ಆ್ಯಪಲ್  ಉದ್ಯೋಗಿಗಳಿಗಾಗಿ ತಯಾರಿಸಿದ ಶೂ ಬರೋಬ್ಬರಿ 40 ಲಕ್ಷ ರೂಪಾಯಿಗೆ ಮಾರಾಟ!

ಆ್ಯಪಲ್  ಉದ್ಯೋಗಿಗಳಿಗಾಗಿ ತಯಾರಿಸಿದ ಶೂ ಬರೋಬ್ಬರಿ 40 ಲಕ್ಷ ರೂಪಾಯಿಗೆ ಮಾರಾಟ!

ಐಫೋನ್‌ ತಯಾರಕ ಸಂಸ್ಥೆ ಆ್ಯಪಲ್ ಎಲ್ಲರಿಗೂ ಚಿರಪರಿಚಿತ. ಹೊಸ ವಿನ್ಯಾಸ, ಹೊಸ ಹೊಸ ಫೀಚರ್‌ ಗಳ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಮಾರುಕಟ್ಟೆಯಲ್ಲಿ ಈ ಕಂಪನಿ ಅಗ್ರಸ್ಥಾನ ಪಡೆದಿದೆ. ತಂತ್ರಜ್ಞಾನ ವ್ಯವಹಾರದಲ್ಲಿ ಪ್ರಮುಖ ಬ್ರಾಂಡ್ ಆಗಿರುವ ಆ್ಯಪಲ್ ಕಂಪನಿ 90ರ ದಶಕದಲ್ಲಿ ತನ್ನ ಉದ್ಯೋಗಿಗಳಿಗಾಗಿ ತಯಾರಿಸಿದ ಶೂ ಹಾರಾಜು ಹಾಕಿದೆ. ಇದರ ಬೆಲೆ ಎಷ್ಟು ಎಂದು ಕೇಳಿದರೆ ಶಾಕ್‌ ಆಗುವುದು ಪಕ್ಕಾ!

ಇದನ್ನೂ ಓದಿ: ಬಚ್ಚಲು ಮನೆಯಲ್ಲಿ ಬಳಸುವ ಹವಾಯಿ ಚಪ್ಪಲಿ ಬೆಲೆ 9000ರೂ!

ಸಾಮಾನ್ಯವಾಗಿ ಒಂದು ಜೊತೆ ಬ್ರ್ಯಾಂಡೆಡ್ ಶೂ ಬೆಲೆ 1 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ಇರಬಹುದು. ಈ ಶೂಗಳನ್ನು ಮಾರಾಟ ಮಾಡಿದರೆ ಅದನ್ನು ಖರೀದಿಸಲು ಜನ ಹಿಂದೇಟು ಹಾಕುತ್ತಾರೆ. ಇನ್ನು ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಶೂ ಕೊಟ್ಟರೆ ಕಡಿಮೆ ಬೆಲೆಯ ಶೂಗಳನ್ನು ನೀಡುತ್ತಾರೆ. ಆದ್ರೆ ಆ್ಯಪಲ್ ಕಂಪನಿ ತನ್ನ ಉದ್ಯೋಗಿಗಳಿಗಾಗಿ ತಯಾರಿಸಿದ ಶೂ ಲಕ್ಷಾಂತರ ರೂಪಾಯಿ ಬೆಲೆಗೆ ಮಾರಾಟವಾಗಿದೆ.

ಸುಮಾರು 90ರ ದಶಕದಲ್ಲಿ ಆ್ಯಪಲ್ ಕಂಪನಿ ಉದ್ಯೋಗಿಗಳಿಗಾಗಿ ವಿಶೇಷವಾದ ಶೂ ತಯಾರಿಸಿತ್ತು. ಆ್ಯಪಲ್ ಕಂಪನಿಯು 10.5 ಸೈಜ್​​​ ಇರುವ ಪುರುಷರಿಗಾಗಿ ತಯಾರಿಸಲಾಗಿತ್ತು. ಈ ಶೂ ಬಿಳಿ ಬಣ್ಣವನ್ನು ಹೊಂದಿದೆ ಹಾಗೂ ಇದರ ಮೇಲೆ ಮಳೆಬಿಲ್ಲು ಬಣ್ಣಗಳಿಂದ ಆವೃತ್ತವಾಗಿರುವ ಆ್ಯಪಲ್​​ನ ಹಳೆಯ ಲೋಗೋ ಕೂಡಾ ಇದೆ. ಈ ಅಪರೂಪದ ಶೂ ಅನ್ನು ಕಂಪನಿಯು ಹರಾಜಿನಲ್ಲಿಟ್ಟಿದೆ. ಇದೀಗ ಒಂದು ಜೋಡಿ ಬಿಳಿ ಶೂ 50,000 ಡಾಲರ್ (ಅಂದಾಜು 40 ಲಕ್ಷ)ಗೆ ಮಾರಾಟ ಮಾಡಲಾಗುತ್ತಿದೆ. ಆ್ಯಪಲ್ ಉದ್ಯೋಗಿಗಳಿಗಾಗಿ ಪ್ರತ್ಯೇಕವಾಗಿ ತಯಾರಿಸಲಾದ ಈ ಶೂ ಅಂತಿಮ ಬಿಡ್ ನಂತರ ಇದರ ಬೆಲೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆಎಂದು ವರದಿ ಸೂಚಿಸಿದೆ.

suddiyaana