ಐಪಿಎಲ್ ನಲ್ಲಿ ಧೂಳೆಬ್ಬಿಸಿದ ಶ್ರೇಯಸ್ & ಇಶಾನ್ – ಬಿಸಿಸಿಐ ಒಪ್ಪಂದ ಮತ್ತೆ ಸಿಗುತ್ತಾ?

ಜಾರಿ ಬೀಳೋದು ತಪ್ಪಲ್ಲ. ಬಟ್ ಬಿದ್ದ ಮೇಲೆ ಹೇಗೆ ಎದ್ದು ನಿಲ್ತೇವೆ ಅನ್ನೋದು ರಿಯಲ್ ಟಾಸ್ಕ್. ಕ್ರಿಕೆಟ್‌ನಲ್ಲೂ ಹೀಗೆ ಜಾರಿ ಬಿದ್ದು ಗ್ರೇಟ್ ಕಮ್ ಬ್ಯಾಕ್ ಮಾಡಿದ್ದು ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್. ದೇಶೀಯ ಕ್ರಿಕೆಟ್ ಆಡದ ಕಾರಣ ಕಳೆದ ವರ್ಷ ಬಿಸಿಸಿಐ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಸ್ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವ್ರನ್ನ ಕೇಂದ್ರ ಒಪ್ಪಂದದಿಂದ ಕೈಬಿಟ್ಟಿತ್ತು. ಇತ್ತೀಚೆಗೆ ಶ್ರೇಯಸ್ ಟೀಂ ಇಂಡಿಯಾ ಸೇರಿದ್ರೂ ಕಿಶನ್ ಇನ್ನೂ ಕೂಡ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ : GT ಸೋಲಿಸಿದ್ದೇ ವೈಶಾಕ್ ವಿಜಯ್ ಪಂಜಾಬ್‌ಗೆ ಕನ್ನಡಿಗನ ಬಲ
ಇತ್ತೀಚಿನ ದಿನಗಳಲ್ಲಿ ಶ್ರೇಯಸ್ ದೇಶೀಯ ಟೂರ್ನಿಗಳು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ 243 ರನ್ ಗಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ರು. ಇದೀಗ ಐಪಿಎಲ್ನಲ್ಲಿ ತಮ್ಮ ಮೊದಲ ಪಂದ್ಯದಲ್ಲೇ 97 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ದಾರೆ. ಈ ಮೂಲಕ ಮತ್ತೊಮ್ಮೆ ಬಿಸಿಸಿಐ ಕಾಂಟ್ರ್ಯಾಕ್ಟ್ ಪಡೆಯೋ ನಿರೀಕ್ಷೆಯಲ್ಲಿದ್ದಾರೆ. ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ಶ್ರೇಯಸ್ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಒಂದೇ ವರ್ಷದಲ್ಲಿ 5 ಟ್ರೋಫಿಗಳಿಗೆ ಮುತ್ತಿಟ್ಟಿದ್ದಾರೆ.
ಶ್ರೇಯಸ್ ಅಯ್ಯರ್ ಸಕ್ಸಸ್ ಜರ್ನಿ!
ಮಾರ್ಚ್ 14, 2024- ರಣಜಿ ಟ್ರೋಫಿ
ಮೇ 26, 2024 – ಐಪಿಎಲ್ ಟ್ರೋಫಿ
ಆಕ್ಟೋಬರ್ 5, 2024- ಇರಾನಿ ಟ್ರೋಫಿ
ಡಿಸೆಂಬರ್ 15, 2024- ಸೈಯದ್ ಮುಷ್ತಾಕ್ ಅಲಿ ಟ್ರೋಫಿ
ಮಾರ್ಚ್ 9, 2025- ಚಾಂಪಿಯನ್ಸ್ ಟ್ರೋಫಿ
2024ರ ವರ್ಷ ಇಶಾನ್ ಕಿಶನ್ ಪಾಲಿಗೆ ಸಾಕಷ್ಟು ಸವಾಲುಗಳನ್ನ ತಂದಿತ್ತು. 2023ರಲ್ಲಿ ಟೀಮ್ ಇಂಡಿಯಾ ಖಾಯಂ ಸದಸ್ಯನಾಗಿದ್ದ ಕಿಶನ್, 2024ರಲ್ಲಿ ಟೀಮ್ ಇಂಡಿಯಾದಿಂದಲೇ ದೂರವಾಗಿದ್ದರು. ದೇಶಿ ಕ್ರಿಕೆಟ್ ಆಡಲಿಲ್ಲ ಎಂಬ ಕಾರಣಕ್ಕೆ ಟೀಮ್ ಇಂಡಿಯಾದಿಂದ ಕಿಶನ್ಗೆ ಗೇಟ್ಪಾಸ್ ನೀಡಲಾಗಿತ್ತು. ಸೆಂಟ್ರಲ್ ಕಾಂಟ್ರಾಕ್ಟ್ನಿಂದ ಬಿಸಿಸಿಐ ಕೊಕ್ ನೀಡ್ತು. ಇಡೀ ವರ್ಷ ಯಾತನೆ ಅನುಭವಿಸಿದ್ರು. ಈಗ ಅದೇ ಇಶಾನ್ ಕಿಶನ್ ಸೀಸನ್-18ರ ಐಪಿಎಲ್ನ ಮೊದಲ ಪಂದ್ಯದಲ್ಲೇ ಹೊಸ ಅಧ್ಯಾಯ ಬರೆದಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಅಟ್ಯಾಕ್ನ ಚಿಂದಿ ಉಡಾಯಿಸಿದ ಕಿಶನ್, ಜಸ್ಟ್ 45 ಎಸೆತಗಳಲ್ಲಿ ಅಜೇಯ ಶತಕ ಸಿಡಿಸಿ ಸಂಭ್ರಮಿಸಿದರು. ಇನ್ನಿಂಗ್ಸ್ನಲ್ಲಿ ಸಿಡಿಸಿದ ಒಂದೊಂದು ಸಿಕ್ಸರ್, ಒಂದೊಂದು ಬೌಂಡರಿ ಟೀಕಾಕಾರರಿಗೆ ಬ್ಯಾಟ್ನಿಂದಲೇ ಉತ್ತರ ಎನ್ನುವಂತಿತ್ತು.
ಸದ್ಯ 2024ರ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿ ಇರಲಿಲ್ಲ ಎಂಬ ಕೊರಗು ಇಶಾನ್ ಕಿಶನ್ರನ್ನ ಕಾಡ್ತಿದೆ. ಮುಂಬರೋ 2026 ವಿಶ್ವಕಪ್ ತಂಡದಲ್ಲಾದ್ರೂ ಸ್ಥಾನ ಗಿಟ್ಟಿಸಿಕೊಳ್ಳಬೇಕು ಅನ್ನೋದು ಅವ್ರ ಆಸೆ. ಇತ್ತ ಶ್ರೇಯಸ್ ಅಯ್ಯರ್ ಕೂಡ ಟೀಂ ಇಂಡಿಯಾದ ಖಾಯಂ ಸದಸ್ಯರಾಗೋ ನಿರೀಕ್ಷೆಯಲ್ಲಿದ್ದಾರೆ.