ಶ್ರದ್ಧಾ ಹತ್ಯೆ – ಒಂದು ವಾರದ ಮುನ್ನವೇ ಅವಳನ್ನು ಕೊಲೆ ಮಾಡಬೇಕಿತ್ತು, ಆದ್ರೆ ಮಿಸ್ ಆಯ್ತು!

ಶ್ರದ್ಧಾ ಹತ್ಯೆ – ಒಂದು ವಾರದ ಮುನ್ನವೇ ಅವಳನ್ನು ಕೊಲೆ ಮಾಡಬೇಕಿತ್ತು, ಆದ್ರೆ ಮಿಸ್ ಆಯ್ತು!

ನವದೆಹಲಿ: ದೆಹಲಿಯಲ್ಲಿ ನಡೆದಿರುವ ಶ್ರದ್ದಾ ವಾಲ್ಕರ್ ಹತ್ಯೆ ಪ್ರಕರಣ ಇಡೀ ದೇಶವೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಈ ಪ್ರಕರಣ ಬೆಳಕಿಗೆ ಬರತ್ತಿದ್ದಂತೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆ ವೇಳೆ “ ಶ್ರದ್ಧಾಳನ್ನು ಒಂದು ವಾರದ ಮುನ್ನವೇ ಕೊಲೆ ಮಾಡಬೇಕಿತ್ತು. ಆದರೆ ಮಿಸ್ ಆಯಿತು ಎಂದು ಹೇಳಿದ್ದು, ಈತನ ಮಾತು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಇದನ್ನೂ ಓದಿ:ಶ್ರದ್ಧಾ ಹತ್ಯೆ ಪ್ರಕರಣ- ಅಫ್ತಾಬ್ ಪೊಲೀಸರ ಅತಿಥಿಯಾಗಿದ್ದು ಹೇಗೆ?

ಪೊಲೀಸರ ಮಂದೆ ಅಫ್ತಾಬ್ ಹೇಳಿದ್ದೇನು?

ವಿಚಾರಣೆ ವೇಳೆ ಅಫ್ತಾಬ್ ದೆಹಲಿ ಪೊಲೀಸರ ಎದುರು ಆಘಾತಕಾರಿ ಅಂಶಗಳನ್ನು ಬಾಯ್ಬಿಟ್ಟಿದ್ದಾನೆ. ಶ್ರದ್ಧಾ ಕೊಲೆ ಮಾಡುವ ವಾರದ ಹಿಂದೆಯೇ ಆಕೆಯನ್ನು ಮುಗಿಸಲು ಮಾಡಿಕೊಂಡಿದ್ದ. ನನಗೂ ಶ್ರದ್ಧಾಗೂ ತಿಂಗಳಾನುಘಟ್ಟಲೆ ಆಗಾಗ ಜಗಳ ಆಗುತ್ತಿತ್ತು. ಇದೇ ಕಾರಣಕ್ಕೆ ನಾನು ಅವಳನ್ನು ಕೊಂದಿದ್ದೇನೆ ಎಂದು ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ.

ನಾನು ಬೇರೆ ಹುಡುಗಿಯರ ಜೊತೆ ಮಾತನಾಡುವುದು ಶ್ರದ್ದಾಗೆ ಇಷ್ಟವಾಗುತ್ತಿರಲ್ಲಿಲ್ಲ

ನಾನು ಬೇರೆ ಹುಡುಗಿಯರ ಜೊತೆ ಮಾತಾನಾಡುವುದು ಶ್ರದ್ಧಾಗೆ ಇಷ್ಟವಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ಪದೇ ಪದೇ ಜಗಳ ಮಾಡುತ್ತಿದ್ದಳು. ನಾನು ಬೇರೆ ಹುಡುಗಿಯರೊಂದಿಗೆ ಫೋನ್ ನಲ್ಲಿ ಮಾತಾಡಲು ಶ್ರದ್ಧಾ ಬಿಡ್ತಿರಲಿಲ್ಲ. ನಾನು ಬೇರೆ ಹುಡುಗಿಯರೊಂದಿಗೆ ಮಾತಾಡುತ್ತಿದ್ದನ್ನು ಅನುಮಾನಿಸಿ, ಕೋಪಗೊಳುತ್ತಿದ್ದಳು ಎಂದಿದ್ದಾನೆ.

ಒಂದು ವಾರದ ಮುನ್ನವೇ ಅವಳನ್ನು ಕೊಲೆ ಮಾಡಬೇಕಿತ್ತು!

ಕೊಲೆಯಾದ ಮೇ 18ಕ್ಕಿಂತ ಒಂದು ವಾರದ ಮುನ್ನವೇ ಅವಳನ್ನು ಕೊಲ್ಲಬೇಕಿತ್ತು. ಆದರೆ ಮಿಸ್ ಆಯಿತು. ಜಗಳ ಮಾಡುತ್ತಾ ಎಮೋಷನ್ ಆದಳು. ಅಲ್ಲದೇ ಅಳುವುದಕ್ಕೆ ಶುರು ಮಾಡಿದ್ದಳು. ಅದಕ್ಕೆ ಆವತ್ತು ಸುಮ್ಮನೆ ಬಿಟ್ಟಿದ್ದೆ. ಆದರೆ ಮೇ 18ರಂದು ಮತ್ತೆ ಜಗಳ ಆಯಿತು. ಮಾತಿಗೆ ಮಾತು ಬೆಳೆದಿದ್ದರಿಂದ ಶ್ರದ್ಧಾಳ ಕಥೆ ಮುಗಿಸಿದೆ  ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

suddiyaana