ಕಿಟಕಿಯಿಂದ ಚಲಿಸುತ್ತಿರುವ ಬಸ್ ಹತ್ತಿದ ಯುವತಿ – ಸೀಟಿಗಾಗಿ ಈ ಸಾಹಸ ಬೇಕಾ?  

ಕಿಟಕಿಯಿಂದ ಚಲಿಸುತ್ತಿರುವ ಬಸ್ ಹತ್ತಿದ ಯುವತಿ – ಸೀಟಿಗಾಗಿ ಈ ಸಾಹಸ ಬೇಕಾ?  

ಜನದಟ್ಟಣೆ ಇರುವಂತಹ ಪ್ರದೇಶಗಳಲ್ಲಿ ಬಸ್, ರೈಲು ಹತ್ತುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲ ಪ್ರಯಾಣಿಕರು ತಮ್ಮ ಬಳಿ ಇರುವ ಕರ್ಚೀಫ್, ಬ್ಯಾಗ್ ಮುಂತಾದವುಗಳನ್ನು ಸೀಟ್ ಮೇಲೆ ಹಾಕುತ್ತಾರೆ. ಇನ್ನೂ ಕೆಲವರು ತಮ್ಮ ಸಹಚರರ ಬಳಿ ಸೀಟು ಇಡಲು ಹೇಳುತ್ತಾರೆ. ಇದು ಸಾಮಾನ್ಯ. ಆದರೆ ಇಲ್ಲೊಬ್ಬಳು ಬಸ್ ನಲ್ಲಿ ಸೀಟು ಗಿಟ್ಟಿಸಿಕೊಳ್ಳುಲು ಮಾಡಿರುವ ಸಾಹಸ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡುತ್ತದೆ.

ಇದನ್ನೂ ಓದಿ: ಇದು ತಿನ್ನುವ ಬಾಳೆ ಹಣ್ಣಲ್ಲ – ಕಣ್ಣಾರೆ ಕಂಡರೂ ಒಮ್ಮೆ ಮುಟ್ಟಿ ನೋಡಿ…

ghantaa ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ, ಬಸ್ ನಿಲ್ದಾಣದಲ್ಲಿ ಬಸ್ ಬಂದು ನಿಲ್ಲುತ್ತದೆ. ಈ ವೇಳೆ ಬಸ್ ಸ್ಟ್ಯಾಂಡ್ ನಲ್ಲಿದ್ದ ಜನ ಹತ್ತಲು ಮುಗಿಬೀಳುತ್ತಾರೆ. ಬಸ್ ನಿಧಾನಕ್ಕೆ ಮುಂದಕ್ಕೆ ಸಾಗುತ್ತಿರುತ್ತದೆ. ಆದರೂ ಹಿಂಬಾಗಿಲಿನಲ್ಲಿ ಸಾಕಷ್ಟು ಮಂದಿ ನೇತಾಡುತ್ತಿರುತ್ತಾರೆ. ಕೆಲವರು ಬಸ್ ಏರಲಾಗದೆ ತಮ್ಮ ಪ್ರಯತ್ನವನ್ನು ಅರ್ಧಕ್ಕೇ ಬಿಡುತ್ತಾರೆ. ಆದರೆ, ಒಬ್ಬಳು ಹುಡುಗಿ ಮಾತ್ರ ಬಸ್‌ನ ಕಿಟಕಿಯ ಬಳಿ ಓಡಿ ಅಲ್ಲಿಂದ ಬಸ್ ಏರಲು ಪ್ರಯತ್ನಿಸುತ್ತಾಳೆ. ಆಗ ಒಳಗಿದ್ದವರು ಕಿಟಕಿಯಲ್ಲಿ ನೇತಾಡುತ್ತಿದ್ದ ಆಕೆಯ ಸಹಾಯಕ್ಕೆ ಬರುತ್ತಾರೆ. ಹೀಗೆ ಬಸ್ ನಿಧಾನಕ್ಕೆ ಸಾಗುತ್ತಿರುವಾಗಲೇ ಈ ಹುಡುಗಿ ಕಿಟಕಿ ಮೂಲಕ ಸರಾಗವಾಗಿ ಬಸ್‌ನೊಳಗೆ ನುಗ್ಗಿಬಿಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

View this post on Instagram

 

A post shared by memes comedy (@ghantaa)

ಯುವತಿ ಈ ಭಂಡ ಧೈರ್ಯ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದೆ.  ಈ ವಿಡಿಯೋ ಹರಿಯಾಣದ್ದು ಎಂದು ಹೇಳಲಾಗುತ್ತಿದ್ದು, ಅಧಿಕೃತವಾಗಿ ಯಾವುದೇ ಮಾಹಿತಿಗಳಿಲ್ಲ. “ಈ ಯುವತಿ ಶಕ್ತಿಶಾಲಿಯಾಗಿದ್ದಾಳೆ ಎಂದು ಕೆಲವರು ಕೊಂಡಾಡಿದ್ದರೆ, ಇನ್ನೂ ಕೆಲವರು ಸರ್ಕಾರ ಹಾಗೂ ಸಾರಿಗೆ ಇಲಾಖೆಯನ್ನು ದೂರಿದ್ದಾರೆ.

suddiyaana