ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ಅನಾರೋಗ್ಯ? – ಬಯಲಾಯ್ತು ಶಾಕಿಂಗ್‌ ಸತ್ಯ!

ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ಅನಾರೋಗ್ಯ? – ಬಯಲಾಯ್ತು ಶಾಕಿಂಗ್‌ ಸತ್ಯ!

ನಮ್ಮಲ್ಲಿ ಮೊಟ್ಟೆ ತಿನ್ನೋರು ಅನೇಕರು ಇದ್ದಾರೆ.. ಬೇಸಿಗೆಗಾಲ, ಮಳೆಗಾಲ, ಚಳಿಗಾಲ.. ಹೀಗೆ ಎಲ್ಲಾ  ಋತುವಿನಲ್ಲೂ ಮೊಟ್ಟೆ ತಿನ್ನೋರು ಇದ್ದಾರೆ.. ಆದರೆ ಕೆಲವರು ಚಳಿಗಾಲದಲ್ಲಿ ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ.. ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ನಂಬಿದ್ದಾರೆ. ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಿನ್ನುವುದು ನಿಜವಾಗಿಯೂ ದೇಹದಲ್ಲಿ ಅತಿಯಾದ ಉಷ್ಣಾಂಶ ಉಂಟುಮಾಡಬಹುದೇ? ಇದ್ರ ಸತ್ಯತೆ ಏನು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಆರೋಗ್ಯಕ್ಕೆ ಒಳ್ಳೇದು ಅಂತಾ ಹೆಚ್ಚು ಮೊಟ್ಟೆ ತಿಂದ್ರೆ ಡೇಂಜರ್ – ದಿನಕ್ಕೆ 2ಕ್ಕಿಂತ ಹೆಚ್ಚು Egg ತಿಂದ್ರೆ ಏನಾಗುತ್ತೆ..?

ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾನೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಜನರು ತಮ್ಮ ದಿನವನ್ನು ಮೊಟ್ಟೆಗಳೊಂದಿಗೆ ಪ್ರಾರಂಭಿಸುತ್ತಾರೆ. ಇದು ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು  ಹೊಂದಿರುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ. ಹಾಗಾಗಿ ಮುಂಜಾನೆ ಮೊಟ್ಟೆ ತಿಂದರೆ ದಿನವಿಡೀ ನೀವು ಎನರ್ಜಿಟಿಕ್ ಆಗಿ ಇರಬಹುದು.

ಚಳಿಗಾಲದಲ್ಲಿ, ಮೊಟ್ಟೆ ತಿನ್ನುವವರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತದೆ, ಆದರೆ ಬೇಸಿಗೆ ಬರುತ್ತಿದ್ದಂತೆ ಮೊಟ್ಟೆ ಸೇವನೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಬೇಸಿಗೆಯಲ್ಲಿ ಮೊಟ್ಟೆ  ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ ಎಂದು ಜನರು ಭಾವಿಸುತ್ತಾರೆ. ಮೊಟ್ಟೆಯ ಉಷ್ಣ ಗುಣದಿಂದ ಅನಾರೋಗ್ಯ ಉಂಟಾಗಬಹುದು ಎಂದು ಸಹ ಜನರು ಹೇಳುತ್ತಾರೆ.

ಆದ್ರೆ ಆಹಾರ ತಜ್ಞರು ಈ ಬಗ್ಗೆ  ಹೇಳೊದು ಏನಂದ್ರೆ ಮೊಟ್ಟೆಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ಯಾವುದೇ ಸೀಸನ್ ನಲ್ಲಿ ಮೊಟ್ಟೆ ತಿನ್ನೋದು ಹಾನಿಕಾರಕವಲ್ಲ. ಜನರು ಬೇಸಿಗೆಯಲ್ಲಿ ಮೊಟ್ಟೆ ತಿನ್ನಬಹುದು, ಆದರೆ ಅವುಗಳ ಪ್ರಮಾಣವು ಚಳಿಗಾಲಕ್ಕಿಂತ ಕಡಿಮೆ ಇರಬೇಕು. ಬೇಸಿಗೆಯಲ್ಲಿ, ಜನರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಪ್ರತಿದಿನ ಒಂದು ಅಥವಾ ಎರಡು ಮೊಟ್ಟೆಗಳನ್ನು ಮಾತ್ರ ಸೇವಿಸಬಹುದು. ಹೆಚ್ಚು ಸೇವಿಸಿದರೆ ಸಮಸ್ಯೆ. ಹೀಗಾಗಿ ನಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮೊಟ್ಟೆ ಸೇವಿಸೋದು ಉತ್ತಮ.

Shwetha M