ಸಿರಾಜ್ ಮೇಲೆ ಶ್ರದ್ಧಾಗೆ ಲವ್? – ಕಪೂರ್ ಪ್ರಪೋಸಲ್ ಒಪ್ಪಿದ DSP?

ಮೊಹಮ್ಮದ್ ಸಿರಾಜ್.. ಟೀಮ್ ಇಂಡಿಯಾದ ವೇಗದ ಬೌಲರ್.. ಈ ಬಾರಿಯ ಐಪಿಎಲ್ ನಲ್ಲೂ ಸಿರಾಜ್ ಅದ್ಬುತ ಪ್ರದರ್ಶನ ನೀಡಿದ್ರು. ಗುಜರಾತ್ ಟೈಟನ್ಸ್ ಪರ ಆಡಿರೋ ಸಿರಾಜ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ರು.. ಸಿರಾಜ್ ಕ್ರಿಕೆಟ್ ಮೈದಾನದಲ್ಲಿ ಹೆಚ್ಚು ಸೌಂಡ್ ಮಾಡ್ತಿದ್ದಂತೆ ಅವ್ರ ವೈಯಕ್ತಿಕ ವಿಚಾರ ಕೂಡ ಚರ್ಚೆಯಲ್ಲಿದೆ. ಇದೀಗ ಸಿರಾಜ್ ಹೆಸ್ರು ನಟಿಯೊಬ್ಬರ ಜೊತೆ ತಳುಕು ಹಾಕಿಕೊಂಡಿದೆ.. ಮೊಹಮ್ಮದ್ ಸಿರಾಜ್ ಮೇಲೆ ಬಾಲಿವುಡ್ ನಟಿಗೆ ಪ್ರೀತಿ ಆಗಿದ್ಯಂತೆ. ಈಗ ಇವರಿಬ್ರು ಕದ್ದುಮುಚ್ಚಿ ಡೇಟಿಂಗ್ ನಡೆಸ್ತಿದ್ದಾರೆ ಎಂಬ ಗಾಸಿಪ್ ಹರಿದಾಡ್ತಿದೆ.
ಇದನ್ನೂ ಓದಿ: ಆಗ RCB.. ಈಗ ENGನಲ್ಲಿ ಪಲ್ಟಿ – ಪಂತ್ ಸೆಂಚುರಿ ಸೆಲೆಬ್ರೇಷನ್ ಸೂಪರ್
ಕಳೆದ 7 ವರ್ಷಗಳಿಂದ ಆರ್‌ಸಿಬಿಯ ಭಾಗವಾಗಿದ್ದ ಮೊಹಮ್ಮದ್ ಸಿರಾಜ್ ಈ ವರ್ಷ ಜಿಟಿ ತಂಡದ ಭಾಗವಾಗಿದ್ರು. ಗುಜರಾತ್ ಟೈಟನ್ಸ್ ಫ್ರಾಂಚೈಸಿ 12.5 ಕೋಟಿಗೆ ಸಿರಾಜ್ ನ ಖರೀಸಿತ್ತು.. ಈ ವರ್ಷ ಅದ್ಬುತ ಪ್ರದರ್ಶನ ನೀಡಿ ಫ್ರಾಂಚೈಸಿ ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನ ಉಳಿಸಿಕೊಂಡಿದ್ದಾರೆ. ತಮ್ಮ ಫಾಸ್ಟ್ ಬೌಲಿಂಗ್‌ನಿಂದಲೇ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಐಪಿಎಲ್ ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರೋ ಸಿರಾಜ್ ಈಗ ಪ್ರೀತಿಯಲ್ಲಿ ಬಿದ್ದಿದ್ದಾರಾ ಅನ್ನೋ ಅನುಮಾನ ಫ್ಯಾನ್ಸ್ ನ ಕಾಡ್ತಿದೆ. ಸಿರಾಜ್ ಹೆಸ್ರು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಜೊತೆ ತಳುಕು ಹಾಕಿಕೊಂಡಿದೆ. ಇವರಿಬ್ರು ಡೇಟಿಂಗ್ ನಡೆಸ್ತಿದ್ದಾರೆ ಅನ್ನೋ ಸುದ್ದಿ ಜೋರಾಗಿ ಸದ್ದು ಮಾಡ್ತಿದೆ.
ಹೌದು ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಸಿರಾಜ್ ಹಾಗೂ ಶ್ರದ್ಧಾ ಕಪೂರ್ ಡೇಟಿಂಗ್ ನಡೆಸ್ತಿದ್ದಾರೆ.. ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ವೈರಲ್ ಆಗ್ತಿದೆ. ಸಿರಾಜ್ ಮತ್ತು ಶ್ರದ್ಧಾ ಕಪೂರ್ ಲವ್ ಸ್ಟೋರಿ ಅಂತ ಸರ್ಚ್ ಕೊಟ್ಟರೆ ಸಾಕು. ಇವರ ಬಗೆಗಿನ ಸುದ್ದಿ ಕಾಣಿಸಿಕೊಳ್ತಿದೆ. ಅಂದ್ಹಾಗೆ ಶ್ರದ್ಧಾ ಜೊತೆ ಸಿರಾಜ್ ಹೆಸ್ರು ತಳುಕು ಹಾಕಿಕೊಳ್ಳೊದಿಕ್ಕೂ ಒಂದು ಕಾರಣ ಇದೆ. 2023ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಗೆದ್ದು ಬೀಗಿತ್ತು. ಮೊಹಮ್ಮದ್ ಸಿರಾಜ್ ಹೊಡೆತಕ್ಕೆ ಶ್ರೀಲಂಕಾ ತಂಡ ತತ್ತರಿಸಿತ್ತು. ಸಿರಾಜ್ 21 ರನ್ ನೀಡಿ 6 ವಿಕೆಟ್ ಪಡೆದು ಪಂದ್ಯದ ಹೀರೋ ಆಗಿದ್ರು. ಈ ವೇಳೆ ಇಡೀ ದೇಶವೇ ಸಿರಾಜ್‌ನ ಕೊಂಡಾಡಿತ್ತು. ಆಗ ನಟಿ ಶ್ರದ್ಧಾ ಕಪೂರ್ ಕೂಡ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ರು.. ಇದ್ರಲ್ಲಿ ಸಿರಾಜ್ ಗೆ ತುಂಟ ಪ್ರಶ್ನೆಯೊಂದನ್ನ ಕೇಳಿದ್ರು.. ಸಿರಾಜ್ ಬಳಿ ಒಂದು ಪ್ರಶ್ನೆ ಕೇಳೋದಿದೆ. ನೀವು ಇಷ್ಟೊಂದು ಫ್ರೀ ಇರೋ ಟೈಮ್ ನಲ್ಲಿ ಏನ್ ಮಾಡ್ತೀರಾ ಅಂತಾ ಕೇಳಿದ್ರು.. ಇಲ್ಲಿಂದಲೇ ಶ್ರದ್ಧಾ ಜೊತೆ ಸಿರಾಜ್ ಹೆಸ್ರು ತಳುಕುಹಾಕಿಕೊಂಡಿದೆ. ಶ್ರದ್ಧಾ ಸಿರಾಜ್‌ಗೆ ಲೈನ್ ಹೊಡಿತಿದ್ದಾರೆ.. ಶ್ರದ್ಧಾ ಪ್ರಪೋಸಲ್ ನ ಸಿರಾಜ್ ಒಪ್ಪಿಕೊಂಡಿದ್ದಾರೆ. ಶ್ರೀಘ್ರದಲ್ಲೇ ಮದ್ವೆ ಕೂಡ ಆಗ್ತಾರೆ ಅಂತ ಫ್ಯಾನ್ಸ್ ಕಾಮೆಂಟ್ ಮಾಡಿದ್ರು. ಆದ್ರೆ ಇವರಿಬ್ರು ಲವ್ ಮಾಡ್ತಿದ್ದಾರೆ.. ಮದ್ವೆ ಆಗ್ತಾರೆ ಅನ್ನೋದಕ್ಕೆ ಯಾವುದೇ ಪುರಾವೆಗಳಿಲ್ಲ.. ಮೊಹಮ್ಮದ್ ಸಿರಾಜ್ ಕೂಡ ಲವ್ ಇರೋ ಬಗ್ಗೆ ಆಗ್ಲೀ.. ಸ್ನೇಹ ಇರೋ ಬಗ್ಗೆ ಆಗ್ಲೀ ಎಲ್ಲೂ ಹೇಳಿಕೊಂಡಿಲ್ಲ. ಎಲ್ಲವೂ ಫ್ಯಾನ್ ಮೇಡ್ ಲವ್ ಸ್ಟೋರಿ ಅಂತಲೇ ಹೇಳಬಹುದು.
ಇನ್ನು ಮೊಹಮ್ಮದ್ ಸಿರಾಜ್ ಹೆಸ್ರು ಇದಕ್ಕೂ ಮೊದಲು ಕೂಡ ಸುಂದರಿಯರ ಜೊತೆ ತಳುಕು ಹಾಕಿಕೊಂಡಿತ್ತು. ಗಾಯಕಿ ಆಶಾ ಭೋಂಸ್ಲೆ ಅವರ ಮೊಮ್ಮಗಳ ಹೆಸರು ತಳುಕು ಹಾಕಿಕೊಂಡಿತ್ತು.. ಝನಾಯಿ ಭೋಂಸ್ಲೆ ಅವರನ್ನ ಸಿರಾಜ್ ಲವ್ ಮಾಡುತ್ತಿದ್ದಾರೆ. ಈ ಜೋಡಿ ಡೇಟಿಂಗ್, ಮೀಟಿಂಗ್ ಅಂತಾ ಬ್ಯೂಸಿ ಆಗಿದೆ ಅಂತಾ ಹೇಳಲಾಗ್ತಿತ್ತು.. ಆದ್ರೆ ಝನಾಯಿ ಭೋಂಸ್ಲೆ ಹರಿದಾಡ್ತಿರೋ ಸುದ್ದಿಗೆ ಬ್ರೇಕ್ ಹಾಕಿದ್ರು.. ಸಿರಾಜ್, ನನ್ನ ಪ್ರೀತಿಯ ಸಹೋದರನಂತೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ರು.. ಹೀಗಾಗಿ ಈ ವದಂತಿಗೆ ಪೂರ್ಣವಿರಾಮ ಬಿದ್ದಿತ್ತು. ಅದಾದ ಬಳಿಕ ಬಿಗ್ ಬಾಸ್ ಸೀಸನ್ 13 ರ ಬ್ಯೂಟಿ ಮಹಿರಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಸಿರಾಜ್ ಮತ್ತು ಮಹಿರಾ ಅವರ ಆಪ್ತರು ಕೂಡ ಅವರ ಪ್ರೀತಿಯನ್ನು ಖಚಿತಪಡಿಸಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಇದೂ ಕೂಡ ರೂಮರ್ ಲವ್ ಸ್ಟೋರಿ.. ಈ ಬಗ್ಗೆ ಮಹಿರಾ ಶರ್ಮಾ ಆಗ್ಲೀ, ಸಿರಾಜ್ ಆಗ್ಲೀ ಸ್ಪಷ್ಟನೆ ನೀಡಿರ್ಲಿಲ್ಲ.. ಇದೀಗ ಸಿರಾಜ್ ಹೆಸರು ಜೊತೆ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಜೊತೆ ತಳುಕುಹಾಕಿಕೊಂಡಿದೆ. ಇವರಿಬ್ಬರು ಈ ಬಗ್ಗೆ ಇಲ್ಲಿವರೆಗೂ ಸ್ಪಷ್ಟನೆ ನೀಡಿಲ್ಲ.. ಅಧಿಕೃತ ಘೋಷಣೆ ಆಗೋವರೆಗೂ ವದಂತಿ ವದಂತಿಯಷ್ಟೇ!.

ನೋಡಿರಿ

