ಶತಕದ ಸನಿಹದಲ್ಲೂ ನಾಯಕನ ಆಟ ಆಡಿದ ಶ್ರೇಯಸ್ – ಕನ್ನಡಿಗ ವೈಶಾಕ್ ಕಣಕ್ಕಿಳಿಸಿ ಗೆದ್ದ ಪಂಜಾಬ್!

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 5ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಗೆದ್ದು ಬೀಗಿದೆ. ಈ ಗೆಲುವಿನ ರೂವಾರಿ ನಮ್ಮ ಕನ್ನಡಿಗ ವೈಶಾಕ್ ವಿಜಯಕುಮಾರ್ ಅನ್ನೋದೇ ವಿಶೇಷ. ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಪರ ಬ್ಯಾಟರ್ಸ್ ಅಬ್ಬರಿಸಿ ರನ್ ಮಳೆ ಸುರಿಸಿದ್ರು.
ಇದನ್ನೂ ಓದಿ : ಪಂಜಾಬ್ ಪರ ಕ್ಯಾಪ್ಟನ್ ಅಯ್ಯರ್ ಭರ್ಜರಿ ಬ್ಯಾಟಿಂಗ್ – ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್‌ಗೆ 11 ರನ್‌ಗಳ ರೋಚಕ ಗೆಲುವು
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಂಜಾಬ್ ಪರ ಓಪನರ್ ಪ್ರಿಯಾನ್ಶ್ ಆರ್ಯ 47 ರನ್‌ಗಳ ಸ್ಫೋಟಲ ಇನ್ನಿಂಗ್ಸ್ ಆಡಿದ್ರು. ಬಟ್ ಪ್ರಭ್ ಸಿಮ್ರಾನ್ ಸಿಂಗ್ 5 ರನ್ ಗಳಿಸಿ ಕ್ಯಾಚ್ ಔಟ್ ಆದ್ರು. ಮೂರನೇ ಸ್ಲಾಟ್ನಲ್ಲಿ ಬಂದ ಶ್ರೇಯಸ್ ಅಯ್ಯರ್ ಗುಜರಾತ್ ಬೌಲರ್ಸ್ನ ಅಟ್ಟಾಡಿಸಿದ್ರು. ಮತ್ತೊಂದು ತುದಿಯಲ್ಲಿ ವಿಕೆಟ್ಗಳು ಉರುಳುತ್ತಿದ್ರೂ ಸ್ಟೇಬಲ್ ಆಗಿ ನಿಂತು ಸ್ಕೋರ್ ಹೆಚ್ಚಿಸ್ತಾನೇ ಹೋದ್ರು. 42 ಎಸೆತಗಳನ್ನು ಎದುರಿಸಿದ ಅಯ್ಯರ್ 9 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 97 ರನ್ ಚಚ್ಚಿದರು. ಹಾಗೇ ಕೊನೆಯಲ್ಲಿ ಬಂದ ಶಶಾಂಕ್ ಸಿಂಗ್ ಕೂಡ ಪಂಜಾಬ್ ಪರ ಬಿರುಗಾಳಿ ಎಬ್ಬಿಸಿದ್ರು. ಶಶಾಂಕ್ ಸಿಂಗ್ 16 ಎಸೆತಗಳಲ್ಲಿ 6 ಫೋರ್, 2 ಸಿಕ್ಸ್ ಸಹಿತ 44 ರನ್ ಬಾರಿಸಿದ್ರು. ಈ ಸ್ಪೋಟಕ ಇನಿಂಗ್ಸ್ಗಳ ನೆರವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿತು.
ಪಂಜಾಬ್ ಕಿಂಗ್ಸ್ ಪಂದ್ಯ ಗೆದ್ರೂ ತುಂಬಾ ಅಭಿಮಾನಿಗಳನ್ನ ಕಾಡ್ತಿರೋದು ಶ್ರೇಯಸ್ ಅಯ್ಯರ್ ಸೆಂಚುರಿ ಮಿಸ್ ಆಯ್ತಲ್ಲ ಅನ್ನೋದು. 97 ರನ್ ಗಳಿಸಿದ್ದ ಶ್ರೇಯಸ್ ಕೊನೆಯಲ್ಲಿ ಇನ್ನೊಂದು ಫೋರ್ ಬಾರಿಸಿದ್ರು ಶತಕ ಕಂಪ್ಲೀಟ್ ಮಾಡ್ತಿದ್ರು. ಆದ್ರೆ ಶ್ರೇಯಸ್ಗೆ ತಮ್ಮ ವೈಯಕ್ತಿಕ ದಾಖಲೆಗಿಂತ ಟೀಂ ಗೆಲ್ಲೋದಷ್ಟೇ ಇಂಪಾರ್ಟೆಂಟ್ ಆಗಿತ್ತು. ಶತಕದ ಸನಿಹದಲ್ಲಿದ್ದರೂ ಕೊನೆಯ ಓವರ್ ನಲ್ಲಿ ಅವರು ಸ್ಟ್ರೈಕ್‌ಗೆ ಬರಲೇ ಇಲ್ಲ, ಶಶಾಂಕ್ ಸಿಂಗ್ ಅವರಿಗೆ ಬೌಂಡರಿಗಳನ್ನು ಬಾರಿಸುವಂತೆ ಹೇಳಿದ್ದಾರೆ. ತನಗೆ ಶತಕ ಸಿಡಿಸುವುದಕ್ಕಿಂತ ತಂಡದ ಮೊತ್ತ ಹೆಚ್ಚಿಸೋದೇ ಮುಖ್ಯ ಎಂದ್ರು. ಅದಕ್ಕೆ ತಕ್ಕಂತೆ ಶಶಾಂಕ್ ಸಿಂಗ್ ಕೊನೆಯ ಓವರ್ ನಲ್ಲಿ 21 ರನ್ ಸಿಡಿಸುವ ಮೂಲಕ ಪಂಜಾಬ್ ಬೃಹತ್ ಸ್ಕೋರ್ ಮಾಡಿದ್ರು. ಶ್ರೇಯಸ್ ಅಯ್ಯರ್ ಅವ್ರ ಈ ನಡೆಗೆ ತುಂಬಾ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಟ್ ಆದ್ರೂ ಒಬ್ಬ ಆಟಗಾರ 97 ರನ್ ಹೊಡೆದಾಗ ಸೆಂಚುರಿ ಮಾಡಿಕೊಳ್ಳೋಕೆ ಅವಕಾಶ ಕೊಡ್ಬೋದಿತ್ತು. ಅಟ್ಲೀಸ್ಟ್ ಶಶಾಂಕ್ ಸಿಂಗ್ ಸ್ಟ್ರೈಕ್ ಬಿಟ್ಟುಕೊಟ್ಟಿದ್ರೂ ಶ್ರೇಯಸ್ ಶತಕ ಕಂಪ್ಲೀಟ್ ಮಾಡಿಕೊಳ್ತಿದ್ರು. ಯಾಕಂದ್ರೆ 97 ರನ್ ಹೊಡೆದು ಸೆಂಚುರಿ ಮಿಸ್ ಮಾಡಿಕೊಳ್ಳೋದು ತುಂಬಾ ನೋವು ಕೊಡುತ್ತೆ.
ಮಂಗಳವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಪರ ಹೈಲೆಟ್ ಆಗಿದ್ದು ಕನ್ನಡಿಗಗ ವೈಶಾಕ್ ವಿಜಯ್ ಕುಮಾರ್. ಕೊನೆಯ 6 ಓವರ್ಗಳಿರುವಾಗ ಪಂಜಾಬ್ ಕಿಂಗ್ಸ್ ತಂಡ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕರ್ನಾಟಕದ ವೇಗಿ ವೈಶಾಕ್ ವಿಜಯಕುಮಾರ್ ಅವರನ್ನು ಕಣಕ್ಕಿಳಿಸಿತು. ಅಷ್ಟ್ರಲ್ಲಾಗ್ದೇ ಗುಜರಾತ್ ಕಡೆ ವಾಲಿದ್ದ ಪಂದ್ಯವನ್ನ ಮತ್ತೆ ಪಂಜಾಬ್ ಕಡೆ ತಿರುಗಿಸಿದ್ದೇ ವೈಶಾಕ್. ಡೆತ್ ಓವರ್ನಲ್ಲಿ ಮೂರು ಓವರ್ಗಳನ್ನು ಎಸೆದ ವೈಶಾಕ್ ವಿಜಯಕುಮಾರ್ ಕೇವಲ 28 ರನ್ಗಳನ್ನು ನೀಡಿದ್ದು ವಿಶೇಷವಾಗಿತ್ತು. 15ನೇ ಓವರ್ ಎಸೆದ ವೈಶಾಕ್ ನೀಡಿದ್ದು ಕೇವಲ 5 ರನ್ ಮಾತ್ರ. ಬಳಿಕ ಮತ್ತೆ 17ನೇ ಓವರ್ ಎಸೆದ ವೈಶಾಕ್ ಕೇವಲ 5 ರನ್ ಮಾತ್ರ ಬಿಟ್ಟು ಕೊಟ್ಟರು. ನಿರ್ಣಾಯಕ ಹಂತದಲ್ಲಿ 2 ಓವರ್ಗಳಲ್ಲಿ ಕೇವಲ 10 ರನ್ ನೀಡುವ ಮೂಲಕ ಗೇಮ್ ಚೇಂಜರ್ ಆದ್ರು. ಕೊನೆಯ ಎರಡು ಓವರ್ಗಳಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ 45 ರನ್‌ಗಳ ಅವಶ್ಯಕತೆಯಿತ್ತು. 19ನೇ ಓವರ್ ಎಸೆದ ವೈಶಾಕ್ 18 ರನ್ಗಳನ್ನು ನೀಡಿದರೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟರು. ಕೊನೇ ಓವರ್ನಲ್ಲಿ 27 ರನ್‌ಗಳ ಗುರಿ ಪಡೆದ ಗುಜರಾತ್ ಅಂತಿಮವಾಗಿ 15 ರನ್ಗಳಿಸಲಷ್ಟೇ ಶಕ್ತವಾಯ್ತು.