ಬಿಪಿಎಲ್ ಕಾರ್ಡ್ ಮಾಡಿಸಬೇಕಾ ? – ಕರ್ನಾಟಕ ರಾಜ್ಯ ಆಹಾರ ಇಲಾಖೆಯಿಂದ ಅರ್ಜಿಗೆ ಆಹ್ವಾನ

ಬಿಪಿಎಲ್ ಕಾರ್ಡ್ ಮಾಡಿಸಬೇಕಾ ? – ಕರ್ನಾಟಕ ರಾಜ್ಯ ಆಹಾರ ಇಲಾಖೆಯಿಂದ ಅರ್ಜಿಗೆ ಆಹ್ವಾನ

ಬಿಪಿಎಲ್ ಕಾರ್ಡ್‌ಗೆ ಹೊಸದಾಗಿ ಅರ್ಜಿ ಕರೆಯಲು ಕರ್ನಾಟಕ ರಾಜ್ಯ ಆಹಾರ ಇಲಾಖೆ ಮುಂದಾಗಿದೆ. ಮಂಗಳವಾರದಿಂದಲೇ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಸಾಧ್ಯತೆಯೂ ಇದೆ ಎನ್ನಲಾಗ್ತಿದೆ. ಕಳೆದ 3 ತಿಂಗಳಿಂದ ಆಹಾರ ಇಲಾಖೆ ವೆಬ್ಸೈಟ್ ಕ್ಲೋಸ್ ಮಾಡಲಾಗಿತ್ತು. ಹೊಸದಾಗಿ ಅರ್ಜಿ ಸ್ವೀಕರಿಸುವುದನ್ನು ತಾತ್ಕಾಲಿಕವಾಗಿ ಇಲಾಖೆ ಸ್ಥಗಿತಗೊಳಿಸಿತ್ತು. ಇದೀಗ ಹೊಸದಾಗಿ ಅರ್ಜಿ ಸ್ವೀಕರಿಸಲು ಸರ್ಕಾರದಿಂದ ಸಮ್ಮತಿ ಸಿಕ್ಕಿರುವುದರಿಂದ ಕಾರ್ಯಪ್ರವೃತ್ತವಾಗಲು ಮುಂದಾಗಿದೆ.

ಇದನ್ನೂ ಓದಿ: ಗ್ಯಾರಂಟಿಗಳ ಬಳಿಕ ಜನರಿಗೆ ಬೆಲೆ ಏರಿಕೆ ಶಾಕ್‌! – ಜುಲೈ 1 ರಿಂದ ವಿದ್ಯುತ್‌ ದರ ಏರಿಕೆ

ಈ ವಾರದಿಂದಲೇ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯಿಂದ ಅವಕಾಶ ದೊರೆಯಲಿದೆ. ಅರ್ಜಿ ಸಲ್ಲಿಸಲು ಆಹಾರ ಇಲಾಖೆ ಮಾನದಂಡ ನಿಗದಿಪಡಿಸಲಿದೆ. ಈ ಮಧ್ಯೆ, ಜುಲೈ ತಿಂಗಳಿಂದ ‘ಅನ್ನಭಾಗ್ಯ’ ಯೋಜನೆಯಡಿ ಪಡಿತರ ಧಾನ್ಯ ವಿತರಣೆ ಆರಂಭವಾಗಲಿದೆ. ರಾಜ್ಯದಲ್ಲಿ ಪ್ರಸ್ತುತ 1.26 ಕೋಟಿ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. 2 ಲಕ್ಷದ 30 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ‘ಅನ್ನಭಾಗ್ಯ’ ಯೋಜನೆ ಜಾರಿಗೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೆಲ್ಲದರ ನಡುವೆ ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಇನ್ನಷ್ಟೇ ಬಿಪಿಎಲ್ ಕಾರ್ಡ್ ನೀಡಬೇಕಿದೆ. ಬಿಪಿಎಲ್ ಕಾರ್ಡ್‌ದಾರರು ಯೋಜನೆಯ ಫಲಾನುಭವಿಗಳಾಗಿದ್ದಾರೆ.

suddiyaana