ಸ್ಪಿನ್ನರ್ ಶ್ರೇಯಾಂಕಾ ಯಾರಿಗೂ ಬೇಡ್ವಾ? – ಬಿಗ್​ ಬ್ಯಾಶ್ ಟೂರ್ನಿಯಲ್ಲಿ UNSOLD
ಟಗರು ಪುಟ್ಟಿ ಎಡವಟ್ಟು ಮಾಡಿಕೊಂಡ್ರಾ? 

ಸ್ಪಿನ್ನರ್ ಶ್ರೇಯಾಂಕಾ ಯಾರಿಗೂ ಬೇಡ್ವಾ? – ಬಿಗ್​ ಬ್ಯಾಶ್ ಟೂರ್ನಿಯಲ್ಲಿ UNSOLDಟಗರು ಪುಟ್ಟಿ ಎಡವಟ್ಟು ಮಾಡಿಕೊಂಡ್ರಾ? 

2024ರ ವುಮೆನ್ಸ್ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು. ಸ್ಮೃತಿ ಮಂದಾನ ನಾಯಕತ್ವದ ಸಿಂಹಿಣಿಯರು ಟ್ರೋಫಿಗೆ ಮುತ್ತಿಕ್ಕಿದ್ರು. ಆವತ್ತು ಪಂದ್ಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್. ಉತ್ತರ ಕರ್ನಾಟಕದ ಈ ಹುಡುಗಿ ಆರ್‌ಬಿಸಿ ಗೆಲುವಿನ ರೂವಾರಿಯಾಗಿದ್ರು. ಆರ್‌ಸಿಬಿಗೆ ಕಪ್ ಬರ ನೀಗಿಸಿದ್ದು ಕೂಡಾ ಇದೇ ಶ್ರೇಯಾಂಕಾ ಪಾಟೀಲ್. ಬೆಂಗಳೂರು ತಂಡ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಕರ್ನಾಟಕದಲ್ಲಿ ಟಗರು ಪುಟ್ಟಿ ಅಂತಾನೇ ಫೇಮಸ್ ಆಗಿದ್ರು. ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಗಮನ ಸೆಳೆದಿದ್ದ ಶ್ರೇಯಾಂಕ ಪಾಟೀಲ್, ನಂತರ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ಇದಕ್ಕೂ ಮುನ್ನ ಅಂಡರ್-19 ಏಷ್ಯಾ ಕಪ್ನಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಆದ್ರೀಗ ಬ್ರಿಸ್ಟೀನ್‌ನಲ್ಲಿ ಬಿಗ್ ಬ್ಯಾಶ್ ಟೂರ್ನಿಗೆ ಶ್ರೇಯಾಂಕ ಪಾಟೀಲ್ ಹರಾಜಿನಲ್ಲಿ ಅನ್​ಸೋಲ್ಡ್ ಆಗಿರೋದು ಬಾರೀ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ – ಇಂದೇ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ!

ಶ್ರೇಯಾಂಕಾ ಅನ್ ಸೋಲ್ಡ್!  

ಅಕ್ಟೋಬರ್ 27ರಂದು ಬ್ರಿಸ್ಟೀನ್‌ನಲ್ಲಿ ಬಿಗ್ ಬ್ಯಾಶ್ ಟೂರ್ನಿಗೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಆಡಿಲೇಡ್ ಸ್ಟೈಕರ್ಸ್ ಮತ್ತು ಬ್ರಿಸ್ಟೇನ್ ಹೀಟ್ ತಂಡಗಳು ಸೆಣಸಲಿವೆ. ಆದ್ರೆ ಮಹಿಳಾ ಬಿಗ್​ಬ್ಯಾಷ್​ ಲೀಗ್​ ಆಕ್ಷನ್​ನಲ್ಲಿ ಇಬ್ಬರೂ ಸ್ಟಾರ್ ಆಟಗಾರ್ತಿಯರೇ ಅನ್​ಸೋಲ್ಡ್ ಆಗಿದ್ದಾರೆ. ಟೀಮ್​ ಇಂಡಿಯಾದ ಮಹಿಳಾ ತಂಡದ ಕ್ಯಾಪ್ಟನ್​ ಹರ್ಮನ್​ಪ್ರೀತ್​ ಕೌರ್​ ಹಾಗೂ ಸ್ಪಿನ್ನರ್​ ಶ್ರೇಯಾಂಕ ಪಾಟೀಲ್ ಅನ್ ಸೋಲ್ಡ್ ಆಗಿದ್ದಾರೆ. ಕಳೆದ 5 ಸೀಸನ್​ಗಳಿಂದ ಹರ್ಮನ್​ಪ್ರೀತ್​ ಕೌರ್​​ ಬಿಗ್​ ಬ್ಯಾಷ್​​ ಟೂರ್ನಿಯ ಭಾಗವಾಗಿದ್ದರು. ಆದರೆ ಈ ಬಾರಿ ಅನ್​ಸೋಲ್ಡ್​ ಆಗಿದ್ದಾರೆ. WPLನಲ್ಲಿ RCB ಪರ ಮಿಂಚಿದ್ದ ಶ್ರೇಯಾಂಕ ಪಾಟೀಲ್​ ಖರೀದಿಗೂ ಯಾವುದೇ ತಂಡ ಮುಂದಾಗಿಲ್ಲ. ಹರ್ಮನ್ ಪ್ರೀತ್ ಕೌರ್ ಅವರು ಈ ಟೂರ್ನಿಯಲ್ಲಿ ಮೆಲ್ಬರ್ನ್ ತಂಡದ ಭಾಗವಾಗಿದ್ದರು. 2023ರ ಮಹಿಳಾ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್​ಗೆ ಚೊಚ್ಚಲ ಮಹಿಳಾ ಐಪಿಎಲ್​ ಟ್ರೋಫಿ ತಂದುಕೊಟ್ಟ ನಾಯಕಿ ಆಗಿದ್ರೂ ಕೂಡ ಈ ಬಾರಿ ಚಾನ್ಸ್ ಸಿಕ್ಕಿಲ್ಲ. ಆದ್ರೆ ಮಹಿಳೆಯರ ಬಿಗ್ ಬ್ಯಾಶ್ ಲೀಗ್‌ಗೆ ಭಾರತದ ಮಹಿಳೆಯರ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಸೇರಿ 6 ಮಂದಿ ಭಾರತೀಯ ಆಟಗಾರ್ತಿಯರನ್ನು ವಿವಿಧ ತಂಡಗಳಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅಡಿಲೇಡ್ ಸ್ಟೈಕರ್ ತಂಡದ ಜೊತೆ ಸ್ಮೃತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.  ಹೇಮಲತಾ ಇದೇ ಮೊದಲ ಬಾರಿಗೆ ಬಿಗ್ ಬ್ಯಾಶ್ ಆಡುತ್ತಿದ್ದು, ಆರಂಭಿಕ ಬ್ಯಾಟರ್ ಕೈಬಿಟ್ಟಿರುವುದರಿಂದ ಪರ್ತ್ ಸ್ವಾರ್ಚಸ್​ ತಂಡ ಚಾನ್ಸ್ ನೀಡಿದೆ. ವಿಕೆಟ್‌ಕೀಪ‌ರ್ ಯಸ್ತಿಕಾ ಭಾಟಿಯಾ ಸಹ ಡಬ್ಲ್ಯು ಬಿಬಿಎಲ್‌ಗೆ ಪದಾರ್ಪಣೆ ಮಾಡುತ್ತಿದ್ದು, ಮೆಲ್ಬರ್ನ್ ಸ್ಟಾರ್ಸ್ ತಂಡದ ಪರ ಆಡಲಿದ್ದಾರೆ. ಭಾರತ ರಾಷ್ಟ್ರೀಯ ತಂಡದ ಸಹ ಆಟಗಾರ್ತಿ ದೀಪ್ತಿ ಶಮಾಖಸಹ ಇದೇ ತಂಡದಲ್ಲಿದ್ದಾರೆ. ಬ್ರಿಸ್ಟೇನ್ ಹೀಟ್ ತಂಡ ಭಾರತದ ಆಲೆಂಡರ್ ಶಿಖಾ ಪಾಂಡೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಬ್ರಿಸ್ಟೇನ್ ತಂಡದ ವೇಗದ ಬೌಲಿಂಗ್ ಪಡೆಗೆ ಬಲ ತುಂಬಲಿರುವ ಶಿಖಾ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಹ ಮಾಡಲಿದ್ದಾರೆ. ಮಹಿಳೆಯರ ಟಿ20-ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯದ ಶಿಖಾ, ಸಂಪೂರ್ಣ ಬಿಗ್ ಬ್ಯಾಶ್ ಟೂರ್ನಿಯಲ್ಲಿ ಆಡಲಿದ್ದಾರೆ. ಇದೇ ತಂಡದಲ್ಲಿ ಜೆಮಿಮಾ ರಾಡ್ರಿಗಸ್ ಸಹ ಇದ್ದಾರೆ.

ಇನ್ನು ಕಳೆದ ಡಬ್ಲ್ಯೂಪಿಎಲ್​ ಫೈನಲ್​​ನಲ್ಲಿ ಡೆಲ್ಲಿ ವಿರುದ್ಧದ ಫೈನಲ್ ಮ್ಯಾಚ್​ನಲ್ಲಿ 3.3 ಓವರ್‌ಗಳನ್ನು ಬೌಲ್ ಮಾಡಿದ್ದ ಶ್ರೇಯಾಂಕಾ ಪಾಟೀಲ್ ಕೇವಲ 12 ರನ್‌ಗಳನ್ನು ಮಾತ್ರ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ರು. ವಿಶೇಷ ಎಂದರೆ ಈ 4 ವಿಕೆಟ್‌ಗಳೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಎರಡು ಬಾರಿ ನಾಲ್ಕು ವಿಕೆಟ್ ಪಡೆದ ದಾಖಲೆಯೊಂದು ಶ್ರೇಯಾಂಕಾ ಹೆಸರಿಗೆ ಸೇರ್ಪಡೆಯಾಗಿತ್ತು. ಅಂದರೆ, ಶ್ರೇಯಾಂಕಾ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಆಟಗಾರ್ತಿ WPL ನಲ್ಲಿ 2 ಬಾರಿ 4 ವಿಕೆಟ್ ಕಬಳಿಸಿಲ್ಲ. 8 ಪಂದ್ಯಗಳಲ್ಲಿ ಬರೋಬ್ಬರಿ 13 ವಿಕೆಟ್ ಪಡೆದು ಈ ಟೂರ್ನಿಯ ಹೈಯೆಸ್ಟ್ ವಿಕಿಟ್ ಟೇಕರ್ ಅಂತಾ ಅನಿಸಿಕೊಂಡಿದ್ರು. ಪರ್ಪಲ್ ಕ್ಯಾಪ್ ಕೂಡ ಪಡೆದಿದ್ರು. ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಹಿಡಿತ ಹೊಂದಿರುವ ಶ್ರೇಯಾಂಕಾ ಪಾಟೀಲ್ ಅನ್​ಸೋಲ್ಡ್ ಆಗಿರೋದು ಅಚ್ಚರಿಗೆ ಕಾರಣವಾಗಿದೆ.

Shwetha M

Leave a Reply

Your email address will not be published. Required fields are marked *