ಫ್ಯಾಮಿಲಿಗಾಗಿ ಕೊಹ್ಲಿ ಶಾಕ್ ಕೊಡ್ತಾರಾ? – T-20I ನಿವೃತ್ತಿ.. ODIಗೂ ವಿದಾಯ?
7 ತಿಂಗಳ ಬಳಿಕ KING ಯುಗಾಂತ್ಯ?

ವಿಶ್ವಕ್ರಿಕೆಟ್ನ ಲೆಜೆಂಡ್ ಅಂತಾನೇ ಕರೆಸಿಕೊಳ್ಳೋ ಕಿಂಗ್ ವಿರಾಟ್ ಕೊಹ್ಲಿ ಸಾಧನೆಗಳ ಸರದಾರ. ಇಂದಿನ ಯುವಪೀಳಿಗೆಗೆ ಕೊಹ್ಲಿಯೇ ಇನ್ಸ್ಪಿರೇಷನ್.. ಕೊಹ್ಲಿಯೇ ರೋಲ್ ಮಾಡೆಲ್.. ಕ್ರಿಕೆಟರ್ಸ್ ಕೂಡ ವಿರಾಟ್ರನ್ನ ಕೊಂಡಾಡುತ್ತಾರೆ. ಅಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದಾರೆ. ಆದ್ರೆ ಇನ್ಮುಂದೆ ಟಿ-20ಐ ಕ್ರಿಕೆಟ್ನಲ್ಲಿ ವಿರಾಟ್ ಇನ್ನೆಂದೂ ಟೀಂ ಇಂಡಿಯಾ ಪರ ಆಡೋದಿಲ್ಲ. ಟಿ-20 ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಟಿ20ಐಗೆ ನಿವೃತ್ತಿ ಘೋಷಣೆ ಮಾಡಿದ್ದರು. ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಹರಿದಾಡ್ತಿದೆ. ಕಿಂಗ್ ವಿರಾಟ್ ಏಕದಿನ ಫಾರ್ಮೆಟ್ಗೂ ಕೂಡ ನಿವೃತ್ತಿ ಘೋಷಣೆ ಮಾಡ್ತಾರೆ ಅನ್ನೋದು. ಅಷ್ಟಕ್ಕೂ ವಿರಾಟ್ ಇಂಥಾದ್ದೊಂದು ನಿರ್ಧಾರಕ್ಕೆ ಮುಂದಾಗಿರೋದೇಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪಾಂಡ್ಯ ಫಿಟ್ ಆಗಿಲ್ವಾ? – ಫಿಟ್‌ನೆಸ್ ಫೋಟೋ ಹಾಕಿದ್ಯಾಕೆ?
ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಮಾಡದೇ ಇರುವ ಸಾಧನೆಗಳೇ ಇಲ್ಲ. ವಿರಾಟ್ರ ಶಿಸ್ತು, ಶ್ರದ್ಧೆ, ಸ್ಥಿರತೆ, ಆಟದ ಮೇಲೆ ಅವ್ರಿಗೆ ಇರುವ ಪ್ರೀತಿ ಕಂಡು ಇಡೀ ಕ್ರಿಕೆಟ್ ಲೋಕವೇ ಬೆರಗಾಗಿದೆ. ಕ್ರಿಕೆಟ್ ಲೋಕದ ದೇವರು ಅಂತಾನೇ ಕರೆಸಿಕೊಂಡಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಕೊಹ್ಲಿ ಆಟಕ್ಕೆ ಅಭಿಮಾನಿ ಆಗಿಬಿಟ್ಟಿದ್ರು. ಜಗತ್ತಿನ ದೊಡ್ಡ ದೊಡ್ಡ ಆಟಗಾರರೇ ವಿರಾಟ್ಗೆ ಫಿದಾ ಆಗಿರಬೇಕಾದ್ರೆ ಇನ್ನು ಫ್ಯಾನ್ಸ್ ಬಗ್ಗೆ ಹೇಳಬೇಕಾ. ಹೀಗೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನ ಹೊಂದಿರುವ ವಿರಾಟ್ ಕೊಹ್ಲಿ ಈಗಾಗ್ಲೇ ಟಿ-20ಐಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದೀಗ ಏಕದಿನ ಸರಣಿಗೂ ಗುಡ್ ಬೈ ಹೇಳ್ತಾರೆ ಎಂಬ ಬಿಸಿಬಿಸಿ ಚರ್ಚೆಯಾಗ್ತಿದೆ. ಈ ಪ್ರಶ್ನೆಗೆ ಜಸ್ಟ್ ಏಳೇ ಏಳು ತಿಂಗಳಲ್ಲಿ ಉತ್ತರ ಸಿಗುವ ಎಲ್ಲಾ ಸಾಧ್ಯತೆಯೂ ಇದೆ.
ವಿರಾಟ್ ಏಕದಿನ ಕೆರಿಯರ್ ಯುಗಾಂತ್ಯ?
ವಿರಾಟ್ ಕೊಹ್ಲಿ ಈಗಾಗಲೇ ಕ್ರಿಕೆಟ್ ಲೋಕದಲ್ಲಿ ದೊಡ್ಡ ದೊಡ್ಡ ದಾಖಲೆಗಳನ್ನೇ ಬ್ರೇಕ್ ಮಾಡಿದ್ದಾರೆ. ಟಿ-20, ಏಕದಿನ, ಟೆಸ್ಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿ ಸಾಲು ಸಾಲು ರೆಕಾರ್ಡ್ಸ್ ಬರೆದಿದ್ದಾರೆ. ಹೀಗೆ ಎಲ್ಲಾ ಮಾದರಿಯಲ್ಲೂ ಆರ್ಭಟಿಸಿರುವ ವಿರಾಟ್ ಇತ್ತೀಚೆಗಷ್ಟೇ ಟಿ20 ಮಾದರಿ ಕ್ರಿಕೆಟ್ನಿಂದ ನಿವೃತ್ತಿ ಪಡೆದಿದ್ದಾರೆ. ಯುವ ಕ್ರಿಕೆಟ್ ಆಟಗಾರರಿಗೆ ದಾರಿ ಮಾಡಿಕೊಡುವ ಉದ್ದೇಶ ಕೊಹ್ಲಿಯವ್ರದ್ದು. ಈಗ ಮತ್ತೊಂದು ಫಾರ್ಮೆಟ್ನಿಂದಲೂ ತೆರೆಮರೆಗೆ ಸರಿಯುವ ಕಾಲ ಹತ್ತಿರವಾಯ್ತಾ ಅನ್ನೋ ಅನುಮಾನ ಶುರುವಾಗಿದೆ. ಟಿ20 ಫಾರ್ಮೆಟ್ನಂತೆಯೇ ಏಕದಿನ ಕ್ರಿಕೆಟ್ನಿಂದಲೂ ದೂರ ಸರಿಯುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಈಗಾಗಲೇ ಕೌಂಟ್ಡೌನ್ ಕೂಡ ಶುರುವಾಗಿದೆ. ಸದ್ಯ 35 ವರ್ಷದ ವಿರಾಟ್, ಇದೇ ನವೆಂಬರ್ ಬಳಿಕ 36ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಮುಂದಿನ 2027ರ ಏಕದಿನ ವಿಶ್ವಕಪ್ ವೇಳೆಗೆ ವಿರಾಟ್ ಕೊಹ್ಲಿ ವಯಸ್ಸು 39 ಆಗಿರಲಿದೆ. ಹೀಗಾಗಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನೊಂದಿಗೆ ಏಕದಿನ ಫಾರ್ಮೆಟ್ಗೂ ಗುಡ್ ಬೈ ಹೇಳುವ ಲೆಕ್ಕಚಾರ ಕೊಹ್ಲಿಯದ್ದಾಗಿದೆ. ಇದು ನಿಜವೇ ಆದ್ರೆ ಮುಂದಿನ 7 ತಿಂಗಳು ಮಾತ್ರವೇ ವಿರಾಟ್, ಏಕದಿನ ಫಾರ್ಮೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆರಳೆಣಿಕೆ ಪಂದ್ಯಗಳನ್ನಷ್ಟೇ ಆಡಲಿದ್ದಾರೆ. ಅಲ್ದೇ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದಿರುವ ಗೌತಮ್ ಗಂಭೀರ್, ಸೀನಿಯರ್ ಪ್ಲೇಯರ್ಸ್ಗೆ ಡೈಡ್ ಲೈನ್ ಕೂಡ ಫಿಕ್ಸ್ ಮಾಡಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರದರ್ಶನದ ಆಧಾರದಲ್ಲಿ ಕೆಲವರಿಗೆ ಗೇಟ್ಪಾಸ್ ನೀಡುವ ಷರತ್ತು ಬಿಗ್ಬಾಸ್ಗಳ ಮುಂದಿಟ್ಟಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ಫಾರ್ಮೆಟ್ಗೆ ಗುಡ್ ಬೈ ಹೇಳಲಿರುವ ವಿರಾಟ್, ಟೆಸ್ಟ್ ಕ್ರಿಕೆಟ್ಗೆ ಮಾತ್ರ ಸೀಮಿತವಾಗೋ ಸಾಧ್ಯತೆ ಇದೆ. 2025ರ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ನತ್ತಲೇ ದೃಷ್ಟಿ ನೆಡಲಿರುವ ವಿರಾಟ್, ಎರಡ್ಮೂರು ವರ್ಷಗಳ ಕಾಲ ರೆಡ್ ಬಾಲ್ ಕ್ರಿಕೆಟ್ನಲ್ಲಿ ಮುಂದುವರಿಯಲಿದ್ದಾರೆ. ಈ ಬಳಿಕ ಟೆಸ್ಟ್ನಿಂದಲೂ ನಿರ್ಗಮಿಸಬಹುದು. ಹೀಗಾಗಿ ಮುಂದೆ ಎದುರಾಗುವ 2025ರ ಐಸಿಸಿ ಚಾಂಪಿಯನ್ ಟ್ರೋಫಿ, ಟೆಸ್ಟ್ ಚಾಂಪಿಯನ್ ಶಿಪ್ನತ್ತಲೇ ವಿರಾಟ್ ದೃಷ್ಟಿ ನೆಟ್ಟಿದೆ.
ವಿರಾಟ್ ಕೊಹ್ಲಿ. ವಿಶ್ವ ಕ್ರಿಕೆಟ್ನ ಅಗ್ರಜ. ವಿಶ್ವ ಕ್ರಿಕೆಟ್ ಸಾಮ್ರಾಟನಾಗಿ ಅಧಿಪತ್ಯ ನಡೆಸ್ತಿರುವ ವಿರಾಟ್, ವೀರಾವೇಶಕ್ಕೆ ಥಂಡಾ ಹೊಡೆದ ಬೌಲರ್ಗಳು ಅದೆಷ್ಟೋ.. 17 ವರ್ಷದ ವೃತ್ತಿ ಜೀವನದಲ್ಲಿ ಕಿಂಗ್ ಆಗಿಯೇ ಮೆರೆದ ಈ ಸಾಮ್ರಾಟ ಟಿ20 ಮಾದರಿ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿಯಾಗಿದೆ. ಆದ್ರೆ ವಿದಾಯ ಹೇಳಿದ್ದರೂ ಅವರ ದಾಖಲೆ ಮುಟ್ಟಲು ಇನ್ನೂ ಸಾಕಷ್ಟು ವರ್ಷಗಳೇ ಬೇಕು ಬಿಡಿ. ಯಾಕಂದ್ರೆ ಅಷ್ಟು ದೊಡ್ಡ ದಾಖಲೆ ನಿರ್ಮಿಸಿದ್ದಾರೆ ನಮ್ಮ ಕೊಹ್ಲಿ. ಹೀಗಾಗಿ ವಿರಾಟ್ ಕೊಹ್ಲಿಗೆ & ಅವರ ದಾಖಲೆಗಳಿಗೆ ಅವರೇ ಸರಿಸಮ ಎನ್ನಬಹುದು. ಇಲ್ಲಿ ವಿರಾಟ್ ನಿವೃತ್ತಿಗೆ ಮತ್ತೊಂದು ಮೇನ್ ರೀಸನ್ ಫ್ಯಾಮಿಲಿ. ವಿರಾಟ್ ಅದೆಷ್ಟೇ ದೊಡ್ಡ ಪ್ಲೇಯರ್ ಆಗಿದ್ರೂ ಫಸ್ಟ್ ಪ್ರಿಪರೆನ್ಸ್ ಫ್ಯಾಮಿಲಿಗೇ ಕೊಡ್ತಾರೆ. ಹೆಂಡ್ತಿ ಮಕ್ಕಳೇ ಅವ್ರ ಮೊದಲ ಆಯ್ಕೆ. ಹೀಗಾಗಿ ಹೆಚ್ಚು ಸಮಯ ಕುಟುಂಬದೊಂದಿಗೆ ಕಳೆಯೋ ಉದ್ದೇಶದಿಂದಲೇ ಒಂದೊಂದೇ ಫಾರ್ಮೆಟ್ನಿಂದ ದೂರವಾಗೋ ಲೆಕ್ಕಾಚಾರದಲ್ಲಿದ್ದಾರೆ.