ಸೋತ್ರೂ PAK ನಾಯಕಿ ದೌಲತ್ತು – ಸೆಂಡ್ ಆಫ್ ಫಾತಿಮಾ ಟ್ರೋಲ್
ಕ್ರಾಂತಿಯನ್ನ ಕೆಣಕಿ ಫ್ಯಾನ್ಸ್ ಹುಚ್ಚಾಟ

ಪಾಕಿಸ್ತಾನದವ್ರು ಆಫ್ ದಿ ಫೀಲ್ಡ್ನಲ್ಲಿ ಬಿಲ್ಡಪ್ ಕೊಡೋದಕ್ಕೂ ಆನ್ ಫೀಲ್ಡ್ ಪರ್ಫಾಮ್ ಮಾಡೋದಕ್ಕೂ ಮ್ಯಾಚೇ ಆಗಲ್ಲ. ಈಗ ಮಹಿಳಾ ಏಷ್ಯಾಕಪ್ ನಲ್ಲೂ ಅದೇ ಆಗಿದೆ. ಭಾರತದ ಸಿಂಹಿಣಿಯರ ವಿರುದ್ಧ ಅತ್ಯಂತ ಹೀನಾಯವಾಗಿ ಸೋತಿದ್ದಾರೆ. ಆದ್ರೂ ಅವ್ರ ಧಿಮಾಕಿಗೇನು ಕಮ್ಮಿ ಇಲ್ಲ. ಮತ್ತೊಂದೆಡೆ ತಮ್ಮ ಆಟಗಾರ್ತಿಯರ ಮಾನವನ್ನ ಅಲ್ಲಿನ ಅಭಿಮಾನಿಗಳ ಹರಾಜು ಹಾಕ್ತಿದ್ದಾರೆ.
ಇದನ್ನೂ ಓದಿ : ರೋಹಿತ್ ಮೇಲೆ ಕಣ್ಣಿಟ್ಟ BCCI – ವಿಶ್ವಕಪ್ ಗೆದ್ದು ಸಂಭ್ರಮಿಸ್ತಾರಾ ಕೊಹ್ಲಿ?
ಮಹಿಳಾ ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ ಹ್ಯಾಟ್ರಿಕ್ ವಿಕ್ಟರಿ ಗಳಿಸಿದೆ. ಅದೂ ಕೂಡ ಪಾಕಿಸ್ತಾನವನ್ನ ನೆಲ ಕಚ್ಚಿಸಿ ಈ ಸಾಧನೆ ಮಾಡಿದ್ದಾರೆ. ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಈ ಮ್ಯಾಚಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಕೇವಲ 55 ರನ್ಗಳಿಗೆ ಆಲೌಟ್ ಆಗಿತ್ತು. ಇದು T20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ತಂಡದ ಲೋಯೆಸ್ಟ್ ಸ್ಕೋರ್. ಇನ್ನು ಚೇಸಿಂಗ್ ಬೆನ್ನಟ್ಟಿದ ಭಾರತ 8.4 ಓವರ್ಗಳಲ್ಲಿ ಪಂದ್ಯವನ್ನು ಗೆದ್ದು ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಅಜೇಯವಾಗಿ ಸೆಮೀಸ್ಗೆ ಲಗ್ಗೆ ಇಟ್ಟಿದೆ. ಆದ್ರೆ ಪಂದ್ಯದ ವೇಳೆ ಧಿಮಾಕು ತೋರಿಸಿದ್ದ ಪಾಕ್ ನಾಯಕಿಗೆ ಅಲ್ಲಿನ ಅಭಿಮಾನಿಗಳ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಸೆಂಡ್ ಆಫ್ ಸಹ್ನೆ ಮಾಡಿದ್ದ ಫಾತಿಮಾ ಫುಲ್ ಟ್ರೋಲ್!
ಪಾಕಿಸ್ತಾನದ ಮೆನ್ಸ್ ಌಂಡ್ ವುಮೆನ್ಸ್ ಟೀಮ್ನಲ್ಲಿ ಆಟಗಾರರು ಮೈದಾನದಲ್ಲಿ ಆಡಿದ್ದಕ್ಕಿಂತ ಜಾಸ್ತಿ ಗಾಂಚಾಲಿ ಮಾಡಿದ್ದೇ ಹೆಚ್ಚು. ಭಾರತ ವಿರುದ್ಧದ ಮ್ಯಾಚಲ್ಲೂ ಹೀಗೇ ಆಗಿದೆ. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಪಾಕ್ ಟೀಂ ಟೋಟಲ್ ಆಗಿ ಕಲೆ ಹಾಕಿದ್ದೇ 55 ರನ್ಸ್.. ಅದ್ರಲ್ಲಿ ನಾಯಕಿ ಫಾತಿಮಾ 7 ಬಾಲ್ ಫೇಸ್ ಮಾಡಿದ್ರೂ ಖಾತೆ ತೆರೆಯೋಕೆ ಆಗದೆ ದೀಪ್ತಿ ಶರ್ಮಾಗೆ ವಿಕೆಟ್ ಒಪ್ಪಿಸಿದ್ರು. ಬಟ್ ಬೌಲಿಂಗ್ನಲ್ಲಿ 3 ವಿಕೆಟ್ಸ್ ತಗೊಂಡ್ರು. ಆದ್ರೆ ಭಾರತ ಓಪನರ್ ಶಫಾಲಿ ವರ್ಮಾ 6 ಎಸೆತಗಳಲ್ಲಿ 12 ರನ್ ಗಳಿಸಿ ಫಾತಿಮಾ ಬೌಲಿಂಗ್ನಲ್ಲಿ ಕಾಟನ್ ಬೌಲ್ಡ್ ಆದ್ರು. ಈ ವೇಳೆ ಫಾತಿಮಾ ಪೆವಿಲಿಯನ್ಗೆ ಹೋಗು ಎನ್ನುವಂತೆ ಕೈ ಸನ್ನೆ ಮಾಡಿದ್ದಾರೆ. ಫಾತಿಮಾರ ಇದೇ ಓವರ್ ಌಟಿಟ್ಯೂಡ್ ಎಲ್ಲರ ಕಣ್ಣು ಕೆಂಪಾಗಿಸಿದೆ. ಕಾಮೆಂಟೇಟರ್ ವಿವೇಕ್ ರಜ್ದಾನ್ ನಿಮ್ಮ ತಂಡ 55ಕ್ಕೆ ಆಲೌಟ್ ಆಗಿದೆ. ಇಷ್ಟೆಲ್ಲಾ ಬಿಲ್ಡಪ್ ಬೇಡ ಎಂದಿದ್ದಾರೆ. ಹಾಗೇ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ತಿರುಗೇಟು ಕೊಟ್ಟಿದ್ದಾರೆ. ನಿಮ್ಮ ಕ್ರಿಕೆಟ್ನಲ್ಲಿ ನಿಮ್ಮನ್ನ ನೀವು ಇಂಪ್ರೂವ್ ಮಾಡಿಕೊಳ್ಳಿ. ಈ ರೀತಿ ಅನಗತ್ಯ ಸನ್ನೆಗಳನ್ನು ಮಾಡುವ ಬದಲು ಮೊದಲು ಕನ್ನಡಿಯಲ್ಲಿ ನೋಡಿಕೊಳ್ಳಿ ಅನ್ನೋ ಮೂಲಕ ಟಾಂಟ್ ಕೊಟ್ಟಿದ್ದಾರೆ. ಹಾಗೇ ಫಾತಿಮಾ ಅತಿರೇಕದ ವರ್ತನೆಯ ವಿಡಿಯೋ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಕೂಡ ಟ್ರೋಲ್ ಮಾಡ್ತಿದ್ದಾರೆ. ಮತ್ತೊಂದೆಡೆ ಕ್ರಾಂತಿಗೌಡ ವಿಚಾರದಲ್ಲೂ ಹುಚ್ಚಾಟ ಆಡಿದ್ದಾರೆ. ಒಂದ್ಕಡೆ ಪಾಕಿಸ್ತಾನ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳ್ಕೊಳ್ತಿದ್ರೆ ಮತ್ತೊಂದೆಡೆ ಫ್ಯಾನ್ಸ್ ಹುಚ್ಚಾಟ ಆಡಿದ್ದಾರೆ. ಟೀಂ ಇಂಡಿಯಾದ ಯುವ ಬೌಲರ್ ಕ್ರಾಂತಿ ಗೌಡ್ ಬೌಂಡರಿ ಲೈನ್ ಬಳಿ ಫಿಲ್ಡಿಂಗ್ ಮಾಡುವಾಗ ಹೇ ಹುಡುಗ, ಹೇ ಹುಡುಗ, ಹುಡುಗ ಕ್ರಿಕೆಟ್ ಆಡುತ್ತಿದ್ದಾನೆ. ಭಾರತ ಹೇಗೆ ಗೆಲ್ಲುತ್ತಿದೆ ನೋಡಿ.. ಇಲ್ಲಿ ಬಾ ಲಡ್ಕ ಅಂತಾ ಮಿತಿ ಮೀರಿ ವರ್ತಿಸಿದ್ದಾರೆ.
ಟೂರ್ನಿಯಲ್ಲಿ ನಮ್ಮದೇ ಬೆಸ್ಟ್ ಟೀಂ ಎಂದ ಪಾಕ್ ಕೋಚ್!
ಪಾಕಿಸ್ತಾನ ತಂಡ 55 ರನ್ಗಳಿಗೆ ಆಲೌಟ್ ಆಗಿ ಹೀನಾಯವಾಗಿ ಸೋತಿದ್ರೂ ಆ ತಂಡದ ಕೋಚ್ ವಾಹಬ್ ರಿಯಾಝ್ ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ. ಈ ಏಷ್ಯಾ ಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲು ಪಾಕಿಸ್ತಾನವೇ ಅತ್ಯುತ್ತಮ ತಂಡ. ಬಹಳ ಪ್ರತಿಭಾವಂತ ಆಟಗಾರ್ತಿಯರು ತಂಡದಲ್ಲಿದ್ದಾರೆ. ಜೊತೆಗೆ ದುಬೈನ ಇಲ್ಲಿನ ಮೈದಾನ ಮತ್ತು ಪಿಚ್ ನಮಗೆ ಚೆನ್ನಾಗಿ ತಿಳಿದಿದೆ. ಭಾರತದ ವಿರುದ್ಧ ಸೋತಿದ್ರೂ ಎಲ್ಲಿ ತಪ್ಪಾಯ್ತು ಅನ್ನೋದನ್ನ ಚರ್ಚೆ ಮಾಡ್ತೇವೆ. ನೆಕ್ಸ್ಟ್ ಇದನ್ನ ರಿಪೀಟ್ ಮಾಡಲ್ಲ ಅಂದಿದ್ದಾರೆ. ಜಟ್ಟಿ ಜಾರಿಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಹಾಗೇ ರಿಯಾಜ್ ಮಾತಿಗೆ ಅಲ್ಲಿನ ಅಭಿಮಾನಿಗಳೇ ಆಕ್ರೋಶಗೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಲೆಗಸಿ ಕಂಟಿನ್ಯೂ ಅಂತೆಲ್ಲಾ ಟೀಸ್ ಮಾಡಿದ್ದಾರೆ. ಒಟ್ನಲ್ಲಿ 2022 ರಿಂದ ಭಾರತದ ವಿರುದ್ಧ ಒಂದೇ ಒಂದು ಪಂದ್ಯ ಗೆಲ್ಲದ ಪಾಕಿಸ್ತಾನ ಮಹಿಳಾ ತಂಡ ಮೈದಾನದಲ್ಲಿ ತಮ್ಮ ಟ್ಯಾಲೆಂಟ್ ತೋರಿಸೋಕೆ ಆಗದಿದ್ರೂ ಬೇಡದೇ ಇರೋ ದರ್ಪ ತೋರಿಸಿ ತಮ್ಮ ಮಾನ ತಾವೇ ಕಳ್ಕೊಳ್ತಿದ್ದಾರೆ.

ನೋಡಿರಿ

