ನನ್ನ ಬಟ್ಟೆ.. ನನ್ನಿಷ್ಟ.. ನನ್ನ ರೀಲ್ಸ್.. ಟ್ರೋಲರ್ಸ್‌ ಗೆ ಟಗರುಪುಟ್ಟಿ ಡಿಚ್ಚಿ!  -ಕೆರಳಿದ RCB ಶ್ರೇಯಾಂಕ ಪಾಟೀಲ್!‌

ನನ್ನ ಬಟ್ಟೆ.. ನನ್ನಿಷ್ಟ.. ನನ್ನ ರೀಲ್ಸ್.. ಟ್ರೋಲರ್ಸ್‌ ಗೆ ಟಗರುಪುಟ್ಟಿ ಡಿಚ್ಚಿ!  -ಕೆರಳಿದ RCB ಶ್ರೇಯಾಂಕ ಪಾಟೀಲ್!‌

ಟೀಂ ಇಂಡಿಯಾದ ಸ್ಟಾರ್‌ ಆಟಗಾರ್ತಿ, RCBಯ ಟಗರುಪುಟ್ಟಿ ಶ್ರೇಯಾಂಕ ಪಾಟೀಲ್‌ ಮೈದಾನದಲ್ಲಿ ತಮ್ಮ ಆಫ್ ಸ್ಪಿನ್ ಬೌಲಿಂಗ್ ಹಾಗೂ ಅದ್ಭುತ ಫೀಲ್ಡಿಂಗ್ ಮೂಲಕವೇ ಹೆಚ್ಚು ಸದ್ದು ಮಾಡ್ತಾರೆ. ಆದ್ರೆ ಇತ್ತೀಚೆಗೆ ಇಂಜುರಿಯಿಂದಾಗಿ ತಂಡದಿಂದ ಹೊರ ಬಿದ್ದ ಶ್ರೇಯಾಂಕ ಸದ್ಯ ರೀಲ್ಸ್‌ ಮಾಡ್ತಾ ಬ್ಯೂಸಿಯಾಗಿದ್ದಾರೆ. ಟಗರುಪುಟ್ಟಿ ಮಾಡ್ತಿರುವ ರೀಲ್ಸ್‌ಗಳು ಟ್ರೋಲ್‌ ಪೇಜ್‌ಗಳಿಗೆ ಆಹಾರ ಆಗಿದೆ. ಶ್ರೇಯಾಂಕ ಬಟ್ಟೆ, ರೀಲ್ಸ್‌ ಬಗ್ಗೆ ಬ್ಯಾಡ್‌ ಕಮೆಂಟ್ಸ್‌ ಬರ್ತಿದ್ದು, ಟ್ರೋಲರ್ಸ್‌ಗೆ ತನ್ನದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ DRAW ಬರೆ – WTC ರೇಸ್ ನಿಂದ ಗೇಟ್ ಪಾಸ್?

ಶ್ರೇಯಾಂಕ ಪಾಟೀಲ್..‌ ಆರ್‌ಸಿಬಿ ಅಭಿಮಾನಿಗಳ ಹಾಟ್‌ ಫೇವರೇಟ್‌ ಪ್ಲೇಯರ್‌.. ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟ ಕೆಲವೇ ಕೆಲವು ಟೈಮ್‌ನಲ್ಲಿ ಟಗರುಪುಟ್ಟಿ ಕ್ಲಿಕ್‌ ಆಗಿದ್ದಾರೆ.. ಬ್ಯಾಟಿಂಗ್‌.. ಫೀಲ್ಡಿಂಗ್‌.. ಬೌಲಿಂಗ್‌ ಈ ಮೂರರಲ್ಲೂ ಸಾಲಿಡ್‌ ಪರ್ಫಾಮೆನ್ಸ್‌ ಕೊಡ್ತಾ ಬಂದಿದ್ದಾರೆ ಕನ್ನಡದ ಕುವರಿ.. ಆದ್ರೆ ಇತ್ತೀಚೆಗೆ ಶ್ರೇಯಾಂಕ ಮೈದಾನದಲ್ಲಿ ಕಾಣಿಸಿಕೊಳ್ತಿಲ್ಲ.. ಇದಕ್ಕೆ ಕಾರಣ ಇಂಜುರಿ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದ ಕನ್ನಡತಿ ಸದ್ಯ ಚೇತರಿಸಿಕೊಳ್ತಿದ್ದಾರೆ. ಇದ್ರ ಜೊತೆಗೆ ಸೋಶಿಯಲ್‌ ಮೀಡಿಯಾದಲ್ಲೂ ಸಖತ್‌ ಆಕ್ಟೀವ್‌ ಆಗಿದ್ದಾರೆ. ಆಗಾಗ ಪೋಸ್ಟ್‌, ರೀಲ್ಸ್‌ ಶೇರ್‌ ಮಾಡ್ತಿರುತ್ತಾರೆ. ಇತ್ತೀಚೆಗೆ ಟಗರುಪುಟ್ಟಿ ಬಾಲಿವುಡ್‌ನ ಪ್ರಸಿದ್ದ ಬಬ್ಲಿ ಬದ್ಮಾಶ್  ಹಾಡಿಗೆ ಭರ್ಜರಿ ಸ್ಟೆಪ್ಸ್‌ ಹಾಕಿದ್ರು. ಇದ್ರ ರೀಲ್ಸ್‌ನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು ಭಾರಿ ವೈರಲ್‌ ಆಗಿದೆ. ಇದು ಟ್ರೋಲ್‌ ಪೇಜ್‌ಗಳಿಗೆ ಆಹಾರ ಆಗಿದೆ.

ಶ್ರೇಯಾಂಕ ಪಾಟೀಲ್‌ ಬ್ಯಾಟಿಂಗ್‌ಗೂ ಸೈ, ಬೌಲಿಂಗ್‌, ಫೀಲ್ಡಿಂಗ್‌ಗೂ ಜೈ.. ಇನ್ನು ಡ್ಯಾನ್ಸ್‌ ಮಾಡೋದ್ರಲ್ಲೂ ಎತ್ತಿದ ಕೈ.. ಮಲ್ಟಿ ಟ್ಯಾಲೆಂಟೆಡ್‌ ಆಗರುವ ಆರ್‌ಸಿಬಿ ಬೆಡಗಿ, ಆಗಾಗ ರೀಲ್ಸ್‌ಗಳನ್ನ ಪೋಸ್ಟ್‌ ಮಾಡ್ತಿರ್ತಾರೆ. ಇತ್ತೀಚೆಗೆ ಬಬ್ಲಿ ಬದ್ಮಾಶ್ ಹಾಡಿಗೆ ಡ್ಯಾನ್ಸ್‌ ಮಾಡಿದ್ರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ. ಈ ಬೆನ್ನಲ್ಲೇ ಕೆಲವರು ಶ್ರೇಯಾಂಕ ಪಾರ್ಟ್‌ ಟೈಂ ಕ್ರಿಕೆಟರ್..‌ ಫುಲ್‌ ಟೈಂ ಡ್ಯಾನ್ಸರ್..‌ ಬಾಲಿವುಡ್‌ ಆಕ್ಟರ್ಸ್‌ ಸಂಕಷ್ಟದಲ್ಲಿದ್ದಾರೆ ಎಂದು ಟ್ರೋಲ್‌ ಮಾಡಿದ್ರು. ಇನ್ನೂ ಕೆಲವರು ಕನ್ನಡತಿಯ ಡ್ರೆಸ್‌ ಬಗ್ಗೆ ಕಮೆಂಟ್‌ ಮಾಡ್ತಿದ್ದಾರೆ. ಇದೀಗ ಸಂದರ್ಶನವೊಂದ್ರಲ್ಲಿ ಶ್ರೇಯಾಂಕ ಟ್ರೋಲರ್ಸ್‌ಗೆ ಖಡಕ್‌ ಉತ್ತರ ನೀಡಿದ್ದಾರೆ. ಜನರು ಮೆಚ್ಚಲಿ ಅಥವಾ ಟ್ರೋಲ್ ಮಾಡಲಿ, ಅದು ನನಗೆ ಹೆಚ್ಚು Attention  ತಂದುಕೊಡುತ್ತದೆ. ನನಗೆ ಡ್ಯಾನ್ಸ್ ಮಾಡೋದು, ನನ್ನಿಷ್ಟದ ಉಡುಪು ಧರಿಸುವುದು ಹಾಗೂ ಇನ್‌ಸ್ಟಾಗ್ರಾಮ್ ಬಳಸುವುದು ಎಂದ್ರೆ ತುಂಬಾ ಇಷ್ಟ. ನನ್ನ ಬಗ್ಗೆ ಟ್ರೋಲ್ ಮಾಡುವವರು ಬಹುಶಃ ನನ್ನ ಬೆಳವಣಿಗೆಯನ್ನು ಕಂಡು ಅಸೂಯೆ ಪಡುತ್ತಿರಬಹುದು. ನಾನೇನು ಮಾಡುತ್ತಿದ್ದೇನೆಯೋ ಅದರಲ್ಲಿ ನನಗೆ ಖುಷಿಯಿದೆ ಅಂತ ಕಡ್ಡಿ ಮುರಿದಂತೆ ಹೇಳಿದ್ದಾರೆ.

ಇನ್ನು ಇತ್ತೀಚೆಗೆ ಶ್ರೇಯಾಂಕ ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವ  ಶ್ರೇಯಾಂಕಾ, ಕ್ರಿಕೆಟ್‌ನಿಂದ ದೂರ ಉಳಿಯುವ ಪರಿಸ್ಥಿತಿ ಎದುರಾಗಿದೆ. ಕಳೆದ ಜೂನ್‌ನಲ್ಲಿ ಇಂಜುರಿಯಿಂದಾಗಿ ಮಹಿಳಾ T20 ವಿಶ್ವಕಪ್‌ ಟೂರ್ನಿಯಿಂದಲೂ ಹೊರಬಿದ್ದಿದ್ದರು. ಈ ಬಗ್ಗೆಯೂ ಕನ್ನಡತಿ ಮಾತನಾಡಿದ್ದಾರೆ. ವಿಶ್ವಕಪ್‌ನಿಂದ ಹೊರಬಿದ್ದಾಗ ತೀವ್ರ ನಿರಾಶೆಗೊಂಡು ನನ್ನ ಕೋಚ್ ಅರ್ಜುನ್ ದೇವ್ ಅವರ ಬಳಿ ಹೋಗಿ, ನಾನು ಇನ್ನು ಕ್ರಿಕೆಟ್ ಆಡುವುದು ಬೇಡ, ಪದೇ ಪದೇ ನನಗೇಕೆ ಹೀಗಾಗುತ್ತಿದೆ? ಎಂದು ನೋವಲ್ಲೇ ಹೇಳಿದ್ದೆ. ಆದೇ ಸಂದರ್ಭದಲ್ಲಿ ನಾನು ಆಪರೇಷನ್ ಸಫೇದ್ ಸಾಗರ್ ಎಂಬ ವೆಬ್ ಸೀರೀಸ್ ನೋಡಿದೆ. ಗಡಿಯಲ್ಲಿ ದೇಶಕ್ಕಾಗಿ ಜೀವ ಕೊಡುವ ಯೋಧರನ್ನು ನೋಡಿದಾಗ ನನ್ನ ಯೋಚನೆ ಬದಲಾಯಿತು. ಕ್ರಿಕೆಟ್‌ನಲ್ಲಿ ಒಂದು ದಿನ ಸೋಲಬಹುದು ಅಥವಾ ಗಾಯಗೊಳ್ಳಬಹುದು, ಆದ್ರೆ ಮರುದಿನ ಎದ್ದು ಮತ್ತೆ ನಮಗಿಷ್ಟವಾದ ಆಟವನ್ನು ಆಡಲು ಅವಕಾಶವಿರುತ್ತದೆ ಎಂಬ ಸತ್ಯ ಅರಿವಾಯಿತು‌. ಹೀಗಾಗಿ ನಾನು ಸಾಧ್ಯವಾದಷ್ಟು ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ತೇನೆ ಎಂದಿದ್ದಾರೆ.

ಇನ್ನು ಇಂಜುರಿಗೆ ತುತ್ತಾಗಿರುವ ಕನ್ನಡತಿ ಮತ್ತೆ ಫೀಲ್ಡ್‌ಗೆ ಇಳಿಯೋದು ಯಾವಾಗ ಅನ್ನೋ ಪ್ರಶ್ನೆ ಫ್ಯಾನ್ಸ್‌ನ ಕಾಡ್ತಿದೆ. ಈ ಬಗ್ಗೆಯೂ ಅಪ್‌ಡೇಟ್‌ ಸಿಕ್ಕಿದೆ. ಶ್ರೇಯಾಂಕ  ಮುಂಬರುವ ಮಹಿಳಾ ಏಷ್ಯಾ ಕಪ್‌ನಿಂದ ಶ್ರೇಯಾಂಕಾ ಹೊರಗುಳಿದಿದ್ದಾರೆ. ಆದರೆ, ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2026ರ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಅವರಿಗೆ ಸ್ಥಾನ ನೀಡಲಾಗಿದೆ. ಫಿಟ್‌ನೆಸ್ ಪರೀಕ್ಷೆಯ ಬಳಿಕ ಮೈದಾನಕ್ಕಿಳಿಯಲಿದ್ದಾರೆ. ಸೋ ಶ್ರೇಯಾಂಕ ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಮತ್ತೆ ಮೈದಾನದಲ್ಲಿ ಅಬ್ಬರದ ಪ್ರದರ್ಶನ ನೀಡಲಿ ಅನ್ನೋದೇ ಎಲ್ಲರ ಆಶಯ.

Shwetha M

Leave a Reply

Your email address will not be published. Required fields are marked *