ಡಿಸಿ ಸ್ನೇಹ ಕಿರುತೆರೆಗೆ ರೀ ಎಂಟ್ರಿ.. ಹೆಣ್ಣಿಲ್ಲದ ಮನೆಗೆ ಸಂಜನಾ ಸೊಸೆ! – ಶ್ರೀಗಂಧದ ಗುಡಿಗೆ ಬರ್ತಾರಾ ಮೊಕ್ಷಿತಾ?

ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ನಟಿ ಸಂಜನಾ ಬುರ್ಲಿ ಡಿಸಿ ಸ್ನೇಹ ಪಾತ್ರಕ್ಕೆ ಜೀವ ತುಂಬಿದ್ರು.. ಡಿಸಿ ಸ್ನೇಹ ಆಗಿ ಕರುನಾಡಿನಲ್ಲಿ ಮನೆಮಾತಾಗಿದ್ದಾರೆ. ಆದ್ರೆ ಸಂಜನಾ ಬುರ್ಲಿ ಏಕಾಏಕಿ ಸೀರಿಯಲ್ ಬಿಟ್ಟು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ರು.. ಇದೀಗ ಸಂಜನಾ ಬುರ್ಲಿ ಮತ್ತೆ ಸೀರಿಯಲ್ ಗೆ ಎಂಟ್ರಿಕೊಟ್ಟಿದ್ದಾರೆ. ಸಂಜನಾ ಶ್ರೀಗಂಧದ ಗುಡಿ ಗೆ ಮಹಾಲಕ್ಷ್ಮೀಯಾಗಿ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ಶಾರ್ವರಿ ಆಟಕ್ಕೆ ರಾಧಾ ಬ್ರೇಕ್! ಶ್ರೀರಸ್ತು ಶುಭಮಸ್ತು ಎಂಡ್!
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಪುಟ್ಟಕ್ಕನ ಮಗಳಾಗಿ ನಟಿಸಿದ್ದ ಸಂಜನಾ ಬುರ್ಲಿ ಡಿಸಿ ಸ್ನೇಹ ಅಂತಾನೇ ಫೇಮಸ್ ಆಗಿದ್ದಾರೆ.. ಇವರ ಪಾತ್ರಕ್ಕೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇತ್ತು. ಆದ್ರೆ ಹೈಯರ್ ಸ್ಟಡಿ ಮಾಡ್ಬೇಕು ಅನ್ನೋ ಉದ್ದೇಶದಿಂದ ಕೆಲ ತಿಂಗಳ ಹಿಂದೆ ಸಂಜನಾ ಪುಟ್ಟಕ್ಕನ ಮಕ್ಕಳು ಸೀರಿಯಲ್ ಗೆ ಗುಡ್ಬೈ ಹೇಳಿದ್ರು. ಇದು ಸೀರಿಯಲ್ ತಂಡ ಹಾಗೇ ಫ್ಯಾನ್ಸ್ ಗೂ ಶಾಕ್ ಆಗಿತ್ತು. ಪುಟ್ಟಕ್ಕನ ಮಕ್ಕಳು ಸೀರಿಯಲ್ ನಿರ್ದೇಶಕರು ಈ ಪಾತ್ರಕ್ಕೆ ಮತ್ತೊಬ್ಬರನ್ನು ಹುಡುಕಿಕೊಂಡು ಬರಲಿಲ್ಲ. ಬದಲಾಗಿ ಅವರ ಪಾತ್ರವನ್ನೇ ಕೊನೆ ಮಾಡಿದ್ದರು. ಆ ಮಟ್ಟಿಗೆ ಡಿಸಿ ಸ್ನೇಹ ಪಾತ್ರ ಪ್ರಭಾವ ಬೀರಿತ್ತು. ಈಗಲೂ ಕೂಡ ಡಿಸಿ ಸ್ನೇಹ ಮತ್ತೆ ಸೀರಿಯಲ್ ಗೆ ಬರ್ಲಿ ಅಂತಾ ಫ್ಯಾನ್ಸ್ ಹೇಳ್ತಿದ್ದಾರೆ.. ಆದ್ರೀಗ ಸಂಜನಾ ಬುರ್ಲಿ ಸೀರಿಯಲ್ ಫ್ಯಾನ್ಸ್ ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಸಂಜನಾ ಮತ್ತೆ ಸೀರಿಯಲ್ ಗೆ ಎಂಟ್ರಿಕೊಟ್ಟಿದ್ದಾರೆ. ಆದ್ರೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಗೆ ಅಲ್ಲ. ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿರುವ ಹೊಸ ಸೀರಿಯಲ್ಲಿ ಶ್ರೀಗಂಧದ ಗುಡಿಯಲ್ಲಿ ನಾಯಕಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಹೌದು, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರ ಬಂದರೂ ಸಂಜನಾ ಬುರ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈ ವೇಳೆ ಅವರ ಅಭಿಮಾನಿಗಳು ಮತ್ತೆ ಸೀರಿಯಲ್ಗಳಿಗೆ ಮರಳುವಂತೆ ಒತ್ತಡ ಹಾಕಿದ್ದರು. ಈಗ ಅವರ ಆಸೆಯನ್ನು ಪೂರೈಸುವುದಕ್ಕೆ ಹೊಸ ಧಾರಾವಾಹಿ ಶ್ರೀಗಂಧದ ಗುಡಿ ಮೂಲಕ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಈ ಸೀರಿಯಲ್ ನ ಪ್ರೋಮೋ ರಿಲೀಸ್ ಆಗಿದೆ.
ಅಂದ್ಹಾಗೆ ಗಂಧದವ ಗುಡಿ ಸೀರಿಯಲ್ ನಲ್ಲಿ ಬಿಗ್ ಬಾಸ್ ಸೀಸನ್ 11 ಸ್ಪರ್ಧಿ ಶಿಶಿರ್ ಶಾಸ್ತ್ರಿ ನಾಯಕನಾಗಿ ನಟಿಸುತ್ತಿದ್ದಾರೆ. ಶಿಶಿರ್ ಮುತ್ತುರಾಜ್ ಎಂಬ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಶ್ರೀ ಗಂಧದ ಗುಡಿ’ ಪ್ರೋಮೋ ವೀಕ್ಷಕರ ಗಮನ ಸೆಳೆದಿದೆ. ನಾಲ್ಕು ಮಕ್ಕಳಿರುವ ಕುಟುಂಬ. ನಾಯಕ ಮುತ್ತುರಾಜ ಅಣ್ಣನಾಗಿದ್ರೆ, ಆತನಿಗೆ ಹರಿಶ್ಚಂದ್ರ, ಕಂಠೀರವ, ಮಯೂರ ಎಂಬ ಹೆಸರಿಡಲಾಗಿದೆ. ಆ ಕುಟುಂಬಕ್ಕೆ ಒಬ್ಬಳು ಹೆಣ್ಣು ಮಗಳು ಬರಬೇಕು. ಈ ಮನೆಯಲ್ಲಿ ನಡೆಯುತ್ತಿರುವ ಅಣ್ಣ ತಮ್ಮಂದಿರ ಜಗಳ ನಿಲ್ಲಬೇಕು ಅನ್ನೋ ಆಸೆ. ಇದೀಗ ಹೆಣ್ಣೇ ಇರದ ಮನೆಯೊಳಗೆ ಸಂಜನಾ ಬುರ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಹೌದು. ತಮ್ಮಂದಿರೆಲ್ಲಾ ಮುತ್ತುರಾಜನಿಗೆ ಮದ್ವೆ ಆಗ್ಲಿ ಅಂತಾ ದೇವರ ಹತ್ರ ಬೇಡಿಕೊಂಡ್ರೆ, ಇತ್ತ ಹರಿಶ್ಚಂದ್ರ ಮದ್ವೆ ಮಾಡಿಕೊಂಡು ಮನೆಗೆ ಬಂದಿದ್ದಾನೆ. ಸಂಜನಾ ಆ ಮನೆಗೆ ಕಾಲಿಡ್ತಿದ್ದಂತೆ ಸಾವಿರ ಸಾವಿರ ಸವಾಲು ಶುರುವಾಗಿದೆ. ಮನೆ ಸ್ಥಿತಿ ನೋಡಿ ರೋಸಿ ಹೋಗಿದ್ದಾಳೆ. ಇಡೀ ಮನೆಯನ್ನೇ ಬದಲಾಯಿಸ್ಬೇಕು ಅಂತಾ ಹೇಳಿದ್ದಾರೆ. ಇದೀಗ ಪ್ರೋಮೋ ನೋಡಿ ಸೀರಿಯಲ್ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಆದ್ರೆ ಇನ್ನೂ ಕೆಲವರು, ಡಿಸಿ ಸ್ನೇಹ ಕಂಠಿ ಜೋಡಿನೇ ಸೂಪರ್.. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಇದ್ರೇನೆ ಒಳ್ಳೆದಿತ್ತು.. ಆ ಪ್ರಾತದ ತೂಕ ಅಂತಹದ್ದು ಎಂದು ಕಾಮೆಂಟ್ ಮಾಡ್ತಿದ್ದಾರೆ.
ಇನ್ನು ಈ ಸೀರಿಯಲ್ ಗೆ ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿ ಮೋಕ್ಷಿತಾ ಪೈ ಆಯ್ಕೆ ಆಗಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.. ಆದ್ರೆ ಈ ಬಗ್ಗೆಯೂ ಮೋಕ್ಷಿತಾ ಆಗ್ಲೀ, ಕಲರ್ಸ್ ಕನ್ನಡ ವಾಹಿನಿ ಆಗ್ಲೀ ಯಾವುದೇ ಅಪ್ಡೇಟ್ ಕೊಟ್ಟಿಲ್ಲ.. ಮುಂದಿನ ದಿನಗಳಲ್ಲಿ ವಾಹಿನಿ ಅಪ್ಡೇಟ್ ಕೊಡುತ್ತಾ ಅಂತಾ ಕಾದುನೋಡ್ಬೇಕು. ಒಟ್ಟಿನಲ್ಲಿ ಗಂಧದ ಗುಡಿ ಸೀರಿಯಲ್ ಆರಂಭದಲ್ಲೇ ಭಾರಿ ಕುತೂಹಲ ಮೂಡಿಸಿದೆ.

ನೋಡಿರಿ

