸ್, ಪ್ರಭ್ ಸಿಮ್ರಾನ್ ಜೊತೆಯಾಟ

ಜಸ್ಪ್ರೀತ್ ಬುಮ್ರಾ ಈ ಸೀಸನ್ ಒಂದೂ ವಿಕೆಟ್ ಪಡೆದಿಲ್ಲ

ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ತೀರಾ ಕಳಪೆ.. ಕ್ಯಾಚ್ ಮಿಸ್

ಸೂಪರ್ ಸ್ಟಾರ್ಸ್ ಅಂತಾ ಹಳೇ ಹುಲಿಗಳನ್ನೇ ನಂಬಿರೋ ಮುಂಬೈ

ಮಿಡ್ಲ್ ಓವರ್ಸ್ ಈ ಸೀಸನ್ ನಲ್ಲಿ ಹೈಯೆಸ್ಟ್ ರನ್ಸ್ ಕೊಟ್ಟಿರೋ ಟೀಂ

ಮುಂಬೈ ಆಡಿರುವ 5 ಪಂದ್ಯಗಳಲ್ಲಿ 4 ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 9 ಅಂಕಗಳೊಂದಿಗೆ ಪಂಜಾಬ್ ಪಡೆ ಟಾಪ್ 1 ಸ್ಥಾನದಲ್ಲಿದೆ. ಸದ್ಯಕ್ಕೆ ಈ ಸೀಸನ್​ನ ಅನ್​ಬೀಟನ್ ಟೀಂ ಅಂದ್ರೆ ಅದು ಪಂಜಾಬ್ ಮಾತ್ರನೇ. ಶ್ರೇಯಸ್ ಆಟ ಮತ್ತು ಕ್ಯಾಪ್ಟನ್ಸಿಯನ್ನ ನಿಜಕ್ಕೂ ಅಪ್ರಿಶಿಯೇಟ್ ಮಾಡ್ಲೇಬೇಕು.

Shantha Kumari