ಕ್ರಿಕೆಟ್ ಇತಿಹಾಸದಲ್ಲೇ ಅತಿ ಕಡಿಮೆ ಅವಧಿಯ ಟೆಸ್ಟ್ ಮ್ಯಾಚ್ – ಒಂದೂವರೆ ದಿನದಲ್ಲೇ ಟೆಸ್ಟ್ ಪಂದ್ಯ ಮುಕ್ತಾಯ..!
ಕ್ರಿಕೆಟ್ ಇತಿಹಾಸದಲ್ಲೇ ಅತಿ ಕಡಿಮೆ ಅವಧಿಯ ಟೆಸ್ಟ್ ಮ್ಯಾಚ್.. ಭಾರತ-ಸೌತ್ ಆಫ್ರಿಕಾ ನಡುವಿನ 2ನೇ ಟೆಸ್ಟ್ ಕೇವಲ ಒಂದೂವರೆ ದಿನಕ್ಕೆ ಮುಗಿದೇ ಹೋಗಿದೆ. ಒಂದೂವರೆ ದಿನದಲ್ಲೇ ಟೆಸ್ಟ್ ಪಂದ್ಯ ಮುಕ್ತಾಯ. ಟೀಮ್ ಇಂಡಿಯಾವನ್ನು ಕೆಡವಲು ರೆಡಿ ಮಾಡಿದ್ದ ಬೌಲಿಂಗ್ ಪಿಚ್ನಲ್ಲಿ ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳೇ ಜಾರಿ ಬಿದ್ದಿದ್ದಾರೆ. ಇದ್ರ ಕಂಪ್ಲೀಟ್ ಕ್ರೆಡಿಟ್ ಸಲ್ಲಬೇಕಿರೋದು ಟೀಮ್ ಇಂಡಿಯಾ ಬೌಲರ್ಸ್ಗಳಿಗೆ.
ಇದನ್ನೂ ಓದಿ: 31 ವರ್ಷಗಳ ನಂತರ ಗೆಲುವು ಸಾಧಿಸಿದ ಟೀಮ್ಇಂಡಿಯಾ – ಸೌತ್ಆಫ್ರಿಕಾ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ ಪಡೆ
ಸೆಕೆಂಡ್ ಟೆಸ್ಟ್ ಮ್ಯಾಚ್ನಲ್ಲಿ ಟೀಂ ಇಂಡಿಯಾ ಪರ್ಫಾಮೆನ್ಸ್ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಲೇಬೇಕು. ಯಾಕಂದ್ರೆ ಫಸ್ಟ್ ಟೆಸ್ಟ್ ಮ್ಯಾಚ್ ಸೋಲಿನ ಬಳಿಕ ರೋಹಿತ್ ಶರ್ಮಾ ಫೈಟ್ಬ್ಯಾಕ್ ಮಾಡಿಯೇ ಮಾಡ್ತೀವಿ ಅಂತಾ ಹೇಳಿದ್ರು. ಅದೇ ರೀತಿ ಟೀಂನ್ನ ಲೀಡ್ ಮಾಡಿದ್ರು ಕೂಡ. ಫಸ್ಟ್ ಇನ್ನಿಂಗ್ಸ್ನಲ್ಲಿ 55 ರನ್ಗೆ ಆಲೌಟ್ ಆಗಿದ್ದ ಸೌತ್ ಆಫ್ರಿಕಾ ಸೆಕೆಂಡ್ ಇನ್ನಿಂಗ್ಸ್ನಲ್ಲೂ ಅದೇ ರೀತಿ ಲೋ ಸ್ಕೋರ್ಗೆ ಪ್ಯಾಕಪ್ ಮಾಡ್ತಿದ್ರು. ಆದ್ರೆ ದಕ್ಷಿಣ ಆಫ್ರಿಕಾದ ಮಾನ ಉಳಿಸಿದ್ದು ಓಪನರ್ ಮಾರ್ಕ್ರಮ್. ಕೇವಲ 103 ಬಾಲ್ಗಳಲ್ಲಿ 106 ರನ್ ಹೊಡೆದ್ರು. ಸೌತ್ ಆಫ್ರಿಕಾದ ಸೆಕೆಂಡ್ ಬೆಸ್ಟ್ ಸ್ಕೋರ್ ಅಂದ್ರೆ ಎಲ್ಗರ್ ಗಳಿಸಿದ 12 ರನ್. ಒಂದ್ಕಡೆ ವಿಕೆಟ್ಗಳು ಉರುಳ್ತಾನೆ ಇದ್ರೆ ಇತ್ತ ಮಾರ್ಕ್ರಮ್ ಚಚ್ತಾನೆ ಇದ್ರು. ವಂಡೇ ಬಿಡಿ ಟಿ-20 ರೀತಿಯಲ್ಲಿ ಆಡದೆ ಮಾರ್ಕ್ರಮ್ಗೆ ಬೇರೆ ಆಪ್ಷನೇ ಇರಲಿಲ್ಲ. ಹೀಗಾಗಿ 17 ಬೌಂಡರಿ, ಎರಡು ಸಿಕ್ಸರ್ ಚಚ್ಚಿ ಸೆಂಚೂರಿ ಹೊಡೆದ್ರು. ಮಾರ್ಕ್ರಮ್ ಸೆಂಚೂರಿಯಾಗುತ್ತಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡ ಅವರ ಬಳಿ ಹೋಗಿ ಅಭಿನಂದಿಸಿದ್ರು. ಯಾಕಂದ್ರೆ ಅಂಥಾ ಪಿಚ್ನಲ್ಲಿ ಮಾರ್ಕ್ರಮ್ ಆಡಿರೋದು ನಿಜಕ್ಕೂ ಗ್ರೇಟೆಸ್ಟ್ ಇನ್ನಿಂಗ್ಸ್. ಕಂಪ್ಲೀಟ್ ಬೌಲರ್ಸ್ಗಳು ಡಾಮಿನೇಟ್ ಮಾಡ್ತಿದ್ದ ಟೈಮ್ನಲ್ಲಿ ಮಾರ್ಕ್ರಮ್ ಆಡಿದ್ದನ್ನ ನೋಡಿದ್ರೆ ಸೌತ್ ಆಫ್ರಿಕಾ ನಿಜಕ್ಕೂ ಒಬ್ಬ ಬೆಸ್ಟ್ ಕ್ರಿಕೆಟರ್ನ್ನ ಪಡೆದುಕೊಂಡಿರೋದ್ರಲ್ಲಿ ಡೌಟೇ ಇಲ್ಲ. ಮಾರ್ಕ್ರಮ್ಗೆ ಈಗ 29 ವರ್ಷ ವಯಸ್ಸಾಗಿದ್ಯಷ್ಟೇ. ನಿಜಕ್ಕೂ ಒಳ್ಳೆಯ ಭವಿಷ್ಯ ಹೊಂದಿರೋ ಆಟಗಾರನೇ. ಅಂತೂ ಸೌತ್ ಆಫ್ರಿಕಾ 176 ರನ್ಗೆ ಆಲೌಟ್ ಆಗಿತ್ತು. ಟೀಂ ಇಂಡಿಯಾಗೆ 100 ರನ್ ಕೂಡ ಟಾರ್ಗೆಟ್ ಇರಲಿಲ್ಲ. ಆದ್ರೂ ಓಪನರ್ ಯಶಸ್ವಿ ಜೈಸ್ವಾಲ್ 28 ರನ್ಗೆ ಔಟಾದ್ರು. ಶುಬ್ಮನ್ ಗಿಲ್ ಮತ್ತೆ ಫೇಲ್..10 ರನ್..ಯಾಕೋ ಶುಬ್ಮನ್ ಗಿಲ್ ಟೆಸ್ಟ್ ಕೆರಿಯರ್ಗೆ ಸದ್ಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಇನ್ನು ವಿರಾಟ್ ಕೊಹ್ಲಿ 12 ರನ್ಗೆ ಔಟಾದ್ರು. ಬಳಿಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಮ್ಯಾಚ್ ಗೆಲ್ಲಿಸಿದ್ರು. ಅಷ್ಟರಲ್ಲೇ ಟೀಂ ಇಂಡಿಯಾ ಮೂರು ವಿಕೆಟ್ ಬಿದ್ದಿತ್ತು. ಒಂದು ವೇಳೆ 150-200 ಟಾರ್ಗೆಟ್ ಇರ್ತಿದ್ರೆ ಕಥೆ ಬೇರೆಯೇ ಆಗ್ತಿತ್ತೋ ಏನೋ. ಎನಿವೇ, ಸೀರಿಸ್ ಗೆಲ್ಲದಿದ್ರೂ ಕೂಡ ಸೋತಿಲ್ಲ. ಆ್ಯಕ್ಚುವಲಿ ಅಟ್ಲಿಸ್ಟ್ ಮೂರು ಟೆಸ್ಟ್ ಮ್ಯಾಚ್ಗಳನ್ನಾದ್ರೂ ನಿಗದಿ ಮಾಡಬೇಕಿತ್ತು. ಈಗ ಸೀರಿಸ್ ಟೈ ಆಗಿದೆ. 3ನೇ ಮ್ಯಾಚ್ ಇರ್ತಿದ್ರೆ ನಿಜಕ್ಕೂ ಆ ಟೆಸ್ಟ್ ತುಂಬಾನೆ ಇಂಟ್ರೆಸ್ಟಿಂಗ್ ಆಗಿರ್ತಿತ್ತು.
ಆದ್ರೆ ಇಲ್ಲಿ ಒಂದು ಇಂಪಾರ್ಟೆಂಟ್ ವಿಚಾರವನ್ನ ಹೇಳಲೇಬೇಕು. ಸೆಕೆಂಡ್ ಟೆಸ್ಟ್ನ ಫಸ್ಟ್ ಇನ್ನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳು ಎದುರಿಸಿದ್ದು ಕೇವಲ 140 ಬಾಲ್ಗಳು. ಟೀಂ ಇಂಡಿಯಾ ಫೇಸ್ ಮಾಡಿರೋದು 209 ಬಾಲ್ಗಳನ್ನ. ಸೆಕೆಂಡ್ ಇನ್ನಿಂಗ್ಸ್ನಲ್ಲಿ ಸೌತ್ ಆಫ್ರಿಕಾ 221 ಬಾಲ್ಗಳನ್ನ ಆಡಿತ್ತು. ನಮ್ಮವರು 72 ಬಾಲ್ಗಳಲ್ಲೇ ಮ್ಯಾಚ್ ಗೆಲ್ತಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಹಿಂದೆಂದೂ ಇಷ್ಟೊಂದು ಶಾರ್ಟ್ ಮ್ಯಾಚ್ ನಡೆದೇ ಇಲ್ಲ. ನೀವು ಕೂಡ ಗಮನಿಸಿರ್ತೀರಾ..ಇತ್ತೀಚಿನ ವರ್ಷಗಳಲ್ಲಿ ಟೀಂ ಇಂಡಿಯಾ ಆಡಿದ ಬಹುತೇಕ ಟೆಸ್ಟ್ ಮ್ಯಾಚ್ಗಳು ಮೂರು, ನಾಲ್ಕು ದಿನಗಳೊಳಗೆ ಮುಗಿದೇ ಬಿಡ್ತಿದೆ. ಕೇವಲ ಟೀಂ ಇಂಡಿಯಾ ಅಂತೇನಲ್ಲ ಆಲ್ಮೋಸ್ಟ್ ಎಲ್ಲಾ ಟೀಂಗಳದ್ದು ಇದೇ ಕಥೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಶಸ್ ಮ್ಯಾಚ್ಗಳು ಹೆಚ್ಚಾಗಿ 5 ಡೇಸ್ ಕೂಡ ನಡೆಯುತ್ತೆ. ಜಾಗತಿಕ ಕ್ರಿಕೆಟ್ನಲ್ಲಿ ಈಗಲೂ ಕೂಡ ಅತ್ಯಂತ ಇಂಟ್ರೆಸ್ಟಿಂಗ್ ಟೆಸ್ಟ್ ಸೀರಿಸ್ ಅಂದ್ರೆ ಆ್ಯಶಸ್ ಮಾತ್ರ. ಆದ್ರೆ ಟೀಂ ಇಂಡಿಯಾದ ಟೆಸ್ಟ್ ಮ್ಯಾಚ್ಗಳನ್ನ ಸ್ಟೇಡಿಯಂನಲ್ಲಿ ಬಂದು ನೋಡುವವರು ಬಿಡಿ, ಟಿವಿಯಲ್ಲಿ ನೋಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಭಾರತದಲ್ಲಿ ಟೆಸ್ಟ್ ಮ್ಯಾಚ್ಗಳು ನಡೆಯೋವಾಗ ಸ್ಟೇಡಿಯಂಗಳು ಖಾಲಿ ಹೊಡೆಯುತ್ತಿರುತ್ತೆ. ಅದಕ್ಕೆ ಕಾರಣ ಈಗಿನವರು ಟೆಸ್ಟ್ ಮ್ಯಾಚ್ನ್ನ ಆಡೋ ರೀತಿ. ನೋಡಿ.. ಈ ಸೆಕೆಂಡ್ ಟೆಸ್ಟ್ ಮ್ಯಾಚ್ನ್ನ ಟೀಂ ಇಂಡಿಯಾ ಏನೋ ಗೆದ್ದಿರಬಹುದು. ಆದ್ರೆ ಫಸ್ಟ್ ಇನ್ನಿಂಗ್ಸ್ನಲ್ಲಿ ನಮ್ಮವರು ಕೂಡ ಬ್ಯಾಟಿಂಗ್ ಮಾಡಿರೋದು ಅಷ್ಟಕ್ಕಷ್ಟೆ. ಕ್ರೀಸ್ನಲ್ಲಿ ಕಚ್ಚಿ ನಿಂತು ಗಂಟೆಗಟ್ಟಲೆ ಬಾಲ್ ಫೇಸ್ ಮಾಡುವವರೇ ಇಲ್ಲ.