ಮಗು ಅಳುವುದನ್ನು ನಿಲ್ಲಿಸಲು ಹಾಲಿನ ಬದಲು ಆಲ್ಕೋಹಾಲ್‌ ಕುಡಿಸಿದ ಮಹಿಳೆ – ಆಮೇಲೆ ಏನಾಯ್ತು ಗೊತ್ತಾ?

ಮಗು ಅಳುವುದನ್ನು ನಿಲ್ಲಿಸಲು ಹಾಲಿನ ಬದಲು ಆಲ್ಕೋಹಾಲ್‌ ಕುಡಿಸಿದ ಮಹಿಳೆ – ಆಮೇಲೆ ಏನಾಯ್ತು ಗೊತ್ತಾ?

ಸಾಮಾನ್ಯವಾಗಿ ಮಗು ಅತ್ತಾಗ ಅಮ್ಮ ಓಡೋಡಿ ಬಂದು ಹಾಲು ಕೊಟ್ಟು ಸಮಾಧಾನಪಡಿಸುತ್ತಾಳೆ. ಚಾಕಲೇಟು ಕೊಟ್ಟು ಮುದ್ದುಮಾಡುತ್ತಾಳೆ. ಆಟ ಸಾಮಾನು ಕೊಟ್ಟು ಆಟವಾಡಿಸುತ್ತಾಳೆ. ಆದ್ರೆ ಇಲ್ಲೊಬ್ಬಳು ತನ್ನ ಮಗು ಅತ್ತಿತೆಂದು ಹಾಲು ಕೊಡುವ ಬದಲು ಆಲ್ಕೋಹಾಲ್‌ ಕುಡಿಸಿದ್ದಾಳೆ.

ಈ ವಿಚಿತ್ರ ಘಟನೆ ನಡೆದಿದ್ದು, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ. ಹಾನ್ಸೇಟಿ ಡಿ ಲಾ ಟೊರೆ ಎಂಬಾಕೆ ಮಗು ಅಳುತ್ತಿದೆ ಎಂದು ಹಾಲಿನ ಬದಲು ಆಲ್ಕೋಹಾಲ್‌ ನೀಡಿದ್ದಾಳೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಕೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಹಗಲಲ್ಲಿ ಸೊಳ್ಳೆ, ರಾತ್ರಿಯಲ್ಲಿ ತಿಗಣೆ ಕಾಟ – ಜೈಲಿಂದ ಹೊರಗೆ ಕರೆದುಕೊಂಡು ಬನ್ನಿ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೋಳಾಟ

ಹಾನ್ಸೇಟಿ ಡಿ ಲಾ ಟೊರೆ ತನ್ನ ಮಗುವಿನೊಂದಿಗೆ ಸ್ಯಾನ್‌ ಬೆರ್ನಾರ್ಡಿನೋದಿಂದ ರಿಯಾಲ್ಟೋಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಗು ಜೋರಾಗಿ ಅಳಲು ಪ್ರಾರಂಭಿಸಿದೆ. ಮಗು ಅಳು ನಿಲ್ಲಿಸಬೇಕೆಂದು ಆಕೆ ಹಾಲಿನ ಬದಲು ಆಲ್ಕೋಹಾಲ್‌ ನೀಡಿದ್ದಾಳೆ. ಮಗುವಿಗೆ ಆಲ್ಕೋಹಾಲ್‌ ನೀಡಿದ್ದರಿಂದಾಗಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಆಕೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಈ ವೇಳೆ ವಿಚಾರ ಬಯಲಾಗಿದೆ. ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಮಗುವಿನ ದೇಹದಲ್ಲಿ ಮದ್ಯ ಪತ್ತೆಯಾಗಿದೆ. ಮಗುವಿನ ಜೀವವನ್ನು ಅಪಾಯಕ್ಕೆ ದೂಡಿದ ಹಿನ್ನೆಲೆಯಲ್ಲಿ ಪೊಲೀಸರು ಹಾನ್ಸೇಟಿಳಾನ್ನ ಬಂಧಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಮಗುವಿಗೆ ಆಲ್ಕೋಹಾಲ್‌ ಕುಡಿಸಲು ಕಾರಣವೇನು ಅನ್ನೋ ವಿಚಾರವನ್ನು ಬಾಯ್ಬಿಟ್ಟಿದ್ದಾಳೆ. ಮಗು ಜೋರಾಗಿ ಅಳುತ್ತಿತ್ತು. ಎಷ್ಟೇ ಸಮಾಧಾನ ಮಾಡಿದರೂ ಅಳು ನಿಲ್ಲಿಸಿಲ್ಲ. ಮಗು ಅಳು ನಿಲ್ಲಿಸುವ ಉದ್ದೇಶದಿಂದ ತಾಯಿ ಡಿ ಲಾ ಟೊರ್ರೆ ಮಗುವಿನ ಹಾಲಿನ ಬಾಟಲಿಗೆ ಅಲ್ಕೋಹಾಲ್ ತುಂಬಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆಯ ನಂತರ ಶಿಶುವಿನ ಸ್ಥಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ. ಮಗುವಿನ ವರ್ತನೆ ಮತ್ತು ಶಿಶುವಿನ ಯೋಗಕ್ಷೇಮದ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, ಹೊನೆಸ್ಟಿ ಡಿ ಲಾ ಟೊರ್ರೆ ವೆಸ್ಟ್ ವ್ಯಾಲಿ ಡಿಟೆನ್ಶನ್ ಸೆಂಟರ್‌ನಲ್ಲಿ ಬಂಧನದಲ್ಲಿದ್ದಾಳೆ ಎಂದು ವರದಿಯಾಗಿದೆ.

suddiyaana