T20Iಗೆ ಶ್ರೇಯಸ್ ಅಯ್ಯರ್ ಕಂಬ್ಯಾಕ್?- ಏಷ್ಯಾಕಪ್ ಜೊತೆ ಟೆಸ್ಟ್‌ಗೂ ರೀಎಂಟ್ರಿ?
ಅಯ್ಯರ್‌ನಿಂದ ಭಾರತಕ್ಕೆ ಏನೆಲ್ಲಾ ಪ್ಲಸ್?

T20Iಗೆ ಶ್ರೇಯಸ್ ಅಯ್ಯರ್ ಕಂಬ್ಯಾಕ್?-  ಏಷ್ಯಾಕಪ್ ಜೊತೆ ಟೆಸ್ಟ್‌ಗೂ  ರೀಎಂಟ್ರಿ?ಅಯ್ಯರ್‌ನಿಂದ  ಭಾರತಕ್ಕೆ ಏನೆಲ್ಲಾ ಪ್ಲಸ್?

ಏಷ್ಯ ಕಪ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಎಲ್ಲರ ಚಿತ್ತ ಶ್ರೇಯಸ್ಅಯ್ಯರ್ ಮೇಲೆ ನೆಟ್ಟಿದೆ. 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಭರ್ಜರಿ ಪ್ರದರ್ಶನ ನೀಡಿದ್ರು. ಅಲ್ದೇ 18ನೇ ಸೀಸನ್ ಐಪಿಎಲ್​ನಲ್ಲೂ ಪಂಜಾಬ್ ತಂಡವನ್ನ ಫಿನಾಲೆಗೆ ಕರೆದೊಯ್ಯುವಲ್ಲಿ ಯಶಸ್ವಿ ನಾಯಕನಾಗಿದ್ರು.  ಐಪಿಎಲ್ ನಂತ್ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಐಯರ್ ಚಾನ್ಸ್ ಸಿಗುತ್ತೆ ಎನ್ನಲಾಗಿತ್ತು. ಆದ್ರೆ ಟೆಸ್ಟ್‌ನಲ್ಲೂ ಅವಕಾಶ ಸಿಕ್ಕಿಲ್ಲ. ಈಗ ಏಷ್ಯಾ ಕಪ್‌ನಲ್ಲಿ ಚಾನ್ಸ್ ಸಿಗೋದು ಬಹುತೇಕ ಪಿಕ್ಸ್ ಆಗಿದ್ದು, ಶ್ರೇಯಸ್ ಅಯ್ಯರ್ ಕಂಬ್ಯಾಕ್ ಮಾಡೋಕೆ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: ಏಷ್ಯಾಕಪ್ ನಿಂದ ರಾಹುಲ್ ಔಟ್ – ODI, Test ಓಕೆ.. T-20Iಗೆ ಯಾಕಿಲ್ಲ?

ಪಂಜಾಬ್ ಕಿಂಗ್ಸ್ ತಂಡವನ್ನು ಪೈನಲ್​ವರೆಗೂ ಕೊಂಡೊಯ್ದಿದ್ದ ಶ್ರೇಯಸ್ ಅಯ್ಯರ್​ ಅವರ ಆಟಕ್ಕೆ ಹಾಗೂ ಅವರ ನಾಯಕತ್ವಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಐಪಿಎಲ್ ಬಳಿಕ ಶ್ರೇಯಸ್ ಅಯ್ಯರ್​ಗೆ ಟೀಂ ಇಂಡಿಯಾದ ಬಾಗಿಲು ಓಪನ್ ಆಗುತ್ತೆ ಎನ್ನಲಾಗಿತ್ತು. ಆದರೆ ಇಂಗ್ಲೆಂಡ್‌ ಪ್ರವಾಸಕ್ಕೆ ಅಯ್ಯರ್ ತಂಡದಲ್ಲಿ ಚಾನ್ಸ್ ಸಿಕ್ಕಿಲ್ಲ. ಆದ್ರೆ ಈಗ ಶ್ರೇಯಸ್ ಅಯ್ಯರ್ ಏಷ್ಯಾಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹೊರ ಬಿದಿದ್ದು, ಶ್ರೇಯಸ್ ಕಂಬ್ಯಾಕ್ ಮಾಡೋಕೆ ಕಾಯುತ್ತಿದ್ದಾರೆ.

ಅಯ್ಯರ್ ಅವರಿಗೆ 30 ವರ್ಷ ವಯಸ್ಸಾಗಿದ್ದು ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಇವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನ ಒತ್ತಡದ ಅನುಭವವೂ ಇದೆ. ಹೀಗಾಗಿ ಏಷ್ಯಾ ಕಪ್ ಹಾಗೂ ಮುಂದಿನ ಟೆಸ್ಟ್‌ ಪಂದ್ಯಕ್ಕೆ ಅಯ್ಯರ್​ಗೆ ಮಣೆ ಹಾಕಲು ಆಯ್ಕೆದಾರರು ಮುಂದಾಗಿದ್ದಾರೆ.   ಮಧ್ಯಮ ಕ್ರಮಾಂಕದಲ್ಲಿ ಆಡುವ ಅಯ್ಯರ್ ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿದೆ. ಹೀಗಾಗಿ ಏಷ್ಯಾ ಕಪ್‌ಗೆ ಆಯ್ಕೆ  ಆಗಬಹುದು.

ವೆಸ್ಟ್‌ ಇಂಡೀಸ್‌, ದಕ್ಷಿಣ ಆಫ್ರಿಕಾ ಸರಣಿಗಳಿಗೆ ಶ್ರೇಯಸ್‌ ಆಯ್ಕೆ?

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಕರುಣ್‌ ನಾಯರ್‌ ಹಾಗೂ ಸಾಯಿ ಸುದರ್ಶನ್‌ ಕಳಪೆ ಪ್ರದರ್ಶ ನೀಡಿದ್ದಾರೆ.. ಹೀಗಾಗಿ ಮುಂದಿನ  ವೆಸ್ಟ್‌ ಇಂಡೀಸ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧದ ಸರಣಿಗಳಿಗೆ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಅವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ.  ಅಯ್ಯರ್ ಸ್ಪಿನ್ ಬೌಲಿಂಗ್‌ನ ಅತ್ಯುತ್ತಮ ಆಟಗಾರ ಎಂದು ಆಯ್ಕೆದಾರರಿಗೆ ತಿಳಿದಿದೆ. ಹೀಗಾಗಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಎರಡೆರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಅಯ್ಯರ್‌ ಚಾನ್ಸ್ ನೀಡುವ ಸಾಧ್ಯತೆಯಿದೆ.  ಇನ್ನೂ ಅಯ್ಯರ್ ಅವರ ದಾಖಲೆಗಳನ್ನ ನೋಡೋದಾದ್ರೆ..

2024ರ ಫೆಬ್ರವರಿಯಲ್ಲಿ ಟೆಸ್ಟ್ ತಂಡದಿಂದ ಶ್ರೇಯಸ್ ಅಯ್ಯರ್ ಅವ್ರನ್ನ ಕೈಬಿಡಲಾಗಿತ್ತು. ಆ ಬಳಿಕ  ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸ್ಥಾನವನ್ನೂ ಕಳ್ಕೊಂಡಿದ್ರು. ಬಟ್ ಅದೇ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ನಾಯಕನಾನಿ ಐಪಿಎಲ್ ಚಾಂಪಿಯನ್ ಆಗಿಸುವಲ್ಲಿ ಯಶಸ್ವಿಯಾಗಿದ್ರು. ಹಾಗೇ ಮುಂಬೈ ತಂಡವನ್ನು 2024-25 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಮತ್ತು ಪಂಜಾಬ್ ಕಿಂಗ್ಸ್ ತಂಡವನ್ನು 2025 ರ ಐಪಿಎಲ್‌ನ ಫೈನಲ್‌ಗೆ ಮುನ್ನಡೆಸುವ ಮೂಲಕ ಗ್ರೇಟ್ ಕಮ್ ಬ್ಯಾಕ್ ಮಾಡಿದ್ರು. ದೇಶೀ ಟೂರ್ನಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ಶ್ರೇಯಸ್ ರನ್ನ ಇದೇ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತು. ಇಂಗ್ಲೆಂಡ್ ಎದುರು 3 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಶ್ರೇಯಸ್, 60ರ ಬ್ಯಾಟಿಂಗ್ ಸರಾಸರಿಯಲ್ಲಿ 181 ರನ್ ಕಲೆಹಾಕಿದ್ದರು. ನಂತ್ರ 2025 ರ ಚಾಂಪಿಯನ್ಸ್ ಟ್ರೋಫಿಗೆ ಸೆಲೆಕ್ಟ್ ಮಾಡಲಾಗಿತ್ತು. ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ್ದ ಶ್ರೇಯಸ್ ಟೀಂ ಇಂಡಿಯಾ ಗೆಲುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ರು.  ಅದೂ ಅಲ್ದೇ ಶ್ರೇಯಸ್ ಅವರು ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಅಪರೂಪದ ಭಾರತೀಯ ಆಟಗಾರರ ಪಟ್ಟಿಯಲ್ಲಿದ್ದಾರೆ. ಒಟ್ಟಾರೆಯಾಗಿ, ಅವರು 14 ಟೆಸ್ಟ್‌ಗಳನ್ನು ಆಡಿದ್ದು ಇದ್ರಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 35.3 ಸರಾಸರಿಯಲ್ಲಿ 811 ರನ್‌ಗಳನ್ನು ಗಳಿಸಿದ್ದಾರೆ. ಶ್ರೇಯಸ್ ರಣಜಿ ಟ್ರೋಫಿಯ ಏಳು ಇನಿಂಗ್ಸ್‌ಗಳಲ್ಲಿ 68ರ ಸರಾಸರಿಯಲ್ಲಿ 480 ರನ್ ಗಳಿಸಿದ್ದಾರೆ.

 

Kishor KV