ಕೋಚ್ & ಕ್ಯಾಪ್ಟನ್ COLD WAR – ಶ್ರೇಯಸ್-ಗಂಭೀರ್ ಟೀಂ ಮುಗಿಸಿದ್ರಾ?
IPL ಜಗಳ ಭಾರತಕ್ಕೂ ಪೆಟ್ಟು ಕೊಡುತ್ತಾ?

ಬಲಿಷ್ಠ ಇಂಗ್ಲೆಂಡ್ ಅಲ್ಲ.. ಪವರ್ಫುಲ್ ಆಸ್ಟ್ರೇಲಿಯಾನೂ ಅಲ್ಲ.. ಹೋಗ್ಲಿ ದೈತ್ಯ ದಾಂಡಿಗರ ವೆಸ್ಟ್ ಇಂಡೀಸ್ ಮೊದ್ಲೇ ಅಲ್ಲ. ಕ್ರಿಕೆಟ್ ನಲ್ಲಿ ಶಿಶು.. ವರ್ಲ್ಡ್ ಕ್ರಿಕೆಟ್ನಲ್ಲಿ ಅಂಬೆಗಾಲಿಡ್ತಿರೋ ಐರ್ಲೆಂಡ್ ವಿರುದ್ಧ ಸತತ ಎರಡು ಬಾರಿಯ ವಿಶ್ವಚಾಂಪಿಯನ್ ಟೀಂ, ಟಿ20ಐ ಫಾರ್ಮೆಟ್ನ ನಂಬರ್ 1 ತಂಡವಾಗಿರೋ ಭಾರತ ಸೋಲುತ್ತೆ ಅಂತಾನೇ ಯಾರೂ ಇಮ್ಯಾಜಿನ್ ಮಾಡಿರಲಿಲ್ಲ. ಆದ್ರೆ ಬ್ಯಾಕ್ ಟು ಬ್ಯಾಕ್ ಎರಡೂ ಪಂದ್ಯಗಳಲ್ಲೂ ಸೋತು ಕ್ಲೀನ್ ಸ್ವೀಪ್ ಆಗಿದ್ದಾರೆ. ಸತತ 10 ಪಂದ್ಯಗಳ ವಿನ್ನಿಂಗ್ ಸ್ಟ್ರೀಕ್ಗೆ ಬ್ರೇಕ್ ಬಿದ್ದಿದೆ. ಅಷ್ಟಕ್ಕೂ ಐರಿಷ್ ಪಡೆ ವಿರುದ್ಧ ಭಾರತದ ಸೋಲಿಗೆ ಕಾರಣ ಏನು ಅಂತಾ ತಡಕಾಡಿದ್ರೆ ಅಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ನ್ಯೂ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ನಡುವಿನ ಕೋಲ್ಡ್ ವಾರ್ ಅನ್ನೋ ಉತ್ತರ ಸಿಗ್ತಿದೆ. ಐಪಿಎಲ್ನಲ್ಲಿನ ಜಗಳ ಭಾರತ ತಂಡದಲ್ಲೂ ಹೊಡೆತ ನೀಡ್ತಿದೆ.
ಇದನ್ನೂ ಓದಿ : ಸೂರ್ಯವಂಶಿಗೆ ಅಪ್ಪನೇ ಆಕಾಶ – ತಂದೆ ತ್ಯಾಗದಿಂದಲೇ ವೈಭವ್ಗೆ ಶಕ್ತಿ
ಕಳೆದ ಎರಡೂವರೆ ವರ್ಷಗಳಿಂದ ಟಿ-20ಐ ಫಾರ್ಮೆಟ್ನಲ್ಲಿ ಸೋಲನ್ನೇ ಕಾಣದ ಭಾರತ ಐರ್ಲೆಂಡ್ ವಿರುದ್ಧ ಸತತ ಎರಡು ಪಂದ್ಯಗಳನ್ನ ಸೋತು ವೈಟ್ ವಾಷ್ ಆಗಿದೆ. ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿ ಬಳಿಕ ತಂಡದ ಚುಕ್ಕಾಣಿ ಹಿಡಿದ ಶ್ರೇಯಸ್ ಅಯ್ಯರ್ ಹೀನಾಯ ಸೋಲಿನೊಂದಿಗೆ ತಮ್ಮ ಕ್ಯಾಪ್ಟನ್ಸಿ ಜರ್ನಿ ಸ್ಟಾರ್ಟ್ ಮಾಡಿದ್ದಾರೆ. ಭಾರತದ ಈ ಸರಣಿ ಸೋಲು ವಿಶ್ವಮಟ್ಟದಲ್ಲಿ ಟ್ರೋಲ್ ಆಗ್ತಿದೆ. ಅದ್ರಲ್ಲೂ ಗಂಭೀರ್ ತಮ್ಮ ಸ್ವಾರ್ಥಕ್ಕೋಸ್ಕರ ತಂಡವನ್ನ ಹಾಳು ಮಾಡ್ತಿದ್ದಾರೆ ಅನ್ನೋ ಗಂಭೀರ ಆರೋಪಗಳೂ ಇವೆ. ಹಾಗೇ ಭಾರತ ತಂಡದ ಹೀನಾಯ ಪ್ರದರ್ಶನಕ್ಕೆ ಇಬ್ಬರ ನಡುವಿನ ಐಪಿಎಲ್ ಜಗಳವೇ ಕಾರಣ ಅನ್ನೋ ಚರ್ಚೆಯೂ ಇದೆ.
ಐಪಿಎಲ್ ವೇಳೆ ಕೆಕೆಆರ್ ನಲ್ಲಿ ಕ್ಲಾಶ್.. ಈಗ ಬಿಸಿಸಿಐಗೂ ಎಫೆಕ್ಟ್!
ಗೌತಮ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಎಲ್ಲವೂ ಚೆನ್ನಾಗಿಲ್ಲ ಅನ್ನೋದು ಕಳೆದ 2 ವರ್ಷಗಳಿಂದಲೂ ಚರ್ಚೆಯಾಗ್ತಿದೆ. 2024ರ ಐಪಿಎಲ್ ಬಳಿಕ ಇಬ್ಬರ ನಡುವೆ ಮನಸ್ತಾಪ ಮೂಡಿತ್ತು. 2024ರಲ್ಲಿ ಶ್ರೇಯಸ್ ಅಯ್ಯರ್ ಕೆಕೆಆರ್ ಕ್ಯಾಪ್ಟನ್ ಆಗಿದ್ರು. ಗೌತಮ್ ಗಂಭೀರ್ ಮೆಂಟರ್ ಆಗಿದ್ರು. ಈ ವೇಳೆ ಕೊಲ್ಕತ್ತಾ ಚಾಂಪಿಯನ್ ಪಟ್ಟಕ್ಕೂ ಏರಿತ್ತು. ಆದ್ರೆ ಆಮೇಲೆ ನೋಡಿ ಕೋಲ್ಡ್ ವಾರ್ ಸ್ಟಾರ್ಟ್ ಆಗಿತ್ತು. ಗೌತಮ್ ಗಂಭೀರ್ ಕೊಲ್ಕತ್ತಾ ಟ್ರೋಫಿ ಗೆಲ್ಲೋಕೆ ತಾನೊಬ್ಬನೇ ಕಾರಣ ಅನ್ನೋ ಥರ ತಮ್ಮನ್ನ ತಾವು ಪೋಟ್ರೆ ಮಾಡಿಕೊಳ್ಳೋಕೆ ಸ್ಟಾರ್ಟ್ ಮಾಡ್ತಾರೆ. ಆದ್ರೆ ಇದ್ರಿಂದ ನಾಯಕನಾಗಿದ್ದ ಶ್ರೇಯಸ್ ಅಯ್ಯರ್ ಗೆ ಸ್ವಲ್ಪ ಹರ್ಟ್ ಆಗುತ್ತೆ. ಕಪ್ ಗೆಲ್ಲೋದ್ರಲ್ಲಿ ನನ್ನ ಪಾತ್ರವೂ ಇದೆ. ನನಗೂ ಕ್ರೆಡಿಟ್ ಬೇಕಿತ್ತು ಅನ್ನೋ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹುಟ್ಕೊಳ್ಳುತ್ತೆ. ಆನಂತ್ರದಲ್ಲಿ ಕೊಲ್ಕತ್ತಾ ತಂಡವನ್ನೇ ಬಿಟ್ಟು ಪಂಜಾಬ್ ಸೇರಿಕೊಳ್ತಾರೆ. 2025ರಲ್ಲಿ ಪಂಜಾಬ್ ತಂಡವನ್ನ ಫೈನಲ್ಗೆ ಕೊಂಡೊಯ್ದಿದ್ದು, 2026ರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಕ್ಕೆ ಶ್ರೇಯಸ್ ಗೆ ಟಿ-20ಐ ಕ್ಯಾಪ್ಟನ್ಸಿ ಕೊಡಿ ಅನ್ನೋ ಪ್ರೆಶರ್ ಜಾಸ್ತಿ ಆಗುತ್ತೆ. ಗೌತಮ್ ಗಂಭೀರ್ಗೆ ಇದು ಇಷ್ಟ ಇಲ್ಲದೇ ಇದ್ರೂ ಅನಿವಾರ್ಯವಾಗಿ ಒಪ್ಕೊಳ್ಬೇಕಾಗುತ್ತೆ. ಆದ್ರೆ ಆ ಅನಿವಾರ್ಯತೆ ಈಗ ಟೀಂ ಇಂಡಿಯಾ ಪ್ರದರ್ಶನದಲ್ಲಿ ಎದ್ದು ಕಾಣ್ತಿದೆ. ಕೋಚ್ ಮತ್ತು ಕ್ಯಾಪ್ಟನ್ ನಡುವಿನ ಕೋಲ್ಡ್ ವಾರ್ ಎಫೆಕ್ಟ್ ಆನ್ ಫೀಲ್ಡ್ ಪರ್ಫಾಮೆನ್ಸ್ ಮೇಲೆ ಎಫೆಕ್ಟ್ ಆಗ್ತಿದೆ ಅನ್ನೋ ಚರ್ಚೆಯಾಗ್ತಿದೆ. ಐಪಿಎಲ್ ಜಗಳ ಬಿಸಿಸಿಐ ಪಂದ್ಯಗಳಿಗೂ ಪೆಟ್ಟು ಕೊಡ್ತಿದ್ಯಾ ಅನ್ನೋ ಅನುಮಾನ ಮೂಡ್ತಿದೆ. ಹಾಗೇ ಗೌತಮ್ ಗಂಭೀರ್ ಅವ್ರ ಏಕಾಂಗಿ ನಿರ್ಧಾರಗಳೂ ಹೊಡೆತ ನೀಡ್ತಿವೆ. ಅವ್ರ ಹಠಮಾರಿತನವೇ ಭಾರತದ ಸೆಟ್ಬ್ಯಾಕ್ಗೆ ಕಾರಣವೂ ಹೌದು.
ಭಾರತಕ್ಕೆ ‘ಗಂಭೀರ’ ಸಮಸ್ಯೆ!
ಗೌತಮ್ ಗಂಭೀರ್ ಹೆಡ್ ಕೋಚ್ ಆದ್ಮೇಲೆ ಸೀನಿಯರ್ಸ್ ಗಿಲ್ಲ ಗೌರವ
ಯಂಗ್ ಸ್ಟರ್ಸ್ ಟೀಂ ಮಾಡ್ತೀನಿ ಅಂತಾ ಬೇಕಾದವರಿಗೆ ತಂಡದಲ್ಲಿ ಸ್ಥಾನ
ಪಕ್ಷಪಾತ ಮಾಡ್ತಿದ್ದಾರೆ ಎಂದಿರುವ ಸಂಜಯ್ ಮಂಜ್ರೇಕರ್ & ಎಸ್.ರಮೇಶ್
ಪ್ಲೇಯಿಂಗ್ 11 ಫೈನಲ್ ಮಾಡುವಾಗಲೂ ಫಾರ್ಮ್ ನಲ್ಲಿ ಇಲ್ಲದವ್ರಿಗೆ ಮಣೆ
ವಿದೇಶಗಳ ಪಂದ್ಯಗಳಿಗೂ ಪಿಚ್ ಆದರಿಸಿ ಟೀಂ ಸೆಲೆಕ್ಷನ್ ಮಾಡ್ತಿಲ್ಲ
ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಏಕಪಕ್ಷೀಯ ನಿರ್ಧಾರ
ಬೌಲರ್ ಗಳ ಸೆಲೆಕ್ಷನ್ ನಲ್ಲಿ ಶ್ರೇಯಸ್ ಜೊತೆ ಜಗಳ ಮಾಡಿದ್ರಾ ಗಂಭೀರ್?
ಗಂಭೀರ್ ಅವ್ರ ಇದೇ ನಿರ್ಧಾರಗಳೇ ಟೀಂ ಇಂಡಿಯಾ ಪರ್ಫಾಮೆನ್ಸ್ಗೂ ಹೊಡೆತ ನೀಡ್ತಿದೆ ಅನ್ನೋ ಮಾತುಗಳಿವೆ. ಗಂಭೀರ್ ಹೆಡ್ ಕೋಚ್ ಆದ್ಮೇಲೆ ಆಲ್ರೆಡಿ ಟೆಸ್ಟ್ ಫಾರ್ಮೆಟ್ ಕಂಪ್ಲೀಟ್ ಆಗಿ ಹಳ್ಳ ಹಿಡಿದಿದೆ. 2027ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್ನಲ್ಲಿ ಫೈನಲ್ ಟಿಕೆಟ್ ಸಿಗೋದಕ್ಕೆ ಪವಾಡನೇ ಆಗ್ಬೇಕಿದೆ. ಯಾಕಂದ್ರೆ ಟೀಂ ಪರ್ಫಾಮೆನ್ಸ್ ಮತ್ತು ಪರಿಸ್ಥಿತಿ ಐಸಿಯುನಲ್ಲಿರೋ ಥರ ಇದೆ. ಇನ್ನು ಏಕದಿನ ಮಾದರಿಯಲ್ಲೂ ಸಾಕಷ್ಟು ಅಪ್ಸ್ ಌಂಡ್ ಡೌನ್ಸ್ ಇದೆ. ಈಗ ಟಿ-20ಐ ಮಾದರಿಯಲ್ಲೂ ಸರೆಂಡರ್ ಆಗೋಕೆ ಸ್ಟಾರ್ಟ್ ಮಾಡಿದ್ದಾರೆ. ಇನ್ನೆರಡೇ ದಿನ ಅಂದ್ರೆ ಬುಧವಾರದಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20ಐ ಸರಣಿ ಸ್ಟಾರ್ಟ್ ಆಗುತ್ತೆ. ಇದೇ ಟೀಂ ಇಟ್ಕೊಂಡು ಆಂಗ್ಲರ ನಾಡಲ್ಲಿ ಅದ್ಹೇಗೆ ಪಂದ್ಯಗಳನ್ನ ಗೆಲ್ತಾರೋ ನೋಡ್ಬೇಕು.

ನೋಡಿರಿ

