ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘೋರ ಕೃತ್ಯ – ಪತ್ನಿ, ಅತ್ತೆ ಸೇರಿದಂತೆ 7 ಮಂದಿಯನ್ನು ಹ***ತ್ಯೆಗೈದ ಕ್ಯಾಬ್ ಡ್ರೈವರ್

ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘೋರ ಕೃತ್ಯ – ಪತ್ನಿ, ಅತ್ತೆ ಸೇರಿದಂತೆ 7 ಮಂದಿಯನ್ನು ಹ***ತ್ಯೆಗೈದ ಕ್ಯಾಬ್ ಡ್ರೈವರ್

ಬೆಂಗಳೂರಲ್ಲಿ ಬೆಳಗ್ಗೆಯಿಂದ ಬಂದ ಸುದ್ದಿಯೊಂದು ಬೆಚ್ಚಿಬೀಳಿಸಿದೆ. ಕ್ಯಾಬ್ ಡ್ರೈವರ್ ಒಬ್ಬ ತನ್ನ ಪತ್ನಿ, ಅತ್ತೆ, ಇಬ್ಬರು ನಾದಿನಿಯರು, ಪುಟ್ಟ ಬಾಲಕ ಸೇರಿದಂತೆ 7 ಮಂದಿಯನ್ನು ಕೊ**ಲೆ ಮಾಡಿದ್ದಾನೆ. 15 ದಿನಗಳಲ್ಲಿ ಒಂದೇ ಕುಟುಂಬದ 7 ಮಂದಿಯ ಕಥೆ ಮುಗಿಸಿದ ಪಾಪಿ ಈಗ ಪೊಲೀಸರ ವಶದಲ್ಲಿದ್ದಾನೆ.

ಇದನ್ನೂ ಓದಿ:ಸರ್ಕಾರದಿಂದ ಬಸ್ ಪ್ರಯಾಣಿಕರಿಗೆ ದೀಪಾವಳಿ ಗಿಫ್ಟ್ – KSRTC, BMTC ಬಸ್ ಟಿಕೆಟ್ ದರ ಏರಿಕೆ

ಕೈ ಹಿಡಿದ ಪತ್ನಿಯನ್ನು ಬಿಡಲಿಲ್ಲ. ಹೆಂಡತಿಯ ಮನೆಯವರನ್ನೂ ಬಿಡಲಿಲ್ಲ. ಹೆಂಡತಿ ಮೇಲಿನ ಸಿಟ್ಟಿಗೆ ಇಡೀ ಮನೆಯವರನ್ನೇ ಬಲಿ ಕೊಡಲು ಮುಂದಾಗಿದ್ದ ಕೆಟ್ಟ ಪಾಪಿ ಕೊನೆಗೂ ಒಂದಲ್ಲ, ಎರಡಲ್ಲ, 7 ಕೊಲೆ ಮಾಡಿದ್ದಾನೆ. ಬೆಂಗಳೂರಿನ ರಾಜಾಜಿನಗರದ ಮನೆಯಲ್ಲೇ 7 ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಕೊಂದ ಪಾಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಆರೋಪಿ ಹೆಸರು ಇಂದು ಶೇಖರ್. ಈತ ಕ್ಯಾಬ್ ಡ್ರೈವರ್. ಮತ್ತು ಠಾಣಾ ವರದಿ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದ ಎಂಬ ಮಾಹಿತಿ ಇದೆ. ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ವಾಸವಿದ್ದ ಇಂದುಶೇಖರ್, ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸುನೀತಾರನ್ನು ವಿವಾಹವಾಗಿದ್ದ. ಸುನೀತಾ ಶ್ರೀರಾಮಪುರದ ತವರು ಮನೆಗೆ ಹೋಗಿ ಬರುತ್ತಿದ್ದುದು ಆರೋಪಿಗೆ ಇಷ್ಟವಿರಲಿಲ್ಲ. ತವರಿಗೆ ಹೋಗದಂತೆ ಆತ ಪತ್ನಿಗೆ ಹೇಳಿದ್ದ. ಗಂಡ ಹೆಂಡತಿ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು. ಸುನೀತಾ ಅವರಿಗೆ ತಾಯಿ ಹಾಗೂ ಸಹೋದರರು ಯಾವಾಗಲೂ ಬೆಂಬಲ ನೀಡುತ್ತಿದ್ದರು. ಇದನ್ನು ಪಾಪಿ ಪತಿಗೆ ಸಹಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪತ್ನಿ ಸೇರಿದಂತೆ ಆಕೆಯ ಮನೆಯವರನ್ನೇ ನಾಶ ಮಾಡಲು ಪಾಪಿ ಹೊಂಚುಹಾಕುತ್ತಿದ್ದ.

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಮೊದಲು ಪತ್ನಿ ಸುನೀತಾ ತಲೆಗೆ ರುಬ್ಬುಗುಂಡಿನಿಂದ ಹೊಡೆದು ಕೊಂದಿದ್ದಾನೆ. ಮೃತದೇಹವನ್ನು ನಂದಿ ಬೆಟ್ಟಕ್ಕೆ ಕೊಂಡೊಯ್ದು ಎಸೆದಿದ್ದಾನೆ. ಸುನೀತಾ ಅವರ ಮೊಬೈಲ್ ಸ್ವಿಚ್ ಆಫ್ ಮಾಡಿ, ಆಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ನೆರೆಹೊರೆಯವರಿಗೆ ಹಾಗೂ ಸಂಬಂಧಿಕರಿಗೆ ಹೇಳಿದ್ದ. ಮನೆಯಲ್ಲೇ ಮದ್ಯದ ಪಾರ್ಟಿ ಮಾಡೋಣ ಎಂದು ಬಾಮೈದುನ ಶಿವಕುಮಾರ್ ಮತ್ತು ಇನ್ನೊಬ್ಬ ಬಾಮೈದ ಶಂಕರ್ ಅವರನ್ನು ಕರೆಸಿ ಹತ್ಯೆ ಮಾಡಿದ್ದಾನೆ. ನಂತರ ಶಂಕರ್ ಪತ್ನಿ ನಳಿನಿ, ಶಿವಕುಮಾರ್ ಪತ್ನಿ ದಿವ್ಯಾ, ಅತ್ತೆ ರೂಪಾವತಿ ಹಾಗೂ ಶಂಕರ್ ಪುತ್ರ ಪುನೀತ್ ಅವರನ್ನೂ ಒಬ್ಬೊಬ್ಬರಾಗಿ ಮನೆಗೆ ಕರೆಸಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದಾನೆ. ಕೆಮಿಕಲ್ ಬಳಸಿ ಸಾಕ್ಷ್ಯ ನಾಶಕ್ಕೆ ಯತ್ನ ಕೃತ್ಯದ ಬಳಿಕ ಆರೋಪಿ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆದು ಸ್ವಚ್ಛಗೊಳಿಸಿದ್ದ. ರುಬ್ಬುಗುಂಡನ್ನು ರಾಸಾಯನಿಕ ಬಳಸಿ ಶುದ್ಧಗೊಳಿಸಿದ್ದ ಎನ್ನಲಾಗಿದೆ. ಮೃತದೇಹ ಸಾಗಿಸಲು ಬಳಸಿದ ಕಾರು ಹಾಗೂ ರುಬ್ಬುಗುಂಡನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಸುನೀತಾ ಕುಟುಂಬ ನಿಗೂಢವಾಗಿ ನಾಪತ್ತೆಯಾದ ಬಗ್ಗೆ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಳಿನಿ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಯಿತು. ಅನುಮಾನದ ಮೇರೆಗೆ ಇಂದುಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಗೊಂದಲದ ಹೇಳಿಕೆಗಳನ್ನು ನೀಡಿದ್ದ. ಮನೆ ಪರಿಶೀಲನೆ ವೇಳೆ ಕೊಲೆಗೆ ಸಂಬಂಧಿಸಿದ ಸುಳಿವುಗಳು ಸಿಕ್ಕವು. ತೀವ್ರ ವಿಚಾರಣೆಯ ಬಳಿಕ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಂದಿ ಬೆಟ್ಟದಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆ ಪೊಲೀಸರು ಆರೋಪಿಯನ್ನು ನಂದಿ ಬೆಟ್ಟಕ್ಕೆ ಕರೆದೊಯ್ದು ಶೋಧ ನಡೆಸಿದರು. ಹಲವು ಗಂಟೆಗಳ ಹುಡುಕಾಟದ ಬಳಿಕ ಪುನೀತ್ ಮೃತದೇಹ ಪತ್ತೆಯಾಗಿದೆ. ಉಳಿದ ಮೃತದೇಹಗಳಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಇಂದುಶೇಖರ್​ ಇಷ್ಟೆಲ್ಲಾ ಕೊಲೆ ಮಾಡಿದರೂ ಕೂಡಾ ಮನೆಯವರಿಗೆ ಅನುಮಾನ ಬಂದಿರಲಿಲ್ವಾ ಎಂಬ ಪ್ರಶ್ನೆ ಕಾಡುತ್ತಿರಬಹುದು. ಆದರೆ, ಮೃತರ ಕುಟುಂಬಸ್ಥರು ಪದೇ ಪದೇ ಮೃತರ ಮೊಬೈಲ್‌ಗೆ ಕರೆ ಮಾಡುತ್ತಿದ್ದರು. ಆದರೆ ಎಷ್ಟೇ ಕರೆ ಮಾಡಿದರೂ ಯಾರೂ ರಿಸೀವ್ ಮಾಡುತ್ತಿರಲಿಲ್ಲ. ಮೊಬೈಲ್‌ನಿಂದ ಕೇವಲ ಮೆಸೇಜ್‌ಗಳು ಮಾತ್ರ ಬರುತ್ತಿತ್ತು. ಆ ವೇಳೆ ಮತ್ತೆ ಅನುಮಾನಗೊಂಡ ಸಂಬಂಧಿಕರು ವೀಡಿಯೋ ಕಾಲ್ ಮಾಡಿ ಎಂದು ಮೆಸೇಜ್ ಮಾಡುತ್ತಿದ್ದರು. ಆದರೆ ‘ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂಬ ರೀತಿಯ ಮೆಸೇಜ್‌ಗಳು ಮಾತ್ರ ಬರುತ್ತಿದ್ದವು. ಇದರಿಂದ ಕುಟುಂಬಸ್ಥರಲ್ಲಿ ಅನುಮಾನ ಹೆಚ್ಚಾಯ್ತು.

ಪ್ರಕರಣ ಸಂಬಂಧ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಮಾತಾಡಿದ್ದು, ನವೆಂಬರ್ 3 ರಂದು ತುಂಗಮ್ಮಾ ಎಂಬುವವರು ಮಿಸ್ಸಿಂಗ್ ದೂರು‌ ಕೊಟ್ಟಿದ್ರು. ಈ ಬಗ್ಗೆ ತನಿಖೆ ಮಾಡುವ ವೇಳೆ ಆರೋಪಿಯೇ ಏಳು ಜನರನ್ನು ಹಂತ ಹಂತವಾಗಿ ಕೊಲೆ ಮಾಡಿರೋ ವಿಚಾರ ಬೆಳಕಿಗೆ ಬಂದಿದೆ ಎಂದ್ರು. ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಏಳೂ ಜನರನ್ನು ಕೊಲೆ ಮಾಡಿರೋದಾಗಿ ಹೇಳಿದ್ದಾನೆ. ನನ್ನ ಮಗಳೇ ಪ್ಲಾನ್ ಕೊಟ್ಟಳು ಅಂತ ಆರೋಪಿ ಪೊಲೀಸರ ಬಳಿ ಹೇಳಿದ್ದಾನೆ.  ಮಗಳು ಅಪ್ರಾಪ್ತೆಯಾಗಿದ್ದು ವಿಚಾರಣೆ ಮುಂದುವರೆದಿದೆ ಎಂದು ಎಂದು ಕಮಿಷನರ್​ ಹೇಳಿದ್ದಾರೆ.

Sulekha

Leave a Reply

Your email address will not be published. Required fields are marked *