ಶ್ರಾವಣಿ ನಟಿ ಮಾತ್ರವಲ್ಲ.. ಖ್ಯಾತ ಮಾಡೆಲ್! – ಆಸಿಯಾ ಫಿರ್ದೋಸ್ ಯಾರು ಗೊತ್ತಾ?

ಜೀ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಸೀರಿಯಲ್ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಶ್ರಾವಣಿ, ಸುಬ್ಬು ಮುಂದೆ ವಿಜಯಾಂಬಿಕಾ ಒಂದೊಂದೇ ಕರಾಳ ಮುಖ ಬಯಲಾಗುತ್ತಿದೆ. ಅತ್ತ ಶ್ರಾವಣಿ ಕೂಡ ದಿನದಿಂದ ದಿನಕ್ಕೆ ತಂದೆಗೆ ಹತ್ತಿರವಾಗ್ತಿದ್ದಾಳೆ.. ಎಡವಟ್ಟು ರಾಣಿ, ಸದಾ ಸುಬ್ಬು ಹಿಂದೆ ಓಡಾಡುವ ಶ್ರಾವಣಿ ಪಾತ್ರ ವೀಕ್ಷಕರ ಮನಗೆದ್ದಿದೆ. ಅಂದ ಹಾಗೆ ಈ ಶ್ರಾವಣಿ ಪಾತ್ರ ಮಾಡುತ್ತಿರುವ ನಟಿ ಯಾರು ಗೊತ್ತಾ? ಆಕೆಯ ರಿಯಲ್ ನೇಮ್ ಏನು? ಈ ಹಿಂದೆ ಯಾವ ಸೀರಿಯಲ್‌ನಲ್ಲಿ ನಟಿಸಿದ್ರು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 2 ಸಲ ತರುಣ್ ಸೋನಲ್ ವಿವಾಹ – ಗೆಳೆಯನ ಮದುವೆಗೆ ದರ್ಶನ್ ಬರ್ತಾರಾ?
ಜೀ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಸೀರಿಯಲ್ ಶ್ರಾವಣಿ ಸುಬ್ರಹ್ಮಣ್ಯ ವೀಕ್ಷಕರ ಮನಗೆದ್ದಿದೆ. ತೆಲುಗಿನಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಈ ಸೀರಿಯಲ್ ಅನ್ನ ಕನ್ನಡಕ್ಕೆ ರೀಮೇಕ್ ಮಾಡಲಾಗಿದೆ. ವೀಕ್ಷಕರಿಗೆ ಕಥೆಯ ಜೊತೆಗೆ ಸೀರಿಯಲ್‌ನಲ್ಲಿ ಬರುವ ಪ್ರತಿಯೊಂದು ಪಾತ್ರವೂ ಕೂಡ ಅಚ್ಚುಮೆಚ್ಚಾಗಿದೆ. ಇದ್ರಲ್ಲಿ ಎಡವಟ್ಟು ರಾಣಿ ಶ್ರಾವಣಿ ಹಾಗೂ ಸುಬ್ಬು ಪಾತ್ರ ತುಂಬಾನೇ ಹೈಲೈಟ್ ಆಗಿದೆ. ಅಂದ್ಹಾಗೆ ಸೀರಿಯಲ್‌ನಲ್ಲಿ ಶ್ರಾವಣಿ ಪಾತ್ರ ಮಾಡುತ್ತಿರುವವರು ಆಸಿಯಾ ಫಿರ್ದೋಸ್. ಶ್ರೀಮಂತ ಮನೆಯಲ್ಲಿ ಹುಟ್ಟಿದರೂ ಅಪ್ಪನ ಪ್ರೀತಿಗೆ ಹಂಬಲಿಸುವ ಮಗಳಾಗಿ ಆಸಿಯಾ ಅದ್ಭುತವಾಗಿ ನಟಿಸಿದ್ದಾರೆ.
ಅಪ್ಪನ ಪ್ರೀತಿಯನ್ನು ಹೇಗಾದರೂ ಪಡೆಯಬೇಕು ಎಂದು ಹಂಬಲಿಸುವ ಶ್ರಾವಣಿ ಒಂಥರಾ ಎಡವಟ್ಟು ರಾಣಿ, ಪದೇ ಪದೇ ತಪ್ಪುಗಳನ್ನು ಮಾಡುವ ಮೂಲಕ ಅಪ್ಪನಿಂದ ಬೈಸಿಕೊಳ್ಳುತ್ತಲೇ ಇರುತ್ತಾಳೆ. ಆದರೂ ಛಲ ಬಿಡದೆ ಒಂದಲ್ಲ ಒಂದು ಸಾಹಸ ಮಾಡುತ್ತಿರುತ್ತಾಳೆ ಶ್ರಾವಣಿ. ಇದೀಗ ಆಕೆಯ ತಾಯಿ ಊರಿನಲ್ಲಿ ಪುಷ್ಕರಣಿ ಉತ್ಸವ ನಡೆಯುತ್ತಿದ್ದು, ಅದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಈ ಉತ್ಸವದಿಂದಾಗಿ ತಂದೆ ಮಗಳು ಹತ್ತಿರವಾಗಿದ್ದಾರೆ. ಶ್ರಾವಣಿ ಮುಖ ನೋಡಿದ ಕೂಡಲೇ ಕೆಂಡ ಕಾರ್ತಿದ್ದ ತಂದೆ ಮಗಳಿಗೆ ಜ್ವರ ಬಂದಾಗ ಆರೈಕೆ ಮಾಡಿದ್ದಾರೆ. ಸದ್ಯ ಈ ಸೀರಿಯಲ್ ವೀಕ್ಷಕರಿಗೆ ಇಷ್ಟವಾಗುತ್ತಿದೆ.
ಅಂದ್ಹಾಗೆ 26 ವರ್ಷದ ನಟಿ ಆಸಿಯಾ ಮೂಲತಃ ಬೆಂಗಳೂರಿನವರು. ವಿದ್ಯಾಭ್ಯಾಸವನ್ನ ಕೂಡ ಬೆಂಗಳೂರಿನಲ್ಲೇ ಮುಂದುವರೆಸಿದ್ದಾರೆ. ಕಾಲೇಜ್ ದಿನಗಳಲ್ಲೇ ಕರಿಯರ್ ಶುರು ಮಾಡಿಕೊಂಡಿದ್ದ ಇವರು ಮಾಡೆಲ್ ಆಗಿ ಹತ್ತು ಹಲವಾರು ಬ್ರ್ಯಾಂಡ್‌ಗಳ ಜೊತೆ ಕೊಲ್ಯಾಬ್ ಮಾಡಿಕೊಂಡಿದ್ದಾರೆ.. ಇಷ್ಟೇ ಅಲ್ಲ ಓದುತ್ತಿರುವಾಗಲೇ ಬ್ಯೂಟಿ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದ ನಟಿ ಆಸಿಯಾ ಪ್ರೆಶ್ ಫೆಸ್ ರನ್ನರ್ ಅಪ್ ಕೂಡಾ ಹೌದು..
ಇನ್ನು ಆಸಿಯಾ ಫಿರ್ದೋಸ್ ಶ್ರಾವಣಿ ಸುಬ್ರಹ್ಮಣ್ಯಾ ಸೀರಿಯಲ್‌ಗಿಂತ ಮೊದಲು ಬೇರೆ ಸೀರಿಯಲ್‌ನಲ್ಲೂ ನಟಿಸಿದ್ದರು. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಕನ್ನಿಕಾ ಆಗಿ ನಟಿಸಿದ್ದರು ಆಸಿಯಾ. ಆ ಸೀರಿಯಲ್ ನಲ್ಲಿ ಭಕ್ತಿ, ಮುಗ್ದತೆ, ದೈವೀಕತೆಯ ಪ್ರತೀಕವಾಗಿದ್ದ ಕನ್ನಿಕಾ ಪಾತ್ರದಲ್ಲಿ ಆಸಿಯಾ ಮಿಂಚಿದ್ದರು. ಕಾರಣಾಂತರಗಳಿಂದ ಧಾರಾವಾಹಿ ಬೇಗನೆ ಮುಗಿದು ಹೋಯಿತು. ಕನ್ಯಾಕುಮಾರಿ ಬಳಿಕ ದ್ವಂಧ್ವ ಎನ್ನುವ ಸಿನಿಮಾದಲ್ಲಿ ನಟಿಸಿದ್ರ. ಅದಾದ್ಮೇಲೆ ಆಸಿಯಾ ಮಿಲನ ಎನ್ನುವ ವೆಬ್ ಸೀರೀಸ್ ನಲ್ಲೂ ನಟಿಸಿದ್ದಾರೆ. ಇನ್ನು ಕೋಮಲ್ ಜೊತೆಗೆ ಕಾಲಾಯ ನಮಃ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೀಗೆ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಆಸಿಯಾ ಫಿರ್ದೋಸ್ ಸದ್ಯ ಶ್ರಾವಣಿ ಸುಬ್ರಮಣ್ಯ ಮೂಲಕ ಎಲ್ಲರ ಮನೆಮಗಳಾಗಿದ್ದಾರೆ..