ಸಾರಿಗೆ ಬಸ್​ಗಳ ಕೊರತೆ.. ಖಾಸಗಿ ಬಸ್​ಗಳಲ್ಲಿ ಟಿಕೆಟ್ ದರ ಏರಿಕೆ – ಮತದಾನಕ್ಕೆಂದು ಊರಿಗೆ ಹೊರಟವ್ರ ಪರದಾಟ!

ಸಾರಿಗೆ ಬಸ್​ಗಳ ಕೊರತೆ.. ಖಾಸಗಿ ಬಸ್​ಗಳಲ್ಲಿ ಟಿಕೆಟ್ ದರ ಏರಿಕೆ – ಮತದಾನಕ್ಕೆಂದು ಊರಿಗೆ ಹೊರಟವ್ರ ಪರದಾಟ!

ವಿಧಾನಸಭಾ ಚುನಾವಣಾ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಬೆಂಗಳೂರಿನಲ್ಲಿರುವ ವಲಸಿಗರೆಲ್ಲಾ ಹುಟ್ಟೂರುಗಳತ್ತ ಮುಖ ಮಾಡಿದ್ದಾರೆ. ಆದರೆ ಊರಿಗೆ ಹೊರಟವರಿಗೆ ಬಿಗ್ ಶಾಕ್ ಎದುರಾಗಿದೆ. ಬಸ್ ಗಳೇ ಇಲ್ಲದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಒಂದು ಕಡೆಯಾದ್ರೆ ಮತ್ತೊಂದೆಡೆ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನ ಒನ್ ಟು ತ್ರಿಬಲ್ ಮಾಡಿದ್ದಾರೆ.

ಮೇ 10ರಂದು ಮತದಾನ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯದೆಲ್ಲೆಡೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ ಮತದಾನಕ್ಕೆ ಹೊರಟವರಿಗೆ ಬಸ್ ಗಳ ಕೊರತೆ ಉಂಟಾಗಿದ್ದು, ಮೆಜೆಸ್ಟಿಕ್​ನಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಮತ ಚಲಾಯಿಸುವುದು ನಮ್ಮ ಹಕ್ಕು, ಮತದಾನ ಮಾಡಿ ಎಂದು ಅಭಿಯಾನಗಳನ್ನು ಮಾಡಿ ಜಾಗೃತಿ ಮೂಡಿಸುತ್ತಿದ್ದ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ. ಇದರಿಂದ ಮತದಾನ ಹೆಚ್ಚಿಸಲು ರಜೆ ಘೋಷಿಸಿಯೂ ಪ್ರಯೋಜನವಿಲ್ಲದಂತಾಗಿದೆ. ಮತ ಹಾಕಬೇಕು ಎಂದು ತಮ್ಮ ತಮ್ಮ ಊರಿಗೆ ಹೋಗುವವರು ಅವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ : ಡಿಕೆಶಿ ವಿರುದ್ಧ ಖರ್ಗೆಗೆ ಪತ್ರ ಬರೆದ್ರಾ ಸಿದ್ದರಾಮಯ್ಯ? – ಲೆಟರ್ ಬಗ್ಗೆ ವಿಪಕ್ಷನಾಯಕ ಹೇಳಿದ್ದೇನು?

ಈಗಾಗಲೇ ಚುನಾವಣಾ ಕರ್ತವ್ಯಕ್ಕೆ 3,500 KSRTC ಬಸ್ ಗಳನ್ನ ಬಳಸಿಕೊಳ್ಳಲಾಗಿದ್ದು, ಬಸ್​ಗಳ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆ ಮತದಾನ ಚಲಾಯಿಸಲು ತಮ್ಮ ತಮ್ಮ ಊರಿಗೆ ಹೊರಟಿರುವ ಪ್ರಯಾಣಿಕರು  ಸಮಸ್ಯೆಗೆ ಸಿಲುಕಿದ್ದಾರೆ. ಮೆಜೆಸ್ಟಿಕ್ ಗೆ ಬರುವ ಪ್ರತಿ ಸಾರಿಗೆ ಬಸ್ ಫುಲ್ ರಶ್ ಆಗುತ್ತಿವೆ. ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಬಸ್​ಗಳಿಗೆ ಫುಲ್ ಡಿಮ್ಯಾಂಡ್ ಇದ್ದು ಬಸ್​ ಸ್ಡ್ಯಾಂಡ್​ಗೆ ಬರುವ ಎಲ್ಲ ಬಸ್​ಗಳ ಸೀಟ್ ಫುಲ್ ಆಗಿದೆ. ಸ್ಡ್ಯಾಂಡಿಂಗ್ ನಲ್ಲಿಯೇ ಜನರು ಪ್ರಯಾಣಿಸುತ್ತಿದ್ದಾರೆ. ನಾಳಿನ ಎಲೆಕ್ಷನ್ ಡ್ಯೂಟಿಗಾಗಿ ಕೆಎಸ್​ಆರ್​ಟಿಸಿಯ 3,500 ಬಸ್ ನಿಯೋಜನೆ ಮಾಡಲಾಗಿದೆ. ಉಳಿದ 4,400 ಬಸ್ಸುಗಳು ಮಾತ್ರ ರೋಡಿಗಿಳಿದಿವೆ. ಈ ಹಿನ್ನೆಲೆಯಲ್ಲಿ ಸರಿಯಾಗಿ ಬಸ್ ಸಿಗದೆ ಪ್ರಯಾಣಿಕರು ಪರದಾಡುವಂತಾಗಿದೆ. ಕೆಎಸ್​ಆರ್​ಟಿಸಿಯಲ್ಲಿ ಒಟ್ಟು 8,100 ಬಸ್​ಗಳಿವೆ.

ಮತ್ತೊಂದೆಡೆ ಖಾಸಗಿ ಬಸ್ ಗಳ ಮಾಲೀಕರು ಟಿಕೆಟ್ ದರವನ್ನ ಹೆಚ್ಚು ಮಾಡಿದ್ದಾರೆ.‌ ಈ ಹಿಂದೆ 900 ರೂಪಾಯಿ ಇದ್ದ ಟಿಕೆಟ್ ಬೆಲೆ ಈಗ 2 ಸಾವಿರದಿಂದ ಮೂರು ಸಾವಿರದವರೆಗೂ ಏರಕೆ‌ಯಾಗಿದೆ. ಇದರಿಂದ ಮತ ಹಾಕಲು ಊರಿಗೆ ಹೊರಟವರ ಜೇಬಿಗೆ ಕತ್ತರಿ ಬೀಳುತ್ತಿದೆ.

suddiyaana