ಊದಿದ ಮುಖ.. ಉರ್ಫಿಗೆ ಏನಾಯ್ತು? – ಲಿಪ್ ಸರ್ಜರಿ.. ಬ್ಯೂಟಿ ಕಳ್ಕೊಂಡ್ರಾ?

ನಟಿ, ಮಾಡೆಲ್ ಉರ್ಫಿ ಜಾವೇದ್.. ಸೋಶಿಯಲ್ ಮೀಡಿಯಾ ಫಾಲೋ ಮಾಡೋರಿಗೆ ಈಕೆ ಪರಿಚಯ ಇದ್ದೇ ಇದೆ.. ಈಕೆಗೆ ಬಟ್ಟೆ ಅಂದ್ರೆ ಅಲರ್ಜಿ.. ಹೀಗಾಗಿ ಅಂಗೈ ಅಗಲದ ಡ್ರೆಸ್‌ಗಳನ್ನೇ ಹಾಕಿ ಪಬ್ಲಿಕ್ ಪ್ಲೇಸ್‌ನಲ್ಲಿ ಕಾಣಿಸಿಕೊಳ್ಳೋದು ಕಾಮನ್.. ಸದಾ ಡಿಫ್ರೆಂಟ್ ಡಿಫ್ರೆಂಟ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ಉರ್ಫಿ ಗುರುತೇ ಸಿಗದಂತೆ ಆಗಿದ್ದಾರೆ.. ನಟಿ ಮುಖ ಕಂಪ್ಲೀಟ್ ಊದಿಕೊಂಡಿದೆ.. ಇದ್ರ ಫೋಟೊ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಊರ್ಫಿ ಫೇಸ್ ನೋಡಿದ ಫ್ಯಾನ್ಸ್.. ಉರ್ಫಿಗೆ ಏನಾಯ್ತು? ನಟಿ ಬ್ಯೂಟಿ ಹಿಂದೆ ಹೋಗಿ ಮುಖವನ್ನೇ ಹಾಳು ಮಾಡ್ಕೊಂಡ್ರಾ? ಉರ್ಫಿ ಮುಖ ಸರಿ ಆಗಲ್ವಾ? ಅಂತಾ ಕೇಳ್ತಿದ್ದಾರೆ.. ಇದೀಗ ಉರ್ಫಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ಟ್ರಂಪ್ ಮಾತೇ ಮೋದಿಗೆ ಮುಳ್ಳು? – ‘ಕೈ’ ಜಾಲದಲ್ಲಿ ಸಿಕ್ಕಿಬೀಳ್ತಾರಾ ಪ್ರಧಾನಿ?
ಉರ್ಫಿ ಜಾವೇದ್ ಅಂದ ತಕ್ಷಣವೇ ಚೋಟುದ್ದ ಡ್ರೆಸ್.. ಚಿತ್ರ ವಿಚಿತ್ರ ಕಾಸ್ಟೂಮ್ ಕಣ್ಣ ಮುಂದೆ ಬರುತ್ತೆ.. ಸಾಮಾಜಿಕ ಜಾಲತಾಣದಲ್ಲಿ ಉರ್ಫಿ ತನ್ನದೇ ಆದ ಕ್ರೇಜ್ ಸೆಟ್ ಮಾಡಿರುವ ಚೆಲುವೆ. ಇದೀಗ ಈ ಸುಂದರಿ, ಇನ್ನಷ್ಟು ಬ್ಯೂಟಿಫುಲ್ ಕಾಣಲು ಹೋಗಿ ಇರೋ ಬ್ಯೂಟಿನೂ ಹಾಳು ಮಾಡ್ಕೊಂಡ್ರಾ ಅನ್ನೋ ಪ್ರಶ್ನೆ ಎದುರಾಗಿದೆ.. ಸದಾ ಹಾಟ್ ಹಾಟ್ ಫೋಟೋ ವಿಡಿಯೋ ಶೇರ್ ಮಾಡ್ತಿದ್ದ ಉರ್ಫಿ ಈಗ ಶಾಕಿಂಗ್ ವಿಡಿಯೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.. ಉರ್ಫಿ ಮುಖ ಈಗ ಕಂಪ್ಲೀಟ್ ಊದಿಕೊಂಡು ಗುರುತೇ ಸಿಗದಂತೆ ಆಗಿದೆ.
ಸ್ಟೈಲ್ ಐಕಾನ್ ಎಂದೇ ಖ್ಯಾತಿ ಪಡೆದ ಉರ್ಫಿ ಜಾವೇದ್ ಫೋಟೋ ಇತ್ತೀಚೆಗೆ ವೈರಲ್ ಆಗಿತ್ತು. ಇದ್ರಲ್ಲಿ ಉರ್ಫಿ ಮುಖ ಊದಿಕೊಂಡಿತ್ತು.. ತುಟಿಯಂತೂ ಫುಲ್ ಶೇಪ್‌ಔಟ್ ಆಗಿತ್ತು.. ಈ ಫೋಟೋ ನೋಡಿದವ್ರೆಲ್ಲಾ ನಟಿಗೆ ಅಲರ್ಜಿ ಆಗಿರ್ಬೋದು.. ಇದರಿಂದಾಗಿ ಅವರ ಬಾಯಿ ಸಂಪೂರ್ಣವಾಗಿ ಊದಿಕೊಂಡಿದೆ ಅಂತ ಅಂದ್ಕೊಂಡಿದ್ರು.. ಆದ್ರೀಗ ಉರ್ಫಿ ಫ್ಯಾನ್ಸ್ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ತಮ್ಮ ಮುಖಕ್ಕೆ ಏನಾಗಿದೆ ಅನ್ನೋ ಸತ್ಯ ರಿವೀಲ್ ಮಾಡಿದ್ದಾರೆ.
ಉರ್ಫಿ ಜಾವೇದ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇಲ್ಲ, ಇದು ಫಿಲ್ಟರ್ ಅಲ್ಲ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಉರ್ಫಿ ಇಂಜೆಕ್ಷನ್ ಚುಚ್ಚಿಸಿಕೊಳ್ಳುತ್ತಿರೋದನ್ನ ತೋರಿಸಲಾಗಿದೆ. ಬಳಿಕ ಉರ್ಫಿ ಇಂಜೆಕ್ಷನ್ ಪಡೆದ ಬಳಿಕ ಏನಾಯ್ತು ಅನ್ನೋದನ್ನ ವಿವರಿಸಿದ್ದಾರೆ. ಇಂಜೆಕ್ಷನ್ ಚುಚ್ಚುತ್ತಿದ್ದಂತೆ, ಉರ್ಫಿಯ ಮುಖ ಮತ್ತು ತುಟಿಗಳು ಊದಿಕೊಳ್ಳಲು ಪ್ರಾರಂಭಿಸಿದವು. ಅದು ತುಂಬಾ ನೋವಿನಿಂದ ಕೂಡಿತ್ತು. 3 ವಾರಗಳ ನಂತರ ಮತ್ತೆ ಲಿಪ್ ಗೆ ಫಿಲ್ಲರ್‌ಗಳನ್ನು ಮಾಡಿಸಿಕೊಳ್ಳುವುದಾಗಿ ಉರ್ಫಿ ಬಹಿರಂಗಪಡಿಸಿದ್ದಾರೆ. ಇದಿಷ್ಟೇ ಅಲ್ಲದೇ ಅಂತಿಮ ಫಲಿತಾಂಶಗಳನ್ನು ನಂತರ ಪೋಸ್ಟ್ ಮಾಡುವುದಾಗಿ ತಮ್ಮ ಫ್ಯಾನ್ಸ್‌ಗೆ ಹೇಳಿದ್ದಾರೆ.
ಅಂದ್ಹಾಗೆ ಉರ್ಫಿ ತಮ್ಮ ಲಿಪ್‌ಗೆ ಟ್ರೀಟ್‌ಮೆಂಟ್ ಯಾಕೆ ತೆಗೆದುಕೊಳ್ತಿದ್ದಾರೆ ಅನ್ನೋನ್ನ ತಿಳಿಸಿದ್ದಾರೆ. ಉರ್ಫಿ 18ನೇ ವಯಸ್ಸಿನಿಂದ ತುಟಿಗಳಿಗೆ ಫಿಲ್ಲರ್ಸ್ ಬಳಸುತ್ತಿದ್ದಾರೆ. ಈಗಾಗಲೇ ಹಾಕಿಸಿಕೊಂಡಿದ್ದ ಫಿಲ್ಲರ್ಸ್ ಸರಿಯಾಗಿ ಆಗಿಲ್ಲ. ಎಲ್ಲೆಂದರಲ್ಲಿ ಆಗಿರುವ ಕಾರಣ ಫಿಲ್ಲರ್ಸ್ ತೆಗೆದು, ಹೊಸದಾಗಿ ಹಾಕಿಸಿಕೊಸಿಕೊಂಡಿದ್ದೇನೆ. ಈ ಬಾರಿ ನೈಸರ್ಗಿಕವಾಗಿ ಫಿಲ್ಲರ್ಸ್ ಹಾಕಿಸಿಕೊಂಡಿದ್ದೇನೆ.. ಈಗಾಗಲೇ ಹಾಕಿಸಿಕೊಂಡಿರೋ ಫಿಲ್ಲರ್ಸ್ ತೆಗೆಯುವುದು ತುಂಬಾ ನೋವಾಗುತ್ತೆ ಎಂದಿದ್ದಾರೆ. ಇದೇ ವೇಳೆ ಮಹತ್ದ ಸಲಹೆಯೊಂದನ್ನು ಕೂಡ ಉರ್ಫಿ ನೀಡಿದ್ದಾರೆ. ಫಿಲ್ಲರ್ ಹಾಕಿಸಿಕೊಳ್ಳಲು ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು. ಹಲವು ಕ್ಲಿನಿಕ್‌ನಲ್ಲಿ ಫಿಲ್ಲರ್ಸ್ ಹಾಕಿಸಿಕೊಡುವುದಾಗಿ ಹೇಳುತ್ತಾರೆ. ನೈಸರ್ಗಿಕ ರೀತಿಯಲ್ಲಿ ಹಾಕಿದರೆ ಮಾತ್ರ ಬ್ಯೂಟಿ ಫಿಲ್ಲರ್ಸ್ ಅಂದ ಹೆಚ್ಚಿಸಲಿದೆ ಎಂದಿ ಹೇಳಿದ್ದಾರೆ.
ಉರ್ಫಿ ಜಾವೇದ್ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.. ಹಲವಾರು ಜನ ಉರ್ಫಿಯ ಈ ಹುಚ್ಚುತನಕ್ಕೆ ಕಿಡಿ ಕಾರಿದ್ದಾರೆ. ಸಹಜ ಸೌಂದರ್ಯವನ್ನು ಯಾಕೆ ಹೀಗೆ ಹಾಳು ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ನೋಡಲು ಸುಂದರವಾಗಿದ್ದೀರಿ? ಇದರ ಅವಶ್ಯಕತೆ ಏನಿತ್ತು ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.
ಅಂದ್ಹಾಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಇರ್ಬೇಕು ಅಂದ್ರೆ ನಟಿಯರಿಗೆ ಬ್ಯೂಟಿ ತುಂಬಾ ಮುಖ್ಯ.. ಮುಖದಲ್ಲಿ ಸಣ್ಣ ಕಲೆ ಆದ್ರೂ ಕೂಡ ತಮ್ಮ ಕೆರಿಯಲ್ ಮೇಲೆ ತುಂಬಾ ಎಫೆಕ್ಟ್ ಬೀಳುತ್ತೆ. ಹೀಗಾಗೇ ಸಾಕಷ್ಟು ನಟಿಯರು ಬ್ಯೂಟಿ ಟ್ರೀಟ್‌ಮೆಂಟ್ ಗೆ ಒಳಗಾಗ್ತಾರೆ.. ಕೆಲವೊಮ್ಮೆ ಬ್ಯೂಟಿ ಹಿಂದೆ ಹೋಗಿ ತಮ್ಮ ಮುಖ ಹಾಳುಮಾಡಿಕೊಂಡಿದ್ದೂ ಇದೆ.. ಇದೀಗ ಉರ್ಫಿ ಬ್ಯೂಟಿ ಟ್ರೀಟ್‌ಮೆಂಟ್ ತೆಗೆದುಕೊಂಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.. ನಟಿಯರಿಗೆ ಮತ್ತು ಪ್ಲಾಸ್ಟಿಕ್ ಸರ್ಜರಿಗೆ ಅವಿನಾಭಾವ ಸಂಬಂಧ ಇದೆ ಅನ್ನೋದನ್ನ ಸಾಭೀತು ಮಾಡಿದ್ದಾರೆ.

ನೋಡಿರಿ

