ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ! -‘ಮೆಸ್ಸಿ ನಿನಗಾಗಿ ಕಾಯುತ್ತಿದ್ದೇವೆ’ ಎಂದು ಜೀವ ಬೆದರಿಕೆ

ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ! -‘ಮೆಸ್ಸಿ ನಿನಗಾಗಿ ಕಾಯುತ್ತಿದ್ದೇವೆ’ ಎಂದು ಜೀವ ಬೆದರಿಕೆ

ಬ್ಯೂನಸ್ ಐರಿಸ್: ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ, ಅರ್ಜೆಂಟಿನಾ ಫುಟ್ಬಾಲ್ ತಂಡದ ನಾಯಕ ಲಿಯೋನಲ್ ಮೆಸ್ಸಿಗೆ ಇಬ್ಬರು ದುಷ್ಕರ್ಮಿಗಳು ಜೀವ ಬೆದರಿಕೆಯೊಡ್ಡಿದ್ದಾರೆ. ಅಷ್ಟೇ ಅಲ್ಲದೇ ಅವರ ಕುಟುಂಬಕ್ಕೆ ಸೇರಿದ ಸೂಪರ್ ಮಾರ್ಕೆಟ್ ಮೇಲೆ ಕೂಡ ಗುರುವಾರ ತಡರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ವಿಶ್ವದ ನಂ.1 ಶ್ರೀಮಂತನ ಪಟ್ಟ ಮತ್ತೆ ಕಳೆದುಕೊಂಡ ಎಲಾನ್ ಮಸ್ಕ್ – ಎರಡೇ ದಿನದಲ್ಲಿ ಅದೆಷ್ಟು ಕೋಟಿ ನಷ್ಟ?

ರಾತ್ರೋ ರಾತ್ರಿ ಬಂದ ಇಬ್ಬರು ಬಂದೂಕುದಾರಿಗಳು ಸೂಪರ್ ಮಾರ್ಕೆಟ್ ಮುಂಭಾಗಕ್ಕೆ 14  ಗುಂಡುಗಳನ್ನು ಹಾರಿಸಿದ್ದಾರೆ. ಜೊತೆಗೆ `ಮೆಸ್ಸಿ, ನಾವು ನಿನಗಾಗಿ ಕಾಯುತ್ತಿದ್ದೇವೆ. ಜಾವ್ಕಿನ್ ಒಬ್ಬ ನಾರ್ಕೋ, ಅವನು ನಿನ್ನನ್ನ ಗಣನೆಗೆ ತೆಗೆದುಕೊಳ್ಳುವುದಿಲ್ಲ’ ಎಂದು ಬರೆದುಹೋಗಿದ್ದಾರೆ.

ಮಧ್ಯ ಅರ್ಜೆಂಟೀನಾದ ರೊಸಾರಿಯೊ ನಗರದಲ್ಲಿ ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಇದೆ. ಇಬ್ಬರು ವ್ಯಕ್ತಿಗಳು 3 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದಿರುವುದನ್ನು ಪ್ರತ್ಯಕ್ಷದರ್ಶಿಗಳು ದೃಢಪಡಿಸಿದ್ದಾರೆ. ಅವರಲ್ಲಿ ಒಬ್ಬರು ಇಳಿದು ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿ ವೇಳೆ ಸೂಪರ್ ಮಾರ್ಕೆಟ್ ನಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ದುಷ್ಕರ್ಮಿಗಳು ಬರೆದ ಬೆದರಿಕೆಯಲ್ಲಿ ರೊಸಾರಿಯೊದ ಮೇಯಲ್  ಪಾಬ್ಲೊ ಜಾವ್ಕಿನ್ ಮೇಯರ್ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

suddiyaana