ಮ್ಯಾಚ್ ಗೆದ್ರೂ ಸೂರ್ಯ, ಗಿಲ್ ತಲೆಬಿಸಿ – 2026ರ ವಿಶ್ವಕಪ್ ನಲ್ಲೂ ಕೈ ಕೊಟ್ರೆ?
9 ಮ್ಯಾಚ್.. ಕಂ ಬ್ಯಾಕ್ ಮಾಡ್ತಾರಾ?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟಿ-20ಐ ಸರಣಿಯಲ್ಲಿ ಭಾರತ ಒಂದು ಪಂದ್ಯ ಗೆದ್ದು ಲೀಡ್ ಸಾಧಿಸಿದೆ. ಇವತ್ತು ಎರಡನೇ ಪಂದ್ಯ ಫಿಕ್ಸ್ ಆಗಿದೆ. ಈ ಮ್ಯಾಚಲ್ಲೂ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ಚೆನ್ನಾಗೇ ಇದೆ. ಬಟ್ ಇರೋ ಪ್ರಾಬ್ಲಂ ಏನಂದ್ರೆ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಕಳಪೆ ಫಾರ್ಮ್. ಒಂದು ಅಥವಾ ಎರಡು ಪಂದ್ಯ ಅಲ್ಲ. ಇಡೀ ವರ್ಷ ಇವ್ರಿಬ್ರೂ ಬ್ಯಾಟಿಂಗ್ನಲ್ಲಿ ಸ್ಟ್ರಗಲ್ ಮಾಡ್ತಾನೇ ಇದ್ದಾರೆ. ಟೆನ್ಷನ್ ಏನಂದ್ರೆ ಇನ್ನೆರಡು ತಿಂಗಳಲ್ಲಿ ಟಿ-20 ವಿಶ್ವಕಪ್ ಸ್ಟಾರ್ಟ್ ಆಗುತ್ತೆ. ಇಲ್ಲೂ ಕೂಡ ಕೈಕೊಟ್ರೆ ಹೇಗೆ ಅನ್ನೋ ಆತಂಕ ಎದುರಾಗಿದೆ.
ಇದನ್ನೂ ಓದಿ : KSCA ಅಧ್ಯಕ್ಷರಾದ ಬೆನ್ನಲ್ಲೇ ವೆಂಕಟೇಶ್ ಪ್ರಸಾದ್ ಅಲರ್ಟ್ – ಚಿನ್ನಸ್ವಾಮಿಯಲ್ಲೇ RCB ಪಂದ್ಯಗಳು ಫಿಕ್ಸ್?
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ T20I ಪಂದ್ಯ ನ್ಯೂ ಚಂಡೀಗಢದಲ್ಲಿ ನಡೆಯಲಿದೆ. ಒಂದ್ಕಡೆ ಭಾರತ ಎರಡನೇ ಮ್ಯಾಚ್ನೂ ಗೆದ್ದು ಡಾಮಿನೇಟ್ ಮಾಡೋಕೆ ನೋಡ್ತಿದ್ರೆ ಅತ್ತ ಪಂದ್ಯ ಗೆದ್ದು ಸರಣಿ ಸಮಬಲದೊಂದಿಗೆ ಕಂ ಬ್ಯಾಕ್ ಮಾಡೋಕೆ ಸೌತ್ ಆಫ್ರಿಕಾ ಎದುರು ನೋಡ್ತಿದೆ. ಭಾರತಕ್ಕೆ ಇರುವಂಥ ಮೇನ್ ಥ್ರೆಟ್ ಅಂದ್ರೆ ಸೂರ್ಯ ಮತ್ತು ಗಿಲ್ ಫೇಲ್ಯೂರ್. ಒಂದು ಕಾಲದಲ್ಲಿ ಟಿ20 ಕ್ರಿಕೆಟ್ನಲ್ಲಿ ಡಾಮಿನೇಟ್ ಮಾಡ್ತಿದ್ದ ಸೂರ್ಯ ಕುಮಾರ್ ಯಾದವ್ ಈಗ ಕ್ರೀಸ್ ಕಚ್ಚಿ ನಿಲ್ಲೋದೇ ಇಲ್ಲ. ಅವ್ರ ರಿಯಲ್ ಬ್ಯಾಟಿಂಗ್ ಖದರ್ ನೋಡಿ ವರ್ಷವೇ ಕಳೆದೋಗಿದೆ. ಇನ್ನು ಗಿಲ್ ಚುಟುಕು ಸಮರಕ್ಕೆ ಕಂ ಬ್ಯಾಕ್ ಮಾಡಿದ್ರೂ ಬಿಗ್ ಸ್ಕೋರ್ ಬಂದೇ ಇಲ್ಲ. ಇವ್ರಿಬ್ರೇ ಭಾರತಕ್ಕೆ ಹೊರೆಯಾಗ್ತಿದ್ದಾರೆ.
13 ತಿಂಗಳಿಂದ ಅರ್ಧಶತಕವನ್ನೂ ಬಾರಿಸದ ಸೂರ್ಯ!
ಮಾಡ್ರೆನ್ ಕ್ರಿಕೆಟ್ನ ಕಿಂಗ್ನಂತಿದ್ದ ಸೂರ್ಯನ ಬ್ಯಾಟಿಂಗ್ ಶೈಲಿ ನೋಡಿಯೇ ರೋಹಿತ್ ಬಳಿಕ ಟಿ-20ಐ ಕ್ಯಾಪ್ಟನ್ಸಿ ಸಿಕ್ಕಿತ್ತು. ಆದ್ರೆ ಜವಾಬ್ದಾರಿ ಬಂದ್ಮೇಲೆ ಸೂರ್ಯ ಆಡೋದನ್ನ ಮರೆತಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ ಕಳೆದ 13 ತಿಂಗಳಿಂದ ಒಂದೇ ಒಂದು ಅರ್ಧಶತಕ ಬಂದಿಲ್ಲ. ಕಟಕ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ 11 ಎಸೆತಗಳಲ್ಲಿ 12 ರನ್ ಗಳಿಸಿ ಪೆವಲಿಯನ್ ಸೇರಿದ್ದರು. ಇದಕ್ಕೂ ಮುನ್ನ ಆಸೀಸ್ ಸಿರೀಸ್ನಲ್ಲೂ ಹೈಲೆಟ್ ಆಗಿರಲಿಲ್ಲ. ಏಷ್ಯಾಕಪ್ನಲ್ಲೂ ಶೈನ್ ಆಗಿರಲಿಲ್ಲ. ಕಳೆದ 19 ಪಂದ್ಯಗಳಲ್ಲಿ ಸೂರ್ಯ ಕುಮಾರ್ ಕೇವಲ 222 ರನ್ ಮಾತ್ರ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 120ಕ್ಕೆ ಕುಸಿದಿದೆ. ಈ 19 ಇನ್ನಿಂಗ್ಸ್ಗಳಲ್ಲಿ 12 ಬಾರಿ ನಂ. 3 ರಲ್ಲಿ ಮತ್ತು 7 ಬಾರಿ ನಂ. 4 ರಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಬಹುಶಃ ಬ್ಯಾಟಿಂಗ್ ಆರ್ಡರ್ ಚೇಂಜ್ ಆಗಿದ್ದೇ ಆಟದ ಮೇಲೆ ಎಫೆಕ್ಟ್ ಆಗಿರಬಹುದು ಅನ್ನೋದು ಕೆಲವರ ವಾದ. ಆದ್ರೆ ನಂಬರ್ 3ನಲ್ಲೂ ಸೂರ್ಯ ಆಡಿದ್ದು ಅಷ್ಟ್ರಲ್ಲೇ ಇದೆ. ಬಟ್ ಸೂರ್ಯನಿಗೆ ಇರೋ ಮೇನ್ ಅಡ್ವಾಂಟೇಜ್ ಏನಂದ್ರೆ ಅವ್ರ ಕ್ಯಾಪ್ಟನ್ಸಿಯಲ್ಲಿ ಭಾರತ ಗೆಲ್ತಾ ಇರೋದು. ರೋಹಿತ್ ಬಳಿಕ ಕ್ಯಾಪ್ಟನ್ ಆದ ಸೂರ್ಯ ಒಂದೇ ಒಂದು ಟ-20ಐ ಸರಣಿಯಲ್ಲೂ ಸೋತೇ ಇಲ್ಲ. ಹೀಗಾಗಿ ಲಕ್ಕಿ ಕ್ಯಾಪ್ಟನ್ ಅನ್ನೋ ಥರ ತಂಡದಲ್ಲಿ ಸರ್ವೈವ್ ಆಗ್ತಿದ್ದಾರೆ. ಗೌತಮ್ ಗಂಭೀರ್ ಕೂಡ ಇಟ್ಸ್ ಓಕೆ ಅನ್ನೋ ಥರ ಸುಮ್ನಾಗಿದ್ದಾರೆ. ಅದೇ ಸೂರ್ಯನ ಜಾಗದಲ್ಲಿ ಬೇರೆ ಯಾರೇ ಇದ್ರೂ ಇಷ್ಟೊತ್ತಿಗೆ ತಂಡದಿಂದ ಕಿಕ್ ಔಟ್ ಆಗ್ತಿದ್ರೋ ಏನೋ. ಇದು ಕ್ಯಾಪ್ಟನ್ ಕಥೆಯಾದ್ರೆ ವೈಸ್ ಕ್ಯಾಪ್ಟನ್ ಗಿಲ್ದು ಇನ್ನೊಂಥರಾ ವ್ಯಥೆ.
ಸಂಜು ಸ್ಥಾನ ಕಿತ್ಕೊಂಡ ಗಿಲ್ ಕಂಪ್ಲೀಟ್ ಡಲ್!
ಟಿ-20 ಕ್ರಿಕೆಟ್ನಲ್ಲಿ ಸಂಜು ಓಪನರ್ ಆಗಿ ಶೈನ್ ಆಗ್ತಿದ್ದಾಗ್ಲೇ ಶುಭ್ಮನ್ ಗಿಲ್ ಏಷ್ಯಾಕಪ್ ಮೂಲಕ ತಂಡಕ್ಕೆ ಕಂ ಬ್ಯಾಕ್ ಮಾಡಿ ತಾವು ಓಪನರ್ ಆಗಿ ಇನ್ನಿಂಗ್ಸ್ ಆಗ್ತಿದ್ದಾರೆ. ಬಟ್ ಗಿಲ್ ಬ್ಯಾಟ್ ಫುಲ್ ಡಲ್ ಆಗಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಕೇವಲ 21.17ರ ಸರಾಸರಿಯಲ್ಲಿ ರನ್ಗಳಿಸಿದ್ರು. ಹಾಗೇ ಕಳೆದ ಆಸಿಸ್ ಪ್ರವಾಸದಲ್ಲಿ ಶುಭ್ಮನ್ ಗಿಲ್ 5 ಪಂದ್ಯಗಳನ್ನಾಡಿ 132 ರನ್ಗಳಿಸಿದ್ರು. ಈಗ ಸೌತ್ ಆಫ್ರಿಕಾ ವಿರುದ್ಧದ ಮೊದಲ ಮ್ಯಾಚಲ್ಲೂ 4 ರನ್ಗಳಿಗೆ ಸುಸ್ತಾಗಿದ್ರು. ಹೀಗಾಗಿ ಗಿಲ್ ಬದಲಿಗೆ ಬೇರೆಯವ್ರಿಗೆ ಚಾನ್ಸ್ ಕೊಡಿ ಅನ್ನೋ ಕೂಗು ಎದ್ದಿದೆ. ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಹೆಸರು ರೇಸ್ನಲ್ಲಿದೆ. ಗಿಲ್ಗೆ ಹೋಲಿಸಿದ್ರೆ, ಸಂಜು ಸ್ಯಾಮ್ಸನ್, ಜೈಸ್ವಾಲ್ ಬೆಟರ್ ಇದ್ದಾರೆ. ಒಂದು ಮ್ಯಾಚ್ ಕೈಕೊಟ್ರೂ ಇನ್ನೊಂದು ಮ್ಯಾಚಲ್ಲಿ ಕಂ ಬ್ಯಾಕ್ ಮಾಡ್ತಾರೆ. ಹೀಗಾಗಿ ಈ ಸರಣಿಯಲ್ಲಿ ಗಿಲ್ ಫೇಲ್ ಆದ್ರೆ ಸೆಲೆಕ್ಷನ್ ಕಮಿಟಿ ಬೇರೆಯವ್ರಿಗೆ ಚಾನ್ಸ್ ಕೊಡ್ಬೇಕಾಗುತ್ತೆ. ಸೋ ಈ ಸರಣಿ ಸೂರ್ಯ ಮತ್ತು ಗಿಲ್ ಪಾಲಿಗೆ ಡು ಆರ್ ಡೈ ಎನ್ನುವಂತಿದೆ. 2026ರ ಟಿ-20ವಿಶ್ವಕಪ್ ಹಿನ್ನೆಲೆಯಲ್ಲಿ ಬಿಸಿಸಿಐಗೂ ಮೋಸ್ಟ್ ಇಂಪಾರ್ಟೆಂಟ್ ಆಗಿದೆ.
ಸೂರ್ಯ & ಗಿಲ್ ಗೆ ಅಗ್ನಿಪರೀಕ್ಷೆ!
2025ರಲ್ಲಿ ಸೂರ್ಯ ಮತ್ತು ಗಿಲ್ ಇಬ್ಬರೂ ಕಳಪೆ ಫಾರ್ಮ್
ಈ ವರ್ಷ ಸೂರ್ಯ ಕುಮಾರ್ 16 ಇನ್ನಿಂಗ್ಸ್, 196 ರನ್ಸ್
ಶುಭ್ ಮನ್ ಗಿಲ್ 2025ರಲ್ಲಿ 13 ಇನ್ನಿಂಗ್ಸ್ 263 ರನ್ಸ್
ಕ್ಯಾಪ್ಟನ್ & ವೈಸ್ ಕ್ಯಾಪ್ಟನ್ ಆಗಿ ಇಬ್ಬರೂ ಫ್ಲಾಪ್ ಶೋ
2026ರ ಟಿ-20 ವಿಶ್ವಕಪ್ ಗೂ ಮುನ್ನ 9 ಪಂದ್ಯ ಬಾಕಿ
ಸೌತ್ ಆಫ್ರಿಕಾ & ನ್ಯೂಜಿಲೆಂಡ್ ಸಿರೀಸ್ ನಲ್ಲಿ ಕಂ ಬ್ಯಾಕ್
2024ರಂತೆಯೇ ಈ ಸಲನೂ ಗಿಲ್ ವಿಶ್ವಕಪ್ ನಿಂದ ಔಟ್?

ನೋಡಿರಿ

