ಸಚಿನ್ ದೇವರು, ವೈಭವ್ ದೇವರ ಮಗ- ಟೀಂ INDಕ್ಕೆ M.S ಧೋನಿ ಮೆಂಟರ್
ODIಗೆ ಹರ್ಷಿತ್ ರಾಣಾ ಕಂಬ್ಯಾಕ್‌

 ಸಚಿನ್ ದೇವರು, ವೈಭವ್ ದೇವರ ಮಗ-  ಟೀಂ INDಕ್ಕೆ M.S ಧೋನಿ ಮೆಂಟರ್ODIಗೆ ಹರ್ಷಿತ್ ರಾಣಾ ಕಂಬ್ಯಾಕ್‌

ಕ್ರಿಕೆಟ್ ಲೋಕದ ಸಾಕಷ್ಟು ಇಂಟ್ರೆಸ್ಟಿಂಗ್‌ ಸುದ್ದಿಗಳು ನಿಮಗಾಗಿ.

ಇದನ್ನೂ ಓದಿ:   2027ರ IPLಗೆ ಮೇಜರ್ ಸರ್ಜರಿ – 2 ವಾರ ಮೊದಲೇ ಟೂರ್ನಿ ಸ್ಟಾರ್ಟ್

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕ ಪಾಟೀಲ್ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಇಡೀ  ವಿಶ್ವಕರ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಪ್ರಮುಖ ಸ್ಪಿನ್ನರ್ ಮತ್ತು ಕೆಳಕ್ರಮಾಂಕದ ಬ್ಯಾಟರ್ ಆಗಿದ್ದ ಶ್ರೇಯಾಂಕ ಅವರ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

ಶ್ರೇಯಾಂಕಾ ಪಾಟೀಲ್‌ ಅವರಿಗೆ ಬದಲಿ ಆಟಗಾರ್ತಿಯಾಗಿ ಅನ್‌ಕ್ಯಾಪ್ಡ್ ಆಟಗಾರ್ತಿ ಪ್ರೇಮಾ ರಾವತ್‌ ತಂಡದಲ್ಲಿ ಸ್ಥಾನ ಪಡೆಯುವುದು ದಟ್ಟವಾಗಿದೆ. 24 ವರ್ಷದ ಪ್ರೇಮಾ ರಾವತ್ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದಕ್ಕಾಗಿಯೇ ಅವರನ್ನು ಬದಲಿಯಾಗಿ ಸೇರಿಸಿಕೊಳ್ಳಲಾಗುತ್ತೆ ಎನ್ನಲಾಗಿದೆ. ಪ್ರೇಮಾ ಉತ್ತರಾಖಂಡ್ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ, WPLನಲ್ಲಿ ಆರ್‌ಸಿಬಿ ಪರ ಆಡುತ್ತಾರೆ.

ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್  ಹೇಳಿದ್ದಾರೆ. ದಯವಿಟ್ಟು ಸಚಿನ್ ಅವರನ್ನು ವೈಭವ್ ಜೊತೆ ಹೋಲಿಸಬೇಡಿ. ಸಚಿನ್ ಕ್ರಿಕೆಟ್ ದೇವರು. ಆ ದೇವರಿಗೆ ಯಾರನ್ನು ಹೋಲಿಸಲು ಸಾಧ್ಯವಿಲ್ಲ. ಆದರೆ ನಾನು ಈ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿಯನ್ನು ನೋಡಿದಾಗ, ಅವನು ಆ ದೇವರ ಮಗನಂತೆ ಕಾಣುತ್ತಾನೆ ಎಂದಿದ್ದಾರೆ.

ಅಫ್ಘಾನ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ರಾಹುಲ್ 19 ಎಸೆತಗಳಲ್ಲಿ 39* ರನ್ ಗಳಿಸಿದರು. 2ನೇ  ಪಂದ್ಯದಲ್ಲಿ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಲಾಯಿತು. ಈ ವೇಳೆ ಕೆಎಲ್ ಗೋಲ್ಡನ್ ಡಕ್ ಆಗಿ ಔಟಾದರು.  ಈ ಬಗ್ಗೆ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಶ್ರೀಕಾಂತ್ ಕೆ.ಎಲ್ ರಾಹುಲ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸಿದರೆ ಅದು ತಂಡಕ್ಕೆ ಒಳ್ಳೆಯದಲ್ಲ. ನನ್ನ ಅಭಿಪ್ರಾಯದಲ್ಲಿ, ಅವರು ಗರಿಷ್ಠ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಆಡಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಭಾರತಕ್ಕೆ ಕೋಚ್ ಅಲ್ಲ, ಮಾರ್ಗದರ್ಶಕ ಬೇಕು ಎಂದು ಶ್ರೀಶಾಂತ್ ಹೇಳಿದ್ದಾರೆ. ಗಂಭೀರ್ ‘ಆಟಗಾರರ ಮೇಲೆ ಅತಿಯಾದ ಒತ್ತಡ’ ಹೇರುತ್ತಾರೆ. ಅಂತರರಾಷ್ಟ್ರೀಯ ತಂಡಕ್ಕೆ ಆಟಗಾರರ ಮೇಲೆ ಒತ್ತಡ ಹೇರುವ ಕೋಚ್ ಅಗತ್ಯವಿಲ್ಲ. ಎಂಎಸ್ ಧೋನಿ ಈ ರೀತಿ ಎಂದಿಗೂ ಮಾಡಲಿಲ್ಲ. ಟೀಂ ಇಂಡಿಯಾಕ್ಕೆ ಧೋನಿಯಂತಹ ಮಾರ್ಗದರ್ಶಕರ ಅಗತ್ಯವಿದೆ ಎಂದು ಹೇಳಿದ್ದಾರೆ.

ಭಾರತ ಎ vs ಶ್ರೀಲಂಕಾ ಎ ಪಂದ್ಯದ ನಂತರ ವೈಭವ್ ಸೂರ್ಯವಂಶಿ ಮತ್ತು ವಿಶನ್ ಹಾಲಂಬಗೆ ನಡುವಿನ ಜಗಳಕ್ಕೆ ಸಂಬಂಧಿಸಿದಂತೆ ಮಂಡಳಿಯು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ. ಮೈದಾನದಲ್ಲಿನ ಘಟನೆಗಳಿಗೆ ದಂಡವನ್ನು ನಿರ್ಧರಿಸುವುದು ಸಂಪೂರ್ಣವಾಗಿ ಮ್ಯಾಚ್ ರೆಫರಿಯ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಸೈಕಿಯಾ ಹೇಳಿದ್ದಾರೆ. ಹೀಗಾಗಿ ಇದ್ರಲ್ಲಿ ಬಿಸಿಸಿಐ ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದ್ದಾರೆ.

ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ನಿಮ್ಮಿಂದಾಗಿಯೇ ನಾನು ಔಟ್ ಆದೆ ಎಂದು ಇಶಾನ್ ಕಿಶನ್ ಶುಭಮನ್ ಗಿಲ್ ಕಾಲೆಳೆದಿದ್ದಾರೆ. ಸತತ ಆರು ಸಿಕ್ಸರ್‌ಗಳನ್ನು ಹೊಡೆಯಲು ನೀವು ನೀಡಿದ ಪ್ರೋತ್ಸಾಹದಿಂದಾಗಿ, ನಾನು ಅಪಾಯಕಾರಿ ಶಾಟ್ ಆಡಲು ಹೋಗಿ ಔಟ್ ಆದೆ. ಇದರಿಂದಾಗಿ ನನಗೆ ಸುಮಾರು 70 ಹೆಚ್ಚುವರಿ ರನ್‌ಗಳು ನಷ್ಟವಾಯಿತು ಎಂದು ಕಿಶನ್ ತಮಾಷೆ ಮಾಡಿದರು. ಇದಕ್ಕೆ ಗಿಲ್ ನೀವು ಹೇಗಾದರೂ ಅದನ್ನು ಹೊಡೆಯಬೇಕಾಗಿತ್ತು ಎಂದ್ರು. ಇದ್ದಕ್ಕೆ ನಗುತ್ತಾ ಕಿಶನ್ 100 ಪರ್ಸೆಂಟ್ ಅಂತ ಹೇಳಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಬಿಸಿಸಿಐ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ವೇಗಿ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಹರ್ಷಿತ್ ರಾಣಾ ಬಿಸಿಸಿಐ ಸಿಒಇ ನಲ್ಲಿ ತಮ್ಮ ಪುನರ್ವಸತಿಯನ್ನು ಪೂರ್ಣಗೊಳಿಸಿದ್ದು, ಮುಂಬರುವ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಮಹಿಳಾ ಕ್ರಿಕೆಟ್‌ನಲ್ಲಿ 15 ವರ್ಷದ ಅಕ್ಷರಾ ಗುಪ್ತಾ ಆರ್ಭಟಿಸಿದ್ದು,  ತ್ರಿಶತಕ ಗಳಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದಾರೆ.  ಬಿಸಿಎ ಮಹಿಳಾ ಅಂಡರ್ -19 ಏಕದಿನ ಟ್ರೋಫಿಯಲ್ಲಿ  ಸ್ಫೋಟಕ ಬ್ಯಾಟಿಂಗ್ ನಡೆಸಿದ ಅಕ್ಷರಾ 55 ಬೌಂಡರಿಗಳು ಮತ್ತು 8 ಸಿಕ್ಸರ್‌ ಸಹಾಯದಿಂದ ಅಜೇಯ 306 ರನ್‌ ಬಾರಿಸಿ ಮಿಂಚಿದರು.

TGಲೀಗ್ ಜತೆ ಗುರುತಿಸಿಕೊಂಡ ಕಾರಣಕ್ಕೆ ಕ್ರಿಕೆಟಿಗರಾದ ಮೊಹ್ಮದ್ ಸಿರಾಜ್, ಅಂಬಟಿ ರಾಯುಡು ಮತ್ತು ತಿಲಕ್ ವರ್ಮಾಗೆ ತೆಲಂಗಾಣ ಕ್ರಿಕೆಟ್ ಅಸೋಸಿಯೇಶನ್ ನೋಟಿಸ್ ಜಾರಿ ಮಾಡಿದೆ.  ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಬಿಸಿಸಿಐ ಅನುಮೋದನೆಯಿಲ್ಲದೆ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ವ್ಯವಹಾರ ನಡೆಸುತ್ತಿದೆ ಮತ್ತು ಬಿಸಿಸಿಐ ಅನುಮೋದಿಸದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ TG20 ಲೀಗ್ ಅನ್ನು ಪ್ರಚಾರ ಮಾಡುವುದು ಕ್ರಿಮಿನಲ್ ಅಪರಾಧ ಎಂದು ನೋಟಿಸ್ ನೀಡಲಾಗಿದೆ.

ದಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ ತಮ್ಮ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಗ್ಲೆನ್ ಫಿಲಿಪ್ಸ್ ಅವರ ಈ ಶತಕ ಎರಡು ಕಾರಣಗಳಿಗಾಗಿ ವಿಶೇಷವಾಗಿದೆ. ಮೊದಲನೆಯದಾಗಿ, ಇದು ಅವರ ಮೊದಲ ಟೆಸ್ಟ್ ಶತಕವಾಗಿದೆ.  ಎರಡನೆಯದ್ದು  18 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು.

Kishor KV

Leave a Reply

Your email address will not be published. Required fields are marked *